20 ವರ್ಷಗಳ ನಂತರ ಮತ್ತೆ ಬರ್ತಿದೆ ಸುಜುಕಿ ಸಂಸ್ಥೆಯ 'ಜಿಮ್ನಿ' ಎಸ್‌ಯುವಿ ಕಾರು

Written By:

ಹೆಚ್ಚು ಕಡಿಮೆ 20 ವರ್ಷಗಳ ನಂತರ ಜಪಾನ್ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ತನ್ನ ಎರಡನೇ ಪೀಳಿಗೆಯ ಜಿಮ್ನಿ ಕಾರನ್ನು ಪ್ರದರ್ಶನ ಮಾಡಿದೆ.

To Follow DriveSpark On Facebook, Click The Like Button
 20 ವರ್ಷಗಳ ನಂತರ ಮತ್ತೆ ಬರ್ತಿದೆ ಸುಜುಕಿ ಸಂಸ್ಥೆಯ 'ಜಿಮ್ನಿ' ಎಸ್‌ಯುವಿ ಕಾರು

1997ರ ಟೋಕಿಯೊ ಮೋಟಾರ್ ಪ್ರದರ್ಶನದಲ್ಲಿ ಮೊದಲ ಪೀಳಿಗೆಯ ಜಿಮ್ನಿ ಎಸ್‌ಯುವಿ ಕಾರನ್ನು ಸುಜುಕಿ ಬಹಿರಂಗಪಡಿಸಿತ್ತು. ತದನಂತರ, ಸಾಕಷ್ಟು ವರ್ಷಗಳ ಕಾಲ ಯಾವುದೇ ರೀತಿಯ ಮಾಹಿತಿ ನೀಡದ ಸುಜುಕಿ,ಈಗ ಜಿಮ್ನಿ ಕಾರಿನ ಎರಡನೇ ಆವೃತಿಯ ಚಿತ್ರಗಳನ್ನು ಅನಾವರಣಗೊಳಿಸಿ ಮಾಡಿ ಮತ್ತೆ ಈ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

 20 ವರ್ಷಗಳ ನಂತರ ಮತ್ತೆ ಬರ್ತಿದೆ ಸುಜುಕಿ ಸಂಸ್ಥೆಯ 'ಜಿಮ್ನಿ' ಎಸ್‌ಯುವಿ ಕಾರು

ಎರಡನೇ ಜನರೇಷನ್ ಜಿಮ್ನಿಯನ್ನು ಅಕ್ಟೋಬರ್‌ನಲ್ಲಿ ನೆಡೆಯುವ 2017 ಟೋಕಿಯೊ ಮೋಟಾರ್ ಪ್ರದರ್ಶನದಲ್ಲಿ ಪ್ರದರ್ಶಿಸಲಿದ್ದು, ಈ ಹಿಂದೆಯೇ ಜಿಮ್ನಿ ಕಾರಿನ ಚಿತ್ರಗಳು ಸೋರಿಕೆಯಾಗಿದ್ದನ್ನು ನಾವು ಕಾಣಬಹುದಾಗಿದೆ.

 20 ವರ್ಷಗಳ ನಂತರ ಮತ್ತೆ ಬರ್ತಿದೆ ಸುಜುಕಿ ಸಂಸ್ಥೆಯ 'ಜಿಮ್ನಿ' ಎಸ್‌ಯುವಿ ಕಾರು

ಹೊಸ ಮಾದರಿಯ ಈ ಎಸ್‌ಯುವಿ ಕಾರು, ಬಾಡಿ ಆನ್ ಫ್ರೇಮ್ ವಾಸ್ತುಶೈಲಿಯ ಆಧಾರದ ಮೇಲೆ ನಿರ್ಮಾಣವಾಗಿದ್ದು, ಈ ಕಾರಿನ ಒಟ್ಟಾರೆ ವಿನ್ಯಾಸವು ಹಿಂದಿನ ಆವೃತಿಗೆ ಹೋಲಿಕೆಯಾಗುತ್ತದೆ.

 20 ವರ್ಷಗಳ ನಂತರ ಮತ್ತೆ ಬರ್ತಿದೆ ಸುಜುಕಿ ಸಂಸ್ಥೆಯ 'ಜಿಮ್ನಿ' ಎಸ್‌ಯುವಿ ಕಾರು

ಎಸ್‌ಯುವಿ ಕಾರಿನ ಮುಂಭಾಗದ ತಂತುಕೋಶವು ಐದು ಸ್ಲಾಟ್ ಗ್ರಿಲ್, ದಪ್ಪನಾದ ಬಂಪರ್ ಮತ್ತು ಎರಡೂ ಕಡೆ ಸುತ್ತುವರೆದ ಮಂಜು ದೀಪಗಳನ್ನು ಒಳಗೊಂಡಿದೆ. ಚಕ್ರದ ಕಮಾನುಗಳ ಮೇಲೆ ಪ್ಲ್ಯಾಸ್ಟಿಕ್ ಮುಚ್ಚುವಿಕೆ ಪಡೆದ ಸ್ನಾಯುವಿನ ನೋಟವು ಹೆಚ್ಚು ಆಕರ್ಷಕವಾಗಿದೆ.

 20 ವರ್ಷಗಳ ನಂತರ ಮತ್ತೆ ಬರ್ತಿದೆ ಸುಜುಕಿ ಸಂಸ್ಥೆಯ 'ಜಿಮ್ನಿ' ಎಸ್‌ಯುವಿ ಕಾರು

ಮೂರು-ಬಾಗಿಲನ್ನು ಹೊಂದಿರುವ ಈ ಹೊಸ ಜಿಮ್ನಿ ಕಾರನ್ನು ಸದ್ಯ ಅನಾವರಣಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಐದು-ಬಾಗಿಲುಗಳ ಮಾದರಿಯನ್ನು ಸಹ ಪ್ರದರ್ಶಿಸಬಹುದು ಎಂದು ನಿರೀಕ್ಷಿಸಲಾಗಿದೆ ಈ ಎಸ್‌ಯುವಿ ಕಾರಿನ ಅಗ್ರ-ವಿಶೇಷ ಮಾದರಿಗಳು ಅಲಾಯ್ ಚಕ್ರ ಮತ್ತು ಡ್ಯುಯಲ್-ಟೋನ್ ಬಣ್ಣದ ಸ್ಕೀಮ್‌ಗಳೊಂದಿಗೆ ಬಿಡುಗಡೆಯಾಗಲಿದೆ.

 20 ವರ್ಷಗಳ ನಂತರ ಮತ್ತೆ ಬರ್ತಿದೆ ಸುಜುಕಿ ಸಂಸ್ಥೆಯ 'ಜಿಮ್ನಿ' ಎಸ್‌ಯುವಿ ಕಾರು

ಸ್ಟೇರಿಂಗ್ ವೀಲ್ ಮತ್ತು ಏರ್ ವೆಂಟ್‌ಗಳು ಮುಂಬರುವ ಹೊಸ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರಿನ ಹೋಲಿಕೆ ಹೊಂದಿದ್ದು, ಪೆಟ್ರೋಲ್ ಇಂಜಿನ್ ಆಯ್ಕೆಯೊಂದಿಗೆ ಈ ಹೊಸ ಜಿಮ್ನಿ ಕಾರು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

Read more on ಸುಜುಕಿ suzuki
English summary
Japanese automaker Suzuki revealed the first-gen Jimny at the 1997 Tokyo Motor Show. Now, the second-generation of the SUV is all set to make its global debut.
Please Wait while comments are loading...

Latest Photos