ರಾ.ಹೆ 2ರಲ್ಲಿ ಭೀಕರ ಅಪಘಾತ- ಘಟನೆಯಲ್ಲಿ ಫಿಯೆಟ್ ಪುಂಟೊ ಕಾರು ಪುಡಿ ಪುಡಿ

Written By:

ನಿನ್ನೇ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯ 2ರಲ್ಲಿ ಭೀಕರ ಅಪಘಾತ ಒಂದು ಸಂಭವಿಸಿದೆ. ಘಟನೆಯಲ್ಲಿ ಹೊಚ್ಚ ಹೊಸ ಕಾರು ಫಿಯೆಟ್ ಪುಂಟೊ ಅಬಾರ್ತ್ ಕಾರು ಪುಡಿ ಪುಡಿಯಾಗಿದ್ದು, ಅದೃಷ್ಟವಶಾತ್ ಕಾರು ಚಾಲಕ ಪ್ರಾಣಪಾಯದಿಂದ ಪಾರಾಗಿರುವ ಘಟನೆ ದೆಹಲಿ ಬಳಿ ನಡೆದಿದೆ.

ರಾ.ಹೆ 2ರಲ್ಲಿ ಭೀಕರ ಅಪಘಾತ- ಘಟನೆಯಲ್ಲಿ ಫಿಯೆಟ್ ಪುಂಟೊ ಪುಡಿ ಪುಡಿ

ಲಾರಿ ಚಾಲಕನ ಒಂದು ಸಣ್ಣ ತಪ್ಪಿನಿಂದಾಗಿ ಫಿಯೆಟ್ ಪುಂಟೊ ಅಬಾರ್ತ್ ಕಾರು ಅಪಘಾತಕ್ಕೆ ಇಡಾಗಿದ್ದು, ದೆಹಲಿ ಸಮೀಪ ಸಂಭವಿಸಿದ ಘಟನೆಯಲ್ಲಿ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದ ಫಿಯೆಟ್ ಕಾರು ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ.

ರಾ.ಹೆ 2ರಲ್ಲಿ ಭೀಕರ ಅಪಘಾತ- ಘಟನೆಯಲ್ಲಿ ಫಿಯೆಟ್ ಪುಂಟೊ ಪುಡಿ ಪುಡಿ

ಫಿಯೆಟ್ ಕಾರು ಘಟನೆ ಸಂದರ್ಭದಲ್ಲಿ ಗಂಟೆಗೆ 80 ಕಿಮಿ ವೇಗದಲ್ಲಿ ಚಲಿಸುತ್ತಿದ್ದ ಎನ್ನಲಾಗಿದ್ದು, ಈ ವೇಳೆ ಗೂಡ್ಸ್ ಲಾರಿ ಚಾಲಕ ಯಾವುದೇ ಇಂಡಿಕೇಟರ್ ಸೂಚನೆ ನೀಡದೆ ರಸ್ತೆ ಬದಿ ಪಾರ್ಕ್ ಮಾಡಲು ಮುಂದಾಗಿದ್ದಾನೆ.

ರಾ.ಹೆ 2ರಲ್ಲಿ ಭೀಕರ ಅಪಘಾತ- ಘಟನೆಯಲ್ಲಿ ಫಿಯೆಟ್ ಪುಂಟೊ ಪುಡಿ ಪುಡಿ

ಲಾರಿ ಹಿಂದೆಯೇ ವೇಗದಲ್ಲಿ ಬರುತ್ತಿದ್ದ ಫಿಯೆಟ್ ಈ ವೇಳೆ ನಿಯಂತ್ರಣ ಕಳೆದುಕೊಂಡಿದ್ದು, ನೇರವಾಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಆದ್ರೆ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳನ್ನು ಹೊರತುಪಡಿಸಿ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Recommended Video - Watch Now!
Tata Tiago XTA AMT Launched In India | In Kannada - DriveSpark ಕನ್ನಡ
ರಾ.ಹೆ 2ರಲ್ಲಿ ಭೀಕರ ಅಪಘಾತ- ಘಟನೆಯಲ್ಲಿ ಫಿಯೆಟ್ ಪುಂಟೊ ಪುಡಿ ಪುಡಿ

ಇನ್ನು ಅಪಘಾತದಲ್ಲಿ ಸಿಲುಕಿದ ಫಿಯೆಟ್ ಪುಂಟೊ ಅಬಾರ್ತ್ ಕಾರು ಹಾಟ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹಲವು ಬಗೆಯ ಸುರಕ್ಷಾ ಸಾಧನಗಳನ್ನು ಅಳವಡಿಸಿಲಾಗಿದೆ. ಇದೇ ಕಾರಣಕ್ಕಾಗಿಯೇ ಭೀಕರ ಅಪಘಾತದಲ್ಲೂ ಕಾರು ಚಾಲಕನಿಗೆ ಸೂಕ್ತ ರಕ್ಷಣೆ ದೊರೆತಿದೆ ಎನ್ನಬಹುದು.

ರಾ.ಹೆ 2ರಲ್ಲಿ ಭೀಕರ ಅಪಘಾತ- ಘಟನೆಯಲ್ಲಿ ಫಿಯೆಟ್ ಪುಂಟೊ ಪುಡಿ ಪುಡಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಿಯ ಡ್ರೈವ್ ಸ್ಪಾರ್ಕ್ ಓದುಗರೇ ಯಾವುದೇ ಕಾರಣಕ್ಕೂ ಹೆದ್ದಾರಿಗಳಲ್ಲಿ ಕಾರು ಚಾಲನೆ ವೇಳೆ ಎಲ್ಲ ಕಡೆಗೂ ಗಮನಿಹರಿಸುವ ಮೂಲಕ ಚಾಲನೆ ಮಾಡುವುದು ಒಳಿತು. ಇಲ್ಲವಾದ್ರೆ ಬೇರೆಯವರು ಮಾಡುವ ತಪ್ಪುಗಳು ನಿಮ್ಮ ಜೀವಕ್ಕೂ ಆಪತ್ತು ತರಬಹುದು.

English summary
Read in Kannada about Driver Miraculously Escapes Unhurt After Brutal Fiat Punto Abarth Crash.
Story first published: Thursday, September 7, 2017, 20:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark