ರೆನೊ ಡಸ್ಟರ್ ಆಲ್ ‌ವೀಲ್ ಡ್ರೈವ್ ಜಾಹೀರಾತು ಬಿಡುಗಡೆ

By Nagaraja

ಭಾರತದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಬಿಡುಗಡೆಗೂ ಮುನ್ನವಾಗಿ ಸಂಸ್ಥೆಯು ಜಾಹೀರಾತುವೊಂದನ್ನು ಬಿಡುಗಡೆ ಮಾಡಿದೆ.

ಫ್ರಾನ್ಸ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ರೆನೊ, ಡಸ್ಟನ್ ಮುಖಾಂತರ ದೇಶದ ಗ್ರಾಹಕರಲ್ಲಿ ಅಚ್ಚುಮೆಚ್ಚಿನ ಬ್ರಾಂಡ್ ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದರಂತೆ ಡಸ್ಟನ್ ಆಲ್ ವೀಲ್ ಡ್ರೈವ್ ಮಾದರಿಯನ್ನು ಬಿಡುಗಡೆ ಮಾಡಲು ಸಂಸ್ಥೆಯು ಸಜ್ಜಾಗುತ್ತಿದೆ. ಡಸ್ಟರ್ ಆಲ್ ವೀಲ್ ಡ್ರೈವ್ ಮಾದರಿಯು ಹಿಂದಿನ ಮಾದರಿಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯಲಿದೆ.

Renault Duster AWD

ಇದುವರೆಗೆ ಸಂಸ್ಥೆಯಿಂದ ಬಿಡುಗಡೆಗೆ ಸಂಬಂಧ ಅಧಿಕೃತ ಮಾಹಿತಿಗಳು ಬಂದಿಲ್ಲವಾದರೂ ಮುಂಬರುವ ಹಬ್ಬದ ಆವೃತ್ತಿಯ ವೇಳೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೊಸ ಡಸ್ಟರ್ ಆಲ್ ವೀಲ್ ಡ್ರೈವ್ ಮಾದರಿಯು 1.5 ಟರ್ಬೊ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ. ಇದು 108 ಅಶ್ವಶಕ್ತಿ ಜೊತೆಗೆ 108 ಎನ್‌ಎಂ ಟಾರ್ಕ್ ಪಡೆಯಲಿದೆ.

ಅಂದ ಹಾಗೆ ಹಾಲ್ಡೆಕ್ಸ್‌ನಿಂದ ಆಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಡಸ್ಟರ್‌ಗೆ ಆಮದು ಮಾಡಿಕೊಳ್ಳಲಾಗಿದೆ. ಅಲ್ಲದೆ ಹೀಲ್ ಸ್ಟಾರ್ಟ್ ಅಸಿಸ್ಟ್, ಆ್ಯಂಟಿ ಸ್ಲಿಪ್ ರೆಗ್ಯೂಲೇಷನ್, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮುಂತಾದ ಸೌಲಭ್ಯಗಳನ್ನು ಪಡೆಯಲಿದೆ.

ಇದು ಪ್ರಮುಖವಾಗಿಯೂ ಮಹೀಂದ್ರ ಸ್ಕಾರ್ಪಿಯೊ ಮತ್ತು ಟಾಟಾ ಸಫಾರಿ 4x4 ಮಾದರಿಗಳಿಗೆ ಸ್ಪರ್ಧೆ ಒಡ್ಡಲಿದೆ. ಇನ್ನು ಎಕ್ಸ್ ಶೋ ರೂಂ 13 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

<iframe width="600" height="450" src="//www.youtube.com/embed/Y8nfqRIntk4?rel=0&showinfo=0&autoplay=0" frameborder="0" allowfullscreen></iframe>

Most Read Articles

Kannada
English summary
Renault has witnessed most of its success with their compact SUV offering in India. The French car maker offers an array of products in India. They had launched their Duster a while ago and have since then introduced minor facelifts and special edition models.&#13;
Story first published: Friday, September 19, 2014, 10:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X