ಮತ್ತೆ ಶಾಕ್; ಜುಲೈ 1ರಿಂದ ವಾಹನಗಳ ಬೆಲೆ ಏರಿಕೆ

By Nagaraja

'ಅಚ್ಚೇ ದಿನ್ ಅನೇ ವಾಲಾ ಹೈ' ಎಂಬ ಘೋಷವಾಕ್ಯದಿಂದ ನೂತನ ಸರಕಾರ ಪ್ರಾರಂಭಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆರಂಭದಲ್ಲೇ ಜನ ಸಾಮಾನ್ಯರಿಗೆ ಶಾಕ್ ನೀಡಿತ್ತು. ಈಗಾಗಲೇ ರೈಲ್ವೇ ದರ ಏರಿಕೆಯಿಂದ ತತ್ತರಿಸುವ ಹೋಗಿರುವ ಜನರಿಗೆ ಸದ್ಯದಲ್ಲೇ ಮಗದೊಂದು ಚಾಟಿಯೇಟು ಕಾದಿದೆ.

ಕಳೆದ ಕೇಂದ್ರ ಸರಕಾರ ಮಂಡಿಸಿದ ತಾತ್ಕಾಲಿಕ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಇಳಿಕೆಗೊಳಿಸಿತ್ತು. ಇದು ಜುಲೈ 1ರ ವರೆಗೆ ಮಾತ್ರ ಅನ್ವಯವಾಗಲಿದೆ. ಇದರಂತೆ ಜುಲೈ 1ರಿಂದ ಹೊಸ ಸರಕಾರವು ಹಳೆಯ ಅಬಕಾರಿ ಸುಂಕ ನೀತಿಗೆ ಮೊರೆ ಹೋಗುವ ಸಾಧ್ಯತೆಯಿರುವುದರಿಂದ ವಾಹನಗಳ ದರಗಳಲ್ಲಿ ಮತ್ತೆ ಏರಿಕೆ ಕಂಡುಬರಲಿದೆ.

Vehicle price

ದ್ವಿಚಕ್ರ ಸೇರಿದಂತೆ ನಾಲ್ಕು ಚಕ್ರದ ದರಗಳಲ್ಲೂ ಏರಿಕೆ ಕಂಡುಬರಲಿದೆ. ಒಂದು ವೇಳೆ ಜೂನ್ ಅಂತ್ಯದ ವೇಳೆಗೆ ನೂತನ ಸರಕಾರದಿಂದ ಯಾವುದೇ ಪೂರಕ ನಿಲುವು ಕಂಡುಬರದಿದ್ದಲ್ಲಿ ಬೆಲೆಯೇರಿಕೆ ಖಚಿತವಾಗಲಿದೆ.

ಅಂದ ಹಾಗೆ ಜುಲೈ ಮೊದಲ ವಾರದಲ್ಲಿ ಹೊಸ ಸರಕಾರದ ಬಜೆಟ್ ಮಂಡನೆಯಾಗಲಿದೆ. ಕಳೆದ ಕೆಲವು ವರ್ಷಗಳಲ್ಲಿ ವಾಹನಗಳ ಮಾರಾಟವು ಕುಸಿತದಲ್ಲಿದೆ. ಹಾಗಾಗಿ ಅಬಕಾರಿ ಸುಂಕ ಕಡಿತಗೊಳಿಸುವ ಮೂಲಕ ಗ್ರಾಹಕರಿಗೆ ಕೈಗೆಟಕುವ ದರಗಳಲ್ಲಿ ವಾಹನಗಳನ್ನು ಮಾರಾಟ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾರ್ಯ ಪ್ರವೃತ್ತವಾಗಬೇಕಾಗಿದೆ.

Most Read Articles

Kannada
English summary
The cut on excise duty to promote sales of vehicles in India will be coming to an end. The previous ruling government had decided to offer an exemption in excise duty rates till 1st July, 2014. The move had helped sales for sure and seen an increase.
Story first published: Monday, June 23, 2014, 14:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X