ರೆನೊ ಕ್ವಿಡ್ ನಿಜಕ್ಕೂ ಗೇಮ್ ಚೇಂಜರ್ ಆದಿತೇ?

Written By:

ದೇಶದ ಮಾರುಕಟ್ಟೆಯಲ್ಲಿ ಪ್ರತಿಯೊಂದು ಸಲವೂ ಹೊಸ ಕಾರು ಪರಿಚಯವಾದಾಗ ಅತ್ಯಂತ ಹೆಚ್ಚು ಕುತೂಹಲ ಮನೆ ಮಾಡುತ್ತದೆ. ಅದರಲ್ಲೂ ಸಣ್ಣ ಕಾರು ಅಂದ ಮೇಲೆ ಜಿಜ್ಞಾಸೆ ಇನ್ನಷ್ಟು ಹೆಚ್ಚುತ್ತದೆ. ಯಾಕೆಂದರೆ ದೇಶದ ಕಾರು ಖರೀದಿಗಾರರ ಅತಿ ದೊಡ್ಡ ವಿಭಾಗವು ಮಧ್ಯಮ ವರ್ಗದವರಾಗಿದ್ದಾರೆ.

ಇವನ್ನೂ ಓದಿ: ಸಂಚಲನ ಮೂಡಿಸಿದ ರೆನೊ ಕ್ವಿಡ್

ಹೊಸ ಕಾರಿನಲ್ಲಿ ಹೊಸತು ಏನಿರಬಹುದು? ಸ್ಟೈಲ್ ಹೇಗಿದೆ? ಬೆಲೆ ಎಷ್ಟು ? ಮೈಲೇಜ್ ಎಷ್ಟು? ಹೀಗೆ ಕಾರಿನ ಚಿತ್ರ ನೋಡಿದಾಗಲೇ ಹತ್ತಾರು ಪ್ರಶ್ನಗಳು ಮನದಲ್ಲಿ ಹೊಳೆಯುತ್ತದೆ. ಇಂತಹದೊಂದು ಆಸಕ್ತಿಯನ್ನು ಕೆರಳಿಸುವಲ್ಲಿ ಈಗಷ್ಟೇ ಬಿಡುಗಡೆಯಾಗಿರುವ ರೆನೊ ಕ್ವಿಡ್ ಯಶಸ್ವಿಯಾಗಿದೆ. ಮೇಲೆ ಸೂಚಿಸಿದಂತೆ ಜನರು ಈಗಾಗಲೇ ರೆನೊ ಕ್ವಿಡ್ ಬಗ್ಗೆ ಮಾತನಾಡ ತೊಡಗಿದ್ದಾರೆ. ಅಷ್ಟಕ್ಕೂ ರೆನೊ ಕ್ವಿಡ್ ನಿಜಕ್ಕೂ ಗೇಮ್ ಚೇಂಜರ್ ಆದಿತೇ? ದೇಶದಲ್ಲಿ ವಾಹನೋದ್ಯಮದಲ್ಲಿ ಹೊಸ ಅಧ್ಯಾಯ ಪುಟವನ್ನು ತೆರೆದಿತೇ? ದಶಕದಿಂದಲೂ ಮನೆ ಮಾತಾಗಿರುವ ಮಾರುತಿ ಹಾಗೂ ಹ್ಯುಂಡೈ ಕಾರುಗಳಿಗೆ ತಕ್ಕ ಪ್ರತಿಸ್ಪರ್ಧಿಯಾದಿತೇ? ಬನ್ನಿ ಸಮಗ್ರ ವರದಿಯನ್ನು ಓದೋಣವೇ...

01. ಹ್ಯಾಚ್ ಬ್ಯಾಕ್ ಅಲ್ಲ ಇನ್ನೇನಿದು?

01. ಹ್ಯಾಚ್ ಬ್ಯಾಕ್ ಅಲ್ಲ ಇನ್ನೇನಿದು?

ಸಣ್ಣ ಕಾರು ಅಂದ ಮೇಲೆ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಗುರುತಿಸಿಕೊಳ್ಳುವುದು ಸಹಜ. ಆದರೆ ಇಲ್ಲಿ ಮೊದಲನೇಯ ಕುತೂಹಲದಾಯಕ ಅಂಶವೆಂದರೆ ರೆನೊ ಕ್ವಿಡ್ ತನ್ನನ್ನು ತಾನೇ ಹ್ಯಾಚ್ ಬ್ಯಾಕ್ ಎಂದು ಗುರುತಿಸಿಕೊಳ್ಳಲು ನಿರಾಕರಿಸಿದೆ. ಅಂದರೆ ಮಾರಾಟದ ದೃಷ್ಟಿಕೋಣದಲ್ಲಿ ಎಚ್ಚರಿಕೆಯ ನಡೆ ಅನುಸರಿಸಿರುವ ರೆನೊ, ಮಾರುತಿಯ ಜನಪ್ರಿಯ ಆಲ್ಟೊ ಸಾಲಿನಲ್ಲಿ ಗುರುತಿಸಿಕೊಳ್ಳಲು ನಿರಾಕರಿಸಿದೆ.

02. ಫಿಯೆಟ್ ಮ್ಯಾಜಿಕ್

02. ಫಿಯೆಟ್ ಮ್ಯಾಜಿಕ್

ನೂತನ ರೆನೊ ಕ್ವಿಡ್ ಮಗದೊಂದು ಫಿಯೆಟ್ ಫಂಡಾ ಆಗಿರಲಿದೆಯೇ ಎಂಬುದು ಇನ್ನಷ್ಟು ಕುತೂಹಲವೆನಿಸಿದೆ. ಫಿಯೆಟ್ ಫಂಡಾ ಜಾಗತಿಕವಾಗಿ 10 ದಶಲಕ್ಷಗಿಂತಲೂ ಹೆಚ್ಚು ಮಾರಾಟವನ್ನು ಕಂಡಿದೆ. ಹಾಗಿರುವಾಗ ಸಣ್ಣ ಕಾರು ವಿಭಾಗದಲ್ಲಿ ಇದಕ್ಕೆ ಸಮಾನವಾದ ರೀತಿಯಲ್ಲಿ ಜನ ಮನ್ನಣೆ ಗೆಲ್ಲುವುದು ರೆನೊ ಇರಾದೆಯಾಗಿದೆ.

03. ತಳಹದಿ

03. ತಳಹದಿ

ರೆನೊ-ನಿಸ್ಸಾನ್ ಸಿಎಂಎಫ್-ಎ ತಳಹದಿಯಲ್ಲಿ ನೂತನ ಕಾರು ನಿರ್ಮಾಣವಾಗಲಿದೆ. ಮುಂದೆ ಇದೇ ತಳಹದಿಯಲ್ಲಿ ದಟ್ಸನ್ ರೆಡಿ ಗೊ ಕಾರು ಸಹ ನಿರ್ಮಾಣವಾಗಲಿದೆ.

04. ಎಂಜಿನ್

04. ಎಂಜಿನ್

ರೆನೊ ಕ್ವಿಡ್ ಕಾರಿನಲ್ಲಿ 800 ಸಿಸಿ ಎಂಜಿನ್ ಆಳವಡಿಕೆಯಾಗುವ ಸಾಧ್ಯತೆಯಿದೆ. ಇದನ್ನೇ ದಟ್ಸನ್ ರೆಡಿ ಗೊ ಕಾರಿನ ಜೊತೆಗೂ ಹಂಚಿಕೊಳ್ಳಲಾಗುವುದು. ಈ ಹಿಂದೆ 2014 ಆಟೋ ಎಕ್ಸ್ ದಲ್ಲೇ ರೆನೊ ಕ್ವಿಡ್ ಕಾನ್ಸೆಪ್ಟ್ ಅನಾವರಣಗೊಂಡಿತ್ತು.

05. ಮಧ್ಯಮ ವಿಭಾಗದ ಜಿಎಲ್ ಎ ಕ್ಲಾಸ್ ?

05. ಮಧ್ಯಮ ವಿಭಾಗದ ಜಿಎಲ್ ಎ ಕ್ಲಾಸ್ ?

ಇದರಲ್ಲಿ ಯಾವುದೇ ಅನುಮಾನಗಳಿಲ್ಲ ನಿಸ್ಸಂಶಯವಾಗಿಯೂ ರೆನೊ ಕ್ವಿಡ್ ಕ್ರೀಡಾ ಬಳಕೆಯ ವಾಹನದಿಂದ ಸ್ಪೂರ್ತಿ ಪಡೆದಿದೆ. ಇದೊಂದು ವಿಶಿಷ್ಟ ಕ್ರಾಸೋವರ್ ಎನಿಸಿಕೊಳ್ಳುವ ತವಕದಲ್ಲಿದೆ. ಅಂದರೆ ಮಧ್ಯಮ ವರ್ಗದ ಜಿಎಲ್ ಎ ಕ್ಲಾಸ್ ಆಗಿರಲಿದೆಯೇ ಎಂಬುದು ಇನ್ನಷ್ಟು ರೋಚಕತೆಗೆ ಕಾರಣವಾಗಿದೆ.

06. ವಿನ್ಯಾಸ - ಮುಂಭಾಗ

06. ವಿನ್ಯಾಸ - ಮುಂಭಾಗ

ಇಲ್ಲಿ ಯಾವುದೇ ಸಂಸ್ಥೆಯನ್ನು ಬೊಟ್ಟು ಮಾಡುವ ಪ್ರಯತ್ನ ಮಾಡುತ್ತಿಲ್ಲ. ಬದರೆ ಸತ್ಯಾಂಶವೆಂದರೆ ದೇಶದ ಇತರೆ ಸಣ್ಣ ಕಾರುಗಳನ್ನು ತುಲನೆ ಮಾಡಿ ನೋಡಿದಾಗ ವಿನ್ಯಾಸದ ವಿಚಾರದಲ್ಲಿ ರೆನೊ ಕ್ವಿಡ್ ಬಲು ಹೆಜ್ಜೆ ಮುಂದಿಟ್ಟಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಮುಂಭಾಗದಲ್ಲಿ ರೆನೊ ಫ್ರಂಟ್ ಗ್ರಿಲ್, ಬಂಪರ್, ಲಾಂಛನ ಎಲ್ಲವೂ ದೇಶದ ಗ್ರಾಹಕರಿಗೆ ಹೊಸ ಅನುಭವವಾಗಲಿದೆ.

07. ವಿನ್ಯಾಸ - ಬದಿ

07. ವಿನ್ಯಾಸ - ಬದಿ

ಬದಿಯಿಂದಲೂ ವಿನ್ಯಾಸ ರಚನೆಯಲ್ಲೂ ರೆನೊ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡಿದೆ. ತುಂಬಾ ಸರಳವಾಗಿ ಗೋಚರಿಸಿದರೂ ಬಾಗಿಲುಗಳ ಸುತ್ತಲೂ ಹಾಗೂ ಚಕ್ರದ ಮೇಲ್ಗಡೆಯಾಗಿ ವಿಶೇಷ ಆವರಣ ನೀಡಿರುವುದು ಕ್ರೀಡಾತ್ಮಕತೆಗೆ ಸಾಕ್ಷಿಯಾಗಿದೆ.

08. ವಿನ್ಯಾಸ - ಹಿಂಭಾಗ

08. ವಿನ್ಯಾಸ - ಹಿಂಭಾಗ

ಇನ್ನು ಹಿಂಭಾಗದಲ್ಲೂ ಆಕರ್ಷಕ ಲೈಲ್ ಟ್ಯಾಂಪ್ ಹಾಗೂ ತೆರೆಯಬಹುದಾದ ಢಿಕ್ಕೆ ಜಾಗವನ್ನು ಕೊಡಲಾಗಿದೆ. ಇನ್ನು ಕ್ರಾಸೋವರ್ ಗೆ ಸಮಾನವಾದ ರೀತಿಯ ಸಂಕೇತವಾಗಿ ಸ್ಕಿಡ್ ಪ್ಲೇಟ್ ಮೇಲೆತ್ತಲಾಗಿದೆ.

09. ವಿನ್ಯಾಸ - ಒಳಮೈ

09. ವಿನ್ಯಾಸ - ಒಳಮೈ

ರೆನೊ ಕ್ವಿಡ್ ಒಳಮೈ ನೋಡುವುದೇ ಸೊಗಸು. ಬಹಳ ಅಚ್ಚುಕಟ್ಟಾಗಿ ಒಂದು ಸಣ್ಣ ಕಾರಿಗೆ ಬೇಕಾದ ಎಲ್ಲ ವೈಶಿಷ್ಟ್ಯಗಳನ್ನು ಇದರಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ. ಇದು ಎಂಟ್ರಿ ಲೆವೆಲ್ ವಿಭಾಗದಲ್ಲಿ ನಿಜಕ್ಕೂ ಐಷಾರಾಮಿ ಅನುಭವ ನೀಡಲಿದೆ.

10. ಡಿಜಿಟಲ್ ಇನ್ಸ್ಟ್ರಮೆಂಟ್ ಕ್ಲಸ್ಟರ್

10. ಡಿಜಿಟಲ್ ಇನ್ಸ್ಟ್ರಮೆಂಟ್ ಕ್ಲಸ್ಟರ್

ಡಿಜಿಟಲ್ ಸ್ಪರ್ಶವನ್ನು ಪಡೆದುಕೊಂಡಿರುವ ಇನ್ಸ್ಟ್ರಮೆಂಟ್ ಕ್ಲಸ್ಟರ್ ಅಂದತೆಗೆ ಕಾರಣವಾಗಿದೆ. ಇದರ ಸರಳ ಹಾಗೂ ದೊಡ್ಡದಾ ಸ್ಪೀಡೋಮೀಟರ್ ಓದುವುದು ತುಂಬಾನೇ ಸುಲಭವಾಗಿದೆ. ಇದರ ಬಲಭಾಗದಲ್ಲಿ ಫ್ಯೂಯಲ್ ಗೇಜ್ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರ ಕಳಗಡೆಯಾಗಿ ಎಷ್ಟು ದೂರ ಚಲಿಸಿದ್ದೀರಿ ಎಂಬುದನ್ನು ಕಾಣಬಹುದಾಗಿದೆ. ಇನ್ನು ಎಡಭಾಗದಲ್ಲಿ ವಾರ್ನಿಂಗ್ ಲೈಟ್ಸ್ ಕಂಡುಬರಲಿದೆ.

11. ಏಳು ಇಂಚಿನ ಕಲರ ಟಚ್ ಸ್ಕ್ರೀನ್

11. ಏಳು ಇಂಚಿನ ಕಲರ ಟಚ್ ಸ್ಕ್ರೀನ್

ರೆನೊದ ಟಾಪ್ ಎಂಡ್ ಡಸ್ಟರ್ ಹಾಗೂ ಲೊಡ್ಜಿಗಳಲ್ಲಿ ಲಭ್ಯವಿರುವುದಕ್ಕೆ ಸಮಾನವಾದ ಏಳು ಇಂಚಿನ ಟಚ್ ಸ್ಕ್ರೀನ್ ಮಿಡಿಯಾ ನೇವ್ ಸಿಸ್ಟಂ ಜೊತೆ ಬ್ಲೂಟೂತ್ ಸೇವೆಯು ನಿಜಕ್ಕೂ ಶ್ಲಾಘನೀಯವಾಗಿದೆ. ಚಿತ್ರದಲ್ಲೇ ನೀವು ನೋಡುತ್ತಿರುವಂತೆಯೇ ಇದು ಆಕ್ಸ್, ಯುಎಸ್ ಬಿ ಕನೆಕ್ಟಿವಿಟಿಯನ್ನು ಹೊಂದಿರಲಿದೆ.

12. ವೈಶಿಷ್ಟ್ಯ

12. ವೈಶಿಷ್ಟ್ಯ

ಇನ್ನು ಸೆಂಟ್ರಲ್ ಲಾಕಿಂಗ್, ಫ್ರಂಟ್ ಪವರ್ ವಿಂಡೋ ಮತ್ತು ಎಸಿ, ಹ್ಯಾಂಡ್ಸ್ ಫ್ರಿ ಸೇವೆಗಳು ರೆನೊ ಕ್ವಿಡ್ ಕಾರನ್ನು ಇನ್ನಷ್ಟು ಪ್ರೀಮಿಯಂ ಆಗಿಸಲಿದೆ.

13. ಸುರಕ್ಷತೆ

13. ಸುರಕ್ಷತೆ

ಈಗಿನ ಸುರಕ್ಷಾ ಮಾನದಂಡಗಳನ್ನು ಕಾಪಾಡಿಕೊಂಡಿರುವುದಾಗಿ ತಿಳಿಸಿರುವ ರೆನೊ ಐಚ್ಛಿಕ ಏರ್ ಬ್ಯಾಗ್ ಆಯ್ಕೆಯನ್ನು ನೀಡುವುದಾಗಿಯೂ ಘೋಷಿಸಿದೆ.

14. ಸೀಟು

14. ಸೀಟು

ಇನ್ನು ನಾಲ್ಕು ಮಂದಿಗೆ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾಗಿದೆ. ಇನ್ನು ಬೇಕಾದಷ್ಟು ಲೆಗ್ ಹಾಗೂ ಹೆಡ್ ರೂಂ ಕಾಯ್ದುಕೊಳ್ಳಲಾಗಿದೆ.

15. ಬಾಟಲಿ ಹೋಲ್ಡರ್

15. ಬಾಟಲಿ ಹೋಲ್ಡರ್

ಅಂತೆಯೇ ಬಾಟಲಿ, ದೈನಿಕ ಪತ್ರಿಕೆ ಜೊತೆಗೆ ಇನ್ನಿತರ ಅಗತ್ಯ ವಸ್ತುಗಳಿನ್ನಡಲು ಮುಂಭಾಗದಲ್ಲಿ ಇದಕ್ಕಾಗಿ ಸೇವೆ ಕಲ್ಪಿಸಲಾಗಿದೆ. ಇದನ್ನು ಮುಚ್ಚಲು ಕವಚವಿದ್ದು ಪಯಣದ ವೇಳೆ ಯಾವುದೇ ತೊಂದರೆ ಕಾಡದು.

16. ಗ್ರೌಂಡ್ ಕ್ಲಿಯರನ್ಸ್

16. ಗ್ರೌಂಡ್ ಕ್ಲಿಯರನ್ಸ್

ಮಹೀಂದ್ರ ಬೊಲೆರೊಗೆ ಸಮಾನವಾದ ರೀತಿಯಲ್ಲಿ 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ನೀಡಿರುವುದು ನಿಜಕ್ಕೂ ಅಚ್ಚರಿಯೆನಿಸಿದೆ. ಇದು ಅಕ್ಷರಶ: ಭಾರತೀಯ ರಸ್ತೆಗೆ ಯೋಗ್ಯವೆನಿಸಲಿದೆ. ಇಲ್ಲಿಯೂ ಕ್ರಾಸೋವರ್ ಎಂಬ ಶೈಲಿಯನ್ನು ಕಾಪಾಡಿಕೊಳ್ಳಲಾಗಿದೆ.

17. ಬೆಲೆ

17. ಬೆಲೆ

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಮೂರರಿಂದ ನಾಲ್ಕು ಲಕ್ಷ ರು.ಗಳ ಪರಿಧಿಯಲ್ಲಿ ರೆನೊ ಕ್ವಿಡ್ ಬಿಡುಗಡೆಯಾಗಲಿರುವುದು ಅತಿ ಹೆಚ್ಚು ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸಲು ನೆರವಾಗಲಿದೆ.

18. ಯಾವಾಗ ಬಿಡುಗಡೆ

18. ಯಾವಾಗ ಬಿಡುಗಡೆ

ನೂತನ ರೆನೊ ಕ್ವಿಡ್ ಪ್ರಸಕ್ತ ಸಾಲಿನಲ್ಲೇ ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳ ವರೆಗಿನ ಅವಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

19. ಗೇಮ್ ಚೇಂಜರ್ ಆಗಲಿದೆಯೇ?

19. ಗೇಮ್ ಚೇಂಜರ್ ಆಗಲಿದೆಯೇ?

ಸರ್ವಿಸ್ ಸೌಲಭ್ಯದ ಕೊರತೆಯನ್ನು ರೆನೊವನ್ನು ಕಾಡುವ ಸಾಧ್ಯತೆಯಿದೆ. 2015 ವರ್ಷಾಂತ್ಯದಲ್ಲಿ ತನ್ನ ವಿತರಕ ಜಾಲದ ಸಂಖ್ಯೆಯನ್ನು 205ಕ್ಕೆ ಏರಿಸುವ ಇರಾದೆ ಹೊಂದಿದೆ. ಮಾರುತಿ ಆಗಲೇ 900 ಡೀಲರ್ ಶಿಪ್ ಹಾಗೂ 3,000ದಷ್ಟು ಸರ್ವಿಸ್ ಸ್ಟೇಷನ್ ಗಳನ್ನು ಹೊಂದಿದೆ.

20. ರೆನೊ ಕ್ವಿಡ್

20. ರೆನೊ ಕ್ವಿಡ್

ಒಟ್ಟಿನಲ್ಲಿ ಒಂದು ಉತ್ತಮ ಕಾರನ್ನು ಸಿದ್ಧಪಡಿಸುವಲ್ಲಿ ರೆನೊ ಯಶಸ್ವಿಯಾಗಿದೆ. ದೇಶದ ಜನತೆಯು ಇದನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

ರೆನೊ ಕ್ವಿಡ್ - ನೀವು ಅರಿತುಕೊಳ್ಳಬೇಕಾದ 20 ಅಂಶಗಳು

ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

English summary
20 Things all you want to know about new Renault Kwid
Story first published: Thursday, May 21, 2015, 10:30 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more