ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ್ರೆ ಇಲ್ಲಿ ತಪ್ಪು ಅಲ್ವಂತೆ..!!

ವಾಹನ ಸವಾರಿ ಮಾಡುವಾಗ ಮೊಬೈಲ್ ಬಳಸುತ್ತಿದ್ದರೆ ದಂಡ ವಿಧಿಸಿತ್ತಾರೆ ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ಈ ವಿಚಾರದ ಬಗ್ಗೆ ಹಲವಾರು ಸುದ್ಧಿಗಳು ಮತ್ತು ಪ್ರಕರಣಗಳು ದಾಖಲಾಗಿವೆ.

By Rahul Ts

ವಾಹನ ಸವಾರಿ ಮಾಡುವಾಗ ಮೊಬೈಲ್ ಬಳಸುತ್ತಿದ್ದರೆ ದಂಡ ವಿಧಿಸಿತ್ತಾರೆ ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ಈ ವಿಚಾರದ ಬಗ್ಗೆ ಹಲವಾರು ಸುದ್ಧಿಗಳು ಮತ್ತು ಪ್ರಕರಣಗಳು ದಾಖಲಾಗಿವೆ. ಆದರೆ ಕೇರಳದಲ್ಲಿ ವಾಹನ ಚಾಲನೆ ವೇಳೆ ಮೊಬೈಲ್ ಬಳಸುವುದು ತಪ್ಪಲ್ಲವೆಂಬ ಕಾನೂನು ಕೂಡಾ ಇದೆ ಅಂದ್ರೆ ನೀವು ನಂಬಲೇಬೇಕು.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ್ರೆ ಇಲ್ಲಿ ತಪ್ಪು ಅಲ್ವಂತೆ..!!

ಹೌದು.. ಕೇರಳದ ಸರ್ಕಾರದ ಪ್ರಕಾರ ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದರೆ ಅದು ಅಪರಾಧವಲ್ಲ ಎಂಬ ಮಾಹಿತಿಯು ಬಹಿರಂಗವಾಗಿದೆ. ಪ್ರಸ್ತುತ ಇಂತಹ ಚಟುವಟಿಕೆಯನ್ನು ಮಾಡುವ ವಾಹನ ಚಾಲಕರ ವಿರುದ್ಧ ಕೇರಳದ 118(ಇ) ಪೊಲೀಸ್ ಆಕ್ಟ್ ಕಾಯ್ದೆಯ ಆಡಿಯಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದವು.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ್ರೆ ಇಲ್ಲಿ ತಪ್ಪು ಅಲ್ವಂತೆ..!!

ಆದ್ರೆ ನಿಜವಾಗಿಯೂ ಈ ಕಾಯ್ದೆಯ ಪ್ರಕಾರ, ವಾಹನ ಚಾಲನೆಯ ವೇಳೆ ಮೊಬೈಲ್ ಬಳಸಿ ಸಾರ್ವಜನಿಕರಿಗೆ ಅಥವಾ ಸಾರ್ವಜನಿಕ ಸುರಕ್ಷತೆಯ ವೈಫಲ್ಯಕ್ಕೆ ಕಾರಣವಾದರೇ ಮಾತ್ರ ಇದು ಅನ್ವಯವಾಗಲಿದೆಯಂತೆ. ಅಂದರೆ ವಾಹನ ಚಲಾಯಿಸುವಾಗ ಸಾರ್ವಜನಿಕರಿಗೆ ತೊಂದರೆ ಮಾಡದೆ ಮೊಬೈಲ್ ಬಳಸಬಹುದಾಗಿದೆ.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ್ರೆ ಇಲ್ಲಿ ತಪ್ಪು ಅಲ್ವಂತೆ..!!

ಕೇರಳದ 118(ಇ) ಕಾಯ್ದೆಯಲ್ಲಿ ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸಿದಲ್ಲಿ ಈ ಕಾಯ್ದೆ ಅಡಿ ಪ್ರಕರಣ ದಾಖಲಿಸುವ ಅವಕಾಶ ಇಲ್ಲವೆಂದು ಇಲ್ಲಿನ ನ್ಯಾಯಲಯವು ಹೇಳಿದೆ. ಆದರೆ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದರೆ ಮಾತ್ರ ಇದು ಅನ್ವಯವಾಗುತ್ತದೆಯಂತೆ.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ್ರೆ ಇಲ್ಲಿ ತಪ್ಪು ಅಲ್ವಂತೆ..!!

