ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ದೇಶದಲ್ಲಿ ದಿನಂಪ್ರತಿ ಹತ್ತಾರು ಭೀಕರ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಬಹುತೇಕ ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳು ಇಲ್ಲದ ಹಿನ್ನೆಲೆಯಲ್ಲಿ ಅಪಘಾತದ ತೀವ್ರತೆ ಹೆಚ್ಚುತ್ತಿದ್ದು, ಕೆಲವು ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳಿದ್ದರೂ ಸರಿಯಾದ ಸಮಯಕ್ಕೆ ಕಾರ್ಯನಿರ್ವಹಣೆ ಮಾಡದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಹೌದು, ಕಳೆದ ಕೆಲ ದಿನಗಳ ಹಿಂದಷ್ಟೇ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿ ಒಂದು ಹಾಸನದ ಹೊಳೆನರಸಿಪುರದ ಬಳಿ ನಿಯಂತ್ರಣ ತಪ್ಪಿ ಭೀಕರ ಅಪಘಾತದಲ್ಲಿ ಸಿಲುಕಿತ್ತು. ಈ ವೇಳೆ ಕಾರಿನಲ್ಲಿದ್ದ ಏರ್‌ಬ್ಯಾಗ್ ಸೌಲಭ್ಯವು ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಪರಿಣಾಮ ಕಾರು ಮಾಲೀಕನ ತಲೆ ಭಾಗಕ್ಕೆ ತ್ರೀವ ಪೆಟ್ಟಾಗಿದ್ದು, ದುಬಾರಿ ಕಾರಿನಲ್ಲೂ ಕಳಪೆ ಗುಟ್ಟದ ಸೌಲಭ್ಯ ಒದಗಿಸಿರುವ ಬಗ್ಗೆ ಫೋರ್ಡ್ ವಿರುದ್ಧ ಕಾರು ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಈ ಬಗ್ಗೆ ಫೇಸ್‌ಬುಕ್‌ ಖಾತೆಯಲ್ಲಿ ಫೋರ್ಡ್ ವಿರುದ್ಧ ಪತ್ರ ಬರೆದಿರುವ ಕಾರು ಮಾಲೀಕ ಗಂಗಾಧರ್ ಜಯಶಂಕರ್ ಅವರ ಪತ್ನಿ ಶೋಭಾ ಗಂಗಾಧರ್ ಅವರು ಕಾರಿನಲ್ಲಿರುವ ಕಳಪೆ ಗುಣಮಟ್ಟದ ಉತ್ಪನ್ನದಿಂದಾಗಿಯೇ ನನ್ನ ಪತಿ ಇಂದು ಸಾವು-ಬದುಕಿನ ಮಧ್ಯೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದ್ದು, ಒಂದು ವೇಳೆ ಏರ್‌ಬ್ಯಾಗ್ ಸೌಲಭ್ಯವು ಸರಿಯಾಗಿ ಕಾರ್ಯನಿರ್ವಹಣೆ ಮಾಡದ್ದರೇ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಇನ್ನು ಅಪಘಾತದಲ್ಲಿ ತಲೆಗೆ ತೀವ್ರ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ ಕಾರು ಮಾಲೀಕ ಗಂಗಾಧರ್ ಜಯಶಂಕರ್ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಸುರಕ್ಷೆತೆ ಸಿಗುತ್ತೆ ಅಂತಾ ಲಕ್ಷ ಲಕ್ಷ ಖರ್ಚು ಮಾಡಿ ದುಬಾರಿ ಕಾರು ಖರೀದಿ ಮಾಡಿದ್ರು ತೊಂದರೆ ತಪ್ಪಿದ್ದಲ್ಲ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತೆ.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಜೊತೆಗೆ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ಕಾರು ಉತ್ಪನ್ನಗಳನ್ನು ಮಾರಾಟ ಮಾಡುವ ಫೋರ್ಡ್ ಡೀಲರ್ಸ್ ವಿರುದ್ಧವು ಸಹ ಅಸಮಾಧಾನ ವ್ಯಕ್ತಪಡಿಸಿರುವ ಶೋಭಾ ಗಂಗಾಧರ್ ಅವರು, ಘಟನೆಗೆ ಸಂಬಂಧಿಸಿದಂತೆ ಏರ್‌ಬ್ಯಾಗ್ ಕಾರ್ಯನಿರ್ವಹಿಸದೇ ಇಲ್ಲದಿರುವ ಬಗ್ಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಶೋಭಾ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಫೋರ್ಡ್ ಸಂಸ್ಥೆಯ ಸಂಪರ್ಕಕ್ಕಾಗಿ ಮಾಡಿದ ಹಲವು ಪ್ರಯತ್ನಗಳ ನಂತರ ಒಂದೇ ಒಂದು ಬಾರಿ ತನಿಖೆ ನಡೆಸಿ ಪರಿಹಾರ ಸೂಚಿಸುವುದಾಗಿ ಹೇಳಿರುವ ಫೋರ್ಡ್ ಅಧಿಕಾರಿಗಳು ಇದುವರೆಗೂ ಯಾವುದೇ ಅಂತಿಮ ನಿರ್ಣಯ ಬಂದಿಲ್ಲ.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಆದ್ರೆ ಎಲ್ಲಾ ಆದ ಮೇಲೆ ಪರಿಹಾರ ನೀಡಿದ್ರು ಕೂಡಾ ಏನ್ ಪ್ರಯೋಜನ ಹೇಳಿ? ಪ್ರಯಾಣದ ವೇಳೆ ಸುರಕ್ಷೆತೆ ಬೇಕು ಅಂತಾನೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದುಬಾರಿ ಕಾರುಗಳನ್ನು ಖರೀದಿ ಮಾಡಿದ್ರು ಯಾವುದೇ ಪ್ರಯೋಜನವಾಗಲಿಲ್ಲ ಎನ್ನುವುದೇ ದುರಂತ.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಕಾರಿನ ಸುರಕ್ಷಾ ವಿಚಾರವಾಗಿ ನಡೆಸಲಾಗುವ ಗ್ಲೋಬಲ್ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 2018ರ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿ ಆವೃತ್ತಿಯು ಸಾಧಾರಣ ಮಟ್ಟದ ಕಾರು ಮಾದರಿಯಾಗಿ ಹೊರಹೊಮ್ಮಿತ್ತು.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಫೋರ್ಡ್ ಸಂಸ್ಥೆಯು ಇದುವರೆಗೆ ನಿರ್ಮಾಣ ಮಾಡಿರುವ ಕಾರುಗಳಲ್ಲಿ ಇಕೋಸ್ಪೋರ್ಟ್ ಕಾರುಗಳು ಸೆಫ್ಟಿ ರೇಟಿಂಗ್‌ನಲ್ಲಿ ಅತಿ ಕಡಿಮೆ ಅಂಕ ಗಳಿಸಿದ ಮೊದಲ ಎಸ್‌ಯುವಿ ಮಾದರಿಯಾಗಿದ್ದು, ಇದರಿಂದ ಹೊಸ ಕಾರಿನಲ್ಲಿರುವ ಹೊಸ ಸುರಕ್ಷಾ ತಂತ್ರಜ್ಞಾನಗಳ ವಿಚಾರಕ್ಕೆ ಸಂಬಂಧಿಸಿ ಈ ಹಿಂದೆಯೇ ಎಸ್‍‌ಯುವಿ ಪ್ರಿಯರು ತನ್ನ ಅಸಮಾಧಾನ ವ್ಯಕ್ತಪಡಿಸಿದ್ದರು.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಇದಲ್ಲದೇ ಏರ್‌ಬ್ಯಾಗ್ ಸೌಲಭ್ಯವು ಸರಿಯಾಗಿ ಕಾರ್ಯನಿರ್ವಹಣೆ ಮಾಡದಿರುವುದಕ್ಕೆ ಹಲವಾರು ಕಾರಣಗಳಿದ್ದು, ಪ್ರಮುಖವಾಗಿ ಕಾರು ಉತ್ಪಾದನೆ ವೇಳೆ ಆಗುವ ಕೆಲವು ತಾಂತ್ರಿಕ ದೋಷಗಳಿಂದಾಗಿ ಸರಿಯಾಗಿ ಜೋಡಣೆಯಾಗದ ಏರ್‌ಬ್ಯಾಗ್ ಸೌಲಭ್ಯವು ಇಂತಹ ದುರಂತಗಳಿಗೆ ಕಾರಣವಾಗುತ್ತವೆ.

Source: Facebook

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಹೀಗಾಗಿ ಇಂತಹ ಘಟನೆಗಳಿಂದ ಎಚ್ಚೇತ್ತುಕೊಳ್ಳಬೇಕಿರುವ ಫೋರ್ಡ್ ಸಂಸ್ಥೆಯು ಇನ್ನಾದ್ರು ಗ್ರಾಹಕರ ವಿಶ್ವಾಸಕ್ಕೆ ದ್ರೋಹವಾಗದಂತೆ ಎಚ್ಚರವಹಿಸಬೇಕಿದ್ದು, ಕಾರಿನ ಬೆಲೆಗಳಿಗೆ ತಕ್ಕಂತೆ ಸುರಕ್ಷತೆಗೂ ಹೆಚ್ಚಿನ ಮಹತ್ವ ನೀಡುಬೇಕಿದೆ.

MOST READ: ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಜೀವರಕ್ಷಕ ಏರ್‌ಬ್ಯಾಗ್ ಹೇಗೆ ಕಾರ್ಯನಿರ್ವಹಿಸುತ್ತೆ?

ಸೆಂಟ್ರಲ್ ಏರ್ ಬ್ಯಾಗ್ ಕಂಟ್ರೋಲ್ ಯುನಿಟ್ (ಎಸಿಯು) ವಾಹನಗಳಲ್ಲಿ ಅನೇಕ ಸಂಬಂಧಿ ಸೆನ್ಸಾರುಗಳನ್ನು ಮಾನಿಟರ್ ಮಾಡುತ್ತದೆ. ಏರ್ ಬ್ಯಾಗ್‌ಗಳು ಸ್ಟೀರಿಂಗ್ ಒಳಗಡೆ ಪ್ಲಾಸ್ಟಿಕ್ ಪೊರೆಯಲ್ಲಿ ಲಗತ್ತಿಸಲಾಗಿರುತ್ತದೆ. ಇದರ ಬಳಕೆ ತುಂಬಾ ಸರಳವಾಗಿದ್ದು, ಅಪಘಾತ ವೇಳೆ ತಕ್ಷಣ ಹೊರಚಿಮ್ಮುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಇದು ಸ್ಟೀರಿಂಗ್ ಮೇಲೆ ಬಂದಪ್ಪಳಿಸುವ ಪ್ರಯಾಣಿಕರ ಮುಖಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ. ಅಲ್ಲದೆ ತೆರೆಯಲ್ಪಟ್ಟ ಕ್ಷಣಾರ್ಧದಲ್ಲೇ ಮುದುಡಿಕೊಳ್ಳುತ್ತದೆ. ವಾಹನದ ಮುಂಭಾಗದ ಬಂಪರ್‌ನಲ್ಲಿರುವ ಸೆನ್ಸಾರ್ ಮೇಲೆ ಕೊಂಚ ಒತ್ತಡದ ಸ್ಪರ್ಶ ಬಿದ್ದರೂ ಏರ್ ಬ್ಯಾಗ್ ತೆರೆದುಕೊಳ್ಳುವಂತೆ ಜೋಡಣೆ ಮಾಡಲಾಗಿರುತ್ತದೆ.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಏರ್ ಬ್ಯಾಗ್ ವಿಧಗಳು

ಸಂಭವನೀಯ ಕಾರು ಅಪಘಾತದಲ್ಲಿ ಮಾನವ ದೇಹವನ್ನು ಗಾಯದಿಂದ ಪಾರು ಮಾಡುವುದು ಏರ್ ಬ್ಯಾಗ್ ಗುರಿಯಾಗಿದೆ. ಹಾಗೆಯೇ ಅನೇಕ ವಿಧ ಹಾಗೂ ಆಕಾರಗಳಲ್ಲಿ ಏರ್ ಬ್ಯಾಗ್ ಲಭ್ಯವಿರುತ್ತದೆ. ಅಷ್ಟೇ ಯಾಕೆ ಆಧುನಿಕ ತಂತ್ರಗಾರಿಕೆಯ ಅಭಿವೃದ್ಧಿಯಾದಂತೆ ಪಾದಚಾರಿಗಳನ್ನು ರಕ್ಷಿಸುವ ಏರ್ ಬ್ಯಾಗ್‌ಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಫ್ರಂಟ್ ಏರ್ ಬ್ಯಾಗ್

ಏರ್ ಬ್ಯಾಗ್‌ಗಳ ಪೈಕಿ ಮುಂಭಾಗದ ಏರ್‌ಬ್ಯಾಗ್‌ಗೆ ಅತಿ ಹೆಚ್ಚಿನ ಪ್ರಾಮುಖ್ಯತೆಯಿದೆ. 1987ರ ಪೋರ್ಷೆ 944 ಟರ್ಬೊ ಕಾರು ಡ್ಯುಯಲ್ ಏರ್ ಬ್ಯಾಗ್ ಹೊಂದಿರುವ ಮೊದಲ ಕಾರೆನಿಸಿಕೊಂಡಿದೆ. ಇದರಲ್ಲಿ ಚಾಲಕ ಸೇರಿದಂತೆ ಪಕ್ಕದ ಪ್ರಯಾಣಿಕರಿಗೂ ಸ್ಟಾಂಡರ್ಡ್ ಆಗಿ ಬಳಕೆ ಮಾಡಲಾಗಿತ್ತು. ಇದು ಸ್ಟೀರಿಂಗ್ ವೀಲ್‌ನಲ್ಲಿ ಆಳವಡಿಸಲಾಗಿದ್ದು, ಅಪಘಾತದ ವೇಳೆ ಪ್ರಯಾಣಿಕರಿಗೆ ಪೆಟ್ಟಾಗದಂತೆ ನೋಡಿಕೊಳ್ಳುತ್ತದೆ.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಸೈಡ್ ಏರ್ ಬ್ಯಾಗ್

ಹೆಸರಲ್ಲೇ ಸೂಚಿಸಿರುವಂತೆಯೇ ಸೈಡ್ ಏರ್ ಬ್ಯಾಗ್‌ಗಳು ಬದಿಯಿಂದ ಢಿಕ್ಕಿಯಾದ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. ಸೈಡ್ ಏರ್ ಬ್ಯಾಗ್ ಎರಡು ವಿಧಗಳಲ್ಲಿರುತ್ತದೆ. ಇದರಲ್ಲಿ ಮೊದಲನೆಯದ್ದು ಸೈಡ್ ಟಾರ್ಸೊ (ದೇಹ) ಏರ್ ಬ್ಯಾಗ್ ಆಗಿದೆ. ಇದು ಸಾಮಾನ್ಯವಾಗಿ ಸೀಟಿನ ಬದಿಯಲ್ಲಿ ಲಗತ್ತಿಸಲಾಗಿದ್ದು, ಅಪಘಾತ ಸಂದರ್ಭದಲ್ಲಿ ಚಾಲಕ ಹಾಗೂ ಬಾಗಿಲು ನಡುವೆ ತೆರೆದುಕೊಳ್ಳುತ್ತದೆ.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಕರ್ಟೈನ್ ಏರ್ ಬ್ಯಾಗ್

ಸೈಡ್ ಏರ್ ಬ್ಯಾಗ್‌ನಲ್ಲಿ ಎರಡನೇಯದ್ದು ಕರ್ಟೈನ್ ಏರ್ ಬ್ಯಾಗ್ ಆಗಿದೆ. ಇದು ಕಾರಿನ ಒಳಮೈಯಲ್ಲಿ ಮೇಲ್ಬಾಗದಲ್ಲಿ ಲಗತ್ತಿಸಲಾಗುತ್ತಿದ್ದು, ಸಂಪೂರ್ಣ ರಕ್ಷಣೆಯನ್ನು ನೀಡುವಲ್ಲಿ ಬದ್ಧವಾಗಿದೆ. ವರದಿಗಳ ಪ್ರಕಾರ ಕರ್ಟೈನ್ ಏರ್ ಬ್ಯಾಗ್‌ಗಳು ಮೆದುಳಿಗೆ ಅಥವಾ ಶೇಕಡಾ 45ರಷ್ಟು ಪೆಟ್ಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಮಾಹಿತಿಗಾಗಿ ಕೆಲವು ವಾಹನಗಳಲ್ಲಿ ಎಲ್ಲ ಮೂರು ಸಾಲುಗಳಲ್ಲೂ ಸೈಡ್ ಕರ್ಟೈನ್ ಏರ್ ಬ್ಯಾಗ್ ಲಭ್ಯವಿರುತ್ತದೆ.

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

ಏರ್ ಬ್ಯಾಗ್ ಅಪಾಯವೇ?

ಅತ್ಯಂತ ವಿರಳ ಪ್ರಕರಣಗಳಲ್ಲಿ ಮಾತ್ರ ಏರ್ ಬ್ಯಾಗ್‌ಗಳು ಪ್ರಯಾಣಿಕರಿಗೆ ಮಾರಕವಾಗಿಯೂ ಪರಿಣಮಿಸಿದೆ. ಇಲ್ಲಿ ಅತ್ಯಂತ ತೀಕ್ಷ್ಣವಾಗಿ ಬಂದಪ್ಪಳಿಸುವ ಏರ್ ಬ್ಯಾಗ್ ಒತ್ತಡವನ್ನು ನಿರ್ವಹಿಸಲು ಕೆಲ ಪ್ರಯಾಣಿಕರು ವಿಫಲವಾಗುತ್ತಾರೆ. ಇದೇ ಕಾರಣಕ್ಕಾಗಿ ಮಕ್ಕಳನ್ನು ಏರ್ ಬ್ಯಾಗ್‌ನಿಂದ ದೂರವಿಡಲಾಗುತ್ತದೆ. ಇನ್ನು ಸೀಟು ಬೆಲ್ಟ್ ಆಳವಡಿಸದಿದ್ದರೆ ಏರ್ ಬ್ಯಾಗ್ ಕಾರ್ಯ ನಿರ್ವಹಣೆ ವಿಫಲವಾದಿತು ಎನ್ನುವುದನ್ನು ಮರೆಯುವಂತಿಲ್ಲ.

Most Read Articles

Kannada
English summary
Ford Ecosport car crash on state highway 57 near Holenarasipur, Hassan district. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X