ಆಸ್ಟ್ರೇಲಿಯಾ ಸಂಶೋಧಕರಿಂದ ಕೈಗೆಟಕಬಲ್ಲ ಚಾಲಕ ರಹಿತ ಕಾರು

Written By:

ಗೂಗಲ್ ಡ್ರೈವ್‌ಲೆಸ್ ಕಾರು ಬಗ್ಗೆ ನೀವು ಮಾಹಿತಿ ಪಡೆದುಕೊಂಡಿರಬಹುದು. ಇದೀಗ ಆಸ್ಟ್ರೇಲಿಯಾ ಸಂಶೋಧಕರ ಪ್ರಕಾರ ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲರಿಗೂ ಕೈಗೆಟಕುವ ದರಗಳಲ್ಲಿ ಚಾಲಕ ರಹಿತ ಕಾರುಗಳ ಕನಸು ನನಸಾಗಲಿದೆ ಎಂದಿದ್ದಾರೆ.

ಮುಂದಿನ 10 ವರ್ಷಗಳಲ್ಲಿ ಚಾಲಕ ರಹಿತ ಕಾರು ಜಗತ್ತಿನೆಲ್ಲೆಡೆ ಅಭಿವೃದ್ಧಿ ಕಾಣಲಿದೆ ಎಂಬುದು ಸಂಶೋಧಕರ ನಿಲುವಾಗಿದೆ. ಈ ನಿಟ್ಟಿನಲ್ಲಿ ಪರ್ತ್‌ನ ಕರ್ಟಿನ್ ವಿಶ್ವವಿದ್ಯಾಲಯದ ಸಂಶೋಧಕರು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಪಡಿಸುತ್ತಿದ್ದಾರೆ.

To Follow DriveSpark On Facebook, Click The Like Button
driverless car

ಒಂದು ಸಾಮಾನ್ಯ ಕಾರಿನಲ್ಲಿ ವಿವಿಧ ರೀತಿಯ ತಂತ್ರಜ್ಞಾನಗಳನ್ನು ಆಳವಡಿಸುವುದು ಸಂಸ್ಥೆಯ ಗುರಿಯಾಗಿದೆ. ಇದು ಅಡೆತೆಡೆ, ಸ್ವರೂಪ ಹಾಗೂ ಸ್ಥಳಗಳ ಬಗ್ಗೆ ಸಂವೇದನಾಶೀಲ ಮಾಹಿತಿಯನ್ನು ನೀಡಲಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಕಂಪ್ಯೂಟರ್ ಮತ್ತು ಎಲೆಕ್ಟ್ರಿಕ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಾ ಟೋಗ್ ವೊ, ಇದು ಕರ್ಟಿನ್, ಡೈಮ್ಲರ್ ಮತ್ತು ಜರ್ಮನಿಯ ಉಲ್ಮ್ ವಿಶ್ವವಿದ್ಯಾನಿಲಯದ ಜಂಟಿ ಯೋಜನೆಯಾಗಿದೆ ಎಂದಿದ್ದಾರೆ.

ಕಾರನ್ನು ಇಂಟೆರ್‌ನೆಟ್ ಸಂಪರ್ಕಿಸುವ ಅಗತ್ಯವಿಲ್ಲದ ಕಾರಣ ಕಡಿಮೆ ಬೆಲೆಯಲ್ಲಿ ನಿರ್ಮಾಣ ಮಾಡಬಹುದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೈಗೆಟಕುವ ಸೆನ್ಸಾರ್, ರಾಡಾರ್ ಲೇಸರ್ ಮತ್ತು ಕಂಪ್ಯೂಟರ್ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗುವುದು. ಇದು ಜನರಿಗೆ ಸುಲಭವಾಗಿ ತಲುಪಲು ಸಹಕಾರಿಯಾಗಲಿದೆ.

English summary
Australian researchers claim that in 10 years, driverless cars will be within reach for everybody, as they will be within the average price range.
Story first published: Monday, November 3, 2014, 10:08 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark