ಢಿಕ್ಕಿ ಪರೀಕ್ಷೆ ಫೇಲ್; ಅಸ್ಸಾಂನಲ್ಲಿ ಸಣ್ಣ ಕಾರುಗಳ ಓಡಾಟಕ್ಕೆ ನಿಷೇಧ

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಮಾರಾಟವಾಗುವ ಸರ್ವಕಾಲಿಕ ಶ್ರೇಷ್ಠ ಕಾರುಗಳ ಸಾಲಿನಲ್ಲಿ ಮಾರುತಿ ಸುಜುಕಿ ಆಲ್ಟೊ ಹಾಗೂ ಸ್ವಿಫ್ಟ್ ಗುರುತಿಸಿಕೊಂಡಿದೆ. ಹಾಗಿರಬೇಕೆಂದರೆ ಢಿಕ್ಕಿ ಪರೀಕ್ಷೆಯಲ್ಲಿ (Crash Test) ವಿಫಲವಾಗಿರುವ ಇಂತಹ ಸಣ್ಣ ಕಾರುಗಳ ಓಡಾಟಕ್ಕೆ ನಿಷೇಧ ಹೇರಲು ಅಸ್ಸಾಂ ನ್ಯಾಯಾಲಯ ನಿರ್ಧರಿಸಿದೆ.

Also Read: ನ್ಯಾನೋ ಮಾತ್ರವಲ್ಲ ಆಲ್ಟೊ, ಫಿಗೊ, ಐ10 ಸಾಧನೆಯೆಲ್ಲ ಬರಿ ಶೂನ್ಯ

ಈಶಾನ್ಯ ಭಾರತದ ವಾಹನ ಮಾರುಕಟ್ಟೆಯಲ್ಲಿ ಅಸ್ಸಾಂ ಬಹು ದೊಡ್ಡ ಪಾತ್ರ ವಹಿಸುತ್ತದೆ. ಆದರೆ ವಾಹನ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಹೊರಡಿಸಿರುವ ಅಸ್ಸಾಂ ಕೋರ್ಟ್‌, ಸಣ್ಣ ಕಾರುಗಳ ಮಾರಾಟಕ್ಕೆ ಬ್ರೇಕ್ ಹಾಕಿದೆ.

ಢಿಕ್ಕಿ ಪರೀಕ್ಷೆ ಫೇಲ್; ಅಸ್ಸಾಂನಲ್ಲಿ ಸಣ್ಣ ಕಾರುಗಳ ಓಡಾಟಕ್ಕೆ ನಿಷೇಧ

ಆಲ್ಟೊ, ಸ್ವಿಫ್ಟ್ ಮಾತ್ರವಲ್ಲದೆ ಹ್ಯುಂಡೈನ ಜನಪ್ರಿಯ ಐ10, ಇಯಾನ್ ಅಂತೆಯೇ ಈಗಷ್ಟೇ ಬಿಡುಗಡೆಯಾಗಿರುವ ಹೋಂಡಾದ ಜಾಝ್ ಮಾರಾಟವನ್ನು ನಿಲುಗಡೆಗೊಳಿಸಿ ಗುವಾಹಟಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಢಿಕ್ಕಿ ಪರೀಕ್ಷೆ ಫೇಲ್; ಅಸ್ಸಾಂನಲ್ಲಿ ಸಣ್ಣ ಕಾರುಗಳ ಓಡಾಟಕ್ಕೆ ನಿಷೇಧ

ಇವೆಲ್ಲವೂ ದೇಶದ ಪ್ರಸಿದ್ಧ ಕಾರು ಕಂಪನಿಗಳಿಗೆ ಭಾರಿ ಹೊಡೆತವನ್ನೇ ನೀಡಲಿದೆ. ಅಲ್ಲದೆ ಒಟ್ಟಾರೆ ಮಾರಾಟದಲ್ಲೂ ಭಾರಿ ಇಳಿಕೆಗೆ ಕಾರಣವಾಗಲಿದೆ.

