ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಒಳಭಾಗದಲ್ಲಿ ಏನೇನೆಲ್ಲ ಇದೆ ನೋಡಿ

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ತಾವು ಮಾರುಕಟ್ಟೆಗೆ ಪರಿಚಯಿಸಲಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿಯನ್ನು ಹೊರಹಾಕಿದ್ದು, ಫೆಬ್ರವರಿ 15ರಂದು ಸಂಸ್ಥೆಯು ಫೋರ್ಡ್ ಇಕೊಸ್ಪೋರ್ಟ್, ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಒಳಭಾಗದಲ್ಲಿ ಏನೇನೆಲ್ಲ ಇದೆ ನೋಡಿ

ಮಹೀಂದ್ರಾ ಸಂಸ್ಥೆಯು ಈಗಾಗಲೆ ಕಾರಿನ ಅಧಿಕೃತ ಚಿತ್ರಗಳನ್ನು ಬಹಿರಂಗಗೊಳಿಸಿದ್ದು, ಹಲವಾರು ಬಾರಿ ಈ ಕಾರು ಸ್ಪಾಟ್ ಟೆಸ್ಟಿಂಗ್ ವೇಳೆ ಕೂಡಾ ಕಾಣಿಸಿಕೊಂಡಿದೆ. ಅಷ್ಟೆ ಅಲ್ಲದೇ ಮಹೀಂದ್ರಾ ಸಂಸ್ಥೆಯ ಡೀಲರ್‍‍ಗಳು ಹೊಸ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಪ್ರಾರಂಭಿಸಿದ್ದು, ಆಸಕ್ತ ಗ್ರಾಹಕರು ರೂ. 11,000 ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಒಳಭಾಗದಲ್ಲಿ ಏನೇನೆಲ್ಲ ಇದೆ ನೋಡಿ

ಸಾಕಷ್ಟು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಮತ್ತು ಸಂಸ್ಥೆಯು ಬಹಿರಂಗಗೊಳಿಸಿದ ಚಿತ್ರಗಳಲ್ಲಿ ಎಕ್ಸ್‌ಯುವಿ300 ಕಾರಿನ ಬಾಹ್ಯ ವಿನ್ಯಾಸವನ್ನು ಮಾತ್ರ ಕಾಣಬಹುದಾಗಿದ್ದು, ಇದೀಗ ಸೆರೆಯಾದ ವಿಡಿಯೋನಲ್ಲಿ ಈ ಕಾರಿನ ಒಳಾಂಗಣದ ವಿನ್ಯಾಸವನ್ನು ಕಾಣಬಹುದಾಗಿದೆ.

ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಒಳಭಾಗದಲ್ಲಿ ಏನೇನೆಲ್ಲ ಇದೆ ನೋಡಿ

ಬಹಿರಂಗಗೊಂಡ ವಿಡಿಯೋನಲ್ಲಿ ಗ್ರಾಹಕರು ನಿರೀಕ್ಷಿಸಬಹುದಾದ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದ್ದು, ಮೊದಲಿಗೆ ಕಾರಿನ ಒಳಭಾಗವನು ಡ್ಯುಯಲ್ ಟೋನ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಮತ್ತು ಕಾರಿನಲ್ಲಿನ ಡ್ಯಾಶ್‍‍ಬೋರ್ಡ್, ಇನ್ಫೋಟೈನ್ಮೆಂಟ್ ಸಿಸ್ಟಂ, ಎಸಿ ವೆಂಟ್ಸ್ ಮತ್ತು ಸ್ಟೀರಿಂಗ್ ವ್ಹೀಲ್‍ನ ಮೇಲೆ ಸಿಲ್ವರ್ ಆಕ್ಸೆಂಟ್‍‍ಗಳನ್ನು ನೀಡಲಾಗಿದೆ.

ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಒಳಭಾಗದಲ್ಲಿ ಏನೇನೆಲ್ಲ ಇದೆ ನೋಡಿ

ಡ್ಯುಯಲ್ ಟೋನ್ ಇಂಟೀರಿಯರ್ ಅನ್ನು ಹೊರತುಪಡಿಸಿ ಮಹೀಂದ್ರಾ ಎಕ್ಸ್‌ಯುವಿ300 ಕಾರಿನಲ್ಲಿ ದೊಡ್ಡದಾದ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗಿದ್ದು, ಇದು ಆಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಆಯ್ಕೆಯನ್ನು ಪಡೆಯಬಹುದಾಗಿದೆ. ಇಷ್ಟೆ ಅಲ್ಲದೇ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸಾರ್‍‍ಗಳನ್ನು ಸಹ ಅಳವಡಿಸಲಾಗಿದೆ.

ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಒಳಭಾಗದಲ್ಲಿ ಏನೇನೆಲ್ಲ ಇದೆ ನೋಡಿ

ಜೊತೆಗೆ ಮಹೀಂದ್ರಾ ಎಕ್ಸ್‌ಯುವಿ300 ಕಾರು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಸೆಂಟ್ರಲ್ ಮಲ್ಟಿ ಇನ್ಫಾರ್ಮೇಷನ್ ಡಿಸ್ಪ್ಲೇ ಹೊಂದಿರುವ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ.

ಇವುಗಳ ಜೊತೆಗೆ ಮಹೀಂದ್ರಾ ಎಕ್ಸ್‌ಯುವಿ300 ಕಾಂಪ್ಯಾಕ್ಟ್ ಎಸ್‍ಯುವಿ ಕಾರಿನಲ್ಲಿ ಸನ್‍‍ರೂಫ್ ಕೂಡಾ ಬಳಸಲಾಗಿದ್ದು, ಹಿಂಬದಿಯ ಸವಾರರ ಸೀಟ್‍‍ಗಳಿಗೆ ಸೆಂಟ್ರಲ್ ಆರ್ಮ್‍ರೆಸ್ಟ್ ಅನ್ನು ನೀಡಲಾಗಿದೆ. ಆದರೆ ಹಿಂಬದಿಯ ಸವಾರರಿಗೆ ಎಸಿವೆಂಟ್ಸ್ ಅನ್ನು ನೀಡಲಿದೆಯೆ ಎಂದು ಮತ್ತಷ್ಟು ಮಾಹಿತಿಗಳು ಹೊರ ಬಂದ ಮೇಲೆ ತಿಳಿಯಬೇಕಿದೆ.

ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಒಳಭಾಗದಲ್ಲಿ ಏನೇನೆಲ್ಲ ಇದೆ ನೋಡಿ

ಮಹೀಂದ್ರಾ ಸಂಸ್ಥೆಯು ದಕ್ಷಿಣ ಕೊರಿಯಾದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಹೊಸ ನಮೂನೆಯ ಕಾರು ಉತ್ಪನ್ನಗಳನ್ನು ಅಭಿವೃದ್ಧಿ ಪಡೆಸುತ್ತಿದ್ದು, ಸ್ಯಾಂಗ್‌ಯಾಂಗ್ ನಿರ್ಮಾಣದ ಟಿವೊಲಿ ಕಾರಿನ ಮಾದರಿಯಲ್ಲೇ ಹೊಸ ಎಕ್ಸ್‌ಯುವಿ300 ಕಾರನ್ನು ನಿರ್ಮಾಣ ಮಾಡಲಾಗಿದೆ.

MOST READ: ಹಯಾಬುಸ ಬೈಕ್ ತಡೆಹಿಡಿದ ಮೈಸೂರು ಪೊಲೀಸರು ಮಾಡಿದ್ದೇನು ಗೊತ್ತಾ.?

ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಒಳಭಾಗದಲ್ಲಿ ಏನೇನೆಲ್ಲ ಇದೆ ನೋಡಿ

ಜೊತೆಗೆ ಹೊಸ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳನ್ನು ಸಹ ಪ್ರಮುಖ ಆಕರ್ಷಣೆಯಾಗಿದ್ದು, 17-ಇಂಚಿನ ಅಲಾಯ್ ವೀಲ್ಹ್‌ನೊಂದಿಗೆ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಮೊದಲ ಬಾರಿಗೆ ನೀಡಲಾಗಿರುತ್ತಿರುವ 7 ಏರ್‌ಬ್ಯಾಗ್ ಸೌಲಭ್ಯ ಎಕ್ಸ್‌ಯುವಿ300 ಕಾರಿನಲ್ಲಿರಲಿವೆ.

ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಒಳಭಾಗದಲ್ಲಿ ಏನೇನೆಲ್ಲ ಇದೆ ನೋಡಿ

ಎಂಜಿನ್ ಸಾಮರ್ಥ್ಯ

ಹೊಸ ಎಕ್ಸ್‌ಯುವಿ300 ಕಾರು ಡಿಸೇಲ್ ಮತ್ತು ಪೆಟ್ರೋಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಾಗಲಿದ್ದು, ಡಿಸೇಲ್ ಕಾರುಗಳು 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 121-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿವೆ.

ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಒಳಭಾಗದಲ್ಲಿ ಏನೇನೆಲ್ಲ ಇದೆ ನೋಡಿ

ಹಾಗೆಯೇ ಪೆಟ್ರೋಲ್ ಮಾದರಿಯು ಸಹ 1.2-ಲೀಟರ್ ಎಂಜಿನ್‌ನೊಂದಿಗೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಡಿಸೇಲ್ ವರ್ಷನ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ವರ್ಷನ್‌ ಕಾರುಗಳಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಿದೆ.

ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಒಳಭಾಗದಲ್ಲಿ ಏನೇನೆಲ್ಲ ಇದೆ ನೋಡಿ

ಕಾರಿನ ಬೆಲೆಗಳು(ಅಂದಾಜು)

ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪ್ಯಾಕ್ಟ್ ಎಸ್‌ಯುವಿಗಳಿಂತೂ ತಾಂತ್ರಿಕವಾಗಿ ಬಲಿಷ್ಠವಾಗಿರುವ ಎಕ್ಸ್‌ಯುವಿ300 ಕಾರುಗಳ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 13 ಲಕ್ಷ ಬೆಲೆ ನಿಗದಿಯಾಗುವ ಸಾಧ್ಯತೆಗಳಿವೆ.

MOST READ: ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಬಿಡುಗಡೆಯಾಗಲಿರುವ ಮಹೀಂದ್ರಾ ಎಕ್ಸ್‌ಯುವಿ300 ಒಳಭಾಗದಲ್ಲಿ ಏನೇನೆಲ್ಲ ಇದೆ ನೋಡಿ

ಪ್ರತಿಸ್ಪರ್ಧಿ ಕಾರುಗಳು

ಎಕ್ಸ್‌ಯುವಿ300 ಕಾರುಗಳು ಉತ್ತಮ ಎಂಜಿನ್ ಜೊತೆಗೆ ತಾಂತ್ರಿಕವಾಗಿಯೂ ಗಮನಸೆಳೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ಕ್ರೆಟಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋ ಸ್ಪೋರ್ಟ್ ಮತ್ತು ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಜೊತೆ ಟಾಟಾ ಹ್ಯಾರಿಯರ್ ಕಾರಿಗೂ ಇದು ಪೈಪೋಟಿ ನೀಡಬಲ್ಲದು.

Source: Neelu Vlogs

Most Read Articles

Kannada
English summary
Mahindra XUV 300 Interiors Spied For The First Time — Confirms A List Of Features. Read In Kannada
Story first published: Wednesday, January 2, 2019, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X