ಐಷಾರಾಮಿ ಕಾರು ಖರೀದಿಸಿದ್ದ ಈ ರಾಜಕಾರಣಿಯ ಗೋಲ್‍ಮಾಲ್ ಕೆಲಸ ಎಂತದ್ದು ಗೊತ್ತಾ.?

ಕಳೆದ ವಾರವಷ್ಟೇ ಪೊಲೀಸ್ ಅಧಿಕಾರಿಯ ಕಾರು ನೋ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ ಕಾರಣ ಅವರಿಗೆ ಟ್ರಾಫಿಕ್ ಪೊಲೀಸರು ಚಲನ್ ನೀಡಿದ ವಿಚಾರದ ಬಗ್ಗೆ ಮಾಹಿತಿ ನೀಡಿದ್ದೆವು, ಆದರೆ ಇದೀಗ ನಕಲಿ ನಂಬರ್ ಪ್ಲೇಟ್ ಬಳಸಿದ ಕಾರಣ ಪ್ರಭಾವಿ ಶಾಸಕರೊಬ್ಬರ ಮಗನ ಮೇಲೆ ಕೇಸ್ ದಾಖಲಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಐಷಾರಾಮಿ ಕಾರು ಖರೀದಿಸಿದ್ದ ಈ ರಾಜಕಾರಣಿಯ ಗೋಲ್‍ಮಾಲ್ ಕೆಲಸ ಎಂತದ್ದು ಗೊತ್ತಾ.?

ಮಹಾರಾಷ್ಟ್ರದಲ್ಲಿ ಐಷಾರಾಮಿ ಕಾರುಗಳಲ್ಲಿ ನಕಲಿ ನಂಬರ್ ಪ್ಲೇಟ್ ಕೇಸ್‍ ದಾಖಲಾಗಿದ್ದು, ಎರಡು ಐಷಾರಾಮಿ ಕಾರುಗಳಿಗೆ ಒಂದೇ ನಂಬರ್ ಪ್ಲೇಟ್ ಬಳಸುತ್ತಿರುವ ಅಂಶ ಬೆಳಕಿಗೆ ಬಂದಿದೆ. ಪ್ರಭಾವಿ ಅಪ್ಪನ ಹೆಸರಿನ ಮೇಲೆ ಸಂಚಾರಿ ನಿಯಮವನ್ನು ಉಲ್ಲಂಘಿಸಿ ಮೆರೆಯುತ್ತಿದ್ದ ಹರಾಮಿ ರಾಜಕಾರಣಿಯೊಬ್ಬ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಐಷಾರಾಮಿ ಕಾರು ಖರೀದಿಸಿದ್ದ ಈ ರಾಜಕಾರಣಿಯ ಗೋಲ್‍ಮಾಲ್ ಕೆಲಸ ಎಂತದ್ದು ಗೊತ್ತಾ.?

ಮಹಾರಾಷ್ಟ್ರದಲ್ಲಿ ಗೂಂಡಾ ರಾಜಕಾರಣಿ ಎಂದೇ ಕುಖ್ಯಾತಿ ಹೊಂದಿರುವ ಓಮೀ ಕಲಾನಿಯವರು ತಮ್ಮ ಎರಡು ಐಷಾರಾಮಿ ಎಸ್‍ಯುವಿ ಕಾರುಗಳಿಗೆ ಒಂದೇ ನೋಂದಣಿ ಸಂಖ್ಯೆಯನ್ನು ಬಳಸುತ್ತಿದ್ದು, ಸಾಮಾಜಿಕ ಕಾರ್ಯಕರ್ತರೊಬ್ಬರು ನೀಡಿದ ಮಾಹಿತಿ ಮೇರೆಗೆ ಗೂಂಡಾ ರಾಜಕಾರಣಿಯ ಅಸಲಿಯತ್ತು ಬಯಲಾಗಿದೆ.

ಐಷಾರಾಮಿ ಕಾರು ಖರೀದಿಸಿದ್ದ ಈ ರಾಜಕಾರಣಿಯ ಗೋಲ್‍ಮಾಲ್ ಕೆಲಸ ಎಂತದ್ದು ಗೊತ್ತಾ.?

ಮುಂಬೈ ಮಿರರ್ ವರದಿ ಪ್ರಕಾರ, MH 04 GE7777 ನೋಂದಣಿ ಸಂಖ್ಯೆ ಹೊಂದಿರುವ ರೇಂಜ್ ರೋವರ್ ಎಸ್‍ಯುವಿ ಕಾರೊಂದು ಓವರ್ ಸ್ಪೀಡ್‍ನಲ್ಲಿ ಚಲಾಯಿಸುತ್ತಿರುವಾಗ ಸಾಮಾಜಿಕ ಕಾರ್ಯಕರ್ತರ ಕಣ್ಣಿಗೆ ಬಿದ್ದಿದೆ. ಅಷ್ಟೆ ಅಲ್ಲದೇ ಈ ಕಾರು ಟಿಂಟೆಡ್ ವಿಂಡೋಗಳನ್ನು ಹೊಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ಐಷಾರಾಮಿ ಕಾರು ಖರೀದಿಸಿದ್ದ ಈ ರಾಜಕಾರಣಿಯ ಗೋಲ್‍ಮಾಲ್ ಕೆಲಸ ಎಂತದ್ದು ಗೊತ್ತಾ.?

ಇದನ್ನು ನೋಡಿದ್ದ ಬಿನು ವರ್ಗೀಸ್ ಎಂಬ ಸಾಮಾಜಿಕ ಕಾರ್ಯಕರ್ತ ಆ ಕಾರಿನ ಫೋಟೋವನ್ನು ತೆಗೆದು ತಕ್ಷಣವೇ ವಾಹನ್ ಆಪ್ ಮುಖಾಂತರ ಆ ವಾಹನದ ನೋಂದಣಿ ಸಂಖ್ಯೆಯನ್ನು ಪರಿಶೀಲಸಲು ಮುಂದಾದಾಗ ಅವರಿಗೆ ಮತ್ತೊಂದು ಅಚ್ಚರಿಯ ವಿಷಯ ತಿಳಿದು ಬಂತು.

ಐಷಾರಾಮಿ ಕಾರು ಖರೀದಿಸಿದ್ದ ಈ ರಾಜಕಾರಣಿಯ ಗೋಲ್‍ಮಾಲ್ ಕೆಲಸ ಎಂತದ್ದು ಗೊತ್ತಾ.?

ರೇಂಜ್ ರೋವರ್ ಕಾರಿಗೆ ನೀಡಲಾಗಿದ್ದ ನೋಂದಣಿ ಸಂಖ್ಯೆಯಲ್ಲಿ ಮತ್ತೊಂದು ಮರ್ಸಿಡೀಸ್-ಬೆಂಝ್ ಎಸ್-ಕ್ಲಾಸ್ ಕಾರು ಕೂಡಾ ನೋಂದಣಿಯಾಗಿದ್ದು, ಅಚ್ಚರಿಗೊಳಗಾದ ವರ್ಗೀಸ್ ಅವರು ಕೂಡಲೇ ಥಾಣೆ ಪೊಲೀಸ್ ಕಂಟ್ರೋಲ್ ರೋಂಗೆ ಕರೆ ಮಾಡಿ ಈ ಬಗ್ಗೆ ಸುದ್ದಿ ನೀಡಿದ್ದರು.

ಐಷಾರಾಮಿ ಕಾರು ಖರೀದಿಸಿದ್ದ ಈ ರಾಜಕಾರಣಿಯ ಗೋಲ್‍ಮಾಲ್ ಕೆಲಸ ಎಂತದ್ದು ಗೊತ್ತಾ.?

ರೇಂಜ್ ರೋವರ್ ಅನ್ನು ಮುಂಬ್ರಾದಲ್ಲಿ ತಡೆಹಿಡಿಯಲಾಗಿ ಮತ್ತು ಪೊಲೀಸರು ಓಮೀ ಕಲಾನಿ ಕಾರಿನ ಒಳಗೆ ಇದ್ದಿದ್ದು ಕಂಡು ಬಂತು. ತಕ್ಷಣವೇ ಅವರನ್ನು ವಶಕ್ಕೆ ಪಡೆಯಲಾಯಿತಾದರೂ ರಾಜಕೀಯ ಪ್ರಭಾವದೊಂದಿಗೆ ಬಂಧನವಾದ ಕೆಲವೇ ನಿಮಿಷಗಳಲ್ಲಿ ಬಿಡುಗಡೆಗೊಂಡಿದ್ದಾನೆ.

ಐಷಾರಾಮಿ ಕಾರು ಖರೀದಿಸಿದ್ದ ಈ ರಾಜಕಾರಣಿಯ ಗೋಲ್‍ಮಾಲ್ ಕೆಲಸ ಎಂತದ್ದು ಗೊತ್ತಾ.?

ಆದರೆ ಸಾಮಾಜಿಕ ಕಾರ್ಯಕರ್ತ ವರ್ಘೀಸ್ ಅವರು ಕಲಾನಿ ವಿರುದ್ಧ ಕಾನೂನು ಹೋರಾಟ ನಡೆಸಿದ್ದು, ಕೋಟ್ಯಾಂತರ ರುಪಾಯಿ ಹಣ ತೆತ್ತು ಐಷಾರಾಮಿ ಕಾರು ಖರೀದಿಸಿ ನಂಬರ್ ಪ್ಲೇಟ್‍ನಲ್ಲಿ ದೋಖಾ ಮಾಡುತ್ತಿರುವ ಕಲಾನಿಗೆ ತಕ್ಕ ಶಾಸ್ತಿ ಮಾಡಿಸಲು ಮುಂದಾಗಿದ್ದಾರೆ.

ಐಷಾರಾಮಿ ಕಾರು ಖರೀದಿಸಿದ್ದ ಈ ರಾಜಕಾರಣಿಯ ಗೋಲ್‍ಮಾಲ್ ಕೆಲಸ ಎಂತದ್ದು ಗೊತ್ತಾ.?

ಇದರಿಂದ ಕುಪಿತಗೊಂಡಿರುವ ಒಮೀ ಕಲಾನಿ ತನ್ನ ರಾಜಕೀಯ ಪ್ರಭಾವದಿಂದ ಸಾಮಾಜಿಕ ಕಾರ್ಯಕರ್ತನಿಗೆ ಬೆದರಿಕೆ ಹಾಕುತ್ತಿದ್ದು, ಕಾನೂನಿನ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಅಧಿಕಾರಿಗಳು ಸಹ ಮೌನ ವಹಿಸಿರುವ ಬಗ್ಗೆ ವರ್ಗೀಸ್ ಸಂಶಯ ವ್ಯಕ್ತಪಡಿಸಿದ್ದಾರೆ.

ಐಷಾರಾಮಿ ಕಾರು ಖರೀದಿಸಿದ್ದ ಈ ರಾಜಕಾರಣಿಯ ಗೋಲ್‍ಮಾಲ್ ಕೆಲಸ ಎಂತದ್ದು ಗೊತ್ತಾ.?

ಇನ್ನು ಥಾಣೆ ಪೊಲೀಸ್ ಠಾಣಾಧಿಕಾರಿ ಅಮಿತ್ ಕಾಳೆ ಅವರು, ಈ ವರದಿಯ ತನಿಖೆಗಾಗಿ ಎರಡೂ ವಾಹನಗಳ ನೋಂದಣಿಯ ಕುರಿತು 'ಆರ್‍‍ಟಿಒ' ದಿಂದ ಹೆಚ್ಚಿನ ಮಾಹಿತಿ ದೊರೆಯಬೇಕಿದ್ದು, ಮಾಹಿತಿ ಸಿಕ್ಕ ನಂತರವಷ್ಟೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹಾರಿಕೆಯ ಉತ್ತರ ನೀಡುತ್ತಿದ್ದಾರೆ.

ಐಷಾರಾಮಿ ಕಾರು ಖರೀದಿಸಿದ್ದ ಈ ರಾಜಕಾರಣಿಯ ಗೋಲ್‍ಮಾಲ್ ಕೆಲಸ ಎಂತದ್ದು ಗೊತ್ತಾ.?

7777 ಸಂಖ್ಯೆಯ ಬಳಕೆಯ ಕುರಿತಂತೆ ಮತ್ತೊಂದು ಕಥೆ ಕಟ್ಟುತ್ತಿರುವ ಕಲಾನಿಯ ಪುತ್ರ ತಾನು ಕೂಡಾ ಡೀಲರ್‍ ಒಬ್ಬರಿಂದ ಮೋಸ ಹೋಗಿರುವುದಾಗಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದು, ಇಂತಹ ಪ್ರಕರಣಗಳಲ್ಲಿ ಜನಸಾಮಾನ್ಯರ ಮೇಲೆ ನಾನಾ ಕೇಸ್‌ಗಳನ್ನು ಜಡಿಯುವ ಪೊಲೀಸರು ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಕಲಾನಿ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಕೈಕಟ್ಟಿ ಕುಳಿತಿರುವುದು ಮಾತ್ರ ವಿಪರ್ಯಾಸ.

Most Read Articles

Kannada
English summary
Politician caught in Range Rover with fake registration plates – Victim or Cheat?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X