Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರಿನಲ್ಲಿ ಸರಣಿ ಅಪಘಾತ- 7 ಕಾರು, ಒಂದು ಸ್ಕೂಟರ್ ಜಖಂ
ವಾಹನ ಚಾಲನೆ ವೇಳೆ ಯಾರೇ ತಪ್ಪು ಮಾಡಿದ್ರು ಕೂಡಾ ಅದರಿಂದ ಅವರಿಗಷ್ಟೇ ಅಲ್ಲ ಹಿಂದೆ ಮುಂದೆ ಹೋಗುವ ವಾಹನ ಸವಾರರಿಗೂ ಕೆಲವೊಮ್ಮೆ ಸಂಕಷ್ಟ ತಪ್ಪಿದ್ದಲ್ಲ. ಬೆಂಗಳೂರಿನಲ್ಲೂ ಇಂತದ್ದೆ ನಡೆದಿದ್ದು, ಕ್ಯಾಬ್ ಚಾಲಕನ ಒಂದು ಸಣ್ಣ ತಪ್ಪಿನಿಂದಾಗಿ ಸರಣಿ ಅಪಘಾತ ನಡೆದಿದ್ದು, ಬರೋಬ್ಬರಿ 7 ಕಾರುಗಳು ಮತ್ತು 1 ಸ್ಕೂಟರ್ ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ.

ವಾಹನ ಚಾಲನೆ ವೇಳೆ ಎಷ್ಟೇ ಎಚ್ಚರಿಕೆ ವಹಿಸಿದರೂ ಕಡಿಮೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸ್ವಲ್ಪವೇ ಯಾಮಾರಿದ್ರು ದುರಂತ ತಪ್ಪಿದ್ದಲ್ಲ. ಅದರಲ್ಲೂ ಬೆಂಗಳೂರಿನಂತಹ ಟ್ರಾಫಿಕ್ ಭರಿತ ನಗರಗಳಲ್ಲಿ ದಿನಂಪ್ರತಿ ಒಂದಿಲ್ಲಾ ಒಂದು ಭೀಕರ ಅಪಘಾತ ಸಂಭವಿಸುತ್ತಲೇ ಇರುತ್ತವೆ ಎನ್ನುವುದಕ್ಕೆ ಹೆಬ್ಬಾಳ ಫ್ಲೈಓವರ್ ಮೇಲೆ ನಡೆದ ಘಟನೆಯೇ ಸಾಕ್ಷಿ.

ಮಧ್ಯಾಹ್ನ 12ರ ಸುಮಾರಿಗೆ ಈ ಘಟನೆ ನಡೆದಿದ್ದು, ಹಳದಿ ಬೋರ್ಡ್ ಹೊಂದಿರುವ ಎರಡು ಟೊಯೊಟಾ ಇಟಿಯಾಸ್ ಸೇರಿದಂತೆ ಬೆಂಝ್ ಸಿ ಕ್ಲಾಸ್, ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆರ್ನಾ, ಹೋಂಡಾ ಸಿಟಿ, ಫೋಕ್ಸ್‌ವ್ಯಾಗನ್ ಪೊಲೋ ಕಾರುಗಳು ಸಂಪೂರ್ಣ ಜಖಂಗೊಂಡಿವೆ.

ಇದರಲ್ಲಿ ಒಂದು ಸುಜುಕಿ ಆಕ್ಸೆಸ್ ಸ್ಕೂಟರ್ ಕೂಡಾ ಎರಡು ಕಾರುಗಳ ಮಧ್ಯೆ ಸಿಲುಕಿ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಕೆಲವರಿಗೆ ಸಣ್ಣಪುಟ್ಟ ಗಾಯಳುಗಳನ್ನು ಹೊರತುಪಡಿಸಿ ಯಾವುದೇ ಪ್ರಾಣಾಪಾಯವಾಗಿಲ್ಲ.

ಮಾಹಿತಿಗಳ ಪ್ರಕಾರ, ಯಲಹಂಕದಲ್ಲಿ ನಡೆಯುತ್ತಿರುವ ಏರ್ ಶೋ ಹಿನ್ನೆಲೆಯಲ್ಲಿ ಕೆಲವು ಮಾರ್ಗಗಳನ್ನು ಬದಲಾವಣೆ ಮಾಡಲಾಗಿದ್ದು, ಹೀಗಾಗಿ ಏರ್‌ಪೋರ್ಟ್ ರೋಡ್‌ನಲ್ಲಿ ವಾಹನ ದಟ್ಟಣೆಯಿಂದಾಗಿ ಬಹುತೇಕ ಕಡೆ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ.

ಯಲಹಂಕದಿಂದ ಹೆಬ್ಬಾಳದ ತನಕವು ವಾಹನ ದಟ್ಟಣೆ ಇದ್ದು, ಈ ವೇಳೆ ಟೊಯೊಟಾ ಇಟಿಯಾಸ್ ಕಾರು ಚಾಲಕನು ವೇಗದ ಚಾಲನೆ ಮುಂದಾಗಿದ್ದ. ಫ್ಲೇ ಓವರ್ ಮೇಲೆ ಬರುತ್ತಿದ್ದಂತೆ ವಾಹನ ಸಂಖ್ಯೆಯಿಂದಾಗಿ ಸಡನ್ ಬ್ರೇಕ್ ಹಾಕಿದ್ದರಿಂದ ಹಿಂದೆಯೇ ಸುಮಾರು ಆರು ಕಾರುಗಳು ಒಂದಕ್ಕೊಂದು ಸರಣಿ ಅಪಘಾತವಾಗಿವೆ.
MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!
ಹೆಬ್ಬಾಳ ಫ್ಲೈಓವರ್ ಮೇಲೆ ನಡೆದ ಅಪಘಾತವಾದ ವಿಡಿಯೋ ಇಲ್ಲಿದೆ ನೋಡಿ.