ಡಿಜಿ ಲಾಕರ್- ಆಟಕ್ಕುಂಟು ಆದ್ರೆ ಲೆಕ್ಕಕ್ಕಿಲ್ಲಾ ಕಣ್ರಿ..!

ಮೊದಲೆಲ್ಲಾ ವಾಹನ ಪರವಾನಗಿಯ ಪತ್ರಗಳು ಮತ್ತು ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಅನಿವಾರ್ಯತೆಗಳಿದ್ದವು. ಆದ್ರೆ ಇದೀಗ ಆ ಪರಿಸ್ಥಿತಿ ಬದಲಾಗುವ ಸಮಯ ಬಂದಿದೆ. ಇದಕ್ಕೆ ಕಾರಣ ಇಷ್ಟು ದಿನಗಳ ಕಾಲ ನೆನೆಗುದಿಗೆ ಬಿದ್ದಿದ್ದ ಡಿಜಿ ಲಾಕರ್ ಯೋಜನೆಗೆ ಕೇಂದ್ರ ಸರ್ಕಾರವು ಮರುಜೀವ ನೀಡಿತ್ತು.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಆದರೆ ಈಗಲೂ ಸಹ ಕೆಲವು ಟ್ರಾಫಿಕ್ ಪೊಲೀಸರು ನಿಯಮಗಳನ್ನು ಉಲ್ಲಂಘಿಸಿದ ಸವರಾರನ್ನು ತಡೆದು ವಾಹನದ ಹಾರ್ಡ್ ಕಾಪಿ ಡಾಕ್ಯೂಮೆಂಟ್‍ಗಳನ್ನು ತೋರಿಸಲು ಸವಾರರನ್ನು ಒತ್ತಾಯಿಸುತ್ತಿದ್ದಾರೆ. ಇಂತಹ ಘಟನೆಯೊಂದು ಇದೀಗ ಬೆಳಕಿಗೆ ಬಂದಿದ್ದು, ವಾಹನ ಸವಾರನನ್ನು ತಡೆದ ಟ್ರಾಫಿಕ್ ಪೊಲೀಸ್ ಡಿಜಿಲಾಕರ್ ಆಪ್‍ನಿಂದ ಸಾಫ್ಟ್ ಕಾಪಿ ಡಾಕ್ಯುಮೆಂಟ್ ಅನ್ನು ತೋರಿಸಿದರೂ, ಒಪ್ಪದೆಯೆ ಒರಿಜಿನಲ್ ಡಾಕ್ಯುಮೆಂಟ್ ತೋರಿಸಲು ಒತ್ತಾಯಿಸಿದ್ದಾರಂತೆ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಹೌದು, ಮುಂಬೈ ನಗರದ ನಿವಾಸಿಯಾದ ಕಲ್ಪಕ್ ಶಾ ಎಂಬಾತ ಮುಂಜಾನೆ ವೇಳೆ ರಸ್ತೆಯಲ್ಲಿ ವಾಹನ ಸವಾರಿ ಮಾಡುತ್ತಿದ್ದು, ರಸ್ತೆ ಬದಿಯಲ್ಲಿಯೆ ಸಾಧಾರಣ ಪರಿಶೀಲನೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸರು ಅತನನ್ನು ತಡೆದು ಡ್ರೈವಿಂಗ್ ಲೈಸೆನ್ಸ್ ಅನ್ನು ತೋರಿಸಲು ಹೇಳಿದ್ದಾರೆ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಈ ನಿಟ್ಟಿನಲ್ಲಿ ಆಗ ಕಲ್ಪಕ್‍ರವರ ಹತ್ತಿರ ಒರಿಜಿನಲ್ ಡಿಎಲ್ ಇಲ್ಲದಿದ್ದ ಕಾರಣ ಅವರು ಸಾಫ್ಟ್/ಡಿಜಿಟಲ್ ಕಾಪಿಯನ್ನು ತೋರಿಸಿದರು, ಆದರೆ ಅಲ್ಲಿದ್ದ ಪೊಲೀಸರು ನಮಗೆ ಡಿಜಿಟಲ್ ಅಥವಾ ಸಾಫ್ಟ್ ಕಾಪಿ ಬೇಡ ಒರಿಜಿನಲ್ ಕಾಪಿ ತೋರಿಸಲು ಹೇಳಿ ಲೈಸೆನ್ಸ್ ಇಲ್ಲವೆಂದು ದಂಡ ವಿಧಿಸಲಾಗಿದೆ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ನಂತರ ಗೊಂದಲಕ್ಕೊಳಗಾದ ಕಲ್ಪೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಮುಂಬೈ ನಗರದ ಪೊಲೀಸರನ್ನು ಪ್ರಶ್ನಿಸುತ್ತಾ. ಪೊಲೀಸರು ತಡೆದ ಸಮಯದಲ್ಲಿ ಚಾಲಕರು ವಾಹನದ ಡಾಕ್ಯುಮೆಂಟ್‍ಗಳನ್ನು ಡಿಜಿಟಲ್ ಅಥವಾ ಸಾಫ್ಟ್ ಕಾಪಿಯನ್ನು ತೋರಿಸಬಹುದಾ.? ಇಲ್ಲವಾ ಎಂದು ಕೇಳಲಾಗಿದೆ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಕಲ್ಪಕ್ ಅವರ ಟ್ವೀಟ್‍ನಲ್ಲಿನ ಪ್ರಶ್ನೆಗೆ ಉತ್ತರ ನೀಡುತ್ತಾ ಮುಂಬೈ ನಗರದ ಪೊಲೀಸರು, ಸೆಕ್ಷನ್ 130 (1) ಮೋಟಾರ್ ವೆಹಿಕಲ್ ಆಕ್ಟ್ ನ ಪ್ರಕಾರ ಸಮವಸ್ರ್ತದಲ್ಲಿದ್ದ ಪೊಲೀಸರು ತಪಾಸಣೆ ನಡೆಸುವ ಸಮಯದಲ್ಲಿ ಅವರು ಒತ್ತಾಯಿಸಿದಾಗ ಒರಿಜಿನಲ್ ಡ್ರೈವಿಂಗ್ ಲೈಸೆನ್ಸ್ ಅನ್ನು ತೋರಿಸತಕ್ಕದು. ಎಂದು ಸ್ಪಂದಿಸಿದ್ದಾರೆ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಮುಂಬೈ ಪೊಲೀಸರ ಈ ಸ್ಪಂದನೆಯು ಕಳೆದ ತಿಂಗಳು ಭಾರತ ಸರಕಾರ ಬಿಡುಗಡೆ ಮಾಡಿದ ನಿರ್ದೇಶನವನ್ನು ವಿರೋಧಿಸುತ್ತಿದೆಯೇ? ಹೊಸ ನಿರ್ದೇಶನಗಳ ಪ್ರಕಾರ, ಟ್ರಾಫಿಕ್ ಪೋಲೀಸ್ ಡ್ರೈವಿಂಗ್ ಪರವಾನಗಿಗಳು, ನೋಂದಣಿ ಪ್ರಮಾಣಪತ್ರಗಳು, ಪಿ.ಯು.ಸಿ ಮತ್ತು ವಾಹನ ವಿಮೆ ಪೇಪರ್‍‍ಗಳನ್ನು ಒರಿಜಿನಲ್ ಅಥವಾ ಹಾರ್ಡ್ ಕಾಪಿಗಳನ್ನು ಇನ್ನು ಮುಂದೆ ಕೇಳಲಾಗುವುದಿಲ್ಲ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಐಟಿ ಆಕ್ಟ್ 2000 ರ ನಿಬಂಧನೆಯು ಈ ಎಲ್ಲ ದಾಖಲೆಗಳನ್ನು ಭಾರತ ಸರ್ಕಾರದ ಡಿಜಿಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್ನಲ್ಲಿ ಸಂಗ್ರಹಿಸಬಹುದಾಗಿದ್ದು, ಟ್ರಾಫಿಕ್ ಪೋಲಿಸ್ ಮೂಲದ ದೂರವನ್ನು ತೆಗೆದುಕೊಳ್ಳುವ ಬದಲು ಎಲೆಕ್ಟ್ರಾನಿಕ್ ದಾಖಲೆಗಳ QR ಕೋಡ್ ಸ್ಕ್ಯಾನಿಂಗ್ ಮಾಡಲು ನೀಡಲಾದ ಡಿವೈಸ್ ಅಥವಾ ಮೊಬೈಲ್ ಫೋನ್ ಬಳಸಿ ಕೇಂದ್ರೀಯ ಡೇಟಾಬೇಸ್‍ಗೆ ಪ್ರವೇಶಿಸುವುದರ ಮೂಲಕ ದೋಷಯುಕ್ತ ಚಾಲಕರ ಉಲ್ಲಂಘನೆಗಳನ್ನು ದಾಖಲಿಸಲು ಸಾಧ್ಯವಾಗುತ್ತದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಇಲ್ಲಿ ನಾಗರಿಕರು ಗಮನಿಸಬೇಕಾದ ಅಂಶವೆಂದರೆ, GPEG, PDF, ಇತ್ಯಾದಿ ಫಾರ್ಮ್ಯಾಟ್‍ನಲ್ಲಿರುವ ಡ್ರೈವಿಂಗ್ ಲೈಸೆನ್ಸ್ ನ ಡಿಜಿಟಲ್ ಸ್ವರೂಪವಗಳನ್ನು ಸ್ವೀಕರಿಸಲ್ಪಡುವಿದಿಲ್ಲ, ಕೇವಲ ವಾಹನದ ಡಾಕ್ಯುಮೆಂಟ್‍‍ಗಳು ಡಿಜಿಲಾಕರ್ ಅಥವಾ ಎಂಪರಿವಾಹನ್ ಆಪ್‍ಗಳಲ್ಲಿ ಸ್ಕ್ಯಾನಿಂಗ್ ರೂಪದಲ್ಲಿ ಇದ್ದರೆ ಮಾತ್ರ ಪರಿಗಣಿಸಲ್ಪಡುತ್ತದೆ.

ನಿಮ್ಮ ಸಾಫ್ಟ್ ಕಾಪಿ ಡ್ರೈವಿಂಗ್ ಲೈಸೆನ್ಸ್ ಅನ್ನು ಪೊಲೀಸರು ಪರಿಗಣಿಸಬೇಕಾದರೆ ಆಯಾ ಸರ್ಕಾರದ ಅಧಿಕಾರಿಗಳಿಂದ ನೀವು ಡಿಜಿಟಲ್ ಸಹಿಯನ್ನು ಪಡೆಯಬೇಕಾಗಿದ್ದು, ಡಿಜಿಲಾಕರ್ ಮತ್ತು ಎಂಪರಿವಾಹನ ಆಪ್‍ಗಳಲ್ಲಿ ವಾಹನಕ್ಕೆ ಸಂಬಂದಿಸಿದ ಡ್ರೈವಿಂಗ್ ಲೈಸೆನ್ಸ್, ವಿಮೆಯ ಪತ್ರ, ಆರ್‍‍ಟಿಒ ಪತ್ರಗಳು ಮತ್ತು ಇನ್ನಿತರೆ ದಾಖಲೆಗಳನ್ನು ಪರಿಗಣಿಸಲಾಗಿತ್ತದೆ ಎಂದು ಉಲ್ಲೇಖಿಸಲಾಗಿದೆ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಮೇಲಿನ ಪ್ರಕರಣದಲ್ಲಿ, ಕಲ್ಪಾಕ್ ಅವರ ಡ್ರೈವಿಂಗ್ ಲೈಸೆನ್ಸ್ನ ಫೋಟೋ ಅಥವಾ ಪಿಡಿಎಫ್ ಅನ್ನು ತೋರಿಸುತ್ತಿದೆಯೇ ಅಥವಾ ಸರ್ಕಾರದ ಅನುಮೋದಿತ ಅಪ್ಲಿಕೇಶನ್ನಲ್ಲಿ ಡಿಜಿಟಲ್ ಸಹಿ ಮಾಡಿದ ಡ್ರೈವಿಂಗ್ ಪರವಾನಗಿಯನ್ನು ನಿರ್ಮಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಕಲ್ಪಕ್‍ರವರು ತನ್ನ ಡ್ರೈವಿಂಗ್ ಲೈಸೆನ್ಸ್ ನ ಫೋಟೋವನ್ನು ತೋರಿಸಿದ್ದೆ ಆದಲ್ಲಿ, ಅದು ಮಾನ್ಯವಾಗಿಲ್ಲವಾದ ಕಾರಣ ದಂಡ ವಿಧಿಸಲಿಗಿದ್ದು, ಆದರೆ ಅವರು ಅಪ್ಲಿಕೇಶನ್ನಲ್ಲಿ ಡಿಎಲ್ ತೋರಿಸಿದಲ್ಲಿ ಮತ್ತು ಇನ್ನೂ ದಂಡ ವಿಧಿಸಿದರೆ ಅದು ವಿಭಿನ್ನ ಸಂಗತಿಯಾಗಿರಲಿದೆ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಆದರೆ ಇನ್ನು ಹಲವಾರು ನಾಗರೀಕರು ಒರಿಜಿನಲ್/ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್ ಅನ್ನು ಧೃಢೀಕರಿಸಲಾಗುವುದು ಎಂದು ಹಲವರು ತಮ್ಮ ಟ್ವಿಟರ್ ಖಾತೆಗಳಲ್ಲಿ ಪೊಲೀಸರನ್ನು ಪ್ರಶ್ನಿಸುತ್ತಾ ಗೊಂದಲದಲ್ಲಿ ಸಿಲುಕಿದ್ದಾರೆ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಡಿಜಿಟಲ್ ಲಾಕರ್ ಅಂದ್ರೆ ಏನು?

ನಿಮ್ಮ ದಾಖಲೆಗಳನ್ನು ಸುರಕ್ಷಿತವಾಗಿ ಕಾಪಾಡಲು ಇದೊಂದು ಸುರಕ್ಷಿತ ಕ್ರಮವಾಗಿದ್ದು, ಆಧಾರ್ ಕಾರ್ಡ್ ಅಂಕೆಯೊಂದಿಗೆ ಇದನ್ನು ಲಿಂಕ್ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಕನಸಿನ ಡಿಜಿಟಲ್ ಇಂಡಿಯಾ ಅಭಿಯಾನದ ಅಡಿ ನಿಮಗೆ ಈ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಈ ಮೂಲಕ ನೀವು ನಿಮ್ಮ ಅಮೂಲ್ಯವಾದ ಇ-ದಾಖಲೆಗಳು, ಯುನಿಫಾರ್ಮ್ ರಿಸೋರ್ಸ್ ಐಡೆಂಟಿ ಫೈಯರ್ (ಯು.ಆರ್.ಐ) (ಧ್ವನಿ ಮುದ್ರಿಕೆ, ವಿಡಿಯೋ, ಬರಹ) ಇತ್ಯಾದಿಗಳನ್ನೂ ಇದರಲ್ಲಿ ಶೇಖರಿಸಿಡಬಹುದಾಗಿದ್ದು, ದಾಖಲೆಗಳು ಇಲ್ಲವೆಂದು ಪೊಲೀಸರಿಗೆ ದಂಡ ಕಟ್ಟಬೇಕಾದ ಅನಿವಾರ್ಯತೆ ತಪ್ಪಲಿದೆ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ನಿಮ್ಮ ಮೊಬೈಲ್‌ನಲ್ಲಿ ಡಿಜಿ ಲಾಕರ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ವಾಹನ ಚಾಲನಾ ಪರವಾನಿಗೆ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರಗಳನ್ನು (ಆರ್‍‌ಸಿ) ದಾಖಲೆಗಳನ್ನು ಡಿಜಿ ಲಾಕರ್ ವ್ಯವಸ್ಥೆಗೆ ಅಳವಡಿಸಿ, ಅವು ಮೊಬೈಲ್‍ನಲ್ಲಿ ಲಭ್ಯವಾಗುವಂತೆ ಮಾಡಬಹುದಾಗಿದೆ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಕಾಗದ ರಹಿತ ಆಡಳಿತ ಉದ್ದೇಶದಿಂದ ಕೇಂದ್ರ ಸರ್ಕಾರವು 2016ರಲ್ಲೇ ಈ ಯೋಜನೆಯನ್ನು ಜಾರಿ ತಂದಿದ್ದು, ಸರ್ಕಾರಿ ಸಚಿವಾಲಯಗಳಲ್ಲಿ ಮತ್ತು ಆಡಳಿತದ ಒತ್ತಡವನ್ನು ಕಡಿಮೆ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ.

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಆದ್ರೆ ಇದರ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದ ಕಾರಣ ಬಹುತೇಕ ವಾಹನ ಸವಾರರು ಡಿಜಿ ಲಾಕರ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಇದಲ್ಲದೇ ಡಿಜಿ ಲಾಕರ್ ಹೊಂದಿದ ವಾಹನ ಸವಾರರಿಗೂ ಟ್ರಾಫಿಕ್ ಪೊಲೀಸರು ಕೆಲವು ಬಾರಿಗೆ ಮಾನ್ಯತೆ ಮಾಡದೆ ಇದ್ದಿದ್ದು ಸಹ ಈ ಅಪ್ಲಿಕೇಷನ್ ಬಳಕೆ ಕೆಲವು ವಾಹನ ಸವಾರರು ಹಿಂದೇಟು ಹಾಕುತ್ತಿದ್ದರು.

MOST READ: ರಾಜ್ಯ ಸರ್ಕಾರದಿಂದ ಹೊಸ ಕಾನೂನು- ವಾಹನಗಳ ಖರೀದಿ ಇನ್ಮುಂದೆ ಅಷ್ಟು ಸುಲಭವಲ್ಲ..!

ಗೊಂದಲದಲ್ಲಿ ವಾಹನ ಸವಾರರು - ಡಿಜಿಲಾಕರ್‍‍ಗೆ ಇಲ್ಲವೇ ಮಾನ್ಯತೆ.?

ಇದೇ ಕಾರಣಕ್ಕೆ ಡಿಜಿ ಲಾಕರ್ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರವು ಡಿಜಿ ಲಾಕರ್‌ ಮೂಲಕ ತೋರಿಸುವ ದಾಖಲೆಗಳಿಗೆ ಮಾನ್ಯತೆ ಎನ್ನುವ ಮೂಲಕ ಟ್ರಾಫಿಕ್ ಪೊಲೀಸರ ವಸೂಲಿಗೆ ಬ್ರೇಕ್ ಹಾಕಿದ್ದು, ವಾಹನದ ದಾಖಲೆಗಳನ್ನ ಅಷ್ಟೇ ಅಲ್ಲದೇ ನಿಮ್ಮ ಪ್ಯಾನ್ ಕಾರ್ಡ್, ಮತದಾನ ಗುರುತಿನ ಪತ್ರ, ಪಾಸ್ ಪೋರ್ಟ್, ಜನ್ಮ ದಾಖಲೆ, ಮದುವೆ ದಾಖಲೆ ಸೇರಿದಂತೆ ಕೆಲವು ವ್ಯಯಕ್ತಿಕ ದಾಖಲೆಗಳನ್ನು ಇಲ್ಲಿ ಶೇಖರಿಸಿ ಇಡಬಹುದು.

Source: RUSHLANE

Most Read Articles

Kannada
English summary
Show valid original driving license when demanded – Mumbai Police. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more