ಬೆಂಗಳೂರಲ್ಲಿ ದೈಹಿಕ ಅಸಮರ್ಥರಿಗೆ ಕಿಕ್ ಸ್ಟ್ಯಾರ್ಟ್ ಕ್ಯಾಬ್ ಸೇವೆ

Written By:

ನಮ್ಮ ದೈನಂದಿನ ಜೀವನದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ನಡೆಸುವ ಅನೇಕ ಮಂದಿ ದೈಹಿಕ ಅಸಮರ್ಥರು ತೊಂದರೆ ಎದುರಿಸುತ್ತಿರುವುದನ್ನು ಕಣ್ಣಾರೆ ನೋಡಿರುತ್ತೇವೆ. ಅಂಗವಿಕಲಕರಿಗೆ ಏರುವುದು ಹಾಗೂ ಇಳಿಯುವುದು ದೊಡ್ಡ ಸಮಸ್ಯೆ ಆಗಿದ್ದರಿಂದ ಸಾರ್ವಜನಿಕ ಬಸ್ಸುಗಳಲ್ಲಿ ಸಂಚರಿಸುವುದು ಕಷ್ಟಕರವಾಗಿದೆ.

ಬೆಂಗಳೂರಲ್ಲಿ ದೈಹಿಕ ಅಸಮರ್ಥರಿಗೆ ಕಿಕ್ ಸ್ಟ್ಯಾರ್ಟ್ ಕ್ಯಾಬ್ ಸೇವೆ

ದೈಹಿಕ ಅಸಮರ್ಥರ ಸುಗಮ ಸಂಚಾರ ಧ್ಯೇಯೋದ್ದೇಶವನ್ನು ಮುಂದಿಟ್ಟುಕೊಂಡು ಬೆಂಗಳೂರು ತಳಹದಿಯ ಕ್ಯಾಬ್ ಸಂಸ್ಥೆಯೊಂದು ಅಂಗವಿಕಲರಿಗಾಗಿ ವಿಶೇಷ ವಿನ್ಯಾಸಿತ ವಾಹನವನ್ನು ಹೊರತಂದಿದೆ.

ಬೆಂಗಳೂರಲ್ಲಿ ದೈಹಿಕ ಅಸಮರ್ಥರಿಗೆ ಕಿಕ್ ಸ್ಟ್ಯಾರ್ಟ್ ಕ್ಯಾಬ್ ಸೇವೆ

ಎಂಫಾಸಿಸ್ ಫೌಂಡೇಷನ್ ಬೆಂಬಲದೊಂದಿಗೆ ಬೆಂಗಳೂರು ಮೂಲದ ಕಿಕ್ ಸ್ಟ್ಯಾರ್ಟರ್ ಕ್ಯಾಬ್ ಸಂಸ್ಥೆಯು ದೈಹಿಕ ಅಸಮರ್ಥರಿಗಾಗಿ ಕ್ಯಾಬ್ ಸೇವೆಯನ್ನು ಆರಂಭಿಸಿದೆ.

ಬೆಂಗಳೂರಲ್ಲಿ ದೈಹಿಕ ಅಸಮರ್ಥರಿಗೆ ಕಿಕ್ ಸ್ಟ್ಯಾರ್ಟ್ ಕ್ಯಾಬ್ ಸೇವೆ

ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸಲು ಕಷ್ಟವಾಗುತ್ತಿರುವ ಸಮಾಜದ ಹಿರಿಯ ನಾಗರಿಕರು ಸಹ ಇದರ ಪ್ರಯೋಜನವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಬೆಂಗಳೂರಲ್ಲಿ ದೈಹಿಕ ಅಸಮರ್ಥರಿಗೆ ಕಿಕ್ ಸ್ಟ್ಯಾರ್ಟ್ ಕ್ಯಾಬ್ ಸೇವೆ

ಕಿಕ್ ಸ್ಟ್ಯಾರ್ಟ್ ಕಾರುಗಳಲ್ಲಿ ವೀಲ್ ಚೇರ್ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ. ತನ್ಮೂಲಕ ಸುಲಭವಾಗಿ ವಾಹನದೊಳಗೆ ಪ್ರವೇಶಿಸಬಹುದಾಗಿದೆ.

ಬೆಂಗಳೂರಲ್ಲಿ ದೈಹಿಕ ಅಸಮರ್ಥರಿಗೆ ಕಿಕ್ ಸ್ಟ್ಯಾರ್ಟ್ ಕ್ಯಾಬ್ ಸೇವೆ

ಅಂಗವಿಕಲರು ಹಾಗೂ ಮೊಣಕಾಲಿನ ನೋವಿನ ಸಮಸ್ಯೆ ಇರುವುವರಿಗಾಗಿ ವೀಲ್ ಚೇರ್ ರೂಪದ ತೆಗೆಯಬಹುದಾದ ಮುಂಭಾಗದ ಸೀಟು ವ್ಯವಸ್ಥೆಯನ್ನು ಕೊಡಲಾಗಿದೆ.

ಬೆಂಗಳೂರಲ್ಲಿ ದೈಹಿಕ ಅಸಮರ್ಥರಿಗೆ ಕಿಕ್ ಸ್ಟ್ಯಾರ್ಟ್ ಕ್ಯಾಬ್ ಸೇವೆ

ಆನ್ ಲೈನ್ ಮುಖಾಂತರ ಕಿಕ್ ಸ್ಟ್ಯಾರ್ಟ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದ್ದು, 20 ಕೀ.ಮೀ. ದೂರದ ಪ್ರಯಾಣಕ್ಕೆ 800 ರುಪಾಯಿ ವೆಚ್ಚ ತಗುಲಲಿದೆ. ನಂತರದ ಪ್ರತಿ ಕೀ.ಮೀ.ಗೆ ಹೆಚ್ಚುವರಿ 20 ರು.ಗಳನ್ನು ಈಡು ಮಾಡಲಾಗುತ್ತದೆ.

ಬೆಂಗಳೂರಲ್ಲಿ ದೈಹಿಕ ಅಸಮರ್ಥರಿಗೆ ಕಿಕ್ ಸ್ಟ್ಯಾರ್ಟ್ ಕ್ಯಾಬ್ ಸೇವೆ

ಪ್ರಸ್ತುತ ಕ್ಯಾಬ್ ಸರ್ವಿಸ್ ವಿಶೇಷ ಪ್ಯಾಕೇಜ್ ಗಳನ್ನು ನೀಡುತ್ತಿದ್ದು, ಮನೆ, ರೈಲ್ವೆ ಅಥವಾ ವಿಮಾನಗಳಿಂದ ಪಿಕಪ್ ಹಾಗೂ ಡ್ರಾಪ್ ಸೌಲಭ್ಯಗಳನ್ನು ಒಳಗೂಂಡಿರುತ್ತದೆ.

English summary
KickStart: A Cab Service In Bengaluru For People With Disabilities
Story first published: Monday, December 5, 2016, 14:06 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark