ಫೋರ್ಡ್ ಇಕೊಸ್ಪೋರ್ಟ್ 10 ಲಕ್ಷ ಮಾರಾಟದ ಸಂಭ್ರಮ

Written By:

ಬಿಡುಗಡೆಯಾದ ಕೆಲವೇ ವರ್ಷಗಳಲ್ಲಿ 10 ಲಕ್ಷ ಯುನಿಟ್ ಗಳ ಮಾರಾಟದ ಸಂಭ್ರಮಾಚರಣೆಯ ಗೌರವಕ್ಕೆ ಜನಪ್ರಿಯ ಫೋರ್ಡ್ ಇಕೊಸ್ಪೋರ್ಟ್ ಕಾರು ಪಾತ್ರವಾಗಿದೆ. ಭಾರತದ ಮಾರುಕಟ್ಟೆಗೆ ಹೊಸ ನಿರೀಕ್ಷೆಯೊಂದಿಗೆ ಎಂಟ್ರಿ ಕೊಟ್ಟಿದ್ದ ಈ ಕ್ರೀಡಾ ಬಳಕೆಯ ವಾಹನವು ತನ್ನ ತಾಜಾ ತಂತ್ರಜ್ಞಾನದೊಂದಿಗೆ ಅತಿ ಬೇಗನೇ ವಾಹನ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಚೆನ್ನೈನಲ್ಲಿ ಸ್ಥಿತಗೊಂಡಿರುವ ಫೋರ್ಡ್ ಇಕೊಸ್ಪೋರ್ಟ್ ಘಟಕದಿಂದ 10 ಲಕ್ಷದ ಕಾರನ್ನು ಅದ್ದೂರಿಯಾಗಿ ಹೊರ ತರಲಾಯಿತು. ನಿಮ್ಮ ಮಾಹಿತಿಗಾಗಿ ಇಲ್ಲಿಂದಲೇ ಅನೇಕ ಜಾಗತಿಕ ಮಾರುಕಟ್ಟೆಗೂ ಇಕೊಸ್ಪೋರ್ಟ್ ರವಾನೆಯಾಗುತ್ತಿದೆ.

To Follow DriveSpark On Facebook, Click The Like Button
ಫೋರ್ಡ್ ಇಕೊಸ್ಪೋರ್ಟ್

1999ನೇ ಇಸವಿಯಲ್ಲಿ ತೆರೆದಿರುವ ಫೋರ್ಡ್ ಚೆನ್ನೈ ಘಟಕದಲ್ಲಿ ಈಗಾಗಲೇ ಅನೇಕ ಜನಪ್ರಿಯ ಮಾದರಿಗಳು ತಯಾರಿಯಾಗಿದೆ. ಇವುಗಳಲ್ಲಿ ಎಂಡೀವರ್, ಫಿಯೆಸ್ಟಾ ಸಹ ಸೇರಿವೆ.

350 ಎಕರೆ ಪ್ರದೇಶದಲ್ಲಿ ಹರಡಿರುವ ಇಲ್ಲಿನ ಘಟಕದಲ್ಲಿ ವಿಶೇಷ ಎಂಜಿನ್ ಹಾಗೂ ವಾಹನ ಜೋಡಣೆ ಘಟಕವಿದೆ. ಫೋರ್ಡ್ ಸಂಸ್ಥೆಯು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಘಟಕವನ್ನು 2008ರಲ್ಲಿ ತೆರೆದಿತ್ತು.

ಇಲ್ಲಿನ ಘಟಕದಲ್ಲಿ ವಾರ್ಷಿಕವಾಗಿ 3.4 ಲಕ್ಷದಷ್ಟು ಎಂಜಿನ್ ಹಾಗೂ 2 ಲಕ್ಷದಷ್ಟು ವಾಹನಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 6,000ದಷ್ಟು ನೌಕರರು ಇಲ್ಲಿ ದುಡಿಯುತ್ತಿದ್ದಾರೆ.

English summary
Ford EcoSport Is One Millionth Vehicle To Roll Out Of Chennai Facility
Story first published: Saturday, November 7, 2015, 9:43 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark