ಮುಂದಿನ ತಿಂಗಳಲ್ಲಿ ರೆನೊ ಡಸ್ಟರ್ 4x4 ಆಗಮನ

Written By:

ಡಸ್ಟರ್ ಮುಖಾಂತರ ದೇಶಕ್ಕೆ ಮೊದಲ ಬಾರಿಗೆ ಕಾಂಪಾಕ್ಟ್ ಎಸ್‌ಯುವಿ ಪರಿಚಯಿಸಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು, ಇದೀಗ ಇದೇ ಆವೃತ್ತಿಯ ಆಲ್ ವೀಲ್ ಡ್ರೈವ್ ವೆರಿಯಂಟ್ ಪರಿಚಯಿಸುವ ಯೋಜನೆ ಹೊಂದಿದೆ.

ಭಾರತ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ರೆನೊ ಡಸ್ಟರ್ 4x4 ವೆರಿಯಂಟ್ ಮುಂದಿನ ತಿಂಗಳಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ 4x4 ಮಾದರಿ ಪರಿಚಯಿಸಿದ ಮೊದಲ ಸಂಸ್ಥೆ ಎಂದೆನಿಸಿಕೊಳ್ಳಲಿದೆ. ಪ್ರಸ್ತುತ ಡ್ಯಾಸಿಯಾ ಜಾಗತಿಕವಾಗಿ ಡಸ್ಟರ್ ಆಲ್ ವೀಲ್ ಡ್ರೈವ್ ವೆರಿಯಂಟ್ ಪರಿಚಿಯಿಸಿದೆ.

ಅಂದ ಹಾಗೆ ಟಾಪ್ ಎಂಡ್ ವೆರಿಯಂಟ್‌ನಲ್ಲಿ ಮಾತ್ರ ಡಸ್ಟರ್ 4x4 ಆಯ್ಕೆ ಲಭ್ಯವಾಗಲಿದೆ. ಇದು 1.5 ಲೀಟರ್ ಡೀಸೆಲ್ ಕೆ9ಕೆ ಎಂಜಿನ್ ಪಡೆಯಲಿದೆ. ಇದು 108.5 ಅಶ್ವಶಕ್ತಿಯೊಂದಿಗೆ 248 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಅಂದರೆ ಡೀಸೆಲ್ ಆರ್‌ಎಕ್ಸ್‌ಝಡ್ ವೆರಿಯಂಟ್‌ನಲ್ಲಿ 4x4 ಆಗಮನವಾಗಲಿದೆ. ಅಲ್ಲದೆ ಸ್ಟಾಂಡರ್ಡ್ ವರ್ಷನ್‌ಗಿಂತಲೂ ಮಿಗಿಲಾಗಿ ಕೀಲೆಸ್ ಎಂಟ್ರಿ, ಡ್ಯುಯಲ್ ಎಸ್‌ಆರ್‌ಎಸ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಪಾರ್ಕಿಂಗ್ ಸೆನ್ಸಾರ್ ಮತ್ತು ಎಮರ್ಜನ್ಸಿ ಬ್ರೇಕ್ ಸೌಲಭ್ಯವಿರಲಿದೆ.

renault duster

ಅಂದ ಹಾಗೆ 4x4 ಆಯ್ಕೆಯಿರುವ ಮಹೀಂದ್ರ ಸ್ಕಾರ್ಪಿಯೊ ಮತ್ತು ಟಾಟಾ ಸಫಾರಿ ಸ್ಟ್ರೋಮ್ ಮಾದರಿಗಳಿಗೆ ರೆನೊ ಡಸ್ಟರ್ 4x4 ಸ್ಪರ್ಧಿಯಾಗಿರಲಿದೆ. ಅಂತೆಯೇ 12.50 ಲಕ್ಷ ರು.ಗಳ ಅಸುಪಾಸಿನಲ್ಲಿ (ಎಕ್ಸ್ ಶೋ ರೂಂ ದರ) ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

English summary
Renault was the first manufacturer to successfully exploit the compact SUV segment in India. It was the only compact SUV when launched, and the French manufacturer stole a major chunk of sales from its competition.
Story first published: Wednesday, August 13, 2014, 12:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark