6 ಲಕ್ಷಕ್ಕೆ ನಿಮ್ಮ ಮನೆ ಮುಂದೆ ಬರಲಿದೆ ಇಕೊಸ್ಪೋರ್ಟ್?

Written By:
To Follow DriveSpark On Facebook, Click The Like Button
ಹಲವು ಕಾರಣಗಳಿಂದಾಗಿ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ ಮೊದಲೇ ಭಾರಿ ಸದ್ದು ಮಾಡುತ್ತಿದೆ. ಇದು ಗ್ರಾಹಕರಲ್ಲಿ ಕ್ರೇಜ್ ಹುಟ್ಟಿಸುವಲ್ಲಿ ಕಾರಣವಾಗಿದೆ. ಇದೀಗ ಬಂದ ಮಾಹಿತಿ ಪ್ರಕಾರ ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಆರು ಲಕ್ಷ ಬಜೆಟ್‌ನೊಳಗೆ ಗ್ರಾಹಕರ ಕೈಸೇರಲಿದೆ.

ಇದು ಕಂಪನಿಯಿಂದ ಬಂದಿರುವ ಅಧಿಕೃತ ಮಾಹಿತಿಯಲ್ಲ. ಬದಲಾಗಿ ಫೋರ್ಡ್ ಇಕೊಸ್ಪೋರ್ಟ್ ವಿಶ್ಲೇಷಣೆ ಮಾಡಿರುವ ದೇಶದ ಪ್ರಸಿದ್ಧ ಆಟೋಕಾರ್ ಇಂಡಿಯಾ ಸಂಪಾದಕ ಹೋರ್ಮಜ್ದ್ ಸೋರಬ್ಜಿ (Hormazd Sorabjee) ಮಾಡಿರುವ ಲೆಕ್ಕಾಚಾರವಿದು.

ಒಂದು ವೇಳೆ ಆರು ಲಕ್ಷ ಬಜೆಟ್‌ನೊಳಗೆ ಕಾರು ಗ್ರಾಹಕರ ಕೈ ಸೇರಿದ್ದಲ್ಲಿ ಪೋರ್ಡ್ ಇಕೊಸ್ಪೋರ್ಟ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಲಿದೆ ಎಂಬುದರಲ್ಲಿ ಸಂಶಯವೇ ಬೇಡ. ಯಾಕೆಂದರೆ ಇಕೊಸ್ಪೋರ್ಟ್‌ಗೆ ಈಗಾಗಲೇ ಡೀಲರ್‌ಗಳ ಬಳಿ ಭಾರಿ ಅನಧಿಕೃತ ಬುಕ್ಕಿಂಗ್ ಕಂಡುಬಂದಿವೆ.

ಬೇಸಿಕ್ ಪೆಟ್ರೋಲ್ ವರ್ಷನ್‌ಗೆ ಈ ದರ ಅಂದಾಜಿಸಲಾಗಿದೆ. ಅಂದ ಹಾಗೆ ಮಾರ್ಚ್ ವೇಳೆಗೆ ಫೋರ್ಡ್ ಇಕೊಸ್ಪೋರ್ಟ್ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ. ಹಾಗೆಯೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವರ್ಷದ ಬಹು ನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಲಾಂಚ್ ಮಾಡುವ ಸಾಧ್ಯತೆಯಿದೆ.

English summary
Most awaited car of this year Ford Ecosport, may be launched at an extremely low introductory price. Autocar India Editor, Mr. Hormazd Sorabjee has stated on the Autocar Show that the Ford EcoSport may be launched at under Rs. 6 lakhs!
Story first published: Monday, February 18, 2013, 15:17 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark