ನ್ಯಾನೋ ಈಸ್ ಬ್ಯಾಕ್; ಜೆನ್ ಎಕ್ಸ್ ನ್ಯಾನೋಗೆ ಭಾರಿ ಬೇಡಿಕೆ

Written By:

ತೀರಾ ಕಳಪೆ ಮಟ್ಟದ ಮಾರಾಟದ ಹಿನ್ನೆಡೆ ಅನುಭವಿಸುತ್ತಿದ್ದ ಟಾಟಾ ನ್ಯಾನೋ ಹೊಸತಾಗಿ ಬಿಡುಗಡೆಯಾಗಿರುವ ಜೆನ್ ಎಕ್ಸ್ ಮಾದರಿಯೊಂದಿಗೆ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಆಟೋ ವಲಯಗಳ ಪ್ರಕಾರ ಪ್ರತಿ ತಿಂಗಳಲ್ಲಿ 1,400ರಷ್ಟಿದ್ದ (ಹಳೆಯ ನ್ಯಾನೋ) ಮಾರಾಟವೀಗ 3,000ಕ್ಕೆ ಏರಿಕೆಯಾಗಿದೆ.

ಈ ಅಚ್ಚರಿಯ ಬೆಳವಣಿಗೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ನ್ಯಾನೋ ಜೆನ್ ಎಕ್ಸ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಕಾರಿನ ಆಗಮನದಿಂದಾಗಿದೆ. ನಿಮ್ಮ ಮಾಹಿತಿಗಾಗಿ ನ್ಯಾನೋ ಜೆನ್ ಎಕ್ಸ್ ದೇಶದಲ್ಲಿ ಲಭ್ಯವಾಗುತ್ತಿರುವ ಅತಿ ಕಡಿಮೆ ಬೆಲೆಯ ಎಎಂಟಿ (ಸೆಮಿ ಆಟೋಮ್ಯಾಟಿಕ್) ಕಾರಾಗಿದೆ.

To Follow DriveSpark On Facebook, Click The Like Button
ನ್ಯಾನೋ ಈಸ್ ಬ್ಯಾಕ್; ಜೆನ್ ಎಕ್ಸ್ ನ್ಯಾನೋಗೆ ಭಾರಿ ಬೇಡಿಕೆ

ಸಂಸ್ಥೆಯಿಂದ ಲಭ್ಯವಾಗಿರುವ ಮಾಹಿತಿಗಳ 2015 ಮೇ 19ರಂದು ಬಿಡುಗಡೆಯಾಗಿರುವ ಜೆನ್ ಎಕ್ಸ್ ನ್ಯಾನೋ ಮಾದರಿಗೆ ಈಗಾಗಲೇ ಒಂದು ತಿಂಗಳ ಅವಧಿಯಲ್ಲಿ 3,000ದಷ್ಟು ಬುಕ್ಕಿಂಗ್ ದಾಖಲಾಗಿವೆ. ಈ ಪೈಕಿ 1,000ದಷ್ಟು ಯುನಿಟ್ ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ.

ನ್ಯಾನೋ ಈಸ್ ಬ್ಯಾಕ್; ಜೆನ್ ಎಕ್ಸ್ ನ್ಯಾನೋಗೆ ಭಾರಿ ಬೇಡಿಕೆ

ಎಎಂಟಿ ನ್ಯಾನೋ ಬಯಸುವವರು ಆರು ವಾರಗಳಷ್ಟು ಕಾಲ ಕಾಯಬೇಕಾಗಿದೆ. ಮ್ಯಾನುವಲ್ ವೆರಿಯಂಟ್ ಕಾಯುವಿಕೆ ಅವಧಿ ಎರಡು ವಾರಗಳಷ್ಟಿದೆ. ಎಎಂಟಿ ಕಿಟ್ ಆಮದು ಪ್ರಕ್ರಿಯೆ ವಿಳಂಬವಾಗುತ್ತಿರುವುದೇ ಕಾಯುವಿಕೆ ಅವಧಿ ವಿಸ್ತರಣೆಗೆ ಕಾರಣವಾಗಿದೆ.

ನ್ಯಾನೋ ಈಸ್ ಬ್ಯಾಕ್; ಜೆನ್ ಎಕ್ಸ್ ನ್ಯಾನೋಗೆ ಭಾರಿ ಬೇಡಿಕೆ

ಒಟ್ಟು ಬುಕ್ಕಿಂಗ್ ಗಳನ್ನು ಪರಿಗಣಿಸಿದಾಗ ಶೇಕಡಾ 70ರಷ್ಟು ಮಂದಿ ಜೆನ್ ಎಕ್ಸ್ ನ್ಯಾನೋದ ಎಎಂಟಿ ವೆರಿಯಂಟನ್ನು ಆರಿಸಿರುವುದು ಕಂಡುಬಂದಿದೆ. ಇದರಲ್ಲಿ ಆಳವಡಿಸಲಾಗಿರುವ ನೂತನ ತಂತ್ರಜ್ಞಾನವು ಆಯಾಸ ರಹಿತ ಚಾಲನೆಗೆ ನೆರವಾಗುತ್ತಿದೆ.

ನ್ಯಾನೋ ಈಸ್ ಬ್ಯಾಕ್; ಜೆನ್ ಎಕ್ಸ್ ನ್ಯಾನೋಗೆ ಭಾರಿ ಬೇಡಿಕೆ

ಇನ್ನು ಬೆಲೆಯ ಬಗ್ಗೆ ಮಾತನಾಡುವುದಾದ್ದಲ್ಲಿ ನ್ಯಾನೋ ಮ್ಯಾನುವಲ್ ಟ್ರಾನ್ಸ್ ಮಿಷನ್ ವೆರಿಂಯಟ್ ಬೆಲೆ 1.99 (ದೆಹಲಿ ಎಕ್ಸ್ ಶೋ ರೂಂ) ಆಗಿದೆ. ಅದೇ ಹೊತ್ತಿಗೆ ಎಎಂಟಿ 2.69 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ) ದುಬಾರಿಯೆನಿಸಿದೆ. ಇಲ್ಲಿ ಮ್ಯಾನುವಲ್ ಟಾಪ್ ಎಂಡ್ ವೆರಿಯಂಟ್ ಗಿಂತಲೂ ಎಎಂಟಿ ಕೇವಲ 20,000ಗಳಷ್ಟು ದುಬಾರಿಯಾಗಿರುವುದರಿಂದ ಖರೀದಿಗಾರರು ನೇರವಾಗಿ ಎಎಂಟಿ ಮಾದರಿಯನ್ನು ಆಯ್ಕೆ ಮಾಡುತ್ತಿದ್ದಾರೆ.

ನ್ಯಾನೋ ಈಸ್ ಬ್ಯಾಕ್; ಜೆನ್ ಎಕ್ಸ್ ನ್ಯಾನೋಗೆ ಭಾರಿ ಬೇಡಿಕೆ

ಪ್ರಮುಖವಾಗಿಯೂ ಮಾರುತಿ ಸುಜುಕಿ ಆಲ್ಟೊ ಹಾಗೂ ಹ್ಯುಂಡೈ ಇಯಾನ್ ಮಾದರಿಗಳಿಗೆ ನೂತನ ನ್ಯಾನೋ ಪೈಪೋಟಿ ಒಡ್ಡಲಿದೆ. ಇದು 'ಸ್ಮಾರ್ಟ್ ಸಿಟಿ ಕಾರು' ಎಂದು ಗುರುತಿಸಿಕೊಂಡಿದ್ದು, ಮುಂದಿನ ದಿಗಳಲ್ಲಿ ಮತ್ತಷ್ಟು ಸದ್ದು ಮಾಡುವ ನಿರೀಕ್ಷೆಯಲ್ಲಿದೆ.

English summary
Tata sell 3,000 GenX Nanos in one month
Story first published: Monday, June 22, 2015, 10:27 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark