ಟಾಟಾ ಟಿಯಾಗೋ ಎನ್‍ಆರ್‍‍ಜಿ ಎ‍ಎಂಟಿ ಬಿಡುಗಡೆ

ಟಾಟಾ ಮೋಟಾರ್ಸ್ ತನ್ನ ಹೊಸ ವಾಹನವಾದ ಎ‍ಎಂ‍‍ಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವ ಕ್ರಾಸ್‍‍ಒವರ್ ಹ್ಯಾಚ್‍‍ಬ್ಯಾಕ್ ಟಿಯಾಗೋ ಎನ್‍ಆರ್‍‍ಜಿ ಕಾರನ್ನು ಬಿಡುಗಡೆಗೊಳಿಸಿದೆ. ಎ‍ಎಂ‍‍ಟಿ ಗೇರ್‍‍ಬಾಕ್ಸ್ ಆಯ್ಕೆಯು ರೆವೊಟ್ರಾನ್ 1.2 ಲೀಟರಿನ ಪೆಟ್ರೋಲ್ ಎಂಜಿನ್‍‍ನೊಂದಿಗೆ ಮಾತ್ರವೇ ದೊರೆಯಲಿದೆ.

ಟಾಟಾ ಟಿಯಾಗೋ ಎನ್‍ಆರ್‍‍ಜಿ ಎ‍ಎಂಟಿ ಬಿಡುಗಡೆ

ಹೊಸ ಎ‍ಎಂ‍‍ಟಿ ಆಟೋಮ್ಯಾಟಿಕ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.6.15 ಲಕ್ಷಗಳಾಗಿದೆ. ಟಾಟಾ ಟಿಯಾಗೋ ಎನ್‍ಆರ್‍‍ಜಿ ಎ‍ಎಂ‍‍ಟಿ ಕಾರು, ಟಾಟಾ ಟಿಯಾಗೋ ಕಾರಿನ ಮಾಡಿಫೈಡ್ ಆವೃತ್ತಿಯಾಗಿದೆ. ಈ ಕಾರಿನಲ್ಲಿ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಪ್ಲಾಸ್ಟಿಕ್ ಕ್ಲಾಡಿಂಗ್ ಬಾಡಿ ಪ್ಯಾನೆಲ್‍‍ಗಳಿವೆ. ಎನ್‍ಆರ್‍‍ಜಿ ಆವೃತ್ತಿ ಹೊಂದಿಲ್ಲದ ಟಾಟಾ ಟಿಯಾಗೋ ವಾಹನವು ಈಗಾಗಲೇ ಎ‍ಎಂ‍‍ಟಿ ಟ್ರಾನ್ಸ್ ಮಿಷನ್‍‍ನೊಂದಿಗೆ ಪೆಟ್ರೋಲ್ ಮಾದರಿಗಳಲ್ಲಿ ಮಾರಾಟವಾಗುತ್ತಿದೆ.

ಟಾಟಾ ಟಿಯಾಗೋ ಎನ್‍ಆರ್‍‍ಜಿ ಎ‍ಎಂಟಿ ಬಿಡುಗಡೆ

ಟಾಟಾ ಟಿಯಾಗೋದಲ್ಲಿರುವ ರೆವೊಟ್ರಾನ್ ಪೆಟ್ರೋಲ್ ಎಂಜಿನ್, 3 ಸಿಲಿಂಡರಿನ 1,199 ಸಿಸಿ ಯೂನಿಟ್ ಹೊಂದಿದ್ದು, 83 ಬಿ‍‍ಹೆಚ್‍‍ಪಿಯನ್ನು 6000 ಆರ್‍‍ಪಿ‍ಎಂನಲ್ಲಿ ಹಾಗೂ 114 ಎನ್‍ಎಂ ಟಾರ್ಕ್ ಅನ್ನು 3,500 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ.

ಟಾಟಾ ಟಿಯಾಗೋ ಎನ್‍ಆರ್‍‍ಜಿ ಎ‍ಎಂಟಿ ಬಿಡುಗಡೆ

ಎ‍ಎಂ‍‍ಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಜೊತೆಗೆ 5 ಸ್ಪೀಡಿನ ಮ್ಯಾನುಯಲ್ ಗೇರ್‍‍ಬಾಕ್ಸ್ ಅನ್ನು ಸಹ ಹೊಂದಿದೆ. ಟಾಟಾ ಟಿಯಾಗೋ ಎನ್‍ಆರ್‍‍ಜಿ ಕಾರಿನಲ್ಲಿ ರೆವೊಟಾರ್ಕ್ 1.05 ಲೀಟರಿನ 3 ಸಿಲಿಂಡರ್ 1,047 ಸಿಸಿ ಎಂಜಿನ್ ಅಳವಡಿಸಲಾಗಿದೆ.

ಟಾಟಾ ಟಿಯಾಗೋ ಎನ್‍ಆರ್‍‍ಜಿ ಎ‍ಎಂಟಿ ಬಿಡುಗಡೆ

ಈ ಎಂಜಿನ್ 69 ಬಿ‍‍ಹೆಚ್‍‍ಪಿಯನ್ನು 4,000 ಆರ್‍‍ಪಿ‍ಎಂನಲ್ಲಿ ಹಾಗೂ 140 ಎನ್‍‍ಎಂ ಟಾರ್ಕ್ ಅನ್ನು 1,800 - 3,000 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುಯಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಟಾಟಾ ಟಿಯಾಗೋ ಎನ್‍ಆರ್‍‍ಜಿ ದೃಢವಾದ ಬಾಡಿಯನ್ನು ಹೊಂದಿದೆ. ರೆಗ್ಯುಲರ್ ಟಿಯಾಗೋ ಕಾರಿಗಿಂತ 180 ಎಂಎಂ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಕ್ರಾಸ್‍‍ಒವರ್ ಹ್ಯಾಚ್‍‍ಬ್ಯಾಕ್ ನಲ್ಲಿರುವ ವಿನ್ಯಾಸಗಳಾದ ಲೋವರ್ ಬಾಡಿ ಕ್ಲಾಡಿಂಗ್, ಫ್ರಂಟ್ ಬ್ಯಾಕ್ ಸ್ಕಿಡ್ ಪ್ಲೇಟ್, ರೂಫ್ ರೇಲ್ ಹಾಗೂ ಡ್ಯೂಯಲ್ ಟೋನ್ ಕಲರ್‍‍ಗಳಿವೆ.

ಟಾಟಾ ಟಿಯಾಗೋ ಎನ್‍ಆರ್‍‍ಜಿ ಎ‍ಎಂಟಿ ಬಿಡುಗಡೆ

ಈ ಕ್ರಾಸ್‍ಒವರ್ ಕಾರು 3,793 ಎಂಎಂ ಉದ್ದವನ್ನು ಹೊಂದಿದ್ದರೆ, ರೆಗ್ಯುಲರ್ ಟಿಯಾಗೋ ಕಾರು 3,746 ಎಂಎಂ ಉದ್ದವನ್ನು ಹೊಂದಿದೆ. ವ್ಹೀಲ್ ಆರ್ಕ್‍‍ಗಳಿಂದಾಗಿ ಟಿಯಾಗೋ ಎನ್‍ಆರ್‍‍ಜಿಯ ಕಾರು ರೆಗ್ಯುಲರ್ ಟಿಯಾಗೋ ಕಾರಿಗಿಂತ ಹೆಚ್ಚು ಅಗಲವಾಗಿದೆ. ವ್ಹೀಲ್ ಬೇಸ್ ಹಾಗು ಕ್ಯಾಬಿನ್ ಸ್ಪೇಸ್‍‍ಗಳು ಎರಡೂ ಕಾರಿನಲ್ಲೂ ಒಂದೇ ರೀತಿಯಲ್ಲಿವೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಟಾಟಾ ಟಿಯಾಗೋ ಎನ್‍ಆರ್‍‍ಜಿ ಎ‍ಎಂಟಿ ಬಿಡುಗಡೆ

ಟಾಟಾ ಟಿಯಾಗೋ ಎನ್‍ಆರ್‍‍ಜಿ ಕಾರು 3793 ಎಂಎಂ ಉದ್ದ, 1665 ಎಂಎಂ ಅಗಲ, 1587 ಎಂಎಂ ಎತ್ತರ, 2400 ಎಂಎಂ ವ್ಹೀಲ್ ಬೇಸ್ ಹಾಗೂ 35 ಲೀಟರ್‍‍ನಷ್ಟು ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ.

MOST READ: ಮುಂದಿನ 3 ವರ್ಷಗಳಿಗೆ ಮಹೀಂದ್ರಾ ಹೂಡಿಕೆ ಮಾಡಲಿರುವ ಬಂಡವಾಳವೆಷ್ಟು?

ಟಾಟಾ ಟಿಯಾಗೋ ಎನ್‍ಆರ್‍‍ಜಿ ಎ‍ಎಂಟಿ ಬಿಡುಗಡೆ

ಟಾಟಾ ಟಿಯಾಗೋ ಎನ್‍ಆರ್‍‍ಜಿ ಕಾರಿನ ಒಳವಿನ್ಯಾಸವನ್ನು ಆಕ್ಟೀವ್ ಬ್ಲಾಕ್ ಥೀಮ್, ವೈಬ್ರೆಂಟ್ ಕ್ಯಾನನ್ ಆರೇಂಜ್‍‍ನಿಂದ ಹೈಲೈಟ್ ಮಾಡಲಾಗಿದೆ. ಸೀಟುಗಳನ್ನು ಫ್ಯಾಬ್ರಿಕ್‍‍ನಿಂದ ತಯಾರಿಸಲಾಗಿದೆ. ಈ ಕಾರಿನಲ್ಲಿ 5 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂಯಿದ್ದು ನ್ಯಾವಿಗೇಶನ್ ಅನ್ನು ತೋರಿಸುತ್ತದೆ.

MOST READ: ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

ಟಾಟಾ ಟಿಯಾಗೋ ಎನ್‍ಆರ್‍‍ಜಿ ಎ‍ಎಂಟಿ ಬಿಡುಗಡೆ

ಇದರ ಜೊತೆಗೆ 8 ಸ್ಪೀಕರಿನ ಮ್ಯೂಸಿಕ್ ಸಿಸ್ಟಂ ನೀಡಲಾಗಿದೆ. ಹೊಸ ಸುರಕ್ಷಾ ಕ್ರಮಗಳಿಗನುಗುಣವಾಗಿ ಡ್ಯೂಯಲ್ ಏರ್‍‍ಬ್ಯಾಗ್ಸ್, ಎ‍‍ಬಿ‍ಎಸ್, ಇ‍‍ಬಿ‍‍ಡಿ, ಕಾರ್ನರ್ ಸ್ಟಾಬಿಲಿಟಿ ಕಂಟ್ರೋಲ್‍‍ಗಳನ್ನು ಅಳವಡಿಸಲಾಗಿದೆ.

Most Read Articles

Kannada
English summary
tata tiago nrg amt automatic transmission launched - Read in kannada
Story first published: Thursday, May 30, 2019, 16:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X