ಡೀಲರ್‍‍ಗಳ ಕೈ ಸೇರಿದ ಟೊಯೊಟಾ ಯಾರಿಸ್ ಕಾರುಗಳು.. ಬಿಡುಗಡೆ ಯಾವಾಗ?

2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿರುವ ಟೊಯೊಟಾ ಯಾರಿಸ್ ಕಾರುಗಳು ಬಿಡುಗಡೆಗೆ ಸಜ್ಜುಗೊಂಡಿದೆ.

By Rahul Ts

2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿರುವ ಟೊಯೊಟಾ ಯಾರಿಸ್ ಕಾರುಗಳು ಬಿಡುಗಡೆಗೆ ಸಜ್ಜುಗೊಂಡಿದ್ದು, ಮೇ 18ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಖಚಿತ ಎನ್ನಲಾಗಿದೆ.

ಡೀಲರ್‍‍ಗಳ ಕೈ ಸೇರಿದ ಟೋಯೊಟಾ ಯಾರಿಸ್ ಕಾರುಗಳು.. ಬಿಡುಗಡೆ ಯಾವಾಗ?

ಇನ್ನು ಹೊಸ ಯಾರಿಸ್ ಕಾರುಗಳು ಈಗಾಗಲೆ ಡೀಲರ್‍‍ಗಳ ಕೈಸೇರಿದ್ದು, ಟೊಯೊಟಾ ಸಂಸ್ಥೆಯು ಯಾರಿಸ್ ಸೆಡಾನ್ ಕಾರುಗಳನ್ನು ಮೇ 18ರಂದು ಬಿಡುಗಡೆಗೊಳಿಸಲಿದ್ದು, ಖರೀದಿಗಾಗಿ ಏಪ್ರಿಲ್ 22ರಿಂದ ರೂ. 50 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾಡಬಹುದಾಗಿದೆ.

ಡೀಲರ್‍‍ಗಳ ಕೈ ಸೇರಿದ ಟೋಯೊಟಾ ಯಾರಿಸ್ ಕಾರುಗಳು.. ಬಿಡುಗಡೆ ಯಾವಾಗ?

ಸೆಡಾನ್ ಕಾರುಗಳಲ್ಲೇ ವಿಶೇಷ ವಿನ್ಯಾಸಗಳನ್ನು ಹೊಂದಿರುವ ಯಾರಿಸ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಸಿಯಾಜ್, ಸ್ಕೋಡಾ ರ‍್ಯಾಪಿಡ್, ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಇದು ತೀವ್ರ ಪೈಪೋಟಿ ನೀಡಲಿದ್ದು, ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ವಿಶ್ವಾಸದಲ್ಲಿದೆ.

ಡೀಲರ್‍‍ಗಳ ಕೈ ಸೇರಿದ ಟೋಯೊಟಾ ಯಾರಿಸ್ ಕಾರುಗಳು.. ಬಿಡುಗಡೆ ಯಾವಾಗ?

ಹೊಸ ಕಾರಿನ ವೈಶಿಷ್ಟ್ಯತೆ

ವೃತ್ತಾಕಾರದ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್ ಹೊಂದಿರುವ ಯಾರಿಸ್, ಎಲ್ಇಡಿ ಡೇ ಟೈಮ್ ಲೈಟ್, ಫ್ರಂಟ್ ಬಂಪರ್, ಫುಲ್ ಎಲ್ಇಡಿ ಟೈಲ್ ಲೈಟ್ಸ್, ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಸಂಜ್ಞೆಗಳ ಮೂಲಕ ನಿಯಂತ್ರಿಸಬಹುದಾದ ತಾಂತ್ರಿಕ ಪ್ರತಿಫಲಕವನ್ನು ನೀಡಲಾಗಿದೆ.

ಡೀಲರ್‍‍ಗಳ ಕೈ ಸೇರಿದ ಟೋಯೊಟಾ ಯಾರಿಸ್ ಕಾರುಗಳು.. ಬಿಡುಗಡೆ ಯಾವಾಗ?

ಅಲ್ಲದೇ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಮೂರು ನೆಕ್ ರೆಸ್ಟ್ರೈಂಟ್ಸ್ ಅನ್ನು ಅಡ್ಜಸ್ಟ್ ಮಾಡಿಕೊಳ್ಳಬಹುದಾದ 60:40 ಸ್ಪ್ಲಿಟ್ ರೀರ್ ಸೀಟ್ಸ್, ರೂಫ್ ಮೌನ್ಟೆಡ್ ರೀರ್ ಏರ್-ಕಾನ್, 7ಏರ್‍‍ಬ್ಯಾಗ್ಸ್, ಆಲ್ ವೀಲ್ ಡಿಸ್ಕ್ ಬ್ರೇಕ್, ಹಿಲ್ ಸ್ಟಾರ್ಟ್ ಅಸ್ಸಿಸ್ಟ್, ಎಬಿಎಸ್, ಇಬಿಡಿ ಮತ್ತು ಇಎಸ್‍ಪಿ ವೈಶಿಷ್ಟ್ಯತೆಗಳನ್ನು ಪಡೆದಿವೆ.

ಡೀಲರ್‍‍ಗಳ ಕೈ ಸೇರಿದ ಟೋಯೊಟಾ ಯಾರಿಸ್ ಕಾರುಗಳು.. ಬಿಡುಗಡೆ ಯಾವಾಗ?

ಎಂಜಿನ್ ಸಾಮರ್ಥ್ಯ

ಯಾರಿಸ್ ಕಾರು ಮಾದರಿಗಳು 1.5-ಲೀಟರ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿರುವ ಟೊಯೊಟಾ, 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಮತ್ತು 7-ಸ್ಟೆಪ್ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿರಲಿವೆ.

ಡೀಲರ್‍‍ಗಳ ಕೈ ಸೇರಿದ ಟೋಯೊಟಾ ಯಾರಿಸ್ ಕಾರುಗಳು.. ಬಿಡುಗಡೆ ಯಾವಾಗ?

ಹೊಸ ಟೊಯೊಟಾ ಕಾರುಗಳು ಕರ್ನಾಟಕದ ಪ್ಲಾಂಟ್‍‍ನಲ್ಲಿ ತಯಾರಾಗುತಿದ್ದು, ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ 8.4 ಲಕ್ಷದಿಂದ ಆರಂಭಿಕ ಬೆಲೆಯನ್ನು ನಿಗದಿಪಡಿಸಲಾಗಿದೆ.

ಡೀಲರ್‍‍ಗಳ ಕೈ ಸೇರಿದ ಟೋಯೊಟಾ ಯಾರಿಸ್ ಕಾರುಗಳು.. ಬಿಡುಗಡೆ ಯಾವಾಗ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಸ್‌ಯುವಿ ಆವೃತ್ತಿಗಳಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಟೊಯೊಟಾ ಸಂಸ್ಥೆಯು ಸೆಡಾನ್ ವಿಭಾಗದಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುವ ನಿಟ್ಟಿನಲ್ಲಿ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು, ಯಾರಿಸ್ ಹೊಸ ಸಂಚಲನ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕಾರುಗಳಿಗೆ ಸದ್ಯದಲ್ಲೇ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಕಡ್ಡಾಯವಂತೆ..!!

ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...

ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ....

ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದಲೇ ಲಂಚದ ಆಮೀಷ...

ಬ್ಯಾಡ್ಜ್ ವಿಚಾರದಲ್ಲಿ ಕಾರು ಚಾಲಕರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ....

Most Read Articles

Kannada
Read more on toyota sedan
English summary
Toyota Yaris arrives at dealerships.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X