ಹೀಗಿದ್ದರೂ 1988 ವಿಭಾಗದ 184 ಮೋಟಾರ್ ವಾಹನ ಕಾಯ್ದೆ ಪ್ರಕಾರ ಅಥವಾ ಐಪಿಸಿ 279 ವಿಭಾಗದಲ್ಲಿ ಅಪರಾಧಿಗಳನ್ನು ಬುಕ್ ಮಾಡಬಹುದಾಗಿದೆ. ಈ ವಿಭಾಗಗಳು ಅಪಾಯಕಾರಿ ಚಾಲನೆಯ ಬಗ್ಗೆ ಉದ್ದೇಶಿಸಲಾಗಿದೆ. ಅಧಿಕಾರಿಗಳ ಪ್ರಕಾರ ಒಂದು ಪ್ರಕರಣವನ್ನು ದಾಖಲು ಮಾಡಲು ಶಾಸನ ಸಭೆಯು ಮೊದಲು ಅಸ್ತಿತ್ವದಲ್ಲಿರುವ ತಿದ್ದುಪಡೆಯ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ್ರೆ ಇಲ್ಲಿ ತಪ್ಪು ಅಲ್ವಂತೆ..!!

ಮಾನವನ ಬುದ್ಧಿಶಕ್ತಿಯು ಒಂದೇ ಸಮಯದಲ್ಲಿ ವಾಹನ ಚಲಾವಣೆ ಮತ್ತು ಮೊಬೈಲ್‍‍ನಲ್ಲಿ ಮಾತನಾಡುವ ಎರಡು ಕೆಲವನ್ನು ಮಾಡಲಾರದು. ದೇಶದಲ್ಲಿ ರಸ್ತೆ ಸುರಕ್ಷತೆಯ ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ ಮತ್ತು ರಸ್ಥೆ ಅಪಘಾತಗಳನ್ನು ತಡೆಗಟ್ಟುವುದೆ ಅದರ ಉದ್ದೇಶವಾಗಿರುತ್ತದೆ.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ್ರೆ ಇಲ್ಲಿ ತಪ್ಪು ಅಲ್ವಂತೆ..!!

ಹೀಗಿರುವಾಗ ಕೇರಳದ ಕಾನೂನು ಹೇಗಿದೆ ಎಂದರೆ ನಾನು ರಸ್ತೆಯ ಮೇಲೆ ಕತ್ತಿಯನ್ನು ತೂಗಾಡಿಸುತ್ತಿದ್ದಲ್ಲಿ, ಯಾರೊಬ್ಬರ ತಲೆಯನ್ನು ಕತ್ತರಿಸುವ ತನಕವೂ ಅಧಿಕಾರಿಗಳು ನಿರೀಕ್ಷಿಸಬಹುದೇ ಎಂದು ಐಐಟಿ ದೆಹಲಿಯ ರೋಡ್ ಸೇಫ್ಟಿ ಮತ್ತು ಡ್ರೈವರ್ ಬಿಹೇವಿಯರ್‍‍ನ ಸಂಶೋಧಕರಾದ ಎನ್‍ಐ ಮಧುದೂದನ್ ನಾಯರ್ ಈ ಕುರಿತಾಗಿ ಮಾತನಾಡಿದ್ದಾರೆ.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ್ರೆ ಇಲ್ಲಿ ತಪ್ಪು ಅಲ್ವಂತೆ..!!

ಕೇರಳದಲ್ಲಿನ ಈ ಕಾಯಿದೆಯು ಪ್ರಾಚೀನ ಕಾಲ ರೀತಿ ನಡೆಯುತ್ತಿದ್ದು, ಅಪಘಾತಗಳನ್ನು ತಡೆಗಟ್ಟಲು ಅಪ್ಡೇಟ್ ಆಗಬೇಕಿದೆ. ಚಾಲಕರಿಗೆ ಅಷ್ಟು ಮುಖ್ಯವಾದ ಕರೆ ಅಥವಾ ಸಂದೇಶವನ್ನು ಸ್ವೀಕರಿಸಲೇಬೇಕೆಂಬ ಉದ್ದೇಶವಿದ್ದಲ್ಲಿ ನಿಮ್ಮ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ನಿಮ್ಮ ಕಾರ್ಯದಲ್ಲಿ ತೊಡಗಿಕೊಳ್ಳಬಹುದು.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ್ರೆ ಇಲ್ಲಿ ತಪ್ಪು ಅಲ್ವಂತೆ..!!

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಹೊಸ ಕಾರಿನ ಲೈಫ್ ಟ್ಯಾಕ್ಸ್ ಕಟ್ಟೊದಕ್ಕೆ ಮುನ್ನ ಈ ವಿಚಾರ ಗೊತ್ತಿರಲಿ...

ಡ್ರೈವಿಂಗ್ ಲೈಸೆನ್ಸ್ ವಿಚಾರದಲ್ಲಿ ಯುವ ಸಮುದಾಯಕ್ಕೊಂದು ಸಿಹಿ ಸುದ್ದಿ...

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

Most Read Articles

Kannada
English summary
No Fine For Using Phone While Driving In Kerala.
Story first published: Friday, May 18, 2018, 12:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X