ತಾಜ್‌ಮಹಲ್ ಸುತ್ತಮುತ್ತ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರ ನಿಷೇಧ

Written By:

ತಾಜ್ ಟ್ರಪೀಜಿಯಂ ವಲಯ(TTZ) ಪ್ರಾಧಿಕಾರವು ವಿಶ್ವವಿಖ್ಯಾತ ತಾಜ್‌ಮಹಲ್ ಅಮೃತಶಿಲೆ ಕಟ್ಟಡದ ಸುತ್ತಮುತ್ತ ಸರಿ ಸುಮಾರು 500 ಮೀಟರ್‌ಗಳಷ್ಟು ಅಂತರದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರವನ್ನು ನಿಷೇಧಿಸಿದೆ.

ತಾಜ್‌ಮಹಲ್ ಸುತ್ತಮುತ್ತ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರ ನಿಷೇದ

ಕೇಂದ್ರ ಪರಿಸರ ಸಚಿವ, ಹರ್ಷವರ್ಧನ್ ನೀಡಿರುವ ಲಿಖಿತ ಉತ್ತರದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ಅಧ್ಯಯನದ ಪ್ರಕಾರ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಉಗುಳುವ ಕಾರ್ಬನ್‌ನಿಂದಾಗಿ ಸ್ಮಾರಕ ನಿರ್ಮಿಸಲು ಬಳಸಲಾಗಿರುವ ಅಪ್ಪಟ ಬಿಳಿ ಬಣ್ಣದ ಅಮೃತಶಿಲೆಗಳು ಹಳದಿ ಬಣ್ಣದ ಕಡೆ ತಿರುಗುತ್ತಿದೆ ಎಂದಿದೆ.

ತಾಜ್‌ಮಹಲ್ ಸುತ್ತಮುತ್ತ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರ ನಿಷೇದ

ಸ್ಮಾರಕದ ಸಂರಕ್ಷಣೆ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಹರಿಸಿರುವ ಇಲಾಖೆ ಈ ಕಟ್ಟುನಿಟ್ಟಿನ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ಇದನ್ನು ಪಾಲಿಸಲು ಈಗಾಗಲೇ ಸಕಲ ಸಿದ್ಧತೆ ನೆಡೆಸುತ್ತಿದೆ.

ತಾಜ್‌ಮಹಲ್ ಸುತ್ತಮುತ್ತ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರ ನಿಷೇದ

ಅಲ್ಲದೆ, ತಾಜ್ ಟ್ರಪೀಜಿಯಂ ವಲಯ(TTZ) ಪ್ರಾಧಿಕಾರ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಹಗುರ ವಾಹನಗಳನ್ನು ಸಿಎನ್‌ಜಿ ಇಂಧನಕ್ಕೆ ಬದಲಾಯಿಸಿಕೊಳ್ಳುವಂತೆ ಆದೇಶ ನೀಡಿದೆ.

ತಾಜ್‌ಮಹಲ್ ಸುತ್ತಮುತ್ತ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರ ನಿಷೇದ

"ತಾಜ್ ಟ್ರಪೀಜಿಯಂ ವಲಯ ಪ್ರಾಧಿಕಾರವು ತಾಜ್‌ಮಹಲ್ ಕಟ್ಟಡದ ಸುತ್ತಮುತ್ತ 500 ಮೀಟರ್‌ಗಳಷ್ಟು ಅಂತರದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರವನ್ನು ನಿಷೇಧಿಸಿದೆ ಹಾಗು ಹಗುರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಸಿಎನ್‌ಜಿ ಇಂಧನಕ್ಕೆ ಬದಲಾಯಿಸಿಕೊಳ್ಳುವಂತೆ ಆದೇಶಿಸಿದೆ" ಎಂದು ಮಂತ್ರಿಗಳು ತಿಳಿಸಿದರು.

ತಾಜ್‌ಮಹಲ್ ಸುತ್ತಮುತ್ತ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರ ನಿಷೇದ

ಜಾರಿ ಮಾಡಲಾಗಿರುವ ಪ್ರತಿ ಹಂತದ ನಿಯಮಗಳನ್ನು ಕಾರ್ಯಗತ ಮಾಡುವ ಕಡೆಗೆ ಸರ್ಕಾರ ಈಗಾಗಲೇ ಹೆಜ್ಜೆ ಇಟ್ಟಿದ್ದು, ಈ ನಿರ್ಧಾರವನ್ನು ದಿಕ್ಕರಿಸಿರುವ ಕೆಲವು ವಾಹನ ಮಾಲೀಕರಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ತಾಜ್‌ಮಹಲ್ ಸುತ್ತಮುತ್ತ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರ ನಿಷೇದ

ತಾಜ್‌ಮಹಲ್ ಕಟ್ಟಡ ಹಳದಿ ಬಣ್ಣಕ್ಕೆ ತಿರುಗುತ್ತಿರುವ ವಿಚಾರ ಹಲವಾರು ವರ್ಷಗಳಿಂದ ದೊಡ್ಡ ಸಮಸ್ಯೆಯಾಗಿದ್ದು, ವಾಹನಗಳು ನಿಷೇಧಿಸುವ ನಡೆ ಶುಭ ಸೂಚಕವಾಗಿದೆ. ಆದರೆ, ವಾಯು ಮಾಲಿನ್ಯ ವಿಚಾರಕ್ಕೆ ಬಂದಾಗ 500 ಮೀಟರ್ ಅಷ್ಟೇನೂ ಪರಿಣಾಮಕಾರಿಯಾಗಿರುವುದಿಲ್ಲ ಎನ್ನಬಹುದು.

Read more on ಭಾರತ india
English summary
Read in Kannada about The Taj Trapezium Zone (TTZ) authority has banned diesel and petrol vehicles within 500 meters of Taj Mahal.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark