ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರೋಹಿತ್ ಶೆಟ್ಟಿ

ಬ್ಲಾಕ್ ಬಸ್ಟರ್ ಸಿನಿಮಾ ಮೂಲಕ ಸೌಂಡ್ ಮಾಡುತ್ತಿರುವ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ, ಒಂದರ ಮೇಲೊಂದರಂತೆ ಹಿಟ್ ಸಿನಿಮಾ ನೀಡುತ್ತಿದ್ದಾರೆ. ಕೋಟಿ ಕೋಟಿ ಸಂಪಾದಿಸುತ್ತಿರುವ ಬಹುಬೇಡಿಕೆಯ ನಿರ್ದೇಶಕ ರೋಹಿತ್ ಶೆಟ್ಟಿಯವರಿಗೆ ಕಾರುಗಳ ಕ್ರೇಜ್ ಹೆಚ್ಚು. ಇವರು ಇತ್ತೀಚೆಗೆ ಹೊಸ ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಖರೀದಿಸಿದ್ದಾರೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರೋಹಿತ್ ಶೆಟ್ಟಿ

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಯವರ ಬಳಿ ಹಲವಾರು ಐಷಾರಾಮಿ ಮತ್ತು ದುಬಾರಿ ಕಾರುಗಳಿವೆ. ಅವರ ಬಳಿ ಇರುವ ದುಬಾರಿ ಮತ್ತು ಐಶಾರಾಮಿ ಕಾರುಗಳಲ್ಲಿ ಫೋರ್ಡ್ ಮುಸ್ತಾಂಗ್ ಜಿಟಿ, ಮಾಸೆರೋಟಿ ಗ್ರ್ಯಾನ್‌ಟ್ಯುರಿಸ್ಮೊ, ಲ್ಯಾಂಡ್ ರೋವರ್ ರೇಂಜ್ ರೋವರ್, ಬಿಎಂಡಬ್ಲ 7 ಸೀರಿಸ್ ಆಗಿದೆ. ಇದೇ ಪಟ್ಟಿಗೆ ಇತ್ತೀಚಿಗೆ ಖರೀದಿಸಿದ ಲ್ಯಾಂಬೊರ್ಗಿನಿ ಉರುಸ್ ಹೊಸ ಸೇರ್ಪಡೆಯಾಗಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರೋಹಿತ್ ಶೆಟ್ಟಿ

ಲ್ಯಾಂಬೊರ್ಗಿನಿ ಉರುಸ್ ಭಾರತದಲ್ಲಿ ಇಟಾಲಿಯನ್ ಉತ್ಪಾದಕರು ತಯಾರಿಸಿದ ಅತ್ಯಂತ ಯಶಸ್ವಿ ವಾಹನಗಳಲ್ಲಿ ಒಂದಾಗಿದೆ. ದೇಶದಲ್ಲಿ ಈಗಾಗಲೇ 50 ಕ್ಕೂ ಹೆಚ್ಚು ಯುನಿ‍ಟ್‍ಗಳನ್ನು ವಿತರಿಸಲಾಗಿದೆ ಮತ್ತು ಹೆಚ್ಚಾಗಿ ಸೆಲಬ್ರಿಟಿ‍ಗಳು ಖರೀದಿಸಿದ್ದಾರೆ. ರಣವೀರ್ ಸಿಂಗ್ ಇತ್ತೀಚೆಗೆ ಉರುಸ್ ಕಾರನ್ನು ಖರೀದಿಸಿದ್ದಾರೆ. ಅಂಬಾನಿಯವರು 2018ರ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಮೊದಲ ಉರುಸ್ ಅನ್ನು ಖರೀದಿಸಿದ್ದರು.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರೋಹಿತ್ ಶೆಟ್ಟಿ

ಭಾರತದಲ್ಲಿ ಲ್ಯಾಂಬೊರ್ಗಿನಿ ಉರುಸ್ ಎಸ್‍‍ಯುವಿಯ 50 ವಾಹನಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ಕಡಿಮೆ ಸಮಯದಲ್ಲಿ ವೇಗವಾಗಿ 50 ವಾಹನಗಳ ಮಾರಾಟವಾದ ಲ್ಯಾಂಬೊರ್ಗಿನಿ ಕಂಪನಿಯ ಮೊದಲ ಐಷಾರಾಮಿ ಎಸ್‍‍ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರೋಹಿತ್ ಶೆಟ್ಟಿ

ರೋಹಿತ್ ಶೆಟ್ಟಿಯವರು ಮ್ಯುಸ್ತಾಂಗ್ ಜಿಟಿ ಕಾರನ್ನು ಖರೀದಿಸಿ ಕಾರ್ಯಕ್ಷಮತೆ ಮತ್ತು ವಿನ್ಯಾಸದ ಮಾರ್ಪಡುಗಳನ್ನು ಮಾಡಿದ್ದಾರೆ. ಇವರು ಲ್ಯಾಂಡ್ ರೋವರ್ ರೇಂಜ್ ರೋವರ್‍ ಎಸ್‍‍ಯು‍ವಿಯನ್ನು ಪ್ರತಿದಿನ ಸಂಚರಿಸಲು ಬಳಸುತ್ತಾರೆ. ಆಟೊಮೊಬಿಲಿ ಆರ್ಡೆಂಟ್ ಶೇರ್ ಮಾಡಿರುವ ಚಿತ್ರದಲ್ಲಿ ಕಾಣುವಂತೆ ಈ ಕಾರು ಕ್ಲಾಸಿ ಜಿಯಲ್ಲೊ ಆಜ್ ಯೆಲ್ಲೊ ಬಣ್ಣದಲ್ಲಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರೋಹಿತ್ ಶೆಟ್ಟಿ

ಇದು ಲ್ಯಾಂಬೊರ್ಗಿನಿ ಸ್ಪೋಟ್ಸ್ ಕಾರುಗಳಿಂದ ತನ್ನ ಬ್ರ್ಯಾಂಡ್ ಹೆಚ್ಚು ಜನಪ್ರಿಯಗೊಂಡಿದೆ. ಉರುಸ್ ಮೊದಲ ಆಧುನಿಕ ದಿನಗಳ ಲ್ಯಾಂಬೊರ್ಗಿನಿ ಎಸ್‍ಯು‍ವಿ ಮತ್ತು ಅದರ ಶ್ರೇಣಿಯ ಸ್ಪೋಟ್ಸ್ ಕಾರುಗಳಿಂದ ಪ್ರೇರಣೆ ಪಡೆದುಕೊಂಡಿದೆ. ಲ್ಯಾಂಬೊರ್ಗಿನಿ ಉರುಸ್ ಕಾರಿಗೆ ಎಕ್ಸ್ ಶೋರೂಂ ಪ್ರಕಾರ ರೂ.3.10 ಕೋಟಿ ಬೆಲೆಯನ್ನು ಹೊಂದಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರೋಹಿತ್ ಶೆಟ್ಟಿ

ಬೆಲೆಗಳು ಹೆಚ್ಚುವರಿ ಫೀಚರ್‍‍ಗಳನ್ನು ಅವಲಂಬಿಸಿವೆ. ಲ್ಯಾಂಬೊರ್ಗಿನಿ ಉರುಸ್ ಎಸ್‍‍ಯುವಿಯಲ್ಲಿ 4.0 ಲೀಟರಿನ ವಿ8 ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,500 ಆರ್‍‍ಪಿ‍ಎಂನಲ್ಲಿ 641 ಬಿ‍‍ಹೆಚ್‍‍ಪಿ ಪವರ್ ಹಾಗೂ 850 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರೋಹಿತ್ ಶೆಟ್ಟಿ

ಈ ಎಸ್‍‍ಯುವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಈ ಎಸ್‍‍ಯುವಿಯ ಎಂಜಿನ್‍‍ನಲ್ಲಿ 8 ಸ್ಫೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಸ್‍‍ಯುವಿ ಅಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿದೆ, ಇದು ಮುಂಭಾಗದ ಟಯರ್‍‍‍ಗಳಿಗೆ ಶೇ.40 ಪವರ್ ಮತ್ತು ಹಿಂಭಾಗದ ಟಯರ್‍‍ಗಳಿಗೆ ಶೇ.60ರಷ್ಟು ಪವರ್ ಕಳುಹಿಸುತ್ತದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರೋಹಿತ್ ಶೆಟ್ಟಿ

ಈ ಎಸ್‍‍ಯು‍ವಿಯು 2.2 ಟನ್ ಭಾರವನ್ನು ಹೊಂದಿದೆ. ಇದರ ಹೆಚ್ಚು ಪವರ್ ಮತ್ತು ಎಡಬ್ಲ್ಯುಡಿ ಸಿಸ್ಟಂ ಅನ್ನು ಹೊಂದಿರುವುದರಿಂದ ಕೇವಲ 3.6 ಸೆಕೆಂಡುಗಳಲ್ಲಿ ಪ್ರತಿಗಂಟೆಗೆ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಎಸ್‍‍ಯು‍ವಿಯಲ್ಲಿ ಕಾರ್ಬನ್-ಸೆರಾಮಿಕ್ ಫ್ರಂಟ್ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸಲಾಗಿದೆ. ಉರುಸ್‍‍ನಲ್ಲಿರುವ 440 ಎಂಎಂ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಿದ್ದಾರೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರೋಹಿತ್ ಶೆಟ್ಟಿ

ಲ್ಯಾಂಬೊರ್ಗಿನಿ ಉರುಸ್ ಎಸ್‍ಯು‍ವಿಯ ಪವರ್ ಅನ್ನು ಮತ್ತಷ್ಟು ಹೆಚ್ಚಿಸಿ ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಲ್ಯಾಂಬೊರ್ಗಿನಿ ಉರುಸ್ ಬಿಡುಗಡೆಯಾದ ಬಳಿಕ ಪೋರ್ಷೆ ಕೇಯೆನ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಬೆಂಟ್ಲೆ ಬೆಂಟೇಗಾ ಎಸ್‍‍ಯು‍ವಿಗಳಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
English summary
Bollywood director Rohit Shetty’s latest ride is a Lamborghini Urus - Read in Kannada
Story first published: Wednesday, November 6, 2019, 12:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X