ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಖರೀದಿಸಿದ ರಣವೀರ್ ಸಿಂಗ್

ಇತ್ತೀಚಿಗಷ್ಟೇ ಉರುಸ್ ಎಸ್‍‍ಯುವಿಯ 50ನೇ ಯುನಿಟ್ ಅನ್ನು ಭಾರತದಲ್ಲಿ ಮಾರಾಟ ಮಾಡಲಾಯಿತು. ಇದರಿಂದಾಗಿ ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಮೊದಲ 12 ತಿಂಗಳಲ್ಲಿಯೇ ಕಂಪನಿಯು ವೇಗವಾಗಿ 50 ವಾಹನಗಳನ್ನು ಮಾರಾಟ ಮಾಡಿದಂತಾಗಿದೆ.

ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಖರೀದಿಸಿದ ರಣವೀರ್ ಸಿಂಗ್

ಬಾಲಿವುಡ್ ನಟ ರಣವೀರ್ ಸಿಂಗ್‍‍ರವರು ವಿಶ್ವದ ಅತಿ ವೇಗದ ಎಸ್‍‍ಯುವಿ‍‍ಗಳಲ್ಲಿ ಒಂದಾದ ಲ್ಯಾಂಬೊರ್ಗಿನಿ ಉರುಸ್ ಎಸ್‍‍ಯುವಿಯನ್ನು ಖರೀದಿಸಿದ್ದಾರೆ. ಇತ್ತೀಚಿಗೆ ತಮ್ಮ ಹೊಸ ಎಸ್‍‍ಯುವಿಯನ್ನು ಚಲಾಯಿಸುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಗಲ್ಲಿ ಬಾಯ್ ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ರಣವೀರ್ ಸಿಂಗ್‍‍ರವರು ಈಗ ಕಬೀರ್ ಖಾನ್ ನಿರ್ದೇಶನದ 83 ಎಂಬ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಖರೀದಿಸಿದ ರಣವೀರ್ ಸಿಂಗ್

ಈ ಚಿತ್ರವು 2020ರ ಏಪ್ರಿಲ್‍‍ನಲ್ಲಿ ಬಿಡುಗಡೆಯಾಗಲಿದೆ. ರಣವೀರ್ ಸಿಂಗ್‍‍ರವರು ತಮ್ಮ ಫ್ಯಾಷನ್‌ಗೆ ಹೆಸರುವಾಸಿಯಾಗಿದ್ದಾರೆ. ಈಗಾಗಲೇ ಹಲವಾರು ದುಬಾರಿ ಕಾರುಗಳನ್ನು ಹೊಂದಿರುವ ರಣವೀರ್‍ ಸಿಂಗ್‍‍ರವರು ಇತ್ತೀಚಿಗೆ ಲ್ಯಾಂಬೊರ್ಗಿನಿ ಉರುಸ್ ಕಾರ್ ಅನ್ನು ಖರೀದಿಸಿದ್ದಾರೆ.

ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಖರೀದಿಸಿದ ರಣವೀರ್ ಸಿಂಗ್

ಅಂದಹಾಗೆ ರಣವೀರ್ ಸಿಂಗ್‍‍ರವರು ಕೆಂಪು ಬಣ್ಣದ ಲ್ಯಾಂಬೊರ್ಗಿನಿ ಉರುಸ್ ಎಸ್‍‍ಯುವಿಯನ್ನು ಖರೀದಿಸಿದ್ದಾರೆ. ಲ್ಯಾಂಬೊರ್ಗಿನಿ ಉರುಸ್ ಎಸ್‍‍ಯುವಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 3 ಕೋಟಿಗಳಾಗಿದೆ.

ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಖರೀದಿಸಿದ ರಣವೀರ್ ಸಿಂಗ್

ತೆರಿಗೆ ಸೇರಿದಂತೆ ಸಂಬಂಧಪಟ್ಟ ಶುಲ್ಕಗಳನ್ನು ಪಾವತಿಸಿ ರಸ್ತೆಗಿಳಿದ ನಂತರ ಈ ಎಸ್‍‍ಯುವಿಯ ಬೆಲೆ ರೂ.3.50 ಕೋಟಿಗಳಾಗಲಿದೆ. ಲ್ಯಾಂಬೊರ್ಗಿನಿ ಉರುಸ್ ಆಫ್-ರೋಡ್ ಆಗಿರುವುದರ ಜೊತೆಗೆ ಐಷಾರಾಮಿ ಆಧಾರಿತ ಎಸ್‍‍ಯುವಿಯಾಗಿದೆ.

ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಖರೀದಿಸಿದ ರಣವೀರ್ ಸಿಂಗ್

ಈ ಎಸ್‍‍ಯುವಿ ಆಫ್ ರೋಡ್‍‍ನಲ್ಲಿ ಮಾತ್ರವಲ್ಲದೇ ರೇಸ್ ಟ್ರಾಕ್‍‍ಗಳಲ್ಲಿಯೂ ಸಹ ತನ್ನ ಸಾಮರ್ಥ್ಯವನ್ನು ತೋರುತ್ತದೆ. ಇದರ ಜೊತೆಗೆ ಈ ಎಸ್‍‍ಯುವಿ ಆರಾಮದಾಯಕ ಅನುಭವವನ್ನು ನೀಡುತ್ತದೆ. ಲ್ಯಾಂಬೊರ್ಗಿನಿ ಉರುಸ್ ಭಾರತದಲ್ಲಿ ಹೆಚ್ಚು ಮಾರಾಟವಾದ ಲ್ಯಾಂಬೊರ್ಗಿನಿ ಕಂಪನಿಯ ವಾಹನವಾಗಿದೆ.

ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಖರೀದಿಸಿದ ರಣವೀರ್ ಸಿಂಗ್

ಲ್ಯಾಂಬೊರ್ಗಿನಿ ಉರುಸ್‍‍ನಲ್ಲಿ ಹೊಸ 4.0 ಲೀಟರಿನ ವಿ8 ಟ್ವಿನ್ ಟರ್ಬೊ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6,000 ಆರ್‍‍ಪಿ‍ಎಂನಲ್ಲಿ 650 ಬಿ‍‍ಹೆಚ್‍‍ಪಿ ಪವರ್ ಹಾಗೂ 2,250 ಆರ್‍‍ಪಿಎಂನಲ್ಲಿ 850 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಖರೀದಿಸಿದ ರಣವೀರ್ ಸಿಂಗ್

ಉರುಸ್ 3.6 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸೆಲೆರೇಟ್ ಮಾಡಿದರೆ, 0 - 200 ಕಿ.ಮೀ ವೇಗವನ್ನು 12.8 ಸೆಕೆಂಡುಗಳಲ್ಲಿ ಆಕ್ಸೆಲೆರೇಟ್ ಮಾಡುತ್ತದೆ. ಈ ಎಸ್‍‍ಯುವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದ್ದು, ಪ್ರಪಂಚದಲ್ಲಿರುವ ಅತಿ ವೇಗದ ಎಸ್‍‍ಯುವಿಯಾಗಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಖರೀದಿಸಿದ ರಣವೀರ್ ಸಿಂಗ್

ಬ್ರೇಕಿಂಗ್ ಸಹ ಗಮನಾರ್ಹವಾಗಿದ್ದು, ಸಡನ್ ಆಗಿ ಬ್ರೇಕ್ ಹಾಕಿದಾಗ, 33.7 ಮೀಟರ್‍‍ಗಳಲ್ಲಿ 100 ಕಿ.ಮೀ ವೇಗದಿಂದ 0 ಕಿ.ಮೀ ವೇಗಕ್ಕೆ ಬರುತ್ತದೆ. ಉರುಸ್ ನಾಲ್ಕು ಸೀಟುಗಳನ್ನು ಹೊಂದಿದೆ. 360 ಡಿಗ್ರಿ ಸರೌಂಡ್ ವೀವ್ ಕ್ಯಾಮೆರಾ, ಕಸ್ಟಮ್ ಬ್ಯಾಂಗ್, ಒಲುಫ್ಸೆನ್ 3 ಡಿ ಸರೌಂಡ್ ಸೌಂಡ್ ಸಿಸ್ಟಂ ಹಾಗೂ ಅನಿಮಾ ಡ್ರೈವ್ ಮೋಡ್‌ಗಳಂತಹ ಫೀಚರ್‍‍ಗಳನ್ನು ಹೊಂದಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಖರೀದಿಸಿದ ರಣವೀರ್ ಸಿಂಗ್

ಈ ಡ್ರೈವ್ ಮೋಡ್‌ಗಳಲ್ಲಿ ಸಬಿಯಾ, ಟೆರ್ರಾ, ನೆವ್, ಇಗೊ, ಸ್ಟ್ಯಾಂಡರ್ಡ್ ಸ್ಟ್ರಾಡಾ, ಸ್ಪೋರ್ಟ್ ಮತ್ತು ಕೊರ್ಸಾ ಸೇರಿದಂತೆ ಆರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ. ಸೆಂಟರ್ ಕನ್ಸೋಲ್‌ನಲ್ಲಿರುವ ಟ್ಯಾಂಬುರೊ ಡ್ರೈವಿಂಗ್ ಮೋಡ್ ಸೆಲೆಕ್ಟರ್ ಎಲ್ಲಾ ಡೈನಾಮಿಕ್ ವೆಹಿಕಲ್ ಸಿಸ್ಟಂಗಳನ್ನು ನಿಯಂತ್ರಿಸುತ್ತದೆ.

ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಖರೀದಿಸಿದ ರಣವೀರ್ ಸಿಂಗ್

ಸ್ಟ್ರಾಡಾ, ಸ್ಪೋರ್ಟ್, ಕೊರ್ಸಾ ಹಾಗೂ ಹೆಚ್ಚುವರಿ ನೆವ್ (ಸ್ನೋ) ಮೋಡ್‍‍ಗಳ ಮೂಲಕ ಸರ್ಫೇಸ್ ಪರಿಸ್ಥಿತಿಗಳು ಅಥವಾ ಚಾಲಕರ ಆದ್ಯತೆಗೆ ಅನುಗುಣವಾಗಿ ಚಾಲನಾ ಡೈನಾಮಿಕ್ಸ್ ಆಯ್ಕೆ ಮಾಡಿಕೊಳ್ಳಬಹುದು.

ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಖರೀದಿಸಿದ ರಣವೀರ್ ಸಿಂಗ್

ಒಂದು ಆಯ್ಕೆಯಾಗಿ, ಇನ್ನೂ ಎರಡು ಆಫ್-ರೋಡ್ ಸೆಟ್ಟಿಂಗ್‌ಗಳನ್ನು ನೀಡಲಾಗುತ್ತದೆ. ಉರುಸ್ ಎಸ್‍‍ಯುವಿ, ಅವೆಂಟಡಾರ್‌ ಹಾಗೂ ಹುರಾಕನ್‌ ಎಸ್‍‍ಯುವಿಗಳು ಹೊಂದಿರುವ ಗುಣಲಕ್ಷಣಗಳನ್ನು ಹೊಂದಿದೆ.

Most Read Articles

Kannada
English summary
Ranveer Singh Spotted Driving Lamborghini Urus SUV Worth Rs 3 Crore - Read in Kannada
Story first published: Friday, October 4, 2019, 12:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X