ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಆಟೋಮೊಬೈಲ್ ಕ್ಷೇತ್ರದಲ್ಲಿ ತೀವ್ರ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಉತ್ಪಾದಿತ ವಾಹನಗಳ ಮಾರಾಟ ಪಾತಾಳಕ್ಕೆ ಕುಸಿದಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ವಾಹನ ಉತ್ಪಾದನಾ ಕಂಪನಿಗಳು ಭರ್ಜರಿ ರಿಯಾಯಿತಿ ದರವನ್ನು ಘೋಷಣೆ ಮಾಡಿದೆ.

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಅದರೊಂದಿಗೆ 2020ರ ಎಪ್ರಿಲ್‍ನಿಂದ ಬಿಎಸ್-6 ನಿಯಮ ಜಾರಿಗೆ ಬರುವುದರಿಂದ ಈಗ ಗೋಡೌನಲ್ಲಿರುವ ವಾಹನಗಳನ್ನು ಮಾರಾಟ ಮಾಡಿಕೊಳ್ಳುವ ಅನಿವಾರ್ಯತೆ ವಾಹನ ಕಂಪನಿಗಳಿಗಿದೆ. ಹೀಗಾಗಿ ಬಹುತೇಕ ಕಂಪನಿಗಳು ಗ್ರಾಹಕರಿಗೆ ಭರ್ಜರಿ ಆಫರ್ ಅನ್ನು ನೀಡುತ್ತಿದೆ. ಇದೇ ಸಾಲಿನಲ್ಲಿ ಫಾರ್ಡ್ ಕಂಪನಿಯು ತನ್ನ ಕಾರುಗಳಲ್ಲಿ ಭರ್ಜರಿ ಆಫರ್ ಅನ್ನು ನೀಡಿದೆ. ಫಾರ್ಡ್ ಕಂಪನಿಯ ಯಾವುದೆಲ್ಲಾ ಕಾರಿಗೆ ಎಷ್ಟು ಆಫರ್ ಅಥವಾ ರಿಯಾಯಿತಿ ಘೋಷಿಸಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಫೋರ್ಡ್ ಫಿಗೋ

ಪೋರ್ಡ್ ಕಂಪನಿಯ ಫಿಗೋ ಹ್ಯಾಚ್‍‍ಬ್ಯಾಕ್ ಕಾರಿಗೆ ರೂ. 15,000 ಸಾವಿರ ರಿಯಾಯಿತಿಯನ್ನು ಘೋಷಿಸಿದೆ. ಫಿಗೋ ಪೆಟ್ರೋಲ್ ಹಾಗೂ ಡೀಸೆಲ್ ರೂಪಾಂತರಗಳಲ್ಲಿಯೂ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ 95 ಬಿಎಚ್‍ಪಿ ಪವರ್ ಮತ್ತು 120 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದ. ಫಿಗೋ 1.5 ಲೀಟರ್ ಪೆಟ್ರೋಲ್ ಎಂಜಿನ್ 121 ಬಿಎಚ್‍‍ಪಿ ಮತ್ತು 150 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಫಿಗೋ ಡೀಸೆಲ್ ಎಂಜಿನ್ ರೂಪಾಂತರದಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ 99 ಬಿಎಚ್‍‍ಪಿ ಪವರ್ ಮತ್ತು 215 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಂಜಿನ್‍‍ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ. ಪ್ರಸುತ್ತವಾಗಿ ರಿಯಾಯಿತಿಯನ್ನು ಸೇರಿಸದೆ ಭಾರತದ ಎಕ್ಸ್ ಶೋ ರೂಂ ಪ್ರಕಾರ ಫೋರ್ಡ್ ಫಿಗೋ ಕಾರಿನ ಬೆಲೆ 5.23 ಲಕ್ಷ ದಿಂದ 7.70 ಲಕ್ಷದವರೆಗೆ ಇದೆ.

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಫೋರ್ಡ್ ಆಸ್ಪೈರ್

ಫೋರ್ಡ್ ಕಂಪನಿಯ ಆಸ್ಪೈರ್ ಕಾರಿಗೆ 30,000 ಸಾವಿರ ರಿಯಿತಿ ಹೊಂದಿದ್ದು, ಎಕ್ಸ್​ಚೇಂಚ್ ಅಥವಾ ಎಕ್ಸ್​ಚೇಂಚ್ ಬೋನಸ್ 15,000 ಸಾವಿರವಿದೆ. ಹಾಗೆ ಕಾರ್ಪೊರೆಟ್ ರಿಯಾಯಿತಿ ರೂ.4,000 ಹೊಂದಿದ್ದು, ಈ ರಿಯಾಯಿತಿ ಪೋರ್ಡ್ ಆಸ್ಪೈರ್ ಪೆಟ್ರೋಲ್, ಡೀಸೆಲ್, ಸಿಎನ್‍ಜಿ ರೂಪಾಂತರಗಳಲ್ಲಿ ಲಭ್ಯವಿದೆ. ಈ ಕಾರು 7 ಪೆಟ್ರೋಲ್, 6 ಡೀಸೆಲ್ ಮತ್ತು ಸಿ‍ಎನ್‍‍ಜಿ ರೂಪಾಂತರಗಳಲ್ಲಿ ಇದೆ.

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಆಸ್ಪೈರ್ 1.2 ಲೀಟರ್ ಪೆಟ್ರೋಲ್ ಎಂಜಿನ್ 95 ಬಿಎಚ್‍‍ಪಿ ಪವರ್ ಮತ್ತು 120 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 5-ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ. ಅದೆ ರೀತಿ 1.5 ಲೀಟರ್ ಪೆಟ್ರೋ ಎಂಜಿನ್ 121 ಬಿಎಚ್‍‍ಪಿ ಪವರ್ ಮತ್ತು 136 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಫೋರ್ಡ್ ಆಸ್ಪೈರ್ ಡೀಸೆಲ್ ರೂಪಾಂತರದಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್‍‍ನಲ್ಲಿ 99 ಬಿಎಚ್‍‍ಪಿ ಪವರ್ ಮತ್ತು 215 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಫೋರ್ಡ್ ಆಸ್ಪೈರ್ ಟ್ರೆಂಡ್ ಪ್ಲಸ್ ಸಿಎನ್‍‍ಜಿ ರೂಪಾಂತರದಲ್ಲಿ 1.2 ಲೀಟರ್ ಎಂಜಿನ್‍‍ನಲ್ಲಿ 95 ಬಿ‍ಎಚ್‍ಪಿ ಪವರ್ ಮತ್ತು 120 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 5-ಸ್ಪಿಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ. ಪ್ರಸುತ್ತವಾಗಿ ರಿಯಾಯಿತಿಯನ್ನು ಸೇರಿಸದೆ ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ರೂ.5.88 ಲಕ್ಷ ಮತ್ತು 9 ಲಕ್ಷ ದರ ಹೊಂದಿದೆ.

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಫೋರ್ಡ್ ಫ್ರೀಸ್ಟೈಲ್

ಫೋರ್ಡ್ ಕಂಪನಿಯು ಫ್ರೀಸ್ಟೈಲ್ ಕಾರಿಗೆ ರೂ.30,000 ಸಾವಿರ ರಿಯಾಯಿತಿಯನ್ನು ನೀಡಿದೆ, ಇದರ ಎಕ್ಸ್​ಚೇಂಚ್ ಬೋನಸ್ ರೂ. 15,000 ಮತ್ತು ಕಾರ್ಪೋರೇಟ್ ರಿಯಾಯಿತಿ ರೂ. 4,000 ಸಾವಿರ, ಈ ರಿಯಾಯಿತಿ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ 4 ಪೆಟ್ರೋಲ್ ರೂಪಾಂತರಗಳು ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್‍‍ನಲ್ಲಿ 95 ಬಿ‍ಎಚ್‍‍ಪಿ ಪವರ್ ಮತ್ತು 120 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಫ್ರೀಸ್ಟೈಲ್ ಕಾರು ನಾಲ್ಕು ಡೀಸೆಲ್ ರೂಪಾಂತರಗಳಲ್ಲಿ ಲಭ್ಯವಿದೆ. 1.5 ಡೀಸೆಲ್ ಎಂಜಿನ್‍‍ನಲ್ಲಿ 99 ಬಿ‍ಎಚ್‍‍ಪಿ ಪವರ್ ಮತ್ತು 215 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ. ರಿಯಾಯಿತಿಯನ್ನು ಸೇರಿಸದೆ ಪ್ರಸ್ತುತ ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ರೂ. 5.81 ಲಕ್ಷ ದಿಂದ ರೂ. 8.26 ಲಕ್ಷದ ವರಗೆ ಇದೆ.

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಕಂಪನಿಯ ಇಕೊಸ್ಪೋರ್ಟ್ ಕಾರಿಗೆ ರೂ. 30,000 ಸಾವಿರ ರಿಯಾಯಿತಿ ಘೋಷಿಸಿದೆ. ಎಕ್ಸ್​ಚೇಂಚ್ ಬೋನಸ್ ರೂ. 5,000 (ಮಹಿಳೆಯರಿಗೆ ಮಾತ್ರ), ಕಾರ್ಪೋರೇಟ್ ರಿಯಾಯಿತಿ ರೂ. 5,000 ಸಾವಿರ ವಿದೆ. ಫೋರ್ಡ್ ಇಕೊಸ್ಪೋರ್ಟ್ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳಲ್ಲಿ ಲಭ್ಯವಿದ್ದು, ಇದು 7 ಪೆಟ್ರೋಲ್ ಮತ್ತು 6 ಡೀಸೆಲ್ ರೂಪಾಂತರದಲ್ಲಿದೆ.

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಇಕೋಸ್ಪೋರ್ಟ್ ಪೆಟ್ರೋಲ್ ರೂಪಾಂತರವು 1.5 ಲೀಟರ್ ಎಂಜಿನ್ 121 ಬಿಎಚ್‍ಪಿ ಪವರ್ ಮತ್ತು 150 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ 6 ರೂಪಾಂತರಗಳು 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಹೊಂದಿದ್ದರೆ ಟೈಟಾನಿಯಮ್ ಪ್ಲಸ್ ಟಿಐ-ವಿ‍ಸಿಟಿ ಪೆಟ್ರೋಲ್ ಮಾದರಿಯು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಇಕೋ ಸ್ಪೋರ್ಟ್ಸ್ ಡೀಸೆಲ್ ರೂಪಾಂತರವು1.5 ಲೀಟರ್ ಎಂಜಿನ್ 99 ಬಿ‍ಎಚ್‍‍ಪಿ ಪವರ್ ಮತ್ತು 205 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ. ರಿಯಾಯಿತಿಯನ್ನು ಸೇರಿಸದೆ ಪ್ರಸ್ತುತ ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ರೂ. 7.81 ಲಕ್ಷ ದಿಂದ ರೂ. 11.35 ಲಕ್ಷದವರೆಗೆ ಇದೆ.

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಫೋರ್ಡ್ ಇಂಡೀವರ್

ಫೋರ್ಡ್ ಕಂಪನಿಯು ಇಂಡೀವರ್ ಎಸ್‍‍‍ಯುವಿ ಕಾರಿಗೆ ಬರೊಬ್ಬರಿ ರೂ. 2 ಲಕ್ಷದ ರಿಯಾಯಿತಿಯನ್ನು ಘೊಷಿಸಿದೆ. ಈ ಎಸ್‍‍ಯುವಿ‍ಯು ಡೀಸೆಲ್ ರೂಪಾಂತರದಲ್ಲಿದೆ. ಇ ಎಸ್‍ಯುವಿಯು 2.2 ಲೀಟರ್ ಡೀಸೆಲ್ ಎಂಜಿನ್ 158 ಬಿ‍ಎಚ್‍‍ಪಿ ಪವರ್ ಮತ್ತು 385 ಎನ್‍ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 3.2 ಲೀಟರ್ ಎಂಜಿನ್‍‍ನಲ್ಲಿ 197 ಬಿಎಚ್‍ಪಿ ಪವರ್ ಮತ್ತು 470 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ರಿಯಾಯಿತಿಯನ್ನು ಸೇರಿಸದೆ ಪ್ರಸ್ತುತ ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ರೂ. 28.20 ಲಕ್ಷದಿಂದ ರೂ. 33.70 ಲಕ್ಷದವರೆಗೆ ದರ ಹೊಂದಿದೆ.

ಕಾರು ಖರೀದಿಸುವವರಿಗೆ ಭರ್ಜರಿ ಆಫರ್ ಘೋಷಿಸಿದ ಫೋರ್ಡ್

ಈ ರಿಯಾಯಿತಿಗಳು ಡೀಲರ್ ಇಂದ ಡೀಲರ್‍‍ಗೆ ದರದಲ್ಲಿ ವ್ಯತ್ಯಾಸಗಳಿರಬಹುದು ಮತ್ತು ಅವರಲ್ಲಿರುವ ಸ್ಟಾಕ್ ಅನ್ನು ಅವಲಂಭಿಸಿ ದರ ಹೊಂದಿರುತ್ತದೆ. ಕಾರು ಖರೀದಿಸುವವರಿಗೆ ಸೂಕ್ತ ಸಮಯವಾಗಿದೆ, ಈ ಭರ್ಜರಿ ರಿಯಾಯಿತಿಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಈ ಭರ್ಜರಿ ಆಫ‍‍‍ರ್ ಮುಂದಿನ ವರ್ಷದ ಮಾರ್ಚ್ ತಿಂಗಳವರೆಗೂ ಇರಬಹುದು ಎಂಬ ನಿರೀಕ್ಷೆ ಇದೆ.

Most Read Articles

Kannada
English summary
Ford Figo, Aspire, Freestyle, EcoSport, Endeavour: Discounts & Offers For September - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X