ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಪಾರುಪತ್ಯ ಮುಂದುವರೆಸಿದ ವಿಟಾರಾ ಬ್ರಿಝಾ

2019ರ ನವೆಂಬರ್ ತಿಂಗಳಿನಲ್ಲಿ ಅತೀ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‍‍ಯುವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಮಾರುತಿ ಸುಜುಕಿಯ ವಿಟಾರಾ ಬ್ರಿಝಾ ಅಗ್ರಸ್ಥಾನವನ್ನು ಗಳಿಸಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಪಾರುಪತ್ಯ ಮುಂದುವರೆಸಿದ ವಿಟಾರಾ ಬ್ರಿಝಾ

ಮಾರುತಿ ಸುಜುಕಿ ವಿಟಾರಾ ಬ್ರಿಝಾ

ಕಳೆದ ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಪಟ್ಟಿಯಲ್ಲಿ ವಿಟಾರಾ ಬ್ರಿಝಾ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಕಳೆದ ನವೆಂಬರ್ ತಿಂಗಳಲ್ಲಿ ಮಾರುತಿ ವಿಟಾರಾ ಬ್ರಿಝಾ ಎಸ್‍‍ಯುವಿಯ 12,033 ಯುನಿ‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ 14,378 ಯುನಿ‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಈ ವರ್ಷದ ನವೆಂಬರ್ ತಿಂಗಳಲ್ಲಿ ಶೇ.16ರಷ್ಟು ಕುಸಿತ ಉಂಟಾಗಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಪಾರುಪತ್ಯ ಮುಂದುವರೆಸಿದ ವಿಟಾರಾ ಬ್ರಿಝಾ

ಕಳೆದ ಹಲವು ತಿಂಗಳುಗಳಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತವಾಗಿರುವ ಪರಿಣಾಮ ಕಾರುಗಳ ಮಾರಾಟವು ಕಡಿಮೆಯಾಗಿದೆ. ಇತರ ಕಾಂಪ್ಯಾಕ್ಟ್ ಎಸ್‍‍ಯುವಿಗಳಿಗೆ ಹೋಲಿಸಿದರೆ ಮಾರುತಿ ವಿಟಾರಾ ಬ್ರಿಝಾ ಉತ್ತಮವಾಗಿ ಮಾರಾಟವಾಗುತ್ತಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಪಾರುಪತ್ಯ ಮುಂದುವರೆಸಿದ ವಿಟಾರಾ ಬ್ರಿಝಾ

ಹ್ಯುಂಡೈ ವೆನ್ಯೂ

ಇತ್ತೀಚಿಗೆ ಬಿಡುಗಡೆಯಾದ ಹ್ಯುಂಡೈ ವೆನ್ಯೂ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟವಾಗುತ್ತಿದೆ. ಹ್ಯುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್‍‍ಯುವಿಯು ಅಗ್ರ ಸ್ಥಾನಕ್ಕಾಗಿ ಮಾರುತಿ ವಿಟಾರಾ ಬ್ರಿಝಾ ಎಸ್‍‍ಯುವಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಪಾರುಪತ್ಯ ಮುಂದುವರೆಸಿದ ವಿಟಾರಾ ಬ್ರಿಝಾ

ಕಳೆದ ನವೆಂಬರ್ ತಿಂಗಳಿನಲ್ಲಿ ಹ್ಯುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್‍‍ಯುವಿಯ 9,665 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಪಟ್ಟಿಯಲ್ಲಿ ಟಾಟಾ ನೆಕ್ಸಾನ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಪಾರುಪತ್ಯ ಮುಂದುವರೆಸಿದ ವಿಟಾರಾ ಬ್ರಿಝಾ

ಟಾಟಾ ನೆಕ್ಸಾನ್‍

ಕಳೆದ ನವೆಂಬರ್ ತಿಂಗಳಲ್ಲಿ ಟಾಟಾ ನೆಕ್ಸಾನ್‍ನ 3,437 ಯುನಿ‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನೆಕ್ಸಾನ್‍‍ನ 4,224 ಯು‍‍ನಿ‍‍ಟ್‍ಗಳು ಮಾರಾಟಾವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಿನ ಮಾರಾಟಕ್ಕೆ ಹೋಲಿಸಿದರೆ ಈ ವರ್ಷದ ನವೆಂಬರ್ ತಿಂಗಳಲ್ಲಿ ಶೇ.19 ರಷ್ಟು ಕುಸಿತ ಕಂಡಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಪಾರುಪತ್ಯ ಮುಂದುವರೆಸಿದ ವಿಟಾರಾ ಬ್ರಿಝಾ