ಢಿಕ್ಕಿ ಪರೀಕ್ಷೆ ಫೇಲ್; ಅಸ್ಸಾಂನಲ್ಲಿ ಸಣ್ಣ ಕಾರುಗಳ ಓಡಾಟಕ್ಕೆ ನಿಷೇಧ

ಈ ಬಗ್ಗೆ ವಿಶೇಷ ಉಲ್ಲೇಖ ಮಾಡಿರುವ ಗುವಾಹಟಿ ಹೈ ಕೋರ್ಟ್, ಯುರೋಪ್ ನಲ್ಲಿ ಜಾರಿಯಲ್ಲಿರುವ ಗ್ಲೋಬರ್ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ (NCAP) ಸಮವಾಗಿ ಕಣಿವೆ ರಾಜ್ಯದಲ್ಲೂ ಢಿಕ್ಕಿ ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕಾಗಿದೆ ಎಂದು ಸೂಚಿಸಿದೆ.

ಢಿಕ್ಕಿ ಪರೀಕ್ಷೆ ಫೇಲ್; ಅಸ್ಸಾಂನಲ್ಲಿ ಸಣ್ಣ ಕಾರುಗಳ ಓಡಾಟಕ್ಕೆ ನಿಷೇಧ

ಪ್ರಸ್ತುತ ಭಾರತದಲ್ಲಿ ನಿರ್ಮಾಣ ಹಾಗೂ ಮಾರಾಟವಾಗುತ್ತಿರುವ ಕಾರುಗಳಿಗೆ ಮುಂಭಾಗದ ಢಿಕ್ಕಿ ಪರೀಕ್ಷೆ ಮಾತ್ರ ಪಾಲಿಸಲಾಗುತ್ತಿದೆ. ಕಳೆದ ವರ್ಷ ಎನ್‌ಸಿಎಪಿ ಪರೀಕ್ಷೆ ನಡೆಸಿರುವ ಅಪಘಾತ ಪರೀಕ್ಷೆಯಲ್ಲಿ ದೇಶದ ಅನೇಕ ಜನಪ್ರಿಯ ಮಾದರಿಗಳು ವೈಫಲ್ಯ ಅನುಭವಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಢಿಕ್ಕಿ ಪರೀಕ್ಷೆ ಫೇಲ್; ಅಸ್ಸಾಂನಲ್ಲಿ ಸಣ್ಣ ಕಾರುಗಳ ಓಡಾಟಕ್ಕೆ ನಿಷೇಧ

ಪ್ರಸ್ತುತ ಆದೇಶವು ಕ್ರೀಡಾ ಬಳಕೆಯ ವಾಹನಗಳಿಗೆ (ಎಸ್‌ಯುವಿ) ಅನ್ವಯವಾಗುವುದಿಲ್ಲ. ದೊಡ್ಡ ಗಾತ್ರದಲ್ಲಿರುವ ಇಂತಹ ವಾಹನಗಳು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ನೀಡುವಷ್ಟು ಸಕ್ಷಮವಾಗಿದೆ.

ಢಿಕ್ಕಿ ಪರೀಕ್ಷೆ ಫೇಲ್; ಅಸ್ಸಾಂನಲ್ಲಿ ಸಣ್ಣ ಕಾರುಗಳ ಓಡಾಟಕ್ಕೆ ನಿಷೇಧ

ನಿಕಟ ಭವಿಷ್ಯದಲ್ಲೇ ಭಾರತದಲ್ಲೂ ಢಿಕ್ಕಿ ಪರೀಕ್ಷೆ ಕಡ್ಡಾಯಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮಸೂದೆ ಹೊರಡಿಸುವುದು ಅಂತಿಮ ಹಂತದಲ್ಲಿರುವಾಗಲೇ ಅಸ್ಸಾಂ ನ್ಯಾಯಾಲಯ ಇಂತಹದೊಂದು ಮಹತ್ವದ ತೀರ್ಪು ನೀಡಿರುವುದು ವಾಹನ ವಲಯದಲ್ಲಿ ಹೆಚ್ಚಿನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Most Read Articles

Kannada
English summary
Assam, the largest automobile market in northeast India has banned small cars that have failed crash tests from being sold. A court has banned the launch and sales of cars that do not meet crash test safety norms.
Story first published: Thursday, August 20, 2015, 15:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X