ಬೆಂಗ್ಳೂರಿನ ಕುಡುಕರೆಲ್ಲ ನೆಟ್ಟಗಾಗಿ ಬಿಟ್ರೆ? ಡ್ರಿಂಕ್ ಆಂಡ್ ಡ್ರೈವ್‌ನಲ್ಲಿ ಭಾರಿ ಇಳಿಕೆ

By Nagaraja

ಹೌದು, ಇಂತಹದೊಂದು ಪ್ರಶ್ನೆ ಜನ ಸಾಮಾನ್ಯರಲ್ಲಿ ಮೂಡಿ ಬರುತ್ತಿದೆ. ಅದೇನಾಯ್ತು, ಹವಾಮಾನ ಬದಲಾಯಿತೇ ಅಥವಾ ಅಷ್ಟು ಬೇಗ ಬೆಂಗಳೂರಿನ ಕುಡುಕರೆಲ್ಲ ನೆಟ್ಟಗಾಗಿ ಬಿಟ್ರೆ? ಬಲ್ಲ ಮೂಲಗಳಿಂದ ಬಂದಿರುವ ವರದಿಗಳ ಪ್ರಕಾರ ಬೆಂಗಳೂರು ನಗರದಲ್ಲಿ ಡ್ರಿಂಕ್ ಆಂಡ್ ಡ್ರೈವ್ ದೂರು ಪ್ರಕರಣಗಳಲ್ಲಿ ಶೇಕಡಾ 60ರಷ್ಟು ಇಳಿಕೆಯುಂಟಾಗಿದೆ.

ಇಲ್ಲಿ ನಗರದ ಡ್ರಿಂಕ್ ಆಂಡ್ ಡ್ರೈವ್ ಪ್ರಕರಣವನ್ನು ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಲು ನೆರವಾಗಿರುವ ನಮ್ಮ ನಿಯಮಪಾಲಕರಾದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ನಾವು ಹಾಟ್ಸಪ್ ಹೇಳಲೇಬೇಕಾಗುತ್ತದೆ. ಅಷ್ಟಕ್ಕೂ ಅಂಕಿಅಂಶಗಳು ಏನನ್ನು ಬಹಿರಂಗಪಡಿಸುತ್ತಿದೆ ಬನ್ನಿ ನೋಡೋಣ...

ಬೆಂಗ್ಳೂರಿನ ಕುಡುಕರೆಲ್ಲ ನೆಟ್ಟಗಾಗಿ ಬಿಟ್ರೆ? ಡ್ರಿಂಕ್ ಆಂಡ್ ಡ್ರೈವ್‌ನಲ್ಲಿ ಭಾರಿ ಇಳಿಕೆ

ವರದಿಗಳ ಪ್ರಕಾರ ಪ್ರಸಕ್ತ ಸಾಲಿನ ಮೊದಲ ಮೂರು ತಿಂಗಳಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಡ್ರಿಂಕ್ ಆಂಡ್ ಡ್ರೈವ್ ತಪ್ಪಿಗಾಗಿ ಮಾಸಿಕ ಸರಾಸರಿ 5,000 ದೂರುಗಳನ್ನು ದಾಖಲಿಸಿಕೊಳ್ಳುತ್ತಿದ್ದವು.

ಬೆಂಗ್ಳೂರಿನ ಕುಡುಕರೆಲ್ಲ ನೆಟ್ಟಗಾಗಿ ಬಿಟ್ರೆ? ಡ್ರಿಂಕ್ ಆಂಡ್ ಡ್ರೈವ್‌ನಲ್ಲಿ ಭಾರಿ ಇಳಿಕೆ

ಎಪ್ರಿಲ್ ತಿಂಗಳಾಗುವಾಗ ಡ್ರಿಂಕ್ ಆಂಡ್ ಡ್ರೈವ್ ದೂರುಗಳ ಸಂಖ್ಯೆ 3,434ಕ್ಕೆ ಇಳಿಕೆಯಾಗಿದೆ. ಈ ಸಂಖ್ಯೆಯು ಮೇ ತಿಂಗಳಾಗುವಾಗ ಕೇವಲ 1,829ಕ್ಕೆ ಬಂದಿಳಿದಿದೆ. ತನ್ಮೂಲಕ ಪಾನಮತ್ತ ಚಾಲನೆಯ ದೂರುಗಳ ಸಂಖ್ಯೆ ಶೇಕಡಾ 60ರಷ್ಟು ಇಳಿಕೆಯಾಗಿದೆ.

ಬೆಂಗ್ಳೂರಿನ ಕುಡುಕರೆಲ್ಲ ನೆಟ್ಟಗಾಗಿ ಬಿಟ್ರೆ? ಡ್ರಿಂಕ್ ಆಂಡ್ ಡ್ರೈವ್‌ನಲ್ಲಿ ಭಾರಿ ಇಳಿಕೆ

ಡ್ರಿಂಕ್ ಆಂಡ್ ಡ್ರೈವ್ ದೂರುಗಳ ಸಂಖ್ಯೆಯಲ್ಲಿ ಉಂಟಾಗಿರುವ ಗಣನೀಯ ಪ್ರಮಾಣದ ಕುಸಿತದಿಂದಾಗಿ ಟ್ರಾಫಿಕ್ ಪೊಲೀಸ್ ವಿಭಾಗ ಸಹ ಆಶ್ಚರ್ಯಚಕಿತಗೊಂಡಿದೆ.

ಬೆಂಗ್ಳೂರಿನ ಕುಡುಕರೆಲ್ಲ ನೆಟ್ಟಗಾಗಿ ಬಿಟ್ರೆ? ಡ್ರಿಂಕ್ ಆಂಡ್ ಡ್ರೈವ್‌ನಲ್ಲಿ ಭಾರಿ ಇಳಿಕೆ

ವಾರಂತ್ಯದ ಶನಿವಾರದಂದು ಪೊಲೀಸರು 1,000ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸುತ್ತಿದ್ದರು. ಈ ಪ್ರಮಾಣವೀಗ 500ಕ್ಕೆ ಇಳಿಕೆಯಾಗಿದೆ. ಕೆಲವು ಪಬ್ ಗಳಲ್ಲಿ ಗ್ರಾಹಕರು ಮನೆಗೆ ಸುರಕ್ಷಿತವಾಗಿ ತಲುಪಲು ವೈಯಕ್ತಿಕ ವಾಹನಗಳ ಬದಲಾಗಿ ಕ್ಯಾಬ್ ಗಳನ್ನು ಏರ್ಪಡಿಸುತ್ತಿರುವುದು ಸಹ ಕುಡಿದು ವಾಹನ ಚಲಾಯಿಸುವ ಸಂಖ್ಯೆಗಳಲ್ಲಿ ಇಳಿಕೆಯಾಗಲು ಕಾರಣವಾಗಿದೆ.

ಬೆಂಗ್ಳೂರಿನ ಕುಡುಕರೆಲ್ಲ ನೆಟ್ಟಗಾಗಿ ಬಿಟ್ರೆ? ಡ್ರಿಂಕ್ ಆಂಡ್ ಡ್ರೈವ್‌ನಲ್ಲಿ ಭಾರಿ ಇಳಿಕೆ

ತಡ ರಾತ್ರಿಯಲ್ಲಿ ಮದ್ಯ ಕುಡಿದು ವಾಹನ ಚಾಲನೆ ಮಾಡುವುದು ನಿಜಕ್ಕೂ ಅಪಾಯಕಾರಿಯಾಗಿದ್ದು, ನೀವು ಅವಘಡಕ್ಕೆ ಸಿಲುಕುವುದಲ್ಲದೆ ಅಜಾಗರೂಕ ಚಾಲನೆಯಿಂದಾಗಿ ಇತರ ವಾಹನಗಳಿಗೂ ಅವಘಡ ತಪ್ಪಿದ್ದಲ್ಲ.

Most Read Articles

Kannada
English summary
Bengaluru: steep drop in the Drink and Drive cases
Story first published: Friday, July 8, 2016, 17:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X