ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

2018ರಲ್ಲಿ ಭಾರತದ ಬಳಕೆದಾರರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ಕಾರುಗಳ ಮಾಹಿತಿಗೆ ಸಂಬಂಧಿಸಿದಂತೆ ಆಟೋ ಟ್ರೆಂಡಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಟಾಪ್ 10ರ ಪಟ್ಟಿಯಲ್ಲಿ ಅಚ್ಚರಿ ಹೆಸರುಗಳು ಕೇಳಿಬಂದಿವೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

ಭಾರತೀಯ ಆಟೋ ಉದ್ಯಮವು ಕಳೆದ 2 ವರ್ಷಗಳಿಂದ ಈಚೆಗೆ ಸಾಕಷ್ಟು ಬದಲಾವಣೆಗೊಂಡಿದ್ದು, ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ಸಾಕಷ್ಟು ಸುಧಾರಣೆ ಕಂಡಕೊಂಡಿದೆ. ಇದರಲ್ಲಿ ಗ್ರಾಹಕರ ಆದ್ಯತೆಯಲ್ಲೂ ಭಾರೀ ಬದಲಾವಣೆಗಳಾಗುತ್ತಿದ್ದು, 2018ರ ಗೂಗಲ್ ಆಟೋ ಟ್ರೆಂಡಿಂಗ್ ಪಟ್ಟಿಯಲ್ಲಿ ಇದು ಬಯಲಾಗಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

01. ಹೋಂಡಾ ಅಮೇಜ್

ಕಳೆದ ಮೇ 16ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ 2018ರ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರುಗಳು ದೇಶದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುತ್ತಿದ್ದು, ಬಿಡುಗಡೆಗೊಂಡ ಕೆಲವೇ ತಿಂಗಳ ಅವಧಿಯಲ್ಲಿ ದಾಖಲೆ ಪ್ರಮಾಣದ ಕಾರುಗಳು ಮಾರಾಟಗೊಂಡಿರುವುದು ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿಲ್ಲದೆ ಗೂಗಲ್ ಟ್ರೆಂಡಿಂಗ್‌ನಲ್ಲೂ ಮೊದಲ ಸ್ಥಾನದಲ್ಲಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ, ಪೆಟ್ರೋಲ್ ಆವೃತ್ತಿಯ ಆರಂಭಿಕ ಬೆಲೆಯು ರೂ. 5.81 ಲಕ್ಷಕ್ಕೆ ಮತ್ತು ಡೀಸೆಲ್ ಆವೃತ್ತಿಯ ಆರಂಭಿಕ ಬೆಲೆ ರೂ.6.90 ಲಕ್ಷ ಬೆಲೆ ಪಡೆದುಕೊಂಡಿದ್ದು, ಮಾರುತಿ ಡಿಜೈರ್ ಮತ್ತು ಹ್ಯುಂಡೈ ಎಕ್ಸ್‌ಸೆಂಟ್ ಕಾರುಗಳಿಂತಲೂ ಆಕರ್ಷಕ ಬೆಲೆಯೊಂದಿಗೆ ಗ್ರಾಹಕರ ಸೆಳೆಯುತ್ತಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

02. ಮಹೀಂದ್ರಾ ಮರಾಜೋ

ಮಹೀಂದ್ರಾ ಸಂಸ್ಥೆಯು ಮಾರುಕಟ್ಟೆಯಲ್ಲಿ ಬಹುನಿರೀಕ್ಷೆಯನ್ನು ಹುಟ್ಟುಹಾಕಿದ ತಮ್ಮ ಮರಾಜೊ ಎಂಪಿವಿ ಕಾರನ್ನು ಬಿಡುಗಡೆಗೊಳಿಸಿದ್ದು, ಎಂ 2, ಎಂ 4, ಎಂ 6 ಮತ್ತು ಎಂ 8 ಎನ್ನುವ ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಅಭಿವೃದ್ಧಿಗೊಂಡಿರುವ ಮಾರಾಜೊ ಕಾರುಗಳು ತಾಂತ್ರಿಕ ಸೌಲಭ್ಯಗಳ ಆಧಾರದ ಮೇಲೆ ಆರಂಭಿಕವಾಗಿ ರೂ. 9.99 ಲಕ್ಷ ಬೆಲೆಯನ್ನು ಪಡೆದುಕೊಂಡಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

ಮಹೀಂದ್ರಾ ಮರಾಜೊ ಕಾರುಗಳು 1.5-ಲೀಟರ್(1500 ಸಿಸಿ) ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 120-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಅತ್ಯುತ್ತಮ ಸುರಕ್ಷಾ ಸೌಲಭ್ಯಗಳೊಂದಿಗೆ ಗೂಗಲ್ ಸರ್ಚ್‌ನಲ್ಲಿ 2ನೇ ಸ್ಥಾನದಲ್ಲಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

03. ಟೊಯೊಟಾ ಯಾರಿಸ್

2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿದ್ದ ಟೊಯೊಟಾ ಯಾರಿಸ್ ಕಾರುಗಳು ಕಳೆದ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಯಾರಿಸ್ ಕಾರುಗಳು ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳಲ್ಲೇ ವಿಶೇಷ ಎನ್ನಿಸುತ್ತದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

ಬಿಡುಗಡೆ ನಂತರ ಇದುವರೆಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿರುವ ಯಾರಿಸ್ ಕಾರುಗಳು ಆರಂಭಿಕವಾಗಿ 8.75 ಲಕ್ಷ ಬೆಲೆಯೊಂದಿಗೆ ಮಧ್ಯಮ ವರ್ಗದ ಗ್ರಾಹಕರನ್ನು ಅಷ್ಟೇ ಅಲ್ಲದೇ ಐಷಾರಾಮಿ ಕಾರು ಪ್ರಿಯರನ್ನು ಸಹ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಿ ಸೆಗ್ಮೆಂಟ್ ಹೊಸ ಪೈಪೋಟಿಗೆ ಕಾರಣವಾಗಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

04. ಹ್ಯುಂಡೈ ಸ್ಯಾಂಟ್ರೋ

ಸುಮಾರು 20 ವರ್ಷಗಳ ಹಿಂದೆ ಬಿಡುಗಡೆಯಾಗಿ ಮಾರುಕಟ್ಟೆಯಿಂದ ಸ್ಥಗಿತಗೊಂಡಿದ್ದ ಸ್ಯಾಂಟ್ರೋ ಹ್ಯಾಚ್‍ಬ್ಯಾಕ್ ಕಾರು ಕೆಲ ದಿನಗಳ ಹಿಂದಷ್ಟೇ ಹೊಸ ವಿನ್ಯಾಸಗಳೊಂದಿಗೆ ಮರು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 3.89 ಲಕ್ಷ ಪ್ರಾರಂಭಿಕ ಬೆಲೆಯೊಂದಿಗೆ ಒಟ್ಟು 5 ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರು 1.1-ಲೀಟರ್ (1,100 ಸಿಸಿ) ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆಯೊಂದಿಗೆ 68-ಬಿಎಚ್‌ಪಿ ಮತ್ತು 99-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಜೊತೆಗೆ ಸಿಎನ್‌ಜಿ ಆಯ್ಕೆಯಲ್ಲೂ ಲಭ್ಯವಿರುವ ಹೊಸ ಸ್ಯಾಂಟ್ರೋ ಕಾರುಗಳು ಗೂಗಲ್ ಆಟೋ ಟ್ರೆಂಡಿಂಗ್‌ನಲ್ಲಿ 4 ಸ್ಥಾನದಲ್ಲಿದೆ.

MOST READ: ಮೇಕ್ ಇನ್ ಇಂಡಿಯಾ ಕಾರುಗಳು ಹೀಗೆ ಇರಬೇಕು- ಇದು ಕೇಂದ್ರದ ಖಡಕ್ ವಾರ್ನ್

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

05. ಫೋರ್ಡ್ ಫ್ರೀಸ್ಟೈಲ್

ಇದೇ ವರ್ಷ ಜನವರಿ 30ರಂದು ಅನಾವರಣಗೊಂಡಿದ್ದ ಫೋರ್ಡ್ ಹೊಚ್ಚ ಹೊಸ ಫ್ರೀಸ್ಟೈಲ್ ಕಾರು ಎಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಕಾರಿನ ಬೆಲೆಯನ್ನು ಆರಂಭಿಕವಾಗಿ ರೂ.5.09 ಲಕ್ಷ ನಿಗದಿಗೊಳಿಸಲಾಗಿದ್ದು, ಗೂಗಲ್ ಟ್ರೆಂಡಿಂಗ್‌ನಲ್ಲಿ 5ನೇ ಸ್ಥಾನದಲ್ಲಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

1.2-ಲೀಟರ್ 3 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು, 1.2-ಲೀಟರ್ ಮಾದರಿಯಲ್ಲಿ 94.6 ಬಿಎಚ್‌ಪಿ, 120 ಎನ್ಎಂ ಟಾರ್ಕ್ ಹಾಗೂ 1.5-ಲೀಟರ್ ಮಾದರಿಯಲ್ಲಿ 99 ಬಿಎಚ್‌ಪಿ ಮತ್ತು 120 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

06. ಮಾರುತಿ ಸುಜುಕಿ ಎರ್ಟಿಗಾ

ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಬಹುನೀರಿಕ್ಷಿತ ನೆಕ್ಸ್ಟ್ ಜನರೇಷನ್ ಎರ್ಟಿಗಾ ಕಾರನ್ನು ಕಳೆದ ತಿಂಗಳು ಹಿಂದಷ್ಟೇ ಬಿಡುಗಡೆ ಮಾಡಿದ್ದು, ಎಂಪಿವಿ ವಿಭಾಗದಲ್ಲಿ ಮತ್ತೊಮ್ಮೆ ಸದ್ದು ಮಾಡಲು ಸಜ್ಜಾಗಿರುವ ಹೊಸ ಕಾರು ಹತ್ತಾರು ಹೊಸ ಸೌಲಭ್ಯಗಳನ್ನು ಹೊತ್ತು ಬಂದಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

ಆರಂಭಿಕವಾಗಿ ರೂ. 7.44 ಲಕ್ಷ ಹಾಗೂ ಟಾಪ್ ಎಂಡ್ ಮಾದರಿಗೆ ರೂ.10.99 ಲಕ್ಷ ಬೆಲೆ ಹೊಂದಿರುವ ಹೊಸ ಎರ್ಟಿಗಾ ಕಾರುಗಳು ಒಟ್ಟು 10 ವೆರಿಯೆಂಟ್‌ಗಳೊಂದಿಗೆ ಈ ಹಿಂದಿನ 1.4-ಲೀಟರ್ ಪೆಟ್ರೋಲ್ ಎಂಜಿನ್ ಬದಲಾಗಿ 1.5-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದೆ. ಹಾಗೆಯೇ ಡೀಸೆಲ್ ಕಾರು 1.3-ಲೀಟರ್ ಎಂಜಿನ್ ಪಡೆದಿದ್ದು, ಇಂಧನ ದಕ್ಷತೆ ಹೆಚ್ಚಿಸಲು ಎಸ್‍‍ಹೆಚ್‍‍ವಿಎಸ್ ಮೈಲ್ಡ್-ಹೈಬ್ರಿಡ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ.

MOST READ:23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

07. ಹೊಸ ಜೀಪ್ ರ‍್ಯಾಂಗ್ಲರ್

ಅಮೆರಿಕ ಮೂಲದ ಜನಪ್ರಿಯ ಕಾರು ಉತ್ಪಾದನಾ ಜೀಪ್ ಸಂಸ್ಥೆಯು ಭಾರತದಲ್ಲಿ 2018ರ ರ‍್ಯಾಂಗ್ಲರ್ ಎಸ್‌ಯುವಿ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಸುಳಿವು ನೀಡಿದೆ. ಹೀಗಾಗಿ ಹೊಸ ಕಾರಿನ ಮಾಹಿತಿಗಾಗಿ ಗೂಗಲ್‌ನಲ್ಲಿ ಸಾಕಷ್ಟು ಮಾಹಿತಿ ಹುಡುಕಾಟವಾಗಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

4ನೇ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಹೊಸ ಜೀಪ್ ರ‍್ಯಾಂಗ್ಲರ್ ಆವೃತ್ತಿಗಳು ಒಟ್ಟು ನಾಲ್ಕು ಎಂಜಿನ್ ಆಯ್ಕೆ ಹೊಂದಿದ್ದು, ಇದರಲ್ಲಿ ಎರಡು ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್‌ಗಳಿವೆ. ಹೀಗಾಗಿ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್‌ ಮಾದರಿಗಳಲ್ಲಿ 2.2-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಇಲ್ಲವೇ 3.6-ಲೀಟರ್ ವಿ6 ಪೆನ್‌ಸ್ಟಾರ್ ಎಂಜಿನ್ ಖರೀದಿಸಬಹುದು. ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 45 ಲಕ್ಷದಿಂದ ರೂ. 65 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

08. ಬಿಎಂಡಬ್ಲ್ಯು 6 ಜಿಟಿ

ಬಿಎಮ್‍ಡಬ್ಲ್ಯೂ 6 ಸಿರೀಸ್ ಜಿಟಿ ಡೀಸೆಲ್ ಕಾರಿನ ಲಗ್ಷುರಿ ಲೈನ್ ವೇರಿಯಂಟ್ ಮಾದರಿಯೊಂದಿಗೆ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 66.50 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಎಮ್-ಸ್ಪೋರ್ಟ್ ವೇರಿಯಂಟ್ ಕಾರಿನ ಬೆಲೆಯನ್ನು ರೂ. 79.70 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಇದರೊಂದಿಗೆ ದುಬಾರಿ ಬೆಲೆ ಹೊಂದಿದ್ದರೂ ಸಹ ಗ್ರಾಹಕರನ್ನು ಹೆಚ್ಚು ಆಕರ್ಷಣೆ ಮಾಡುತ್ತಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

ಎಮ್-ಸ್ಪೋರ್ಟ್ ವೇರಿಯಂಟ್ ಕಾರುಗಳಲ್ಲಿ ಎಮ್ ಪರ್ಫಾರ್ಮೆನ್ಸ್ ಪ್ಯಾಕೇಜ್ ಅನ್ನು ಪಡೆದಿದ್ದು, ಇದರಲ್ಲಿ ವಿಶೇಷವಾಗಿ ಸೈಡ್ ಸ್ಕಾರ್ಟ್ಸ್ ಮತ್ತು ರಿಯರ್ ಏಪ್ರಾನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಅಗಲವಾಗ ಫ್ರಂಟ್ ಏರ್ ಇಂಟೆಕ್ಸ್, ಎಮ್-ಸ್ಪೋರ್ಟ್ಸ್ ಬ್ರೇಕ್ಸ್ ಮತ್ತು ಎಮ್ ಎಂಬ ಚಿನ್ಹೆಯನ್ನು ಕಾರಿನ ಬದಿಗಳಲ್ಲಿ ಮತ್ತು ಕಾರ್ ಕೀ ಮೇಲೆ ಮತ್ತು ಅಲಾಯ್ ವ್ಹೀಲ್‍‍ಗಳ ಮೇಲೆ ಅಳವಡಿಸಲಾಗಿದೆ.

MOST READ:ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

09. ಬಿಎಂಡಬ್ಲ್ಯು ಎಕ್ಸ್3

ಕಳೆದ ಜೂನ್‌ನಲ್ಲಿ ಬಿಎಂಡಬ್ಲ್ಯು ಎಕ್ಸ್3 ಐಷಾರಾಮಿ ಎಸ್‍‍ಯುವಿ ಕಾರಿನ ಪೆಟ್ರೋಲ್ ವೇರಿಯಂಟ್ ಅನ್ನು ಬಿಡುಗಡೆಗೊಂಡಿದ್ದು, ಐಷಾರಾಮಿ ಕಾರು ಖರೀದಿದಾರರನ್ನು ಸೆಳೆದಿರುವ ಎಕ್ಸ್3 ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 59.90 ಲಕ್ಷ ಬೆಲೆ ಹೊಂದಿವೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

10. ಮಹೀಂದ್ರಾ ಅಲ್ಟುರಾಸ್ ಜಿ4

ಮಹೀಂದ್ರಾ ಸಂಸ್ಥೆಯು ಕೊನೆಗೂ ತನ್ನ ಬಹುನೀರಿಕ್ಷಿತ ಅಲ್ಟುರಾಸ್ ಜಿ4 ಕಾರನ್ನು ಬಿಡುಗಡೆಗೊಳಿಸಿದ್ದು, ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿರುವ ಹೊಸ ಕಾರು ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ. ಇದರಲ್ಲಿ ಮುಖ್ಯವಾಗಿ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್‌ಗೆ ತೀವ್ರ ಪೈಪೋಟಿ ನೀಡಲಿರುವ ಅಲ್ಟುರಾಸ್ ಜಿ4 ಕಾರು ಪ್ರೀಮಿಯಂ ಕಾರುಗಳಲ್ಲಿ ಭಾರೀ ಜನಪ್ರಿಯತೆ ಪಡೆಯುವ ತವಕದಲ್ಲಿದೆ.

ಗೂಗಲ್‌ನಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಕಾರುಗಳಿವು..!

ಅಲ್ಟುರಾಸ್ ಜಿ4 ಕಾರುಗಳು ಪ್ರಮುಖ ಎರಡು ವೆರಿಯೆಂಟ್‌ನೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ(2x2 ವರ್ಷನ್) ರೂ. 26.95 ಲಕ್ಷಕ್ಕೆ ಹಾಗೂ ಟಾಪ್ ಎಂಡ್(4x4 ವರ್ಷನ್) ಮಾದರಿಯನ್ನು ರೂ. 29.95 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, 2.2-ಲೀಟರ್(2,200ಸಿಸಿ) 4 ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ 178-ಬಿಹೆಚ್‍‍ಪಿ ಮತ್ತು 420-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿವೆ. ಇದು ಸದ್ಯ ಗೂಗಲ್ ಟ್ರೆಂಡಿಂಗ್‌ನಲ್ಲಿ 10ನೇ ಸ್ಥಾನದಲ್ಲಿದೆ.

Most Read Articles

Kannada
English summary
Most Searched Car On Google India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X