ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾವಣೆ..!

2018 ಮುಗಿದು 2019ಕ್ಕೆ ಕಾಲಿಡಲು ಇನ್ನೇನು ಎರಡು ದಿನ ಮಾತ್ರ ಬಾಕಿಯಿದೆ. ಹೀಗಿರುವಾಗ ಪ್ರತಿಯೊಬ್ಬರು ಕೂಡಾ ಹೊಸ ವರ್ಷದಲ್ಲಿ ಹೊಸದೊಂದು ಬದಲಾವಣೆಯೊಂದಿಗೆ ಹೆಜ್ಜೆ ಹಾಕುವ ಬಗ್ಗೆ ಚಿಂತನೆ ಮಾಡುವುದು ಮಾಮೂಲಿ. ಹಾಗೆಯೇ ಭಾರತೀಯ ಆಟೋ ಉದ್ಯಮ ಕೂಡಾ ಈ ಬಾರಿ ಕೆಲವು ಮಹತ್ತರ ಬದಲಾವಣೆಯೊಂದಿಗೆ ಹೊಸ ವರ್ಷಕ್ಕೆ ಕಾಲಿಡುತ್ತಿರುವುದು ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಕಳೆದ ಒಂದು ದಶಕಗಳ ಅವಧಿಯಲ್ಲಿ ನಾನಾ ಬದಲಾವಣೆಗಳಿಗೆ ಕಾರಣವಾಗಿರುವ ಭಾರತೀಯ ಆಟೋ ಉದ್ಯಮವು ಈ ಬಾರಿ ತುಸು ಹೆಚ್ಚು ಎನ್ನುವಷ್ಟು ಬದಲಾವಣೆಗಳನ್ನು ಕಂಡುಕೊಳ್ಳುವ ತವಕದಲ್ಲಿದೆ. ಪ್ರಯಾಣಿಕ ಸುರಕ್ಷತೆ ಮತ್ತು ಮಾಲಿನ್ಯವನ್ನು ತಡೆಯುವ ಸಂಬಂಧ ವಾಹನ ಉತ್ಪಾದನೆಯಲ್ಲಿ ಕೆಲವು ಹೊಸ ವಿನ್ಯಾಸಗಳನ್ನು ಪರಿಚಯಿಸಲಾಗುತ್ತಿದ್ದು, ಈ ಕಡ್ಡಾಯವಾಗಿ ಜಾರಿಯಾಗಿ ಬರುತ್ತಿವೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಹಾಗಾದ್ರೆ 2019ರಲ್ಲಿ ಜಾರಿಗೆ ಬರಲಿರುವ ಹೊಸ ರೂಲ್ಸ್‌ಗಳು ಯಾವವು? ಹೊಸ ರೂಲ್ಸ್‌ನಿಂದ ವಾಹನ ಮಾಲೀಕರಿಗೆ ಮತ್ತು ಪ್ರಯಾಣಿಕರಿಗೆ ಯಾವ ರೀತಿಯ ಲಾಭವಾಗಲಿದೆ ಎನ್ನುವ ಮಾಹಿತಿ ಇಲ್ಲದೆ ನೋಡಿ..

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ ಮತ್ತು ಪ್ಯಾನಿಕ್‌ ಬಟನ್‌

ದೇಶದ ಪ್ರಮುಖ ನಗರಗಳಲ್ಲಿನ ಟ್ಯಾಕ್ಸಿ ಮತ್ತು ಸಾರ್ವಜನಿಕ ಸೇವೆಯ ವಾಹಗಳಲ್ಲಿ ಪ್ರಯಾಣಿಸುವವರ ಸುರಕ್ಷತೆಗಾಗಿ ಕೆಂದ್ರ ಸಾರಿಗೆ ಇಲಾಖೆ ಹೊಸ ನಿಯಮವನ್ನು ಜಾರಿ ಮಾಡಲಿದ್ದು, 2019 ಜನವರಿ 1 ರಿಂದಲೇ ಪ್ರತಿ ವಾಹನಗಳಲ್ಲೂ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ ಮತ್ತು ಪ್ಯಾನಿಕ್‌ ಬಟನ್‌ ಇರಲೇಬೇಕಿದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಜನವರಿ 1, 2019 ರಿಂದ ನೋಂದಣಿಯಾಗುವ ಎಲ್ಲಾ ಸಾರ್ವಜನಿಕ ಸೇವೆ ವಾಹನಗಳಲ್ಲಿ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ ಮತ್ತು ಪ್ಯಾನಿಕ್‌ ಬಟನ್‌ ಕಡ್ಡಾಯವಾಗಿ ಅಳವಡಿಸಬೇಕು ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಆದೇಶ ನೀಡಿದ್ದು, ಹೊಸ ಕಾಯ್ದೆ ಅನುಸರಿಸದ ವಾಹನಗಳ ನೋಂದಣಿ ತಡೆಹಿಡಿಯುವ ಸೂಚನೆ ನೀಡಿದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಇದಲ್ಲದೇ ಸಾರಿಗೆ ಇಲಾಖೆಯು ಕಳೆದ ಜೂನ್‌ನಲ್ಲಿಯೇ ರಾಷ್ಟ್ರೀಯ ಪರವಾನಗಿಗಳನ್ನು ಪಡೆಯುವ ಎಲ್ಲಾ ವಾಣಿಜ್ಯ ವಾಹನಗಳಿಗೆ ಫಾಸ್ಟ್ ಟ್ಯಾಗ್‍ಗಳು ಮತ್ತು ವಾಹನ ಟ್ರ್ಯಾಕಿಂಗ್ ಸಿಸ್ಟಮ್ ಸಾಧನಗಳನ್ನು ಕಡ್ಡಾಯವಾಗಿ ಮಾಡಿತ್ತು.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಹೀಗಾಗಿ ವಾಹನಗಳಲ್ಲಿ ಜಿಪಿಎಸ್‌ ಅಥವಾ ವಿಎಲ್‌ಟಿ ಡಿವೈಸ್‌ ಅಳವಡಿಕೆಯಿಂದ ಆ ವಾಹನದ ಸಂಚಾರದ ಮಾಹಿತಿಯ ಜೊತೆಗೆ ರಹದಾರಿ ನಿಯಮ ಉಲ್ಲಂಘಿಸುತ್ತಿರುವ ವಾಹನಗಳ ಪತ್ತೆ ಕಾರ್ಯ ಸುಲಭವಾಗಲಿದ್ದು, ಪ್ಯಾನಿಕ್‌ ಬಟನ್‌ ಅಳವಡಿಕೆಯಿಂದ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸಬಹುದು.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಆಟೋ ಚಾಲಕರೇ ಇತ್ತ ಗಮನಿಸಿ..!

ದೇಶದಲ್ಲಿ ದಿನಂಪ್ರತಿ ಹತ್ತಾರು ಭೀಕರ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಬಹುತೇಕ ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳು ಇಲ್ಲದ ಹಿನ್ನೆಲೆಯಲ್ಲಿ ಅಪಘಾತದ ತೀವ್ರತೆ ಹೆಚ್ಚುತ್ತಿದ್ದು, ವಾಹನ ಚಾಲನೆ ವೇಳೆ ಮಾಡುವ ಸಣ್ಣಪುಟ್ಟ ಚಾಲನಾ ದೋಷಗಳೇ ದೊಡ್ಡ ದುರಂತಗಳಿಗೆ ಕಾರಣವಾಗುತ್ತಿವೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

2017ರಲ್ಲಿ ಸುಮಾರು 1.50 ಲಕ್ಷ ಭೀಕರ ರಸ್ತೆ ಅಪಘತಾತಗಳು ಸಂಭವಿಸಿದ್ದು, ಅವುಗಳಲ್ಲಿ 29,351 ಆಟೋ ರಿಕ್ಷಾಗಳು ಅಪಘಾತಾಕ್ಕೆ ಈಡಾಗಿದೆ. ನಡೆದ ಅಷ್ಟು ಅಪಘಾತಗಳ ಪೈಕಿ ಸುಮಾರು 6,762 ಮಂದಿ ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಇಲಾಖೆಯು ಶೀಘ್ರದಲ್ಲೆ ದೇಶದಲ್ಲಿನ ಆಟೋ ಚಾಲಕರಿಗೆ ಶಾಕಿಂಗ್ ವಿಚಾರವನ್ನು ನೀಡಿದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

2019ರ ಅಕ್ಟೋಬರ್ ತಿಂಗಳ ಪ್ರಾರಂಭದಿಂದ ದೇಶದಲ್ಲಿರುವ ಎಲ್ಲಾ ಆಟೋ ರಿಕ್ಷಾಗಳು ಕೆಲವು ಕಡ್ಡಾಯ ಸುರಕ್ಷಾ ಸಾಧನಗಳನ್ನು ಹೊಂದಿರಬೇಕಾಗಿದ್ದು, ಚಾಲಕರಿಗೆ ಸೀಟ್ ಬೆಲ್ಟ್, ಸಿಂಗಲ್ ಹೆಡ್‌ಲ್ಯಾಂಪ್ ಬದಲಾಗಿ ಡ್ಯುಯಲ್ ಹೆಡ್‌ಲ್ಯಾಂಪ್, ಪ್ರಯಾಣಿಕ ಸೀಟು ವಿಸ್ತರಣೆರಣೆ ಮಾಡಬೇಕಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಆಟೋ ರಿಕ್ಷಾ ವಿನ್ಯಾಸ ಸಂಪೂರ್ಣ ಬದಲಾಗಲಿದ್ದು, ಪ್ರಯಾಣಿಕರಿಗೂ ಹೆಚ್ಚಿನ ಸುರಕ್ಷತೆ ಸಿಗಲಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಕಾರಿನಲ್ಲಿ ಹಿಂಬದಿ ಸವಾರರಿಗೂ ಸೀಟ್ ಬೆಲ್ಟ್ ಕಡ್ಡಾಯ

ಸದ್ಯ ದೇಶಾದ್ಯಂತ ಕಾರು ಚಾಲಕರು ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕೆಂಬ ನಿಯಮವಿದ್ದರೂ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಕೇಂದ್ರ ಸಾರಿಗೆ ಇಲಾಖೆಯು ಮುಂಬೈ ಮತ್ತು ಪುಣೆ ನಡುವಿನ ಎಕ್ಸ್‌ಪ್ರೇಸ್ ವೇ ನಲ್ಲಿ ಹಿಂಬದಿಯ ಸವಾರರಿಗೂ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿ ಕಳೆದ ತಿಂಗಳ ಆದೇಶ ಹೊರಡಿಸಿದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಮುಂದಿನ ಕೆಲವೇ ತಿಂಗಳಲ್ಲಿ ದೇಶಾದ್ಯಂತ ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಸಿದ್ದತೆ ನಡೆಸಿದ್ದು, ಭಾರತದಲ್ಲಿ ಮಾರಾಟವಾಗುತ್ತಿರುವ ಬಹುತೇಕ ಕಾರುಗಳಲ್ಲಿ ಅಗತ್ಯ ಮಟ್ಟದ ಸುರಕ್ಷಾ ಸೌಲಭ್ಯಗಳು ಇಲ್ಲದಿರುವುದು ಪ್ರಯಾಣಿಕರ ಜೀವಕ್ಕೆ ಕುತ್ತು ತರುತ್ತಿವೆ. ಹೀಗಾಗಿ ಸಾಧ್ಯವಾದಷ್ಟು ಮಟ್ಟಿಗೆ ಲಭ್ಯವಿರುವ ಸುರಕ್ಷಾ ಸೌಲಭ್ಯಗಳನ್ನು ಬಳಸಿಕೊಂಡು ಆಗುವ ಅನಾಹುತ ತಪ್ಪಿಸುವುದು ಇದರ ಉದ್ದೇಶವಾಗಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ..

ಸಾರಿಗೆ ಇಲಾಖೆಯು 2019ರ ಎಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಎಬಿಎಸ್ ಕಡ್ಡಾಯ ಬಳಕೆಯನ್ನು ಜಾರಿಗೆ ತರುತ್ತಿದ್ದು, ನಿಮಗೆಲ್ಲರಿಗೂ ತಿಳಿದಿರುವಂತೆಯೇ ಭಾರತೀಯ ಮಧ್ಯಮ ವರ್ಗದ ಜನರು ಮೋಟಾರುಸೈಕಲ್‌ಗಳನ್ನೇ ಅತಿ ಹೆಚ್ಚು ನೆಚ್ಚಿಕೊಂಡಿದ್ದಾರೆ. ಇದರಿಂದಲೇ ಮೋಟಾರ್‌ಸೈಕಲ್ ಮಾರುಕಟ್ಟೆಯು ಆಗಾಧವಾಗಿ ಬೆಳೆದು ನಿಂತಿರುವಾಗ ಸುರಕ್ಷತೆಯು ಕೂಡಾ ತುಂಬಾ ಮುಖ್ಯವಾಗಿರುತ್ತೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಅಷ್ಟಕ್ಕೂ ಎಬಿಎಸ್ ಎಂದರೇನು? ಹೇಗೆ ಕೆಲಸ ಮಾಡುತ್ತದೆ?

ಎಬಿಎಸ್ ಪೂರ್ಣ ರೂಪವೇ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್). ಸಾಮಾನ್ಯವಾಗಿ ಹಠಾತ್ ಆಗಿ ಬ್ರೇಕ್ ಒತ್ತಿದಾಗ ಚಕ್ರದ ಚಾಲನೆ ಒಮ್ಮೆಲೇ ನಿಲುಗಡೆಯಾಗುತ್ತದೆ. ಇದರ ಪರಿಣಾಮ ಸ್ಟೀರಿಂಗ್ ಹಾಗೂ ಹ್ಯಾಂಡಲ್ ಲಾಕ್ ಆಗಿ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇದ್ದು, ಈ ವೇಳೆ ಚಾಲಕರಿಗೆ ಅಪಘಾತದಿಂದ ತಪ್ಪಿಸಿಕೊಳ್ಳಲು ಅವಕಾಶವಿರುವುದಿಲ್ಲ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಇಂತಹ ಅವಘಡ ಸಾಧ್ಯತೆಗಳನ್ನು ತಪ್ಪಿಸುವ ಹಾಗೂ ಬ್ರೇಕಿಂಗ್ ಅಂತರವನ್ನು ಸಾಕಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಆಟೋ ಎಂಜಿನಿಯರ್‌ಗಳು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಎಂಬ ಬ್ರೇಕಿಂಗ್ ತಂತ್ರಜ್ಞಾನವನ್ನು ಪರಿಚಯಿಸಿರುವುದು.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಬ್ರೇಕ್ ಒತ್ತಿದ ಸಂದರ್ಭದಲ್ಲಿ ಚಕ್ರ ಹಠಾತ್ ಆಗಿ ಬಂದ್ ಆಗುವುದಿಲ್ಲ. ಬದಲಾಗಿ ವೇಗವನ್ನು ಕಡಿತಗೊಳಿಸಿ, ತಿರುಗಿಸುತ್ತಲೇ ಇರುತ್ತದೆ. ಇದರಿಂದ ಅಪಘಾತ ಸಂದರ್ಭದಲ್ಲಿ ಸವಾರರು ತಮ್ಮ ವಾಹನದ ದಿಕ್ಕನ್ನು ಬದಲಾಯಿಸುವ ಅವಕಾಶವಿರುತ್ತದೆ. ಈ ಮೂಲಕ ಆಗಬಹುದಾದ ದುರಂತಗಳನ್ನು ತಪ್ಪಿಸಬಹುದಾಗಿದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ದೇಶಾದ್ಯಂತ ಏಕರೂಪದ ಡಿಎಲ್ ಮತ್ತು ಆರ್‌ಸಿ

ವಾಹನಗಳ ದತ್ತಾಂಶ ಶೇಖರಣೆ ಮತ್ತು ಸುರಕ್ಷೆಯ ಸಂಬಂಧ ಇದೀಗ ಮತ್ತೊಂದು ವಿನೂತನ ಯೋಜನೆಯೊಂದನ್ನು ಜಾರಿಗೆ ತರಲಾಗುತ್ತಿದೆ. ಇದರ ಪರಿಣಾಮ ಮುಂಬರುವ ದಿನಗಳಲ್ಲಿ ದೇಶಾದ್ಯಂತ ಏಕರೂಪ ಡಿಎಲ್ ಮತ್ತು ಆರ್‌ಸಿ ವಿತರಣೆ ನಡೆಯಲಿದ್ದು, ಹೊಸ ಯೋಜನೆಯಿಂದ ಹತ್ತಾರು ಲಾಭಗಳಿವೆ ಎನ್ನಲಾಗುತ್ತಿದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

