ತನ್ನ ಸಂಸ್ಥೆಯಲ್ಲಿ 25 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಬೆಂಝ್ ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ

ಕಳೆದ ವರ್ಷ ದೀಪಾವಳಿ ಹಬ್ಬದಲ್ಲಿ ತನ್ನ ನೌಕರರಿಗೆ ಕಾರು, ಮನೆ, ಒಡವೆಗಳನ್ನು ಉಡುಗೊರೆಯಾಗಿ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ವಜ್ರದ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿಯ ತನ್ನ ಸಂಸ್ಥೆಯಲ್ಲಿ ಸತತ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿರುವುದು ದೇಶದಲ್ಲಿ ಅಷ್ಟೇ ಅಲ್ಲದೇ ವಿದೇಶಿಯಲ್ಲೂ ಸುದ್ದಿಯಾಗಿದೆ.

ತನ್ನ ಸಂಸ್ಥೆಯಲ್ಲಿ 25 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಬೆಂಝ್ ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ

ತಮ್ಮ ನೌಕರರಿಗೆ ದುಬಾರಿ ಉಡುಗೊರೆಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿರುವ ಸೂರತ್ ಮೂಲದ ಉದ್ಯಮಿ ಧೋಲಾಕಿಯಾ ಇದೀಗ ಮತ್ತೊಮ್ಮೆ ತಮ್ಮ ಉದ್ಯೊಗಿಗಳಿಗೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ ಎಸ್‌ಯುವಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ತನ್ನ ಸಂಸ್ಥೆಯಲ್ಲಿ 25 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಬೆಂಝ್ ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ

ಸೂರತ್‌ನಲ್ಲಿ ವಜ್ರದ ವ್ಯಾಪಾರಿಯಾಗಿರುವ ಸಾವ್ಜಿಯವರು ತಮ್ಮ ಸಂಸ್ಥೆಯ ರಜತ ಮಹೋತ್ಸವನ್ನು ಅದ್ಧೂರಿ ಆಚರಿಸಿದ್ದು, ಈ ಸಂಭ್ರಮದಲ್ಲಿ ತಮ್ಮ ನೌಕರರಿಗೆ ರೂ.1 ಕೋಟಿ ಮೌಲ್ಯದ ಬೆಂಝ್ ಜಿಎಲ್ಎಸ್ ಎಸ್‌ಯುವಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ತನ್ನ ಸಂಸ್ಥೆಯಲ್ಲಿ 25 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಬೆಂಝ್ ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ

2011ರಿಂದಲೂ ದೀಪಾವಳಿ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಹರೇ ಕೃಷ್ಣ ಎಕ್ಸ್ ಪೋರ್ಟ್ಸ್ ಈ ರೀತಿ ನೌಕರರಿಗೆ ಬೋನಸ್ ನೀಡುತ್ತಾ ಬಂದಿದ್ದು, ಈ ಬಾರಿ 25 ವರ್ಷಗಳಿಂದ ಅದೇ ಸಂಸ್ಥೆಯಲ್ಲಿ ದುಡಿಯುತ್ತಿರುವ ಹಿರಿಯ ಸಿಬ್ಬಂದಿಗಳಿಗೆ ದುಬಾರಿ ಕಾರುಗಳನ್ನು ಸಾವ್ಜಿಯವರು ಉಡುಗೊರೆಯಾಗಿ ನೀಡಿದ್ದಾರೆ.

ತನ್ನ ಸಂಸ್ಥೆಯಲ್ಲಿ 25 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಬೆಂಝ್ ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ

ಹರೇ ಕೃಷ್ಣ ಎಕ್ಸ್ ಪೋರ್ಟ್ಸ್ ಸಂಸ್ಥೆಯ ನೀಲೇಶ್ ಜಾದಾ, ಮುಖೇಶ್ ಚಂದ್ಪರ್ ಮತ್ತು ಮಹೇಶ್ ಚಂದ್ಪರ್ ಅವರಿಗೆ ಈ ದುಬಾರಿ ಉಡುಗೊರೆಯನ್ನು ಪಡೆದುಕೊಂಡಿದ್ದು, ಅವರ ಕಾರ್ಯವೈಖರಿಯ ಆಧಾರದ ಮೇರೆಗೆ ನೌಕರರಿಗೆ ಉಡುಗೊರೆಗಳನ್ನು ನೀಡಲಾಗಿದೆ.

ತನ್ನ ಸಂಸ್ಥೆಯಲ್ಲಿ 25 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಬೆಂಝ್ ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ

ಕಳೆದ ವರ್ಷವೇ ಹರೇ ಕೃಷ್ಣ ಎಕ್ಸ್ ಪೋರ್ಟ್ಸ್ ಸಂಸ್ಥೆಯು ತನ್ನ ನೌಕರರಿಗೆ 200 ಫ್ಲ್ಯಾಟ್ ಹಾಗೂ 491 ಕಾರು ನೀಡಿದಲ್ಲದೇ ಉದ್ಯೋಗಿಗಳ ಪರ್ಫಾಮೆನ್ಸ್ ಇನ್ಸೆಂಟಿವ್ಸ್ ಎಂದು 50 ಕೋಟಿ ನೀಡಿತ್ತು. ಜೊತೆಗೆ ಉದ್ಯೋಗಿಗಳ ಯೋಗಕ್ಷೇಮಕ್ಕಾಗಿ ಕೋಟಿ ಕೋಟಿ ವೆಚ್ಚದಲ್ಲಿ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ.

ತನ್ನ ಸಂಸ್ಥೆಯಲ್ಲಿ 25 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಬೆಂಝ್ ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ

ಇದೀಗ ಮೂರು ಕೋಟಿ ವೆಚ್ಚದಲ್ಲಿ ಮರ್ಸಿಡಿಸ್ ಬೆಂಝ್ ನಿರ್ಮಾಣದ ಜಿಎಲ್ಎಸ್ ಕಾರುಗಳನ್ನು ಉಡುಗೊರೆಯಾಗಿ ನೀಡಲಾಗಿದ್ದು, ಅದ್ದೂರಿಯಾಗಿ ನಡೆದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ಪೆಷಲ್ ಗಿಫ್ಟ್ ಪಡೆದುಕೊಂಡ ಉದ್ಯೋಗಿಗಳ ಖುಷಿಗೆ ಪಾರವೇ ಇರಲಿಲ್ಲ.

MOST READ: ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕಥೆ ಏನು.?

ತನ್ನ ಸಂಸ್ಥೆಯಲ್ಲಿ 25 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಬೆಂಝ್ ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ

ಸದ್ಯ ಹರೇ ಕೃಷ್ಣ ಎಕ್ಸ್ ಪೋರ್ಟ್ಸ್ ಸಂಸ್ಥೆಯಲ್ಲಿ ಸುಮಾರು 5,500 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ 6 ಸಾವಿರ ಕೋಟಿಗೂ ಹೆಚ್ಚು ವ್ಯವಹಾರ ನಡೆಸುತ್ತಿದೆ. ವಜ್ರದ ವ್ಯಾಪಾರವಾಗಿರುವ ಹಿನ್ನೆಲೆ ಲಾಭಾಂಶ ಕೂಡಾ ಜೋರಾಗಿರುವುದಲ್ಲೇ ಅದೇ ಪ್ರಮಾಣದಲ್ಲಿ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ ದೊರೆಯುತ್ತಿರುವುದು ಮುಖ್ಯ ವಿಚಾರ.

ತನ್ನ ಸಂಸ್ಥೆಯಲ್ಲಿ 25 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಬೆಂಝ್ ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ

ಪ್ರಸ್ತುತ ಉಡುಗೊರೆ ಪಡೆದುಕೊಂಡಿರುವ ಮೂವರೂ ನೌಕರರು ಯುವಕರಾಗಿದ್ದಾಗಲೇ ಕಂಪನಿಗೆ ಸೇರ್ಪಡೆಗೊಂಡಿದ್ದರು ಎಂದು ಹೇಳಿರುವ ಸಾವ್ಜಿಯವರು, ಅವರ ಪರಿಶ್ರಮದಿಂದಲೇ ತಮ್ಮ ಸಂಸ್ಥೆಯು ಈ ಮಟ್ಟಕ್ಕೆ ಬೆಳೆಯುವಲ್ಲಿ ಕಾರಣವಾಗಿದೆ ಎಂದು ಕೊಂಡಾಡಿದ್ದಾರೆ.

ತನ್ನ ಸಂಸ್ಥೆಯಲ್ಲಿ 25 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಬೆಂಝ್ ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ

ಇನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.86.90 ಲಕ್ಷ ಬೆಲೆ ಹೊಂದಿರುವ ಬೆಂಝ್ ಜಿಎಲ್ಎಸ್ ಎಸ್‌ಯುವಿ ಕಾರುಗಳು ಆನ್‌ರೋಡ್ ಬೆಲೆ ಪ್ರಕಾರ ರೂ. 1.02 ಕೋಟಿ ಮೌಲ್ಯ ಹೊಂದಿದ್ದು, 3.0-ಲೀಟರ್ ವಿ6 ಡೀಸೆಲ್ ಎಂಜಿನ್‌ನೊಂದಿಗೆ ಅತ್ಯುತ್ತಮ ಎಸ್‌ಯುವಿ ಮಾದರಿಯಾಗಿದೆ.

ತನ್ನ ಸಂಸ್ಥೆಯಲ್ಲಿ 25 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಬೆಂಝ್ ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ

ಮಹೀಂದ್ರಾ ಕಾರ್ಯವನ್ನು ಮೆಚ್ಚಲೇಬೇಕು..!

ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಕ್ಕು ನೆಲೆಕಂಡುಕೊಳ್ಳಲು ಹೆಣಗಾಡುತ್ತಿದ್ದ ಅಸಹಾಯಕರ ನೆರವಿಗೆ ನಿಂತಿದ್ದ ಜೈಸಾಲ್ ಕೆ.ಪಿ ಎನ್ನುವ ಯುವಕನೊಬ್ಬ ಸಾವಿರಾರು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದ. ಸೇನೆಯ ಜೊತೆಗೆ ಕಳೆದ ಒಂದು ತಿಂಗಳಿನಿಂದ ಹಗಲು ರಾತ್ರಿ ಎನ್ನದೇ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಈ ಯುವಕ ಇದುವರೆಗೂ ಸಂತ್ರಸ್ತರಿಗೆ ಸೂರು ಹೊಂದಿಸಲು ಪರಿಶ್ರಮಪಡುತ್ತಿದ್ದಾನೆ. ಹೀಗಿರುವಾಗ ಈ ಯುವಕನಿಗೆ ಮಹೀಂದ್ರಾ ಸಂಸ್ಥೆಯು ಜನಸೇವೆಗಾಗಿ ವಿಶೇಷ ಉಡುಗೊರೆ ಒಂದನ್ನು ನೀಡುವ ಮೂಲಕ ಯವಕನ ನಿಸ್ವಾರ್ಥ ಸೇವೆಗೆ ಬೆನ್ನುತಟ್ಟಿದೆ.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸುವಾಗ ಬೋಟ್ ಹತ್ತಲು ಅಸಹಾಯಕರಿಗೆ ತನ್ನ ಬೆನ್ನನ್ನು ಮೆಟ್ಟಿಲಾಗಿ ಮಾಡಿದ್ದ ಜೈಸಾಲ್ ಕೆ.ಪಿ ದೇಶ ವಿದೇಶಿಗಳಲ್ಲೂ ಭಾರೀ ಚರ್ಚೆಗೆ ಕಾರಣನಾಗಿದ್ದ. ಇದನ್ನು ಕಂಡಿದ್ದ ಮಹೀಂದ್ರಾ ಸಂಸ್ಥೆಯು ಸಹ ಆ ಯುವಕನಿಗೆ ತನ್ನ ಕಡೆಯಿಂದ ಸಪ್ರೈಸ್‌ ಗಿಫ್ಟ್ ನೀಡಿದೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಮಹೀಂದ್ರಾ ಸಂಸ್ಥೆಯು ಕಳೆದ ವಾರ ಭಾರತದಲ್ಲಿ ಹೊಸದಾಗಿ ಮರಾಜೊ ಎಂಪಿವಿ ಕಾರನ್ನು ಬಿಡುಗಡೆಗೊಳಿಸಿದ್ದು, ಸುಮಾರು 11 ಲಕ್ಷ ಮೌಲ್ಯದ ಹೊಸ ಕಾರನ್ನು ಪ್ರವಾಹ ಸಂತ್ರಸ್ತರ ನೆರವಿಗೆ ನಿಂತಿದ್ದ ಜೈಸಾಲ್ ಕೆ.ಪಿ ಯವರಿಗೆ ಉಡುಗೊರೆಯಾಗಿ ನೀಡುವ ಮೂಲಕ ಯುವಕ ಹರಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಕೇರಳದ ಕಾಲಿಕಟ್‌ನಲ್ಲಿರುವ ಎರ್ಮಾ ಮಹೀಂದ್ರಾ ಡೀಲರ್ಸ್‌ನಲ್ಲಿ ಮರಾಜೊ ಹೊಸ ಕಾರನ್ನು ಜೈಸಾಲ್ ಕೆ.ಪಿ ಯವರಿಗೆ ಹಸ್ತಾಂತರ ಮಾಡಲಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಪ್ರವಾಹ ಪೀಡಿತರನ್ನು ಸುರಕ್ಷಿತ ಸ್ಥಳಕ್ಕೆ ತುಲುಪಿಸಲು ಮಾಡಿದ ಪ್ರಯತ್ನಕ್ಕೆ ಧನ್ಯವಾದ ಹೇಳಿದೆ.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಮಹೀಂದ್ರಾ ಸಂಸ್ಥೆಯು ಹೊಸ ಕಾರು ಬಿಡುಗಡೆ ವೇಳೆ ಹೊಸ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಮರಾಜೊ ಬಿಡುಗಡೆ ವೇಳೆ ಪ್ರವಾಹ ಪೀಡಿತ ಕೇರಳದಲ್ಲಿ ಅಸಹಾಯಕರ ರಕ್ಷಣೆಗಾಗಿ ನಿಸ್ವಾರ್ಥ ಸೇವೆ ಸಲ್ಲಿದ ಯುವಕನಿಗೆ ಮರಾಜೊ ಕಾರನ್ನು ಉಡುಗೊರೆಯಾಗಿ ನೀಡಿದ್ದು ಮತ್ತೊಂದು ವಿಶೇಷ ಎನ್ನಬಹುದು.

Most Read Articles

Kannada
Read more on off beat
English summary
Surat diamond trader gifts Mercedes-Benz SUVs worth Rs 3 crore to employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more