ಹೊಸ ಆವೃತ್ತಿಯಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ 3 ಸಿರೀಸ್ ಕಾರುಗಳು..

Written By: Rahul TS

ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯೂ ತಮ್ಮ 3 ಸಿರೀಸ್ ಕಾರಿನ ಷಾಡೊ ಎಡಿಷನ್ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಪೆಟ್ರೋಲ್ ಹಾಗು ಡೀಸೆಲ್ ಮಾದರಿಗಳಲ್ಲಿ ದೊರೆಯಲಿವೆ.

ಹೊಸ ಆವೃತ್ತಿಯಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ 3 ಸಿರೀಸ್ ಕಾರುಗಳು..

ದೆಹಲಿಯ ಎಕ್ಸ್ ಶೋರಂ ಪ್ರಕಾರ ಹೊಸ 3 ಸೀರಿಸ್‍ನ ಷಾಡೋ ಎಡಿಶನ್ 320ಡಿ ಸ್ಪೋರ್ಟ್ ಕಾರಿನ ಬೆಲೆಯು ರೂ 41.40 ಲಕ್ಷಕ್ಕೆ ಹಾಗು 330ಐ ಎಂ ಸ್ಫೊರ್ಟ್ ಕಾರು ರೂ 47.30 ಲಕ್ಷಕ್ಕೆ ನಿಗದಿಪದಿಸಲಾಗಿದ್ದು, ಸಂಸ್ಥೆಯು ಈ ಕಾರುಗಳನ್ನು ಕೆಲದಿನಗಳ ಮಟ್ಟಿಗೆ ಮಾತ್ರ ಮಾರಾಟಗೊಳಿಸಲಿದೆ ಎನ್ನಲಾಗಿದೆ.

ಹೊಸ ಆವೃತ್ತಿಯಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ 3 ಸಿರೀಸ್ ಕಾರುಗಳು..

ಬಿಎಂಡಬ್ಲ್ಯೂ ಷಾಡೊ ಎಡಿಶನ್ ಕಾರು ವಿನ್ಯಾಸದಲ್ಲಿ ಮಾತ್ರ ನವೀಕರಣಗಳನ್ನು ಪಡೆದಿದ್ದು, ಸ್ಮೋಕ್ಡ್ ಹೆ‍ಡ್‍ಲೈಟ್ ಮತ್ತು ಟೈಲ್ ಲೈಟ್, ಕಿಡ್ನಿ ಗ್ರಿಲ್ ಸಮೀಪದಲ್ಲಿ ಹೈ ಗ್ಲಾಸ್ ಬ್ಲಾಕ್ ಫಿನಿಶ್, ಬ್ಲಾಕ್ ಎಕ್ಸಾಸ್ಟ್ ಟಿಪ್ಸ್ ಹಾಗು 18 ಇಂಚಿನ ಅಲಾಯ್ ಚಕ್ರಗಳನ್ನು ಪಡೆದಿದೆ.

ಹೊಸ ಆವೃತ್ತಿಯಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ 3 ಸಿರೀಸ್ ಕಾರುಗಳು..

ಇನ್ನು ಕಾರಿನ ಒಳಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ ಸೀಟ್‍ಗಳು ಡ್ಯುಯಲ್ ಟೋನ್ ರೆಡ್ ಹಾಗು ಬ್ಲಾಕ್ ಬಣ್ಣಗಳಿಂದ ಸಜ್ಜುಗೊಂಡಿದ್ದು, ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ದ್ ಆಟೋ ಒಳಗೊಂಡಿರುವಂತಹ 8.7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, 10.5 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಎಂ ಸ್ಪೋರ್ಟ್ ಲೆಧರ್ ಸ್ಟೀರಿಂಗ್ ವೀಲ್ ಅನ್ನು ಪಡೆದುಕೊಂಡಿದೆ.

ಹೊಸ ಆವೃತ್ತಿಯಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ 3 ಸಿರೀಸ್ ಕಾರುಗಳು..

