ಕಾರ್ ಆನ್ ಮತ್ತು ಲಾಕ್ ಮಾಡಲು ಹೊಸ ತಂತ್ರಜ್ಞಾನ ಪರಿಚಯಿಸಿದ ಹ್ಯುಂಡೈ‌

ಆಟೋ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ಹೊಸ ಆವಿಷ್ಕಾರ ನಡೆಯುತ್ತಿದ್ದು, ಈ ಮಧ್ಯೆ ಹ್ಯುಂಡೈ ಸಂಸ್ಥೆಯು ತನ್ನ ಪ್ರಮುಖ ಕಾರು ಉತ್ಪನ್ನಗಳಲ್ಲಿ ಕೆಲವು ವಿನೂತನ ತಂತ್ರಜ್ಞಾನ ಸೌಲಭ್ಯಗಳನ್ನು ನೀಡುತ್ತಿದೆ. ಇದರಲ್ಲಿ ಸದ್ಯಕ್ಕೆ ಕಾರು ಆನ್ ಮತ್ತು ಲಾಕಿಂಗ್ ವಿಧಾನದಲ್ಲಿ ಸಾಂಪ್ರದಾಯಿಕ ವಿಧಾನಕ್ಕೆ ಗುಡ್‌ಬೈ ಹೇಳಲು ಮುಂದಾಗಿದೆ.

ಕಾರ್ ಆನ್ ಮತ್ತು ಲಾಕ್ ಮಾಡಲು ಹೊಸ ತಂತ್ರಜ್ಞಾನ ಪರಿಚಯಿಸಿದ ಹ್ಯುಂಡೈ‌

ಹೌದು, ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ಕಾರುಗಳಲ್ಲಿ ಬಳಸಲಾಗುವ ತಂತ್ರಜ್ಞಾನಗಳ ಉನ್ನತಿಕರಣದಲ್ಲಿ ಹೊಸ ಕ್ರಾಂತಿಯನ್ನೇ ಶುರುಮಾಡಿದ್ದು, ಮೊಬೈಲ್‌ನಲ್ಲಿ ಬಳಸಲಾಗುವ ಸ್ಮಾರ್ಟ್ ಫಿಂಗರ್‌ಪ್ರಿಂಟ್ ಟೆಕ್ನಾಲಜಿಯನ್ನು ಕಾರುಗಳಲ್ಲೂ ಬಳಸಲು ನಿರ್ಧರಿಸಿದೆ. ಹೀಗಾಗಿ ಮುಂಬರುವ ಹ್ಯುಂಡೈ ಕಾರುಗಳಲ್ಲಿ ಕೀ ಬಳಕೆ ಇರುವುದಿಲ್ಲ ಎಂದು ಎನ್ನಬಹುದು.

ಕಾರ್ ಆನ್ ಮತ್ತು ಲಾಕ್ ಮಾಡಲು ಹೊಸ ತಂತ್ರಜ್ಞಾನ ಪರಿಚಯಿಸಿದ ಹ್ಯುಂಡೈ‌

ಕಾರು ಆನ್ ಮಾಡಲು ಮತ್ತು ಕಾರನ್ನು ಲಾಂಕಿಗ್ ಮಾಡಲು ಕೀ ಬದಲಾಗಿ ಸ್ಮಾರ್ಟ್ ಫಿಂಗರ್‌ಪ್ರಿಂಟ್ ಟೆಕ್ನಾಲಜಿ ಬಳಕೆಗೆ ಒತ್ತು ನೀಡುತ್ತಿರುವ ಹ್ಯುಂಡೈ ಸಂಸ್ಥೆಯು ಈಗಾಗಲೇ ಮುಂಬರುವ 2019ರ ಕಾರುಗಳಲ್ಲಿ ಜೋಡಣೆ ಮಾಡಿ ಪರೀಕ್ಷೆ ಕೈಗೊಂಡಿದೆ.

ಕಾರ್ ಆನ್ ಮತ್ತು ಲಾಕ್ ಮಾಡಲು ಹೊಸ ತಂತ್ರಜ್ಞಾನ ಪರಿಚಯಿಸಿದ ಹ್ಯುಂಡೈ‌

ಸ್ಮಾರ್ಟ್ ಫಿಂಗರ್‌ಪ್ರಿಂಟ್ ಟೆಕ್ನಾಲಜಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಕಾರುಗಳಲ್ಲೂ ಬಳಕೆ ಮಾಡುವ ಬಗ್ಗೆ ಯೋಜಿಸಿರುವ ಹ್ಯುಂಡೈ, 2019ರ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಾಂಟಾ ಫೇ ಫೇಸ್‌ಲಿಫ್ಟ್ ಎಸ್‌ಯುವಿ ಕಾರಿನಲ್ಲಿ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಕೆ ಮಾಡಿದೆಯೆಂತೆ.