ಫೋರ್ಡ್ ಇಕೋಸ್ಪೋರ್ಟ್

ಈ ಪಟ್ಟಿಯಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕಾರುಗಳ ಮಾರಾಟದಲ್ಲಿ ಶೇ.4ರಷ್ಟು ಏರಿಕೆ ಕಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿ ಫೋರ್ಡ್ ಇಕೋಸ್ಪೋರ್ಟ್‍‍ನ 2,822 ಯು‍ನಿ‍‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ 2,724 ಯುನಿ‍‍ಟ್‍ಗಳು ಮಾರಾಟವಾಗಿದ್ದವು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಪಾರುಪತ್ಯ ಮುಂದುವರೆಸಿದ ವಿಟಾರಾ ಬ್ರಿಝಾ

ಮಹೀಂದ್ರಾ ಎಕ್ಸ್‌ಯುವಿ 300

ಕಳೆದ ನವೆಂಬರ್ ತಿಂಗಳಲ್ಲಿ ಮಹೀಂದ್ರಾ ಎಕ್ಸ್‌ಯುವಿ 300 ಕಾಂಪ್ಯಾಕ್ಟ್ ಎಸ್‍‍ಯುವಿಯ 2,224 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಮಹೀಂದ್ರಾ ಹೊಸ ಬಿಎಸ್-6 ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಬಿಎಸ್-6 ಮಾಲಿನ್ಯ ನಿಯಮ ಮುಂದಿನ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಜಾರಿಯಾಗುತ್ತಿರುವುದರಿಂದ ಮಹೀಂದ್ರಾ ಕಂಪನಿಯು ತನ್ನ ಸರಣಿಯಿಂದ ಮೊದಲ ಬಿಎಸ್-6 ವಾಹನವಾಗಿ ಎಕ್ಸ್‌ಯುವಿ 300 ಅನ್ನು ಬಿಡುಗಡೆಗೊಳಿಸಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಪಾರುಪತ್ಯ ಮುಂದುವರೆಸಿದ ವಿಟಾರಾ ಬ್ರಿಝಾ

ಹೋಂಡಾ ಡಬ್ಲ್ಯುಆರ್‍‍‍ವಿ

ಹೋಂಡಾ ಡಬ್ಲ್ಯುಆರ್‍‍‍ವಿ ಕಾಂಪ್ಯಾಕ್ಟ್ ಎಸ್‍ಯುವಿಯ ಮಾರಾಟವು ಪಾತಳಕ್ಕೆ ಕುಸಿದಿದೆ. ಕಳೆದ ನವೆಂಬರ್ ತಿಂಗಳ ಹೋಂಡಾ ಡಬ್ಲ್ಯುಆರ್‍‍‍ವಿ ಕಾಂಪ್ಯಾಕ್ಟ್ ಎಸ್‍‍ಯುವಿಯ ಮಾರಾಟವು ಶೇ.74ರಷ್ಟು ಕುಸಿದಿದೆ. ಕಳೆದ ನವೆಂಬರ್ ತಿಂಗಳಲ್ಲಿ ಹೋಂಡಾ ಡಬ್ಲ್ಯುಆರ್‍‍‍ವಿ ಕಾಂಪ್ಯಾಕ್ಟ್ ಎಸ್‍‍ಯುವಿಯ 721 ಯುನಿ‍‍ಟ್‍ಗಳು ಮಾರಾಟವಾಗಿವೆ. 2018ರ ನವೆಂಬರ್ ತಿಂಗಳಲ್ಲಿ 2,786 ಯು‍ನಿ‍ಟ್‍ಗಳು ಮಾರಾಟವಾಗಿದ್ದವು.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಪಾರುಪತ್ಯ ಮುಂದುವರೆಸಿದ ವಿಟಾರಾ ಬ್ರಿಝಾ

ಮಹೀಂದ್ರಾ ಟಿ‍ಯುವಿ 300

ಕಳೆದ ನವೆಂಬರ್ ತಿಂಗಳಲ್ಲಿ ಮಹೀಂದ್ರಾ ಟಿ‍ಯುವಿ 300 ಕಾಂಪ್ಯಾಕ್ಟ್ ಎಸ್‍‍ಯುವಿಯ 683 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಈ ಎಸ್‍‍ಯುವಿಯ 992 ಯು‍‍ನಿ‍‍ಟ್‍ಗಳು ಮಾರಾಟವಾಗಿತ್ತು. ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ. 31.5 ರಷ್ಟು ಕುಸಿತವಾಗಿದೆ.

Most Read Articles

Kannada
English summary
Maruti Brezza beats Hyundai Venue, Tata Nexon – Small SUV sales Nov 2019 - Read in Kannada
Story first published: Thursday, December 5, 2019, 12:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X