2019ರ ಜುಲೈನಿಂದ ಹೊಸ ಯೋಜನೆಯು ಜಾರಿಗೆ ಬರಲಿದ್ದು, ಜುಲೈ ನಂತರ ವಿತರಣೆ ಮಾಡಲಾಗುವ ಡಿಎಲ್ ಮತ್ತು ಆರ್‌ಸಿ ಪ್ರಮಾಣಪತ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ರೀತಿಯಾಗಿರುತ್ತದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಏಕರೂಪದ ಡಿಎಲ್ ಮತ್ತು ಆರ್‌ಸಿ ಸೌಲಭ್ಯದಿಂದ ವಾಹನ ಸವಾರರಿಗೆ ಗರಿಷ್ಠ ಲಾಭಗಳಿದ್ದು, ಸ್ಮಾರ್ಟ್‌ ಕಾರ್ಡ್ ರೂಪದಲ್ಲಿರುವ ಬರಲಿರುವ ಹೊಸ ಡಿಎಲ್‌ ಮತ್ತು ಆರ್‌ಸಿಗಳಲ್ಲಿ ಮೈಕ್ರೋ ಚಿಪ್‌ಗಳನ್ನು ಅಳವಡಿಸಲಾಗಿರುತ್ತದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಕಾರ್ಡ್‌ನಲ್ಲಿರುವ ಕ್ಯೂ ಆರ್‌ ಕೋಡ್‌ಗಳು ವಾಹನ ಮಾಲೀಕರ ಸಂಪೂರ್ಣ ಡೇಟಾ ಹೊಂದಿರಲಿದ್ದು, ಎನ್‌ಎಫ್‌ಸಿ (ನಿಯರ್ ಫೀಲ್ಡ್‌ ಕಮ್ಯುನಿಕೇಶನ್‌) ವೈಶಿಷ್ಟ್ಯತೆ ಮೂಲಕ ಮೆಟ್ರೋ ಮತ್ತು ಎಟಿಎಂ ಕಾರ್ಡ್‌ಗಳ ರೀತಿಯಲ್ಲಿ ಬಳಸಬಹುದಾಗಿದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಇದರಿಂದ ಟ್ರಾಫಿಕ್‌ ಪೊಲೀಸರು ವಿಶೇಷ ಸಾಧನಗಳ ಮೂಲಕ (ಹ್ಯಾಂಡ್‌ಹೆಲ್ಡ್‌ ಡಿವೈಸಸ್‌) ಈ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಿ ಎಲ್ಲ ವಿವರ ಪಡೆಯಬಹುದಾಗಿದ್ದು, ನಕಲಿ ಡಿಎಲ್ ಮತ್ತು ಆರ್‌ಸಿ ಹಾವಳಿಗೂ ಇದರಿಂದ ಬ್ರೇಕ್ ಹಾಕಬಹುದಾಗಿದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಹೈ ಸೆಕ್ಯುರಿಟಿ ರಿಜಿಸ್ಪ್ರೇಶನ್‌ ಪ್ಲೇಟ್‌ ಕಡ್ಡಾಯ

ನಕಲಿ ನಂಬರ್‌ ಪ್ಲೇಟ್‌ಗಳನ್ನು ತಡೆಗಟ್ಟಲು ಹಾಗೂ ವಾಹನಗಳ ಕಳ್ಳತನ ತಡೆಗಟ್ಟಲು ಹೈ ಸೆಕ್ಯುರಿಟಿ ರಿಜಿಸ್ಪ್ರೇಶನ್‌ ಪ್ಲೇಟ್‌ ಕಡ್ಡಾಯವಾಗಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಸಂಬಂಧ ಲಿಖಿತ ಉತ್ತರ ನೀಡಿದ್ದಾರೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

2019ರ ಏಪ್ರಿಲ್‌1 ಅಥವಾ ನಂತರ ಉತ್ಪಾದನೆಯಾಗುವ ಎಲ್ಲಾ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಪ್ರೇಶನ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಕಡ್ಡಾಯವಾಗಲಿದ್ದು, ಎಚ್‌ಎಸ್‌ಆರ್‌ಪಿಎಸ್‌ ನಿರ್ದಿಷ್ಟ ಭದ್ರತಾ ಅಂಶಗಳನ್ನು ಒಳಗೊಂಡಿರುವ ಹೊಸ ನಂಬರ್ ಪ್ಲೇಟ್ ಅನ್ನು ನಕಲಿ ಮಾಡಲು ಸಾಧ್ಯವಿಲ್ಲ

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಸಾರಿಗೆ ಇಲಾಖೆಯಿಂದಲೇ ಕಲರ್ ಕೋಡಿಂಗ್..

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯ ಪ್ರಮಾಣವು ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಕಾರುಗಳಿಗೆ ಕಲರ್ ಕೋಡಿಂಗ್ ಎಂಬ ಹೊಸ ಸೂತ್ರವನ್ನು ಅಳವಡಿಸಲು ಮುಂದಾಗಿದೆ.

MOST READ: ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಈಗಾಗಲೇ ಮುಂದುವರಿದ ರಾಷ್ಟ್ರಗಳಲ್ಲಿ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಕಾರುಗಳಿಗೆ ಕಲರ್ ಕೋಡ್ ಸೂತ್ರವನ್ನು ಅಳವಡಿಸಲಾಗಿದ್ದು, ಇದರಿಂದ ಡಿಸೇಲ್ ಮತ್ತು ಪೆಟ್ರೋಲ್ ಸೇರಿದಂತೆ ಇತರೆ ವಾಹನಗಳ ಓಡಾಟದ ಮೇಲೆ ನಿಯಂತ್ರ ಸಾಧಿಸಬಹುದು. ಅಂದ್ರೆ ಇದು ಸಮ-ಬೆಸ ಸೂತ್ರದಂತೆಯೇ ಕಾರ್ಯನಿರ್ವಹಿಸುತ್ತೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಕಾರಿನ ಫ್ರಂಟ್ ವೀಂಡ್‌ಶಿಲ್ಡ್ ಬಳಿ ಸಾರಿಗೆ ಇಲಾಖೆಯೇ ಕೋಡ್ ವಲ್ಡ್ ಮಾದರಿಯಲ್ಲಿ ಬಣ್ಣ ಬಳಿಯಲಿದ್ದು, ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್, ಹೈಡ್ರೊಜನ್ ಮತ್ತು ಹೈಬ್ರಿಡ್ ಕಾರುಗಳಿಗೆ ಇದು ಭಿನ್ನವಾರಲಿದೆ. ಈ ಮೂಲಕ ಕಲರ್ ಕೋಡ್ ಮೂಲಕವೇ ನಗರದಲ್ಲಿ ಅಕ್ರಮವಾಗಿ ಸಂಚರಿಸುವ ಕಾರುಗಳನ್ನ ಪತ್ತೆಹಚ್ಚಲು ನೇರವಾಗಲಿದೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್‌ಗಳು- ಆಟೋ ಉದ್ಯಮದಲ್ಲಿ ಆಗಲಿದೆ ಭಾರೀ ಬದಲಾಣೆ..!

ಇದಲ್ಲದೇ ಇನ್ನು ಕೆಲವು ಹೊಸ ಕಾಯ್ದೆಗಳು ಜಾರಿಗೆ ಬರುವ ಸಾಧ್ಯತೆಗಳಿದ್ದು, ಒಟ್ಟಿನಲ್ಲಿ ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡುವವರಿಗೆ ಭಾರೀ ಪ್ರಮಾಣದ ದಂಡವೇ ಕಾದಿದೆ ಎನ್ನಬಹುದು. ಯಾವುದೇ ಕಾರಣಕ್ಕೂ ನೀವು ಮಾತ್ರ ನಿಯಮ ಉಲ್ಲಂಘಿಸಿ ಮತ್ತೊಬ್ಬರ ಜೀವಕ್ಕೆ ಹಾನಿಮಾಡದೆ ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಿ ಎನ್ನುವುದು ನಮ್ಮ ಕಳಕಳಿ.

Most Read Articles

Kannada
English summary
With 2018 almost over, various car and motorcycle manufacturers in India have shifted their focus towards the upcoming year. The new year, 2019 brings with it a number of challenges, the most important being the new safety regulations. Read in Kannada.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more