YouTube

ಭಾರತದ ಮೊಟ್ಟ ಮೊದಲ ಕಲಿನನ್ ಖರೀದಿಸಿದ ಮುಖೇಶ್ ಅಂಬಾನಿ

ಐಷಾರಾಮಿ ಸೆಡಾನ್‌ ಕಾರುಗಳ ನಿರ್ಮಾಣದಲ್ಲಿ ಹೆಸರುವಾಸಿವಾಗಿರುವ ರೋಲ್ಸ್ ರಾಯ್ಸ್ ಸಂಸ್ಥೆಯು ಮೊದಲ ಬಾರಿಗೆ ಎಸ್‌ಯುವಿಯನ್ನು ಅಭಿವೃದ್ಧಿ ಪಡಿಸಿ ಮಾರಾಟ ಮಾಡುತ್ತಿದೆ. ಈ ಎಸ್‍‍ಯುವಿ ಕೇವಲ ಐಷಾರಾಮಿ ಮಾತ್ರವಲ್ಲದೇ ಹಲವು ಆಫ್ ರೋಡ್ ಫೀಚರ್‍‍ಗಳನ್ನು ಹೊಂದಿದೆ.

ಭಾರತದ ಮೊಟ್ಟ ಮೊದಲ ಕಲಿನನ್ ಖರೀದಿಸಿದ ಮುಖೇಶ್ ಅಂಬಾನಿ

ಕಲಿನನ್ ಕಾರು ನೂರಕ್ಕೂ ಹೆಚ್ಚು ವಿನೂತನ ಸೌಲಭ್ಯಗಳನ್ನು ಹೊಂದಿದ್ದು, ಪ್ರಪಂಚದಲ್ಲಿ ಇದುವರೆಗೆ ಉತ್ಪಾದನೆಯಾದ ಇತರೆ ಐಷಾರಾಮಿ ಎಸ್‌ಯುವಿ ಕಾರುಗಳಿಂತಲೂ ವಿಶೇಷವೆನಿಸಿದೆ. ಮೂಲಗಳ ಪ್ರಕಾರ, ದುಬೈ ಒಂದರಲ್ಲೇ 60%ಕ್ಕೂ ಹೆಚ್ಚು ಕಲಿನನ್ ಕಾರುಗಳು ಮಾರಾಟವಾಗಿವೆ. ದುಬಾರಿ ಬೆಲೆಯನ್ನು ಹೊಂದಿದ್ದರೂ ನಿರೀಕ್ಷೆಗೂ ಮೀರಿ ಮಾರಾಟವಾಗಿರುವುದು ಸ್ವತಃ ರೋಲ್ಸ್ ರಾಯ್ಸ್ ಕಂಪನಿಗೆ ಅಚ್ಚರಿಯನ್ನುಂಟು ಮಾಡಿದೆ.

ಭಾರತದ ಮೊಟ್ಟ ಮೊದಲ ಕಲಿನನ್ ಖರೀದಿಸಿದ ಮುಖೇಶ್ ಅಂಬಾನಿ

ರೋಲ್ಸ್ ರಾಯ್ಸ್ ಕಂಪನಿಯು 1905ರಲ್ಲಿ ದಕ್ಷಿಣ ಆಫ್ರಿಕಾದ ವಜ್ರದ ಗಣಿಗಳಲ್ಲಿ ಪತ್ತೆಯಾದ ಜಗತ್ತಿನ ದುಬಾರಿ ಬೆಲೆಯ ವಜ್ರಗಳಲ್ಲಿ ಒಂದಾದ ಕಲಿನನ್ ಹೆಸರನ್ನು ತನ್ನ ಮೊದಲ ಎಸ್‌ಯುವಿಗೆ ಇಟ್ಟಿದೆ. ಕಲಿನನ್ 3,106 ಕ್ಯಾರೆಟ್‍‍ನ ವಜ್ರವಾಗಿದೆ.

ಭಾರತದ ಮೊಟ್ಟ ಮೊದಲ ಕಲಿನನ್ ಖರೀದಿಸಿದ ಮುಖೇಶ್ ಅಂಬಾನಿ

ಇನ್ನು ಭಾರತದ ನಂ 1 ಶ್ರೀಮಂತರಾದ ಮುಖೇಶ್ ಅಂಬಾನಿಯವರ ಬಳಿ ಹಲವಾರು ಐಷಾರಾಮಿ ಕಾರುಗಳಿವೆ. ಈಗ ಮುಖೇಶ್ ಅಂಬಾನಿಯವರು ಕಲಿನನ್ ಎಸ್‍‍ಯುವಿಯನ್ನು ರೂ.6.95 ಕೋಟಿ ನೀಡಿ ಖರೀದಿಸಿದ್ದಾರೆ. ಭಾರತದಲ್ಲಿ ಇದುವರೆಗೂ ಯಾರೂ ಸಹ ರೋಲ್ಸ್ ರಾಯ್ಸ್ ಕಲಿನನ್ ಎಸ್‍‍ಯುವಿಯನ್ನು ಖರೀದಿಸಿರಲಿಲ್ಲ.

ಭಾರತದ ಮೊಟ್ಟ ಮೊದಲ ಕಲಿನನ್ ಖರೀದಿಸಿದ ಮುಖೇಶ್ ಅಂಬಾನಿ

ಕಲಿನನ್ ಎಸ್‍‍ಯುವಿಯಲ್ಲಿರುವ 6.8 ಲೀಟರಿನ ವಿ 12 ಪೆಟ್ರೋಲ್ ಟ್ವಿನ್ ಟರ್ಬೋಚಾರ್ಜರ್‌ ಎಂಜಿನ್, 560 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 8 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹಾಗೂ ಆಲ್ ವ್ಹೀಲ್ ಸ್ಟೀರಿಂಗ್ ಸಿಸ್ಟಂ ಹೊಂದಿದೆ.

ಭಾರತದ ಮೊಟ್ಟ ಮೊದಲ ಕಲಿನನ್ ಖರೀದಿಸಿದ ಮುಖೇಶ್ ಅಂಬಾನಿ

ಕಲಿನನ್ ಕೇವಲ ಐದು ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಎಸ್‍‍ಯುವಿಯ ವೇಗದ ಮಿತಿಯನ್ನು 249 ಕಿ.ಮೀಗಳಿಗೆ ನಿಗದಿಪಡಿಸಲಾಗಿದೆ. ಆಫ್ ರೋಡಿಂಗ್‌ಗಳಿಗಾಗಿ 360 ಡಿಗ್ರಿ ಕ್ಯಾಮೆರಾ ಸಿಸ್ಟಂ ಹೊಂದಿದೆ. ವಾಹನವು ಆಫ್ ರೋಡಿಂಗ್ ಬಟನ್ ಹೊಂದಿದ್ದು, ಆ ಮೋಡ್‌ಗೆ ಬದಲಾಯಿಸಬಹುದು.

ಭಾರತದ ಮೊಟ್ಟ ಮೊದಲ ಕಲಿನನ್ ಖರೀದಿಸಿದ ಮುಖೇಶ್ ಅಂಬಾನಿ

ಕಲಿನನ್, ಪ್ರತ್ಯೇಕ ಪ್ರಯಾಣಿಕ ಪರಿಸರವನ್ನು ಹೊಂದಿರುವ ಏಕೈಕ ಎಸ್‍‍ಯುವಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಹಿಂದಿನ ಕ್ಯಾಬಿನ್ ಅನ್ನು ಲಗೇಜ್ ಜೋನ್‍‍ಗಳಿಂದ ಸಂಪೂರ್ಣವಾಗಿ ಪಾರ್ಟಿಷನ್ ಗ್ಲಾಸುಗಳಿಂದ ಮುಚ್ಚಲಾಗಿದೆ. ಈ ಕಾರು ಕ್ಲೈಮೆಟ್ ಕಂಟ್ರೋಲ್ ಹಾಗೂ ಪ್ರಯಾಣಿಕರಿಗಾಗಿ ಸೌಂಡ್ ಇನ್ಸ್ಯೂಲೇಷನ್ ಹೊಂದಿದೆ.

MOST READ: ಪೆಟ್ರೋಲ್ ಬಂಕ್‍‍ನಿಂದ ಹೊರಡುವ ಮುನ್ನ ಎಚ್ಚರ..!

ಭಾರತದ ಮೊಟ್ಟ ಮೊದಲ ಕಲಿನನ್ ಖರೀದಿಸಿದ ಮುಖೇಶ್ ಅಂಬಾನಿ

ಈ ಎಸ್‍‍ಯುವಿಯನ್ನು ಮೊದಲ ಬಾರಿಗೆ ಇಟಲಿಯ ಲೇಕ್ ಕೊಮೊದಲ್ಲಿ 2018ರ ಮೇ ತಿಂಗಳಿನಲ್ಲಿ ಕಾನ್ಕಾರ್ಸೊ ಡಿ ಎಲೆಗನ್ಜಾ ವಿಲ್ಲಾ ಡಿ ಎಸ್ಟೆ‍‍ಟ್‍‍ನಲ್ಲಿ ಪ್ರದರ್ಶಿಸಲಾಗಿತ್ತು. ಕಲಿನನ್ ಕಾರುಗಳು ಮುಂಭಾಗದಿಂದ ಫ್ಯಾಂಟಮ್ ಸೆಡಾನ್ ಕಾರಿನ ಹೋಲಿಕೆಯನ್ನು ಹೊಂದಿದ್ದರೂ ಸ್ಟೈನ್ ಲೆಸ್ ಸ್ಟೀಲ್ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್, ಸ್ಲಾಟ್ ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.

MOST READ: ಕಾರ್ ಕದ್ದಿದ್ದು ಆಯ್ತು, ಈಗ ಖದೀಮರ ಕಣ್ಣು ಲೊಗೊ ಮೇಲೆ..!

ಭಾರತದ ಮೊಟ್ಟ ಮೊದಲ ಕಲಿನನ್ ಖರೀದಿಸಿದ ಮುಖೇಶ್ ಅಂಬಾನಿ

ಫ್ರಂಟ್ ಬಂಪರ್ ಹಾಗೂ ಲೋಗೋ ಡಿಸೈನ್‌ಗಳು ವಿಶೇಷ ವಿನ್ಯಾಸವನ್ನು ಹೊಂದಿವೆ. ಕಲಿನನ್ ಕಾರುಗಳು 5,341ಎಂಎಂ ಉದ್ದ, 2,164ಎಂಎಂ ಅಗಲ, 1,834ಎಂಎಂ ಎತ್ತರ ಹಾಗೂ 3,295ಎಂಎಂ ಗಾತ್ರದ ವ್ಹೀಲ್ ಬೇಸ್ ಹೊಂದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಭಾರತದ ಮೊಟ್ಟ ಮೊದಲ ಕಲಿನನ್ ಖರೀದಿಸಿದ ಮುಖೇಶ್ ಅಂಬಾನಿ

ಇಂಟಿರಿಯರ್‍‍ನಲ್ಲಿ ಆಧುನಿಕ ವಿನ್ಯಾಸವನ್ನು ಹೊಂದಿರುವ ರೋಲ್ಸ್ ರಾಯ್ಸ್ ಕಲಿನನ್ ಕಾರುಗಳಲ್ಲಿ ಕುಳಿತರೆ ಸ್ಪರ್ಗಕ್ಕೆ ಮೂರೇ ಗೇಣು ಎನ್ನುವ ಭಾವನೆ ಮೂಡದೇ ಇರಲಾರದು. ಈ ಎಸ್‍‍ಯುವಿ 5 ಸೀಟುಗಳನ್ನು ಹೊಂದಿದೆ. ಪ್ರತಿ ಸೀಟುಗಳು ಪ್ರತ್ಯೇಕವಾದ ಎಲೆಕ್ಟ್ರಿಕ್ ಆಪರೇಟ್ ಸೌಲಭ್ಯ ಹೊಂದಿವೆ. ಈ ಸೀಟುಗಳನ್ನು ಬೇಕಾದ ರೀತಿಯಲ್ಲಿ ಅಡ್ಜಸ್ಟ್ ಮಾಡಿಕೊಳ್ಳಬಹುದು.

Most Read Articles

Kannada
English summary
Mukesh Ambani Was First Indian To Get Rolls-Royce Cullinan - Read in kannada
Story first published: Monday, September 2, 2019, 12:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X