ಮಹೀಂದ್ರ ಸ್ಕಾರ್ಪಿಯೊಗೆ ಸಬ್ 2 ಲೀಟರ್ ಡೀಸೆಲ್ ಎಂಜಿನ್

By Nagaraja

ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಹೆಸರಾಂತ ಮಾದರಿಗಳಾದ ಸ್ಕಾರ್ಪಿಯೊ ಹಾಗೂ ಎಕ್ಸ್‌ಯುವಿ500 ಅತಿ ಶೀಘ್ರದಲ್ಲೇ ಸಬ್ 2 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

ರಾಷ್ಟ್ರ ರಾಜಧಾನಿಯಲ್ಲಿ ನವದೆಹಲಿಯಲ್ಲಿ ಎರಡು ಲೀಟರ್ ಗೂ ಹೆಚ್ಚು ಸಾಮರ್ಥ್ಯದ ಡೀಸೆಲ್ ಎಂಜಿನ್ ಗಳನ್ನು ನಿಷೇಧಿಸಿರುವ ಕೋರ್ಟ್ ಕ್ರಮದ ಹಿನ್ನೆಲೆಯಲ್ಲಿ ಮಹೀಂದ್ರ ಇಂತಹದೊಂದು ನಿಲುವನ್ನು ತಳೆಯಲಿದೆ.

ಮಹೀಂದ್ರ ಸ್ಕಾರ್ಪಿಯೊ

ಅಂದರೆ ದೆಹಲಿ ನಿವಾಸಿಗರು ಬಹುಬೇಗನೇ ತಮ್ಮ ನೆಚ್ಚಿನ ಸ್ಕಾರ್ಪಿಯೊ ಹಾಗೂ ಎಕ್ಸ್‌ಯುವಿ500 ವಾಹನಗಳನ್ನು ಗಿಟ್ಟಿಸಿಕೊಳ್ಳಲಿದ್ದಾರೆ.

ನೂತನ ಎಂಜಿನ್ ಈಗಿರುವ 2.2 ಲೀಟರ್‌ ಎಂಜಿನ್‌ನ ಸಣ್ಣ ಸ್ವರೂಪವಾಗಿರಲಿದೆ. ಬಲ್ಲ ಮೂಲಗಳ ಪ್ರಕಾರ ಮಹೀಂದ್ರ 1.9 ಲೀಟರ್ ಎಂ ಹಾಕ್ ಡೀಸೆಲ್ ಎಂಜಿನ್ ಶೀಘ್ರದಲ್ಲೇ ಡೀಲರ್ ಶಿಪ್ ಗಳನ್ನು ಬಂದು ತಲುಪಲಿದೆ. ಈ ಸಂಬಂಧ ಭಾರತ ವಾಹನ ಅಧ್ಯಯನ ಸಂಸ್ಥೆಯಿಂದಲೂ ಅನುಮೋದನೆಯನ್ನು ಪಡೆದುಕೊಂಡಿದೆ.

2015 ಡಿಸೆಂಬರ್ ತಿಂಗಳಲ್ಲಿ ಮಹತ್ವದ ತೀರ್ಪು ಹೊರಡಿಸಿದ್ದ ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ 2000 ಸಿಸಿ ಗಿಂತಲೂ ಮೇಲ್ಪಟ್ಟ ಡೀಸೆಲ್ ಎಂಜಿನ್ ಕಾರುಗಳಿಗೆ ನಿಷೇಧ ಹೇರಿತ್ತು.

Most Read Articles

Kannada
English summary
Mahindra Scorpio & XUV5OO Working On Downsized 1.9-litre Diesel Engine
Story first published: Saturday, January 16, 2016, 15:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X