ಇದಲ್ಲದೆ ರೆವರ್ಸ್ ಕ್ಯಾಮೆರಾ, ಪಾರ್ಕಿಂಗ್ ಸೆನ್ಸಾರ್ಸ್, 250 ವೋಲ್ಟ್ಸ್ ಆಡಿಯೊ ಸಿಸ್ಟಂ ಹಾಗು 330ಐ ಕಾರಿಗೆ ಸ್ಪೋರ್ಟ್ ಸ್ಟೀರಿಂಗ್ ಅನ್ನು ಅಳವಡಿಸಲಾಗಿದ್ದು, ರೆಗ್ಯುಲರ್ ಷಾಡೊ ಎಡಿಶನ್ ಕಾರಿಗಿಂತಾ ಬೇರಾವ ವೈಶಿಷ್ತ್ಯತೆಗಳನ್ನು ಹೊಂದಿರುವುದಿಲ್ಲ.

ಹೊಸ ಆವೃತ್ತಿಯಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ 3 ಸಿರೀಸ್ ಕಾರುಗಳು..

ಯಾಂತ್ರಿಕತೆಯಲ್ಲಿ ಹೊಸ ಷಾಡೊ ಎಡಿಶನ್ ಕಾರು ಸ್ಟ್ಯಾಂಡರ್ಡ್ ಕಾರು ಮಾದರಿಯನ್ನೆ ಹೋಲಲಿದ್ದು, 330ಐ ಕಾರು 2 ಲೀಟರ್ ನಾಲ್ಕು ಸಿಲೆಂಡರ್ ಪೆಟ್ರೋಲ್ ಎಂಜಿನ್ 248ಬಿಹೆಚ್‍ಪಿ ಹಾಗು 350ಎನ್ಎಂ ಟಾರ್ಕ್‍ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ಹೊಸ ಆವೃತ್ತಿಯಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ 3 ಸಿರೀಸ್ ಕಾರುಗಳು..

ಇನ್ನು 320ಡಿ ಸ್ಪೋರ್ಟ್ ಕಾರು 2 ಲೀಟರ್ ನಾಲ್ಕು ಸಿಲೆಂಡರ್‍‍ನ ಡೀಸೆಲ್ ಎಂಜಿನ್ 187ಬಿಹೆಚ್‍ಪಿ ಮತ್ತು 400ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್‍‍ಗಳನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಆವೃತ್ತಿಯಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ 3 ಸಿರೀಸ್ ಕಾರುಗಳು..

ಯಾಂತ್ರಿಕತೆಯನ್ನು ಯಾವುದೇ ಬದಲಾವಣೆಗಳನ್ನು ಕಾಣದಿದ್ದರೂ ಹೊಸ ಷಾಡೊ ಕಾರುಗಳು ಬಳಾಸಲಾದ ಹೊಸ ಬಣ್ಣ ಹಾಗು ವೈಶಿಷ್ಟ್ಯತೆಗಳೊಂದಿಗೆ ಸ್ಪೋರ್ಟಿ ಲುಕ್ ಅನ್ನು ಪಡೆದಿದೆ.

ಹೊಸ ಆವೃತ್ತಿಯಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ 3 ಸಿರೀಸ್ ಕಾರುಗಳು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಉಡುಪಿಯಲ್ಲಿ ಭೀಕರ ಅಪಘಾತ- ಇನೋವಾ ಗುದ್ದಿದ ರಭಸಕ್ಕೆ ಗಾಳಿಯಲ್ಲಿ ತೂರಿ ಹೋದ ಪಲ್ಸರ್ ಬೈಕ್...

2. ರಾಯಲ್ ಎನ್‍‍ಫೀಲ್ಡ್ ಥಂಡರ್‌ಬರ್ಡ್ 350ಎಕ್ಸ್ ಹಾಗು 500ಎಕ್ಸ್ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು..

3. ಕಚ್ಚಾ ತೈಲಕ್ಕೆ ಹೆಚ್ಚಿದ ಬೇಡಿಕೆ- ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆಯ ಏರಿಕೆ.

4. ಬಿಡುಗಡೆಯಾಗಲಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಹೇಗಿರಲಿದೆ?

5. ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ- ಹೊಸ ಬೈಕ್‌ಗಳಲ್ಲಿ ಸದ್ಯದಲ್ಲೇ ಸಿಂಗಲ್ ಚಾನೆಲ್ ಎಬಿಎಸ್‌

Read more on bmw sports car luxury car
English summary
BMW 3 Series Shadow Edition Launched In India; Prices Start At Rs 41.40 Lakh.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark