ಸ್ಕಾನಿಯಾ ಮೈಲುಗಲ್ಲು; ಬೆಂಗ್ಳೂರಲ್ಲಿ ಐಷಾರಾಮಿ ಬಸ್ ಘಟಕ

By Nagaraja

2013ರಲ್ಲಿ ಬೆಂಗಳೂರಿನ ಹೊರವಯಲದಲ್ಲಿರುವ ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಟ್ರಕ್ ಘಟಕ ತೆರೆದುಕೊಂಡಿದ್ದ ಸ್ವೀಡನ್‌ನ ದೈತ್ಯ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಸ್ಕಾನಿಯಾ ಕಾಮರ್ಷಿಯಲ್ ವೆಹಿಕಲ್ಸ್, ಈಗ ಇದೇ ಘಟಕದಿಂದ ಬಸ್ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸ್ಕಾನಿಯಾ ಬೆಂಗಳೂರು ಬಸ್ ಘಟಕವನ್ನು ಉದ್ಘಾಟಿಸಿದರು. ಈ ಮೂಲಕ 'ಮೇಕ್ ಇನ್ ಇಂಡಿಯಾ' ಯೋಜನೆಗೆ ತನ್ನ ಪೂರ್ಣ ಬೆಂಬಲವನ್ನು ಘೋಷಿಸಿರುವ ಸ್ಕಾನಿಯಾ ಮಗದೊಂದು ಮೈಲುಗಲ್ಲನ್ನಿಟ್ಟಿದೆ.

10. ಏಷ್ಯಾದಲ್ಲೇ ಪ್ರಥಮ

10. ಏಷ್ಯಾದಲ್ಲೇ ಪ್ರಥಮ

ರಾಜ್ಯದಲ್ಲಿ ತೆರೆದಿರುವ ಸ್ಕಾನಿಯಾ ಬಸ್ ಘಟಕವು ದೇಶದಷ್ಟೇ ಅಲ್ಲದೆ ಏಷ್ಯಾ ಖಂಡದಲ್ಲಿ ತೆರೆದಿರುವ ಪ್ರಪ್ರಥಮ ಬಸ್ ಘಟಕವಾಗಿದೆ. ಅಂದರೆ ಮುಂಬರುವ ದಿನಗಳಲ್ಲಿ ಭಾರತ ಸ್ಕಾನಿಯಾದ ಜಾಗತಿಕ ಪ್ರತಿನಿಧಿ ಕೂಡಾ ಎನಿಸಿಕೊಳ್ಳಲಿದ್ದು, ಜಗತ್ತಿನೆಲ್ಲೆಡೆಗೆ ಸ್ಕಾನಿಯಾ ಬಿಡಿಭಾಗಗಳನ್ನು ರಫ್ತು ಮಾಡಲಿದೆ.

09. 600ರಷ್ಟು ಉದ್ಯೋಗ ಸೃಷ್ಟಿ

09. 600ರಷ್ಟು ಉದ್ಯೋಗ ಸೃಷ್ಟಿ

ಸ್ಕಾನಿಯಾ ನೂತನ ಘಟಕದಲ್ಲಿ ಬಸ್ ನಿರ್ಮಾಣ ಪ್ರಕ್ರಿಯೆ ಆರಂಭದೊಂದಿಗೆ 600ರಷ್ಟು ಮಂದಿಗೆ ಉದ್ಯೋಗವಕಾಶ ಸೃಷ್ಟಿಯಾಗಿದೆ.

08. ಮೊದಲು ಟ್ರಕ್ ಈಗ ಬಸ್

08. ಮೊದಲು ಟ್ರಕ್ ಈಗ ಬಸ್

2013 ಅಕ್ಟೋಬರ್ ತಿಂಗಳಲ್ಲಿ ಸ್ಕಾನಿಯಾ 300 ಕೋಟಿ ರು.ಗಳ ಬೃಹತ್ ಹೂಡಿಕೆಯಲ್ಲಿ ಟ್ರಕ್ ಘಟಕವನ್ನು ಆರಂಭಿಸಿತ್ತು. ಆಗಲೇ ಭವಿಷ್ಯದಲ್ಲೇ ಬಸ್ ಘಟಕ ತೆರೆದಿರುವುದಾಗಿ ಘೋಷಿಸಿತ್ತು.

07. 2,500 ಟ್ರಕ್, 1000 ಬಸ್

07. 2,500 ಟ್ರಕ್, 1000 ಬಸ್

ಪ್ರಸ್ತುತ ಘಟಕದಲ್ಲಿ ವಾರ್ಷಿಕವಾಗಿ 2,500 ಟ್ರಕ್ಸ್ ಹಾಗೂ 1000ದಷ್ಟು ಬಸ್ಸುಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರಲಿದೆ.

06. ರಫ್ತು ಕೇಂದ್ರ

06. ರಫ್ತು ಕೇಂದ್ರ

ಸ್ಕಾನಿಯಾ ಬೆಂಗಳೂರು ಸದ್ಯದಲ್ಲೇ ರಫ್ತು ಕಾರ್ಯದ ಕೇಂದ್ರ ಬಿಂದುವಾಗಿರಲಿದ್ದು, ಇಲ್ಲಿಂದಲ್ಲೇ ಏಷ್ಯಾ, ಮಧ್ಯ ಪೂರ್ವ ಹಾಗೂ ಆಫ್ರಿಕಾ ರಾಷ್ಟ್ರಗಳಿಗೆ ಐಷಾರಾಮಿ ಬಸ್ಸುಗಳ ವಿತರಣೆಯಾಗಲಿದೆ.

05. ನಿರ್ಮಾಣ ಸಾಮರ್ಥ್ಯ ವೃದ್ಧಿ ಯೋಜನೆ

05. ನಿರ್ಮಾಣ ಸಾಮರ್ಥ್ಯ ವೃದ್ಧಿ ಯೋಜನೆ

ಅದೇ ಹೊತ್ತಿಗೆ ನಿರ್ಮಾಣ ಸಾಮರ್ಥ್ಯವನ್ನು ದ್ವಿಗುಣ ಮಾಡುವ ಯೋಜನೆಯನ್ನು ಸ್ಕಾನಿಯಾ ಹೊಂದಿದೆ. ಇದರಂತೆ 2017ರ ವೇಳೆಯಾಗುವಾಗ 2,500 ಯುನಿಟ್ ಗಳಷ್ಟು ಬಸ್ ಹಾಗೂ 5,000 ಯುನಿಟ್ ಗಳಷ್ಟು ಟ್ರಕ್ ನಿರ್ಮಾಣವಾಗಲಿದೆ. ಅಲ್ಲದೆ ಈ ವೇಳೆಗೆ 800ದಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗಲಿದೆ.

04. ಗುರಿ

04. ಗುರಿ

ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿಕೊಂಡು ಅವರಿಗೆ ಜಾಗತಿಕ ಅನುಭವದೊಂದಿಗೆ ಒಗ್ಗೂಡಿಸುವುದೇ ಯೋಜನೆಯ ಪ್ರಮುಖ ಗುರಿಯಾಗಿದೆ ಎಂದು ಸ್ಕಾನಿಯಾ ಉಪಾಧ್ಯಕ್ಷ ಹಾಗೂ ಸಿಇಒ ಆಗಿರುವ ಮಾರ್ಟಿನ್ ಲಂಡ್ ಸ್ಟೆಡ್ಟ್ ತಿಳಿಸಿದ್ದಾರೆ.

03. ಜೈವಿಕ ಅನಿಲ ಉತ್ಪಾದನೆ

03. ಜೈವಿಕ ಅನಿಲ ಉತ್ಪಾದನೆ

ಸುಸ್ಥಿರ ಸಾರಿಗೆ ವ್ಯವಸ್ಥೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಸ್ಕಾನಿಯಾ, ಇದೇ ಘಟಕದಿಂದಲೇ ಜೈವಿಕ ಅನಿಲ ಉತ್ಪಾದನೆಯನ್ನು ಆರಂಭಿಸಿದೆ. ಈ ಮೂಲಕ ಸ್ಥಳೀಯವಾಗಿ ಎಥನಾಲ್ ಅನಿಲ ಬಸ್ಸುಗಳನ್ನು ಜೋಡಣೆ ಮಾಡಲಿದೆ.

02. ಮೇಕ್ ಇನ್ ಇಂಡಿಯಾ

02. ಮೇಕ್ ಇನ್ ಇಂಡಿಯಾ

ಈ ಎಲ್ಲದರ ಮುಖಾಂತರ ಭಾರತೀಯ ಸರಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಸ್ಕಾನಿಯಾ ಕೈಜೋಡಿಸಿಕೊಂಡಿದೆ. ಅಲ್ಲದೆ ಸ್ವಚ್ಛವಾದ ತಂತ್ರಜ್ಞಾನವನ್ನು ಪ್ರೋತ್ಸಾಹಿಸುತ್ತಿದೆ.

01. ಸ್ಕಾನಿಯಾ

01. ಸ್ಕಾನಿಯಾ

2007ರಲ್ಲಿ ಲಾರ್ಸೆಲ್ ಆಂಡ್ ಟರ್ಬೊ ಜತೆ ಪಾಲುದಾರಿಕೆ ಹಂಚಿಕೊಂಡಿದ್ದ ಸ್ಕಾನಿಯಾ ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ದೇಶದಲ್ಲಿ ಮಾರಾಟ ವೃದ್ಧಿಸುವ ನಿಟ್ಟಿನಲ್ಲಿ 2011ರಲ್ಲಿ ಸ್ಕಾನಿಯಾ ಕಾರ್ಮಿಷಿಯಲ್ ವೆಹಿಕಲ್ಸ್ ಇಂಡಿಯಾಕ್ಕೆ ರೂಪು ನೀಡಲಾಗಿತ್ತು. ಅಷ್ಟೇ ಅಲ್ಲದೆ ಭಾರತಕ್ಕಾಗಿ R 500 6×4, G 460 6×4 ಮತ್ತು P 410 6×2 ಭಾರ ಎಳೆಯುವ ಟ್ರಕ್ಕುಗಳನ್ನು ಪರಿಚಿಸಿತ್ತು. ಈ ಪೈಕಿ P 410 8×4 ಗಣಿಗಾರಿಕೆ ಟಿಪ್ಪರನ್ನು 2012ರ ವರ್ಷಾಂತ್ಯದಲ್ಲಿ ಬಿಡುಗಡೆಗೊಳಿಸಲಾಗಿತ್ತು.


Most Read Articles

Kannada
English summary
Scania inaugurates its bus production in Narasapura in the Indian state of Karnataka in the presence of the Swedish and Indian transport ministers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X