ಸೆಪ್ಟೆಂಬರ್ ತಿಂಗಳನಲ್ಲಿ ಕಡಿಮೆಯಾದ ಕಾರುಗಳ ಮಾರಾಟ. ಇದಕ್ಕೆ ಕಾರಣ.?
ಆಗಸ್ಟ್ ತಿಂಗಳಿನಲ್ಲಿ ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಕಾರು ಉತ್ಪಾದಕ ಸಂಸ್ಥೆಗಳು ಹೆಚ್ಚು ನಷ್ಟವನ್ನು ಕಂಡಿದ್ದೂ, ಸೆಪ್ಟೆಂಬರ್ ತಿಂಗಳಿನಲ್ಲಿ ಗಗನಕ್ಕೇರಿದ ಇಂಧನಗಳ ಬೆಲೆಗಳಿಂದ ಕಾರಿನ ಮಾರಾಟವು ಕಡಿಮೆಯಗಿದೆ ಎಂದೇ ಹೇಳಬಹುದು. ಅತಿಯಾಗಿ ಏರುತ್ತಿರುವ ಇಂಧನಗಳ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳದ ಕಾರಣ ಹೀಗಾಗಿದೆ ಎಂದು ಸುದ್ಧಿ ಕೇಳಿಬರುತ್ತಿದೆ.

ಹೌದು, ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಇಂಧನಗಳ ಬೆಲೆಯು ಅಧಿಕವಾಗಿತ್ತು ಹಾಗು ಈಗಲೂ ಇದೆ. ಕೇಂದ್ರ ಸರ್ಕಾರವು ಈ ತೊಂದರೆಯ ಮೇಲೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದ ಕಾರಣ ಆಟೋಮೊಬೈಲ್ ಜಗತ್ತಿನಲ್ಲಿ ಸೆಪ್ಟೆಂಬರ್ ತಿಂಗಳು ಕಡಿಮೆ ಮಾರಾಟವನ್ನು ಕಂಡಿದೆ ಎನ್ನಲಾಗಿದೆ. ಹಾಗಾದರೆ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಯಾವ ಕಾರು ಎಷ್ಟು ಮಾರಾಟಗೊಂಡಿದೆ ಎಂದು ಇಲ್ಲಿ ತಿಳಿಯಿರಿ.

ಮಾರುತಿ ಸುಜುಕಿ ಇಂಡಿಯಾ
ದೇಶಿಯ ನಂ.1 ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ 2017ರ ಸೆಪ್ಟೆಂಬರ್ ತಿಂಗಳ ಡೊಮೆಸ್ಟಿಕ್ ಸೇಲ್ಸ್ ಆಂಡ್ ಎಕ್ಸ್ಪೋರ್ಟ್‍ನಲ್ಲಿ 1,63,071 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದರೆ, ಇನ್ನು 2018ರ ಸೆಪ್ಟೆಂಬರ್ ತಿಂಗಳಿನಲ್ಲು 1,62,290 ಕಾರುಗಳನ್ನು ಮಾರಾಟ ಮಾಡಿದೆ.

ಹಾಗೆಯೆ ಪ್ಯಾಸ್ಸೆಂಜರ್ ವಾಹನ ಮಾರಾಟದಲ್ಲಿ ಕಳೆದ ಸೆಪ್ಟೆಂಬರ್‍ನಲ್ಲಿ 1,16,886 ಕಾರುಗಳನ್ನು ಮಾರಾಟ ಮಾಡಿದ್ದರೆ, ಈ ಸೆಪ್ಟೆಂಬರ್‍ನಲ್ಲಿ 1,15,228 ಕಾರುಗಳನ್ನು ಮಾರಾಟ ಮಾಡಿದೆ.

