2014 ಪ್ಯಾರಿಸ್ ಮೋಟಾರು ಶೋದಲ್ಲಿ ಸ್ಯಾಂಗ್ಯೊಂಗ್ ಕಾನ್ಸೆಪ್ಟ್ ಪ್ರದರ್ಶನ

By Nagaraja

ಮುಂಬರುವ 2014 ಪ್ಯಾರಿಸ್ ಮೋಟಾರು ಶೋದಲ್ಲಿ ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಸ್ಯಾಂಗ್ಯೊಂಗ್ ಎರಡು ಹೊಸ ಕಾನ್ಸೆಪ್ಟ್ ಮಾದರಿಗಳನ್ನು ಪರಿಚಯಿಸಲಿದೆ.

ಇದು ಭಾರತೀಯರ ಪಾಲಿಗೆ ಅತಿ ಮಹತ್ವದೆನಿಸಲಿದೆ. ಯಾಕೆಂದರೆ ಭಾರತದಲ್ಲಿ ಮಹೀಂದ್ರ ಜೊತೆ ಪಾಲುದೊರಿಕೆ ಹೊಂದಿರುವ ಎಸ್‌ಯುವಿ ದೈತ್ಯ ಸ್ಯಾಂಗ್ಯೊಂಗ್, ಪ್ಯಾರಿಸ್‌ನಲ್ಲಿ ಯಾವುದೇ ಮಾದರಿ ಪರಿಚಯಿಸಿದರೂ ಮುಂದಿನ ದಿನಗಳಲ್ಲಿ ಅದು ಭಾರತ ಮಾರುಕಟ್ಟೆ ಪ್ರವೇಶಿಸಿದರೂ ಅಚ್ಚರಿಯೇನಿಲ್ಲ.


ಭಾರತದಲ್ಲಿ ರೆಕ್ಸ್ಟಾನ್ ಪ್ರೀಮಿಯಂ ಎಸ್‌ಯುವಿ ಮಾದರಿ ಪರಿಚಯಿಸಿದ್ದ ಸ್ಯಾಂಗ್ಯೊಂಗ್ ದೇಶದಲ್ಲಿ ತನ್ನ ಸಾನಿಧ್ಯ ವ್ಯಕ್ತಪಡಿಸಿತ್ತು. ವಿಶೇಷವೆಂದರೆ ಪ್ಯಾರಿಸ್‌ನಲ್ಲಿ ಪ್ರದರ್ಶಿಸಲಿರುವ ಎರಡು ಕಾನ್ಸೆಪ್ಟ್ ಮಾದರಿಗಳ ಚಿತ್ರಗಳನ್ನು ಸ್ಯಾಂಗ್ಯೊಂಗ್ ಬಿಡುಗಡೆಗೊಳಿಸಿದೆ. (ಚಿತ್ರಗಳಲ್ಲಿ ನೀವು ನೋಡಬಹುದು) ಇದರಲ್ಲಿ ಮೊದಲನೇಯದ್ದು XIV ಏರ್ ಮತ್ತು ಎರಡನೇಯದ್ದು XIV ಅಡ್ವೆಂಚರ್ ಎಂದೆನಿಸಿಕೊಳ್ಳಲಿದೆ.

ಈ ಎರಡು ಕಾನ್ಸೆಪ್ಟ್ ಮಾದರಿಗಳು 2014 ಅಕ್ಟೋಬರ್ 2ರಂದು ಪ್ಯಾರಿಸ್‌‍ನಲ್ಲಿ ಅನಾವರಣಗೊಳ್ಳಲಿದೆ. ಇವೆರಡು ಸದ್ಯದಲ್ಲೇ ನಿರ್ಮಾಣ ರೂಪ ಪಡೆಯುವ ಸಾಧ್ಯತೆಯಿದ್ದು, ಮುಂದಿನ ವರ್ಷ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆಯಿದೆ.

Ssangyong

ಇದರಲ್ಲಿ 1.6 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಆಯ್ಕೆಗಳನ್ನು ಸ್ಯಾಂಗ್ಯೊಂಗ್ ಒದಗಿಸಲಿದೆ. ಅಲ್ಲದೆ ಹೊಸ ಡಿಸೈನ್ ತಂತ್ರಜ್ಞಾನವನ್ನು ಅನುಸರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.
Most Read Articles

Kannada
English summary
South Korean automobile manufacturer Ssangyong focuses and takes pride in its SUVs. They are currently in partnership with Indian automobile giant Mahindra. Ssangyong has introduced its Rexton model in India and is positioned as a premium SUV.
Story first published: Monday, September 15, 2014, 11:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X