TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಉಬರ್ ಹೊಸ ರೂಲ್ಸ್ ಫಾಲೋ ಮಾಡದಿದ್ರೆ ನೀವು ಕೂಡಾ ಬ್ಯಾನ್ ಆಗಬಹುದು..!
ನಗರ ಪ್ರದೇಶಗಳಲ್ಲಿ ಕ್ಯಾಬ್ ಸೇವೆಗಳು ಇಲ್ಲವಾದಲ್ಲಿ ಏನೆಲ್ಲಾ ಆಗಬಹುದು ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಹೀಗಾಗಿ ಹತ್ತಾರು ಪ್ರಮುಖ ಸಂಸ್ಥೆಗಳು ಇಂದು ಆ್ಯಪ್ ಮೂಲಕ ಕ್ಯಾಬ್ ಸೇವೆಗಳನ್ನು ಆರಂಭಿಸಿರುವುದಲ್ಲದೇ ಕೋಟ್ಯಾಂಟರ ರೂಪಾಯಿ ವಹಿವಾಟು ನಡೆಸುತ್ತಿದ್ದು, ಇವುಗಳಲ್ಲಿ ಮುಂಚೂಣಿಯಲ್ಲಿರುವ ಉಬರ್ ಸಂಸ್ಥೆಯು ಕ್ಯಾಬ್ ಸೇವೆಗಳಲ್ಲಿ ಇದೀಗ ಮಹತ್ವದ ಬದಲಾವಣೆ ತರುತ್ತಿದೆ.
ಉಬರ್ ಸಂಸ್ಥೆಯು ಭಾರತದಲ್ಲಿ ಅಷ್ಟೇ ಅಲ್ಲದೇ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ನೀಡುತ್ತಿದ್ದು, ಭಾರತೀಯ ಸಂಸ್ಥೆಯಾದ ಓಲಾ ಜೊತೆ ಭಾರೀ ಪೈಪೋಟಿ ನಡೆಸುತ್ತಿದೆ. ಹೀಗಾಗಿ ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ನೀಡಲು ಇದೀಗ ಕೆಲವು ಮಹತ್ವದ ಸುರಕ್ಷಾ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ಕ್ಯಾಬ್ ಚಾಲಕರಿಂದ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ, ಹೇಳಿದ ಕಡೆಗೆ ಕರೆದುಕೊಂಡು ಹೋಗದೆ ಮಾರ್ಗ ಬದಲಿಸುವುದು ಮತ್ತು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುವುದಲ್ಲದೇ ಮಾರ್ಗ ಮಧ್ಯದಲ್ಲೇ ಪ್ರಯಾಣಿಕರನ್ನು ಕೆಳಗಿಳಿಸುವ ಪ್ರಕರಣಗಳು ಹೆಚ್ಚುತ್ತಿವೆ.
ಹೀಗಾಗಿ ಕ್ಯಾಬ್ ಸೇವೆಗಳಿಂದ ಅನುಕೂಲಕತೆಗಳಿದ್ದರೂ ಸಹ ಇತ್ತೀಚೆಗೆ ನಡೆದ ಕೆಲವು ಅಹಿತಕರ ಘಟನೆಗಳಿಂದಾಗಿ ಕ್ಯಾಬ್ ಸೇವೆಗಳ ಮೇಲೆ ಅನುಮಾನ ಮೂಡಿಸುವಂತಾಗಿದ್ದು, ಕೆಲವೊಮ್ಮೆ ಪ್ರಯಾಣಿಕರಿಂದಲೂ ಕ್ಯಾಬ್ ಚಾಲಕರ ಮೇಲೆ ಹಲ್ಲೆ, ದರೋಡೆ ಪ್ರಕರಣಗಳು ಕೂಡಾ ದಾಖಲಾಗಿದ್ದವು.