ಮಹೀಂದ್ರಾ ಆಂಡ್ ಮಹೀಂದ್ರಾ
ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು 2017ರ ಸೆಪ್ಟೆಂಬರ್ ತಿಂಗಳ ಪ್ಯಾಸ್ಸೆಂಜರ್ ವಾಹನಗಳ ಮಾರಾಟದಲ್ಲಿ 25,414 ಕಾರುಗಳನ್ನು ಮಾರಾಟ ಮಾದಿದರೆ, ಈ ಸೆಪ್ಟೆಂಬರ್ ತಿಂಗಳಿನಲ್ಲಿ 21,411 ಕಾರುಗಳನ್ನು ಮಾರಾಟ ಮಾಡಿದೆ.

ಆದರೆ ಕಮರ್ಶಿಯಲ್ ವಾಹನಗಳ ಮಾರಾಟದಲ್ಲಿ ಕಳೆದ 2017ರ ಸೆಪ್ಟೆಂಬರ್ ತಿಂಗಳಿನಲ್ಲಿ 53,752 ವಾಹನಗಳನ್ನು ಮಾರಾಟ ಮಾಡಿದರೆ, ಕಳೆದ ಸೆಪ್ಟೆಂಬರ್‍ನಲ್ಲಿ 55,022 ವಾಹನಗಳನ್ನು ಮಾರಾಟ ಮಾಡಿದೆ.

ಟಾಟಾ ಮೋಟಾರ್ಸ್
ಸೆಪ್ಟೆಂಬರ್ ತಿಂಗಳಿನಲ್ಲಿ ಬೇರೆಲ್ಲಾ ಸಂಸ್ಥೆಗಳ ಮಾರಾಟವನ್ನು ಲೆಕ್ಕ ಹಾಕಿದರೆ ಟಾಟಾ ಮೋಟಾರ್ಸ್ ಅಧಿಕ ಪಲಿತಾಂಶದ ಮಾರಾಟವನ್ನು ಕಂಡಿದೆ ಎನ್ನಬಹುದು. ಏಕೆಂದರೆ 2017ರ ಸೆಪ್ಟೆಂಬರ್ 17,286 ಕಾರುಗಳನ್ನು ಮಾರಾಟ ಮಾಡಿದರೆ, ಕಳೆದ ಸೆಪ್ಟೆಂಬರ್‍ನಲ್ಲಿ 18,429 ಕಾರುಗಳನ್ನು ಮಾರಾಟ ಮಾಡಿದೆ.

ಇನ್ನು ಟಾಟಾ ಮೋಟಾರ್ಸ್ ಸಂಸ್ಥೆಯು 2017ರ ಸೆಪ್ಟೆಂಬರ್‍ನಲ್ಲಿ 3,887 ಕಾರುಗಳನ್ನು ರಫ್ತು ಮಾಡಿದರೆ, ಈ ಸೆಪ್ಟೆಂಬರ್‍ನಲ್ಲಿ 5,250 ಯೂನಿಟ್ ಕಾರುಗಳನ್ನು ರಫ್ತು ಮಾಡಲಾಗಿದೆ ಎನ್ನಲಾಗಿದೆ.

ಫೋರ್ಡ್ ಇಂಡಿಯಾ
ಫೋರ್ಡ್ ಇಂಡಿಯಾ ಸಂಸ್ಥೆ ಕೂಡಾ ಅಧಿಕವಾದ ಮರಾಟವನ್ನು ಕಂಡಿದ್ದು, 2017ರ ಸೆಪ್ಟೆಂಬರ್‍ನಲ್ಲಿ 16525 ಯೂನಿಟ್ ಕಾರುಗಳನ್ನು ಮಾರಾಟ ಮಾದಿದ್ದರೆ, ಈ ಸೆಪ್ಟೆಂಬರ್ ತಿಂಗಳಿನಲ್ಲಿ 19,888 ಯೂನಿಟ್ ಮಾರಾಟ ಮಾಡಿ ಶೇಕಡ 17ರಷ್ಟು ಅಧಿಕ ಮಾರಾಟ ಮಾಡಿದೆ.


Click it and Unblock the Notifications