ಕಾರ್ ಆನ್ ಮತ್ತು ಲಾಕ್ ಮಾಡಲು ಹೊಸ ತಂತ್ರಜ್ಞಾನ ಪರಿಚಯಿಸಿದ ಹ್ಯುಂಡೈ‌

ಈ ಕುರಿತಂತೆ ಹಲವಾರು ಪರೀಕ್ಷೆಗಳನ್ನು ಕೈಗೊಂಡಿರುವ ಹ್ಯುಂಡೈ ಸಂಸ್ಥೆಯು ಹೊಸ ತಂತ್ರಜ್ಞಾನ ಬಳಕೆಯ ಸಾಧಕ-ಬಾಧಕಗಳ ಕುರಿತಾಗಿ ವರದಿ ಸಿದ್ದಗೊಳಿಸಿದ್ದು, ಫಿಂಗರ್‌ಪ್ರಿಂಟ್ ಟೆಕ್ನಾಲಜಿ ಬಳಕೆಯಿಂದಾಗುವ ಬಾಧಕ ಅಂಶಗಳನ್ನು ಸರಿಪಡಿಸುವತ್ತ ಸದ್ಯ ಹೊಸ ಅಧ್ಯಯನಗಳನ್ನು ಕೈಗೊಂಡಿದೆ.

ಕಾರ್ ಆನ್ ಮತ್ತು ಲಾಕ್ ಮಾಡಲು ಹೊಸ ತಂತ್ರಜ್ಞಾನ ಪರಿಚಯಿಸಿದ ಹ್ಯುಂಡೈ‌

ಕಾರಿನ ಡ್ಯಾಶ್‌ಬೋರ್ಡ್ ಮೇಲೆ ಸ್ಮಾರ್ಟ್ ಫಿಂಗರ್‌ಪ್ರಿಂಟ್ ಅಳವಡಿಕೆ ಮಾಡಲಾಗಿದ್ದು, ಕಾರಿನಲ್ಲಿ ಸಾಫ್ಟ್‌ವೇರ್ ಜೋಡಣೆ ಮಾಡುವ ಮುನ್ನ ಮಾಲೀಕನ ಫಿಂಗರ್‌ಪ್ರಿಂಟ್ ಮತ್ತು ಮಾಹಿತಿಯನ್ನು ನೋಂದಣಿ ಮಾಡಲಾಗುತ್ತೆ. ತದನಂತರ ಅವರ ಹೊರತಾಗಿ ಆ ಕಾರನ್ನು ಬೇರೆ ಯಾರು ಕೂಡಾ ತೆರೆಯಲು ಮತ್ತು ಚಾಲನೆ ಮಾಡಲು ಸಾಧ್ಯವೇ ಇಲ್ಲ.

ಕಾರ್ ಆನ್ ಮತ್ತು ಲಾಕ್ ಮಾಡಲು ಹೊಸ ತಂತ್ರಜ್ಞಾನ ಪರಿಚಯಿಸಿದ ಹ್ಯುಂಡೈ‌

ಒಂದು ವೇಳೆ ಒಂದೇ ಕಾರನ್ನು ಇಬ್ಬರಿಂದ ಮೂವರು ಬಳಕೆ ಮಾಡುತ್ತಿದ್ದರೂ ಸಹ ಸಾಫ್ಟ್‌ವೇರ್‌ನಲ್ಲಿ ಅವರ ನೋಂದಣಿ ಮಾಡುವ ಮೂಲಕ ಆ ಕಾರನ್ನು ಬಳಕೆ ಮಾಡಬಹುದಾಗಿದ್ದು, ಕಾರು ಕಳ್ಳತನ ಸೇರಿದಂತೆ ಕೆಲವು ಅಪರಾಧ ಚಟುವಟಿಕೆಗಳನ್ನು ಇದರಿಂದ ತಡೆಗಟ್ಟಬಹುದಾಗಿದೆ.

ಕಾರ್ ಆನ್ ಮತ್ತು ಲಾಕ್ ಮಾಡಲು ಹೊಸ ತಂತ್ರಜ್ಞಾನ ಪರಿಚಯಿಸಿದ ಹ್ಯುಂಡೈ‌

ಕಾರು ಆನ್ ಮಾಡುವ ಫಿಂಗರ್‌ಪ್ರಿಂಟ್ ಕಾರಿನ ಡ್ಯಾಶ್‌ಬೋರ್ಡ್ ಮೇಲಿದ್ದಲ್ಲಿ ಕಾರ್ ಒಪನ್ ಮತ್ತು ಲಾಕಿಂಗ್ ಫಿಂಗರ್‌ಪ್ರಿಂಟ್ ಡೋರ್ ಮೇಲೆ ನೀಡಲಾಗಿರುತ್ತೆ. ಇದು ನೇರವಾಗಿ ಹ್ಯುಂಡೈ ಸಂಸ್ಥೆಯು ಮುಖ್ಯ ಸರ್ವರ್ ಜೊತೆ ಕಾರ್ಯನಿರ್ವಹಿಸುವುದಲ್ಲದೇ ಕಾರಿನ ಆನ್ ಮತ್ತು ಲಾಕಿಂಗ್ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿರುತ್ತದೆ.

ಕಾರ್ ಆನ್ ಮತ್ತು ಲಾಕ್ ಮಾಡಲು ಹೊಸ ತಂತ್ರಜ್ಞಾನ ಪರಿಚಯಿಸಿದ ಹ್ಯುಂಡೈ‌

ಹೀಗಾಗಿ ಕಾರು ಮಾಲೀಕರನ್ನು ಹೊರತುಪಡಿಸಿ ಬೇರೇ ಯಾರಾದ್ರೂ ಕೂಡಾ ಕಾರು ಕಳ್ಳತನಕ್ಕೆ ಆಗಲಿ ಇಲ್ಲವೇ ಡೋರ್ ತೆಗೆಯಲು ಪ್ರಯತ್ನಪಟ್ಟಲ್ಲಿ ಅದು ನೇರವಾಗಿ ಹ್ಯುಂಡೈ ಸಂಸ್ಥೆಯ ಮುಖ್ಯ ಸರ್ವರ್‌ಗೆ ಮಾಹಿತಿ ರವಾನೆಯಾಗುತ್ತೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಕಾರ್ ಆನ್ ಮತ್ತು ಲಾಕ್ ಮಾಡಲು ಹೊಸ ತಂತ್ರಜ್ಞಾನ ಪರಿಚಯಿಸಿದ ಹ್ಯುಂಡೈ‌

ತದನಂತರ ನೋಂದಣಿಯಾಗಿರುವ ಕಾರು ಮಾಲೀಕನ ಮೊಬೈಲ್ ಸಂಖ್ಯೆಗೆ ಮಾಹಿತಿ ರವಾನೆ ಮಾಡುವುದಲ್ಲದೇ ಕಾರು ಕಳ್ಳತನ ಸೇರಿದಂತೆ ಕಾರಿನ ಮೇಲೆ ಯಾವುದೇ ರೀತಿಯ ಹಾನಿಯಾಗುತ್ತಿರುವುದನ್ನು ತಕ್ಷಣವೇ ತಿಳಿಯಬಲ್ಲದು.

ಕಾರ್ ಆನ್ ಮತ್ತು ಲಾಕ್ ಮಾಡಲು ಹೊಸ ತಂತ್ರಜ್ಞಾನ ಪರಿಚಯಿಸಿದ ಹ್ಯುಂಡೈ‌

ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಮಾಲೀಕರನ್ನು ಹೊರತುಪಡಿಸಿ ಬೇರೆ ಯಾರದ್ರೂ ಕಾರಿನ ಬಾಗಿಲು ತೆರೆಯಲು ಯತ್ನಿಸಿದ್ದಲ್ಲಿ ಅವರ ಫಿಂಗರ್‌ಪ್ರಿಂಟ್ ಸಹ ಹ್ಯುಂಡೈ ಮುಖ್ಯ ಸರ್ವರ್‌ಗೆ ರವಾನೆಯಾಗುತ್ತೆ. ಆಗ ಸಂದೇಶ ಪಡೆದುಕೊಳ್ಳುವ ಕಾರು ಮಾಲೀಕನು ಅನುಮಾನ ಬಂದಲ್ಲಿ ಅಂತವರ ಮೇಲೆ ಕೇಸ್ ಕೂಡಾ ದಾಖಲಿಸಬಹುದಾಗಿದೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಕಾರ್ ಆನ್ ಮತ್ತು ಲಾಕ್ ಮಾಡಲು ಹೊಸ ತಂತ್ರಜ್ಞಾನ ಪರಿಚಯಿಸಿದ ಹ್ಯುಂಡೈ‌

ಒಟ್ಟಿನಲ್ಲಿ ಸ್ಮಾರ್ಟ್ ಎಂಟ್ರಿ ಟೆಕ್ನಾಲಜಿಯೊಂದಿಗೆ ಆಟೋ ಕ್ಷೇತ್ರದಲ್ಲಿ ಹೊಸದೊಂದು ಬದಲಾವಣೆ ತರುತ್ತಿರುವ ಹ್ಯುಂಡೈ ಸಂಸ್ಥೆಯು ಪರೀಕ್ಷಾರ್ಥ ಕಾರ್ಯದ ನಂತರ ಮುಂಬರುವ ದಿನಗಳಲ್ಲಿ ಪ್ರತಿ ಕಾರಿನಲ್ಲೂ ಈ ತಂತ್ರಜ್ಞಾನ ಬಳಕೆ ಮಾಡಲು ಯೋಜಿಸಿದ್ದು, ಭಾರತದಲ್ಲೂ ಹೊಸ ತಂತ್ರಜ್ಞಾನ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Hyundai will introduce smart fingerprint technology in cars soon. Read in Kannada.
Story first published: Thursday, December 27, 2018, 18:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X