ಬಿ‍ಎಸ್ 6 ಸಿ‍ಎನ್‍‍ಜಿ ಆಟೋರಿಕ್ಷಾಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಪಿಯಾಜಿಯೊ ಇಂಡಿಯಾ ಭೋಪಾಲ್ ನಗರದಲ್ಲಿ ಬಿ‍ಎಸ್ 6 ಸಿ‍ಎನ್‍‍ಜಿ ಆಟೋ ರಿಕ್ಷಾಗಳನ್ನು ಬಿಡುಗಡೆಗೊಳಿಸಿದೆ. ಇದರ ಜೊತೆಗೆ ಭೋಪಾಲ್‍‍ನಲ್ಲಿ ಎರಡು ಸಿಎನ್‍‍ಜಿ ಸ್ಟೇಷನ್‍‍ಗಳನ್ನೂ ಸಹ ಆರಂಭಿಸಿದೆ.

ಬಿ‍ಎಸ್ 6 ಸಿ‍ಎನ್‍‍ಜಿ ಆಟೋರಿಕ್ಷಾಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳ ಆಟೋ ರಿಕ್ಷಾಗಳಿವೆ. ಪಿಯಾಜಿಯೊ ಕಂಪನಿಯ ಆಪೆ ಸರಣಿಯಲ್ಲಿ ಕಂಪನಿಯ ಹೊಸ 3 ವಾಲ್ವ್, ಸಿ‍ಎನ್‍‍ಜಿ ಕಿಟ್ ಹೊಂದಿರುವ ವಾಟರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ಬಿ‍ಎಸ್ 6 ಸಿ‍ಎನ್‍‍ಜಿ ಆಟೋರಿಕ್ಷಾಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಸದ್ಯಕ್ಕೆ ಈ ಎಂಜಿನ್ ಅನ್ನು ಪಿಯಾಜಿಯೊ ಆಪೆ ಸಿಟಿ ಸರಣಿಯ ಆಟೋಗಳಲ್ಲಿ ಅಳವಡಿಸಲಾಗಿದೆ. ಪ್ಯಾಸೆಂಜರ್ ಸೆಗ್‍‍ಮೆಂಟಿನಲ್ಲಿ ಆಪೆ ಸಿಟಿ, ಆಪೆ ಸಿಟಿ ಪ್ಲಸ್ ಆಟೋಗಳಿದ್ದರೆ, ಕಾರ್ಗೊ ಸೆಗ್‍‍ಮೆಂಟಿನಲ್ಲಿ ಆಪೆ ಆಟೋ ಡಿ‍ಎಕ್ಸ್, ಆಪೆ ಆಟೋ ಡಿ‍ಎಕ್ಸ್ ಎಲ್, ಆಪೆ ಆಟೋ ಪ್ಲಸ್, ಆಪೆ ಎಕ್ಸ್ ಟ್ರಾ ಎಲ್‍‍ಡಿ‍ಎಕ್ಸ್, ಆಪೆ ಎಕ್ಸ್ ಟ್ರಾ ಎಲ್‍‍ಡಿ‍ಎಕ್ಸ್ ಪ್ಲಸ್ ಆಟೋಗಳಿವೆ.

ಬಿ‍ಎಸ್ 6 ಸಿ‍ಎನ್‍‍ಜಿ ಆಟೋರಿಕ್ಷಾಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಭೋಪಾಲ್‍‍ನಲ್ಲಿ ಹೊಸ ಸಿ‍ಎನ್‍ಜಿ ಆಟೋಗಳನ್ನು ಬಿಡುಗಡೆಗೊಳಿಸಿದ ನಂತರ ಮಾತನಾಡಿದ, ಪಿಯಾಜಿಯೊ ಇಂಡಿಯಾದ ಕಮರ್ಷಿಯಲ್ ವಾಹನಗಳ ಮುಖ್ಯಸ್ಥರಾದ ಸಜು ನಾಯರ್‍‍ರವರು, ಭಾರತದಲ್ಲಿ ಪರ್ಯಾಯ ಇಂಧನಗಳ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿದೆ.

ಬಿ‍ಎಸ್ 6 ಸಿ‍ಎನ್‍‍ಜಿ ಆಟೋರಿಕ್ಷಾಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಈ ಕಾರಣಕ್ಕಾಗಿ ಮಧ್ಯ ಪ್ರದೇಶದಲ್ಲಿ ಹೊಸ ಸರಣಿಯ ಸಿ‍ಎನ್‍ಜಿ ಆಟೋರಿಕ್ಷಾಗಳನ್ನು ಬಿಡುಗಡೆಗೊಳಿಸಲಾಗಿದೆ. ತ್ರಿ ಚಕ್ರ ವಾಹನಗಳ ಸೆಗ್‍‍ಮೆಂಟಿನಲ್ಲಿ ಪಿಯಾಜಿಯೊ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ.

ಬಿ‍ಎಸ್ 6 ಸಿ‍ಎನ್‍‍ಜಿ ಆಟೋರಿಕ್ಷಾಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಈ ಹೊಸ ವಾಹನದ ಬಿಡುಗಡೆಯ ನಂತರ ಸಿ‍ಎನ್‍‍ಜಿ ಸೆಗ್‍‍‍ಮೆಂಟಿನಲ್ಲಿ ನಮ್ಮ ಕಂಪನಿಯು ಪ್ರಾಬಲ್ಯವನ್ನು ಹೊಂದುವ ಸಾಧ್ಯತೆಗಳಿವೆ ಎಂದು ಹೇಳಿದರು. ಹೊಸ ಸಿ‍ಎನ್‍‍ಜಿ ಆಟೋಗಳನ್ನು ಬಳಸುವುದರಿಂದ ಪೆಟ್ರೋಲ್ ಆಟೋಗಳಿಗಿಂತ ಕಡಿಮೆ ವೆಚ್ಚವಾಗಲಿದೆ ಎಂದು ಪಿಯಾಜಿಯೊ ಹೇಳಿದೆ.

ಬಿ‍ಎಸ್ 6 ಸಿ‍ಎನ್‍‍ಜಿ ಆಟೋರಿಕ್ಷಾಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಇದರ ಜೊತೆಗೆ ಸರ್ಕಾರವು ಸಿ‍ಎನ್‍‍ಜಿ ಮೂಲ ಸೌಲಭ್ಯಕ್ಕೆ ಹೆಚ್ಚಿನ ನೆರವು ನೀಡಲಿದೆ. ಇದರಿಂದಾಗಿ ಆಟೋ ಚಾಲಕರ ಸಂಪಾದನೆಯು ಹೆಚ್ಚಾಗಲಿದೆ ಹಾಗೂ ಮಧ್ಯ ಪ್ರದೇಶದಲ್ಲಿರುವ ಯುವಕರು ಸ್ವಯಂ ಉದ್ಯೋಗ ಮಾಡಲು ಅನುಕೂಲವಾಗಲಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬಿ‍ಎಸ್ 6 ಸಿ‍ಎನ್‍‍ಜಿ ಆಟೋರಿಕ್ಷಾಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಪಿಯಾಜಿಯೊ ವೆಹಿಕಲ್‍‍ನ ಮಾರ್ಕೆಟಿಂಗ್ ಹಾಗೂ ಚಾನೆಲ್ ಡೆವಲಪ್‍‍ಮೆಂಟ್‍‍ನ ಹಿರಿಯ ಉಪಾಧ್ಯಕ್ಷರಾದ ಮಲಿಂದ್ ಕಪೂರ್‍‍ರವರು ಮಾತನಾಡಿ, ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್‍‍ಗಳಿಗೆ ಪರ್ಯಾಯವಾಗಿ ಬೇರೆ ಇಂಧನಗಳತ್ತ ಗಮನಹರಿಸಿರುವುದಕ್ಕೆ ಅಭಾರಿಯಾಗಿದ್ದೇವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿ‍ಎಸ್ 6 ಸಿ‍ಎನ್‍‍ಜಿ ಆಟೋರಿಕ್ಷಾಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಭೋಪಾಲ್‍‍ನಲ್ಲಿ ಸಿ‍ಎನ್‍‍ಜಿ ಸ್ಟೇಷನ್‍‍ಗಳನ್ನು ಶುರು ಮಾಡುತ್ತಿರುವುದರಿಂದ ಚಿಕ್ಕ ಕಮರ್ಷಿಯಲ್ ವಾಹನ ಉದ್ಯಮವು ಮತ್ತಷ್ಟು ಚೇತರಿಕೆಯನ್ನು ಕಾಣಲಿದೆ. ಭಾರತದಲ್ಲಿ ಪಿಯಾಜಿಯೊ ಕಂಪನಿಯು ಸಿ‍ಎನ್‍‍ಜಿ ತ್ರಿ ಚಕ್ರ ವಾಹನಗಳ ದೊಡ್ಡ ಸರಣಿಯನ್ನು ಹೊಂದಿದೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಬಿ‍ಎಸ್ 6 ಸಿ‍ಎನ್‍‍ಜಿ ಆಟೋರಿಕ್ಷಾಗಳನ್ನು ಬಿಡುಗಡೆಗೊಳಿಸಿದ ಪಿಯಾಜಿಯೊ

ಈ ಸಿ‍ಎನ್‍‍ಜಿ ಮೂಲ ಸೌಕರ್ಯದಿಂದಾಗಿ, ಭೋಪಾಲ್‍‍ನಲ್ಲಿರುವ ಬಹು ಸಂಖ್ಯೆಯ ಆಟೋ ರಿಕ್ಷಾಗಳು ಸಿ‍ಎನ್‍‍ಜಿಯನ್ನು ಅಳವಡಿಸಿಕೊಂಡು, ಸಿ‍ಎನ್‍‍ಜಿಗೆ ಬದಲಾಗಲಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಹಲವಾರು ಬದಲಾವಣೆಗಳಾಗಲಿವೆ ಎಂದು ಹೇಳಿದರು.

Most Read Articles

Kannada
English summary
Piaggio launches its BS6 range of CNG 3 wheelers in Bhopal - Read in Kannada
Story first published: Wednesday, December 18, 2019, 12:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X