ಭಾರತಕ್ಕೆ ಬರ್ತಿದೆ ಸೂಪರ್ ಕಾರು ಉತ್ಪಾದಕ ಮೆಕ್ಲಾರೆನ್ ಸಂಸ್ಥೆ

ಮೆಕ್ಲಾರೆನ್ ಕಂಪನಿ, ತನ್ನ ಸಂಪೂರ್ಣ ಶ್ರೇಣಿಯ ಕಾರುಗಳನ್ನು ಭಾರತಕ್ಕೆ ತರಲು ಸಿದ್ಧವಾಗಿದ್ದು, 2023ರ ವೇಳೆಗೆ 5,000 ಕಾರುಗಳ ಮಾರಾಟದ ಗುರಿ ತಲುಪವ ಉದ್ದೇಶ ಹೊಂದಿದ್ದು, ಈ ಬಗ್ಗೆ ಈಗಾಗಲೇ ಯೋಜನೆಯನ್ನು ಸಿದ್ಧಪಡಿಸುತ್ತಿದೆ.

By Girish

ಈಗಾಗಲೇ ಫೆರಾರಿ, ಪೋರ್ಷೆ, ಲಂಬೋರ್ಘಿನಿ, ಆಸ್ಟನ್ ಮಾರ್ಟಿನ್ ಮತ್ತು ಮಸೆರೆಟಿ ಸೇರಿದಂತೆ ಇತರ ಪ್ರಮುಖ ಸಂಸ್ಥೆಗಳು ಭಾರತದಲ್ಲಿ ಬೆಳೆಯುತ್ತಿರುವ ಸೂಪರ್ ಕಾರ್ ವಿಭಾಗದಲ್ಲಿ ಸ್ಪರ್ಧೆ ನೆಡೆಸುತ್ತಿದ್ದು, ಮೆಕ್ಲಾರೆನ್ ಸಂಸ್ಥೆಯು ಸಹ ಭಾರತದಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿರುವುದು ಸೂಪರ್ ಕಾರು ಪ್ರಿಯರಿಗೆ ಖುಷಿ ತರಿಸಿದೆ ಎನ್ನಬಹುದು.

ಭಾರತಕ್ಕೆ ಬರ್ತಿದೆ ಸೂಪರ್ ಕಾರು ಉತ್ಪಾದಕ ಮೆಕ್ಲಾರೆನ್ ಸಂಸ್ಥೆ

ಭಾರತೀಯ ರಸ್ತೆಗಳ ಮೇಲೆ ಮೆಕ್ಲಾರೆನ್ ಸಂಸ್ಥೆಯ ಎರಡು ಕಾರುಗಳು ಈಗಾಗಲೇ ಆಗಮನವಾಗಿವೆ. ಆದರೂ ಸಹ ಬ್ರಿಟಿಷ್ ಮೂಲದ ಈ ಮೆಕ್ಲಾರೆನ್ ಪ್ರಸ್ತುತ ಭಾರತದಲ್ಲಿ ಅಧಿಕೃತ ಉಪಸ್ಥಿತಿ ಹೊಂದಿಲ್ಲ ಎನ್ನಬಹುದು.

ಭಾರತಕ್ಕೆ ಬರ್ತಿದೆ ಸೂಪರ್ ಕಾರು ಉತ್ಪಾದಕ ಮೆಕ್ಲಾರೆನ್ ಸಂಸ್ಥೆ

ಪಿ1 ಹೈಪರ್‌ಕಾರ್ ಮತ್ತು 675 ಎಲ್‌ಟಿ ಮತ್ತು 675 ಎಲ್‌ಟಿ ಸ್ಪೈಡರ್ ಸೂಪರ್ ಕಾರುಗಳು ಸೀಮಿತ ಆವೃತಿಗಳಾಗಿದ್ದು,ಈ ಕಾರುಗಳನ್ನು ಹೊರತುಪಡಿಸಿ ಭಾರತದಲ್ಲಿ ತನ್ನ ಸಂಪೂರ್ಣ ಶ್ರೇಣಿಯ ಕಾರುಗಳನ್ನು ಮೆಕ್ಲಾರೆನ್ ಪರಿಚಯಿಸಲಿದೆ.

ಭಾರತಕ್ಕೆ ಬರ್ತಿದೆ ಸೂಪರ್ ಕಾರು ಉತ್ಪಾದಕ ಮೆಕ್ಲಾರೆನ್ ಸಂಸ್ಥೆ

ಪ್ರವೇಶ ಮಟ್ಟದ 540ಸಿ ವಿಭಾಗದ 10 ಕಾರುಗಳನ್ನು ಸಹ ಬಹುಪಾಲು ಭಾರತದಲ್ಲಿ ಪ್ರತಿ ವರ್ಷ ಮಾರಾಟ ಮಾಡಲು ಯೋಜಿಸಿದೆ. ಈ ಕಾರುಗಳ ಬೆಲೆಗಳನ್ನು ಸದ್ಯ ಭಾರತದಲ್ಲಿ ಈಗಾಗಲೇ ಮಾರಾಟವಾಗುತ್ತಿರುವ ತನ್ನ ಸ್ಥಾಪಿತ ಎದುರಾಳಿಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ನಿಗದಿಪಡಿಸಲಾಗುತ್ತದೆ ಎನ್ನಲಾಗಿದೆ.

ಭಾರತಕ್ಕೆ ಬರ್ತಿದೆ ಸೂಪರ್ ಕಾರು ಉತ್ಪಾದಕ ಮೆಕ್ಲಾರೆನ್ ಸಂಸ್ಥೆ

ಭಾರತದಲ್ಲಿ ಈಗಾಗಲೇ 720 ಎಸ್ ಸೂಪರ್ ಕಾರಿಗೆ ದೊರೆತಿರುವ ಅತ್ಯದ್ಭುತ ಪ್ರತಿಕ್ರಿಯೆಯನ್ನು ಪರಿಗಣಿಸಿರುವ ಮೆಕ್ಲಾರೆನ್ ಸಂಸ್ಥೆಯು, ಉಪಖಂಡದಲ್ಲಿ ತಮ್ಮ ಕಾರುಗಳಿಗೆ ಇರುವ ಬೇಡಿಕೆಯನ್ನು ಕಂಡು ಆಶ್ಚರ್ಯವಾಗಿರುವುದಂತೂ ಖಂಡಿತ.

ಭಾರತಕ್ಕೆ ಬರ್ತಿದೆ ಸೂಪರ್ ಕಾರು ಉತ್ಪಾದಕ ಮೆಕ್ಲಾರೆನ್ ಸಂಸ್ಥೆ

2018ರಲ್ಲಿ ಭಾರತಕ್ಕೆ ಸೂಪರ್ ಕಾರು ದೈತ್ಯ ಕಂಪೆನಿಯಾದ ಮೆಕ್ಲಾರೆನ್ ನಿರೀಕ್ಷಿತ ಪ್ರವೇಶವನ್ನು ನೀಡಲಿದ್ದು, ದೇಶದಲ್ಲಿ ಸೂಪರ್ ಕಾರುಗಳಿಗೆ ಇರುವಂತಹ ಜನಪ್ರಿಯತೆ ಎಷ್ಟು ಎಂಬುದನ್ನು ತೋರಿಸುತ್ತದೆ.

Most Read Articles

Kannada
English summary
McLaren is set to bring its entire range of cars to India as it looks to expand sales worldwide in a bid to reach its global sales target for 2023 of 5,000 cars sold per year.
Story first published: Wednesday, October 11, 2017, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X