ಜೊತೆಗೆ ಬೇಕಾಬಿಟ್ಟಿಯಾಗಿ ಕ್ಯಾಬ್ ಬುಕ್ ಮಾಡಿ ತದನಂತರ ಟ್ರಿಪ್ ಕ್ಯಾನ್ಸಲ್ ಮಾಡುವುದು ಮತ್ತು ಕಾರಿನ ಬಿಡಿಭಾಗಗಳನ್ನು ಹಾಳುಮಾಡುವ ಪ್ರಕರಣಗಳು ಕೂಡಾ ಹೆಚ್ಚುತ್ತಿದ್ದು, ಇದರಿಂದ ಕ್ಯಾಬ್ ಸೇವೆಗಳ ಬಗೆಗೆ ಪ್ರಯಾಣಿಕರಿಗೆ ಅಷ್ಟೇ ಅಲ್ಲದೇ ಕ್ಯಾಬ್ ಚಾಲಕರ ಮನಸ್ಸಿನಲ್ಲೂ ಕೂಡಾ ಭಯದ ವಾತಾವರಣ ಶುರುವಾಗಿದೆ.
ಇದನ್ನು ಹೊಗಲಾಡಿಸುವ ಸಂಬಂಧ ಕೆಲವು ಹೊಸ ಕಮ್ಯುನಿಟಿ ಗೈಡ್‌ಲೆನ್ಸ್ (ಸಮುದಾಯ ಮಾರ್ಗಸೂಚಿ)ಗಳನ್ನು ಜಾರಿ ಮಾಡಿರುವ ಉಬರ್ ಸಂಸ್ಥೆಯು ಸುರಕ್ಷತೆಯ ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಜಾರಿ ಮಾಡಲಾಗಿರುವ ಕೆಲವು ಹೊಸ ರೂಲ್ಸ್‌ಗಳನ್ನು ಭಾರತದಲ್ಲಿ ಜಾರಿ ಮಾಡಿದೆ.
ಹೊಸ ಸುರಕ್ಷಾ ಮಾರ್ಗಸೂಚಿಗಳಲ್ಲಿ ಏನಿದೆ?
* ಪ್ರಯಾಣಿಕರು ಕ್ಯಾಬ್‌ಗೆ ಹಾನಿ ಮಾಡುವಂತಿಲ್ಲ.
* ಕಾರಿನ ಒಳಗೆ ತಿಂಡಿ ತಿನಿಸು ಮತ್ತು ತಂಪು ಪಾನಿಯಗಳಿಂದ ಹಾಳುಮಾಡುವಂತಿಲ್ಲ.
* ಪ್ರಯಾಣದ ವೇಳೆ ಮಧ್ಯಪಾನ ಮತ್ತು ಧೂಮಪಾನ ಮಾಡುವಂತಿಲ್ಲ.
* ಮಧ್ಯಪಾನ ಸೇವಿಸಿ ಕಾರಿನಲ್ಲಿ ವಾಂತಿ ಮಾಡುವಂತಿಲ್ಲ.
ಮುಂದುವರಿದು..
* ಪ್ರಮಾಣದ ವೇಳೆ ಮೈ ಕೈ ಮುಟ್ಟಿ ಮಾತನಾಡಿಸುವಂತಿಲ್ಲ(ಇದು ಡೈವರ್ ಮತ್ತು ಪ್ರಯಾಣಿಕ ಇಬ್ಬರಿಗೂ ಅನ್ವಯ)
* ಕೆಟ್ಟಪದಗಳಿಂದ ನಿಂದಿಸುವುದು ಮತ್ತು ಸಂಜ್ಞೆಗಳನ್ನು ಮಾಡುವಂತಿಲ್ಲ.
* ಕ್ಯಾಬ್ ಚಾಲನೆ ವೇಳೆ ಬೇಡವಾದ ಕರೆಗಳನ್ನು ಸ್ವಿಕರಿಸುವಂತಿಲ್ಲ( ಒಂದು ಟ್ರಿಪ್ ಪೂರ್ಣ ಮುಗಿಯುವ ತನಕ)
* ಕ್ಯಾಬ್ ಚಾಲನೆ ವೇಳೆ ಸ್ಥಳೀಯ ಟ್ರಾಫಿಕ್ ರೂಲ್ಸ್‌ಗಳನ್ನು ಉಲ್ಲಂಘನೆ ಮಾಡುವಂತಿಲ್ಲ.
* ನಿರ್ದಿಷ್ಟ ಮಟ್ಟದ ಕ್ಷೇತ್ರವನ್ನು ಹೊರತುಪಡಿಸಿ ಕ್ಯಾಬ್ ಸೇವೆಗಳನ್ನು ಮುಂದುವರಿಸುವಂತಿಲ್ಲ.
ಒಂದು ವೇಳೆ ಕ್ಯಾಬ್ ಚಾಲಕರಾಗಲಿ ಅಥವಾ ಪ್ರಯಾಣಿಕರಾಗಲಿ ಈ ಮೇಲಿನ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದಲ್ಲಿ ಉಬರ್ ಸೇವೆಗಳಿಂದ ಬ್ಯಾನ್ ಮಾಡುವುದಲ್ಲದೇ ಸೂಕ್ತ ಕಾನೂನು ಕ್ರಮಕ್ಕೂ ಉಬರ್ ಕೆಲವು ನಿಯಮಗಳನ್ನು ಜಾರಿ ಮಾಡಿದೆ.
MOST READ: 102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?
ಇದರಲ್ಲದೇ ಕ್ಯಾಬ್ ಸೇವೆಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಕ್ಯಾಬ್ ಚಾಲಕರು ಉತ್ತಮ ರೇಟಿಂಗ್ ಗಿಟ್ಟಿಸಿಕೊಳ್ಳಬೇಕಲ್ಲದೇ ಕನಿಷ್ಠ ಕಾನ್ಸಲೆಷನ್ ಕಾಯ್ದುಕೊಳ್ಳಬೇಕು. ಹೀಗಾಗಿ ಕ್ಯಾಬ್ ಚಾಲಕರು ಕಡ್ಡಾಯವಾಗಿ ಹಿಂದಿನ 500 ಟ್ರಿಪ್‌ಗಳಲ್ಲಿ ಗರಿಷ್ಠಮಟ್ಟದ ರೇಟಿಂಗ್ ಇದ್ದಲ್ಲಿ ಮಾತ್ರ ಸೇವೆಗಳನ್ನು ಮುಂದುವರಿಸಬಹುದಾಗಿದ್ದು, ರೂಲ್ಸ್ ಬ್ರೇಕ್ ಮಾಡಿದ್ದಲ್ಲಿ ಬ್ಯಾನ್ ಮಾಡಲಾಗುತ್ತೆ.
MOST READ: ಹೊಸ ರೂಲ್ಸ್ ಜಾರಿ- ಕಾಂಗ್ರೆಸ್ ಮುಖಂಡನ ಕಾರಿನ ನಂಬರ್ ಪ್ಲೇಟ್ ಕಿತ್ತುಹಾಕಿದ ಪೊಲೀಸರು..!
ಒಟ್ಟಿನಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ ಮತ್ತು ಕ್ಯಾಬ್ ಚಾಲಕರಿಗೆ ಧೈರ್ಯ ತುಂಬಲು ಹೊಸ ಮಾರ್ಗಸೂಚಿಗಳನ್ನು ಜಾರಿ ಮಾಡಿರುವ ಉಬರ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಕ್ಯಾಬ್‌ಗಳಲ್ಲಿ ಆಗುತ್ತಿರುವ ಅಹಿತಕರ ಘಟನೆಗಳನ್ನು ಪರಿಣಾಮಕಾರಿಯಾಗಿ ತಗ್ಗಿಸಲಿದೆ.