ವರ್ಷದ ಬೆಸ್ಟ್ ಕಾರ್ ಅವಾರ್ಡ್ ತನ್ನದಾಗಿಸಿಕೊಂಡ ವೋಲ್ವೊ ಎಕ್ಸ್ ಸಿ60....

Written By: Rahul TS

ಸ್ವಿಡನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ವೋಲ್ವೊ ತನ್ನ ಎಕ್ಸ್ ಸಿ60 ಕಾರನ್ನು ಪರಿಚಯಿಸುವ ಮೂಲಕ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಹಿನ್ನೆಲೆ ವರ್ಷದ ಬೆಸ್ಟ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವರ್ಷದ ಬೆಸ್ಟ್ ಕಾರ್ ಅವಾರ್ಡ್ ತನ್ನದಾಗಿಸಿಕೊಂಡ ವೋಲ್ವೊ ಎಕ್ಸ್ ಸಿ60...

ಈ ಹಿಂದೆ ನಾರ್ಥ್ ಯುಟಿಲಿಟಿ ಅವಾರ್ಡ್ ಮತ್ತು ಯೂರೋಪಿಯನ್ ಕಾರ್ ಆಫ್ ದಿ ಇಯರ್ ಎಂಬ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದ ವೋಲ್ವೊ ಎಕ್ಸ್ ಸಿ60 ಕಾರುಗಳು ಇದೀಗ ಭಾರತೀಯ ಮಾರುಕಟ್ಟೆಯಲ್ಲೂ ಉತ್ತಮ ಮಾದರಿಯ ಕಾರು ಅವಾರ್ಡ್‌ ತನ್ನದಾಗಿಸಿಕೊಂಡಿದೆ.

ವರ್ಷದ ಬೆಸ್ಟ್ ಕಾರ್ ಅವಾರ್ಡ್ ತನ್ನದಾಗಿಸಿಕೊಂಡ ವೋಲ್ವೊ ಎಕ್ಸ್ ಸಿ60...

ಇನ್ನು 2017ರ ಅವಧಿಗೆ ಜಾಗ್ವಾರ್ ಎಫ್ ಫೇಸ್ ಕಾರು ಪ್ರಪಂಚದ ಬೆಸ್ಟ್ ಕಾರ್ ಮಾಡೆಲ್ ಆಗಿ ಆಯ್ಕೆಯಾಗಿತ್ತು. ಇದೀಗ 2018ರ ಅವಧಿಗೆ ವೋಲ್ವೋ ಎಕ್ಸ್ ಸಿ60 ಎಸ್‍ಯುವಿ ಕಾರ್ ಅನ್ನು ಆಯ್ಕೆ ಮಾಡಲಾಗಿದ್ದು, ಎರಡನೇ ಬಾರಿಗೆ ಎಸ್‍ಯುವಿ ಸರಣಿಯಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.

ವರ್ಷದ ಬೆಸ್ಟ್ ಕಾರ್ ಅವಾರ್ಡ್ ತನ್ನದಾಗಿಸಿಕೊಂಡ ವೋಲ್ವೊ ಎಕ್ಸ್ ಸಿ60...

ಇನ್ನು 2017ರಲ್ಲಿ ಬಿಡುಗಡೆಗೊಂಡಿದ್ದ ವೋಲ್ವೊ ಎಕ್ಸ್ ಸಿ60 ಕಾರುಗಳು ಸ್ಕೇಲಬಲ್ ಪ್ರಾಡಕ್ಟ್ ಆರ್ಕಿಟೆಕ್ಚುರ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದ್ದು, ವೋಲ್ವೊ ಎಕ್ಸ್ ಸಿ90 ಎಸ್‍ಯುವಿ ಕಾರಿನಿಂದ ಪ್ರೇರಿತಗೊಂಡಿದೆ.

ವರ್ಷದ ಬೆಸ್ಟ್ ಕಾರ್ ಅವಾರ್ಡ್ ತನ್ನದಾಗಿಸಿಕೊಂಡ ವೋಲ್ವೊ ಎಕ್ಸ್ ಸಿ60...

ಎಕ್ಸ್ ಸಿ60 ಕಾರಿನ ಮುಂಭಾಗವು ವೋಲ್ವೊ ಸಂಸ್ಥೆಯ ಆಕರ್ಷಕ ಲೋಗೋ ಹೊಂದಿದ್ದು, ಮಲ್ಟಿ ಸ್ಲಾಟ್ ಗ್ರಿಲ್, ಎಲ್ಇಡಿ ಹೆಡ್‍‍ಲ್ಯಾಂಪ್ಸ್ ಮತ್ತು ಥೋರ್ಸ್ ಹ್ಯಾಮರ್ ಎಲ್ಇಡಿ ಡಿಆರ್‍ಎಲ್‍ನಿಂದ ಸಜ್ಜುಗೊಂಡಿದೆ.

ವರ್ಷದ ಬೆಸ್ಟ್ ಕಾರ್ ಅವಾರ್ಡ್ ತನ್ನದಾಗಿಸಿಕೊಂಡ ವೋಲ್ವೊ ಎಕ್ಸ್ ಸಿ60...

ಇದಲ್ಲದೇ ಈ ಕಾರು ಆಕರ್ಷಕವಾಗಿ ಕಾಣುವ ಎಲ್ಇಡಿ ಟೈಲ್‍ಲೈಟ್, ರೂಫ್ ಮೌನ್ಟೆಡ್ ಸ್ಪಾಯ್ಲರ್ ಮತ್ತು ಡ್ಯುಯಲ್ ಎಕ್ಸಾಸ್ಟ್ ಪೈಪ್ ಪಡೆದ ರಿಯರ್ ಬಂಪರ್‍‍ಗಳಿಂದ ವಿನ್ಯಾಸಗೊಂಡಿದೆ.

ವರ್ಷದ ಬೆಸ್ಟ್ ಕಾರ್ ಅವಾರ್ಡ್ ತನ್ನದಾಗಿಸಿಕೊಂಡ ವೋಲ್ವೊ ಎಕ್ಸ್ ಸಿ60...

ಕಾರಿನ ಒಳಭಾಗದಲ್ಲಿ ಮುಂದಿನ ಸೀಟ್‍ಗಳಿಗೆ ಮಸಾಜ್ ಕಾರ್ಯ ನೀಡಬಲ್ಲ ಆಯ್ಕೆಯನ್ನು ನೀಡಲಾಗಿದ್ದು, ಬ್ಲೈಂಡ್ ಸ್ಪಾಟ್ ಅಸ್ಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಅಟಾನಮಸ್ ಬ್ರೇಕಿಂಗ್ ಸಿಸ್ಟಂ, ಸೆಮಿ ಆಟೋಮ್ಯಾಟಿಕ್ ಪಾರ್ಕಿಂಗ್ ಮತ್ತು ಲೇನ್ ಡಿಪಾರ್ಚರ್ ವಾರ್ನಿಂಗ್‍‍ನಂತಹ ಹಲವಾರು ಡ್ರೈವಿಂಗ್ ಅಸ್ಸಿಸ್ಟಂಟ್‍‍ಗಳಂತಹ ವೈಶಿಷ್ಟ್ಯತೆಗಳನ್ನು ಹೊಂದಿವೆ.

ವರ್ಷದ ಬೆಸ್ಟ್ ಕಾರ್ ಅವಾರ್ಡ್ ತನ್ನದಾಗಿಸಿಕೊಂಡ ವೋಲ್ವೊ ಎಕ್ಸ್ ಸಿ60...

ಜಾಗತಿಕವಾಗಿ ವೋಲ್ವೊ ಎಕ್ಸ್ ಸಿ60 ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಲಭ್ಯವಿದ್ದು, ಭಾರತದಲ್ಲಿ ಡೀಸೆಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಇದರ 2 ಲೀಟರ್ ನಾಲ್ಕು ಸಿಲಿಂಡರ್, ಟ್ವಿನ್ ಟರ್ಬೋಚಾರ್ಜ್ಡ್ ಡೀಸೆಲ್ ಏಂಜಿನ್ 233-ಬಿಹೆಚ್‍ಪಿ ಮತ್ತು 480-ಎನ್ಎಂ ಟಾರ್ಕ್‍ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿರುವಂತಹ ಎಂಜಿನ್ ಅನ್ನು 8 ಸ್ಪೀಡ್ ಗೇರ್‍‍ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಮಿಷನ್‍‍ನೊಂದಿಗೆ ಜೋಡಿಸಲಾಗಿದೆ.

ವರ್ಷದ ಬೆಸ್ಟ್ ಕಾರ್ ಅವಾರ್ಡ್ ತನ್ನದಾಗಿಸಿಕೊಂಡ ವೋಲ್ವೊ ಎಕ್ಸ್ ಸಿ60...

ಹಲವು ಬಗೆಯ ವೈಶಿಷ್ಟ್ಯತೆಗಳನ್ನು ಪಡೆದ ವೋಲ್ವೊ ಎಕ್ಸ್ ಸಿ60 ಕಾರು 2017ರಲ್ಲಿ ಸೇಫೆಸ್ಟ್ ಕಾರಾಗಿ ನೇಮಿತಗೊಂಡಿದೆ. ಎಕ್ಸ್ ಶೋರಂ ದೆಹಲಿಯ ಪ್ರಕಾರ ರೂ. 55.90 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಮಾರುಕಟ್ಟೆಯಲ್ಲಿ ಆಡಿ ಕ್ಯೂ5, ಮರ್ಸಿಡಿಸ್ ಬೆಂಜ್ ಜಿಎಲ್‍ಸಿ ಮತ್ತು ಬಿಎಂಡಬ್ಲ್ಯು ಎಕ್ಸ್3 ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ..

2. ರಾಜಧಾನಿಯಲ್ಲಿ ಇನ್ಮುಂದೆ ವಾಹನಗಳಿಗೆ ಬಿಎಸ್ 6 ಇಂಧನ ಪೂರೈಕೆ..

3. ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ..

4. ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

5. ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಹೊಸ ಮಾರ್ಗವೇ ವೆಲ್ವ್ ಟೆಕ್ನಾಲಜಿ ಬಳಕೆ..!!

Read more on volvo luxury car
English summary
Volvo XC60 Wins The World Car Of The Year 2018 Award.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark