ಬಿಡುಗಡೆಯಾದ ಹೊಚ್ಚ ಹೊಸ ಮಾರುತಿ ಬಲೆನೊ ಆರ್‌ಎಸ್- ಮಧ್ಯಮ ವರ್ಗಗಳಿಗೆ ಇದು ಹೇಳಿಮಾಡಿಸಿದ ಕಾರು..!!

Written By:

ಹತ್ತಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ನಿನ್ನೆಯಷ್ಟೇ ಮಾರುತಿ ಬಲೆನೊ ಆರ್‌ಎಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ. ಹ್ಯಾಚ್‌ಬ್ಯಾಕ್ ಆವೃತ್ತಿಯ ಈ ವಿನೂತನ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.8.69 ಲಕ್ಷಗಳಿಗೆ ಲಭ್ಯವಿರಲಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿನೂತನ ಮಾರುತಿ ಬಲೆನೋ ಆರ್‌ಆಸ್

ಮಾರುತಿ ಬಲೆನೊ ಆರ್‌ಆಸ್ ಮೈಲೇಜ್

998ಸಿಸಿ ಸಾಮರ್ಥ್ಯ ಮೂರು ಸಿಲಿಂಡರ್ ಎಂಜಿನ್ ಹೊಂದಿರುವ ಮಾರುತಿ ಬಲೆನೊ ಆರ್‌ಎಸ್, 101ಬಿಎಚ್‌ಪಿ ಮತ್ತು 150ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಪ್ರತಿಲೀಟರ್‌ಗೆ 21.1 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಜೊತೆಗೆ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿನೂತನ ಮಾರುತಿ ಬಲೆನೋ ಆರ್‌ಆಸ್

ಮಾರುತಿ ಬಲೆನೊ ಆರ್‌ಆಸ್ ಡಿಸೈನ್ ಮತ್ತು ವೈಶಿಷ್ಟ್ಯತೆಗಳು:

ಬಲೆನೊ ಆರ್‌ಎಸ್ ಹೊಸ ಮಾದರಿಯ ವಿನ್ಯಾಸಗಳು ಸಾಕಷ್ಟು ಆಕರ್ಷಕವಾಗಿವೆ. ಅಲ್ಲದೇ ಈ ಹಿಂದಿನ ಮಾದರಿಯಲ್ಲಿನ ಕೆಲವು ವಿನ್ಯಾಸಗಳನ್ನು ಇಲ್ಲೂ ಕೂಡಾ ಮುಂದುವರೆಸಲಾದಗಿದ್ದು, ಹೊರ ಭಾಗದಲ್ಲಿ ಸ್ಪೋರ್ಟಿ ಲುಕ್ ನೀಡಲಾಗಿದೆ. ಜೊತೆಗೆ ಹೊರಭಾಗದಲ್ಲಿ ರಿಯರ್ ವ್ಯೂ ಮಿರರ್ (ORVM)ವ್ಯವಸ್ಥೆ ಹೊಂದಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿನೂತನ ಮಾರುತಿ ಬಲೆನೋ ಆರ್‌ಆಸ್

ಸ್ಪೋರ್ಟ್ಸ್ ಲುಕ್ ಹೊಂದಿರುವ ವಿನೂತನ ಮಾರುತಿ ಬಲೆನೊ ಆರ್‌ಆಸ್, ಎಲ್ಇಡಿ ಟೈಲ್‌ಲೈಟ್ಸ್ ಹೊಂದಿದೆ. ಜೊತೆಗೆ RS ಚಿಹ್ನೆಯು ನೋಡಲು ಆಕರ್ಷಣಿನೀಯವಾಗಿದ್ದು, ನಂಬರ್ ಪ್ಲೇಟ್ ಸ್ಥಾನವನ್ನು ಕಪ್ಪು ಬಣ್ಣದಿಂದ ವಿನ್ಯಾಸಗೊಳಿಸಲಾಗಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿನೂತನ ಮಾರುತಿ ಬಲೆನೋ ಆರ್‌ಆಸ್

ಇನ್ನು ಒಳವಿನ್ಯಾಸದ ಬಗೆಗೆ ಮಾತನಾಡುವುದಾದ್ರೆ ವಿನೂತನ ಕಾರಿನಲ್ಲಿ ಲೆದರ್ ಕೊಟಿಂಗ್ ಸೀಟುಗಳನ್ನು ಅಳವಡಿಸಲಾಗಿದೆ. ಅಲ್ಲದೇ ಟಚ್ ಸ್ಕ್ರಿನ್ ಇನ್ಫೋಟೈನ್‌ಮೆಂಟ್ ಡಿಸ್‌ಫೈ ಮತ್ತು ಆಪಲ್ ಕಾರ್ ಫ್ಲೇ ವ್ಯವಸ್ಥೆ ಹೊಂದಿದೆ. ಇದರ ಜೊತೆಗೆ ಏರ್-ಕಂಡಿಷನರ್ ವ್ಯವಸ್ಥೆ ಇದ್ದು, ಚಾಲಕನಿಗೆ ಹೊಂದಾಣಿಕಯಾಗಬಲ್ಲ ಸೀಟ್ ವ್ಯವಸ್ಥೆಯಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿನೂತನ ಮಾರುತಿ ಬಲೆನೋ ಆರ್‌ಆಸ್

ಬಲೆನೊ ಆರ್‌ಆರ್ ಮಾದರಿಯಲ್ಲಿ ಸುರಕ್ಷೆತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮುಂಭಾಗದಲ್ಲಿ ಡ್ಯುಯಲ್ ಏರ್‌ಬ್ಯಾಗ್ ವ್ಯವಸ್ಥೆಯಿದೆ. ಜೊತೆಗೆ ನಿಮ್ಮ ಮಕ್ಕಳ ಸುಖಕರ ಪ್ರಯಾಣಕ್ಕೆ ಅನುಕೂಲರವಾಗುವಂತೆ ಹೊಂದಾಣಿಕೆಯಾಗಬಲ್ಲ ಸೀಟ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿನೂತನ ಮಾರುತಿ ಬಲೆನೋ ಆರ್‌ಆಸ್

ಹೊಚ್ಚ ಹೊಸ ಆವೃತ್ತಿಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಮಾರುತಿ ಬಲೆನೊ ಆರ್‌ಆಸ್ ಮಾದರಿಯು, ಫೋಕ್ಸ್‌ವ್ಯಾಗನ್ ಪೋಲೋ ಜಿಟಿ ಟಿಎಸ್ಐ , ಫಿಯಟ್ ಅಬ್ರಾತ್ ಪೌಂಟೋ ಮತ್ತು ಫೋರ್ಡ್ ಫಿಗೊ 1.5-ಪೆಟ್ರೋಲ್ ಮಾದರಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿನೂತನ ಮಾರುತಿ ಬಲೆನೋ ಆರ್‌ಆಸ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಮೊದಲ ಬಾರಿಗೆ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಮಾರುತಿ ಬಲೆನೊ ಆರ್‌ಆಸ್ ಮಾಧ್ಯಮ ವರ್ಗಗಳ ಬಜೆಟ್‌ಗೆ ಹೊಂದಬಹುದಾದ ಮಾದರಿಯಾಗಿದೆ. ಬೆಲೆಗಳ ವಿಚಾರವಾಗಿ ಭಾರತೀಯ ಗ್ರಾಹಕರನ್ನು ಸೆಳೆಯುವ ಸಾಧ್ಯತೆಗಳಿದ್ದು, ಮುಂಬರುವ ದಿನಗಳಲ್ಲಿ ಜನಪ್ರಿಯ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗುವ ಸಾಧ್ಯತೆಗಳಿವೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿನೂತನ ಮಾರುತಿ ಬಲೆನೋ ಆರ್‌ಆಸ್

ವಿನೂತನ ಬಲೆನೊ ಆರ್‌ಎಸ್ ಮಾದರಿಯ ಕಾರಿನ ಚಿತ್ರಗಳ ವೀಕ್ಷಣೆಗಾಗಿ ಈ ಕೂಡಲೇ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಮಾರುತಿ maruti
English summary
Maruti's all-new Baleno RS launched in India. The Baleno RS is the first hot-hatchback from Maruti.
Please Wait while comments are loading...

Latest Photos