ಲಾಕ್‌ಡೌನ್ ಎಫೆಕ್ಟ್: ಭಾರೀ ಪ್ರಮಾಣದ ನಷ್ಟ ಅನುಭವಿಸಲಿದೆ ವಿಮಾನಯಾನ ಉದ್ಯಮ

ಕೋವಿಡ್ -19 ಕಾರಣಕ್ಕೆ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ವಿಮಾನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ವಿಮಾನ ಕಂಪೆನಿಗಳು ಭಾರೀ ನಷ್ಟವನ್ನು ಅನುಭವಿಸುತ್ತಿವೆ ಎಂದು ಇನ್ಫ್ರಾ ಅಡ್ವೈಸರಿ ಸರ್ವೀಸಸ್ ಸಂಸ್ಥೆ ಸಿಆರ್‍‌ಸಿಎಲ್ ವರದಿಯಲ್ಲಿ ತಿಳಿಸಿದೆ.

ಲಾಕ್‌ಡೌನ್ ಎಫೆಕ್ಟ್: ಭಾರೀ ಪ್ರಮಾಣದ ನಷ್ಟ ಅನುಭವಿಸಲಿದೆ ವಿಮಾನಯಾನ ಉದ್ಯಮ

ಕ್ರಿಸಿಲ್ ಇನ್ಫ್ರಾಸ್ಟ್ರಕ್ಚರ್ ವರದಿಯ ಪ್ರಕಾರ, ಈ ಹಣಕಾಸು ವರ್ಷದಲ್ಲಿ ವಾಯುಯಾನ ಉದ್ಯಮವು ರೂ.24,000 ಕೋಟಿಗಳಿಂದ ರೂ.25,000 ಕೋಟಿಗಳವರೆಗೆ ನಷ್ಟ ಅನುಭವಿಸಲಿದೆ. ವಿಮಾನಯಾನ ಸಂಸ್ಥೆಗಳು ಒಟ್ಟು 70%ನಷ್ಟು ಅಂದರೆ ರೂ.17,000 ಕೋಟಿ ನಷ್ಟ ಅನುಭವಿಸಲಿದೆ. ವಿಮಾನ ನಿಲ್ದಾಣಗಳ ಆಪರೇಟರ್‌ಗಳು ರೂ.5,000-5,500 ಕೋಟಿ ಹಾಗೂ

ವಾಯು ಸೇವೆಗಳಿಗೆ ಸಂಬಂಧಿಸಿದ ಇತರ ವ್ಯವಹಾರಗಳಿಗೆ ರೂ.1,700-1,800 ಕೋಟಿ ನಷ್ಟ ಉಂಟಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ಭಾರೀ ಪ್ರಮಾಣದ ನಷ್ಟ ಅನುಭವಿಸಲಿದೆ ವಿಮಾನಯಾನ ಉದ್ಯಮ

ಕಳೆದ 10 ವರ್ಷಗಳಿಂದ ವಿಮಾನಯಾನ ಉದ್ಯಮವು ಪ್ರತಿ ವರ್ಷ 11%ನಷ್ಟು ಬೆಳವಣಿಗೆಯನ್ನು ಕಾಣುತ್ತಿತ್ತು. ಕರೋನಾ ವೈರಸ್ ಕಾರಣದಿಂದ ಉಂಟಾದ ನಷ್ಟದಿಂದಾಗಿ ಈ ಬೆಳವಣಿಗೆಯನ್ನು ಸ್ಥಗಿತಗೊಳಿಸಲಾಗಿದೆ. ಕರೋನಾ ವೈರಸ್‌ನಿಂದ ವಿಮಾನಯಾನ ಉದ್ಯಮವು ಹೆಚ್ಚು ನಷ್ಟವನ್ನು ಅನುಭವಿಸಲಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ಭಾರೀ ಪ್ರಮಾಣದ ನಷ್ಟ ಅನುಭವಿಸಲಿದೆ ವಿಮಾನಯಾನ ಉದ್ಯಮ

ಮುಂಬೈ, ದೆಹಲಿ, ಚೆನ್ನೈ ಹಾಗೂ ಕೋಲ್ಕತ್ತಾದ ಹಬ್‌ಗಳಲ್ಲಿನ ನಿಷೇಧವನ್ನು ದೀರ್ಘಕಾಲದವರೆಗೆ ಮುಂದುವರಿಸಿದರೆ ನಷ್ಟದ ಪ್ರಮಾಣವು ಹೆಚ್ಚಾಗಲಿದೆ ಎಂದು ಕ್ರಿಸಿಲ್ ಹೇಳಿದೆ. ವಿಮಾನಯಾನ ಕ್ಷೇತ್ರವು ಸುಧಾರಿಸಿಕೊಳ್ಳಲು ಇನ್ನೂ 2-3 ವರ್ಷಗಳು ಬೇಕಾಗುತ್ತವೆ ಎಂದು ಹೇಳಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ಭಾರೀ ಪ್ರಮಾಣದ ನಷ್ಟ ಅನುಭವಿಸಲಿದೆ ವಿಮಾನಯಾನ ಉದ್ಯಮ

ಮೊದಲ ತ್ರೈಮಾಸಿಕದಲ್ಲಿ ಲಾಕ್‌ಡೌನ್ ಅನ್ನು ವಿಸ್ತರಿಸಿದರೆ ಒಟ್ಟಾರೆ ನಷ್ಟ ಹೆಚ್ಚಾಗಬಹುದು. ವಿಮಾನ ಕಾರ್ಯಾಚರಣೆ ಆರಂಭವಾದ ನಂತರ ಅವುಗಳ ಸಾಮರ್ಥ್ಯ 50%ನಿಂದ 60%ರವರೆಗೆ ಇರಲಿದೆ. ಈ ಅವಧಿಯಲ್ಲಿ ವಿಮಾನಯಾನಗಳ ವಿಲೀನ, ಸ್ವಾಧೀನ ಹಾಗೂ ವಿಸ್ತರಣಾ ಯೋಜನೆಗಳ ಬಗ್ಗೆ ಗಮನ ಹರಿಸಲಾಗುವುದು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಎಫೆಕ್ಟ್: ಭಾರೀ ಪ್ರಮಾಣದ ನಷ್ಟ ಅನುಭವಿಸಲಿದೆ ವಿಮಾನಯಾನ ಉದ್ಯಮ

ರಸ್ತೆ ಮತ್ತು ಹೆದ್ದಾರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಮಾರ್ಚ್-ಜೂನ್ ಟೋಲ್ ಆಪರೇಟರ್‌ಗಳಿಗೆ ರೂ.3,450-3,700 ಕೋಟಿಗಳ ನಷ್ಟ ಉಂಟಾಗಲಿದೆ. ಈ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಹೆಚ್‌ಎಐ) ರೂ.2,100-2,200 ಕೋಟಿ ನಷ್ಟ ಉಂಟಾಗಲಿದೆ.

ಲಾಕ್‌ಡೌನ್ ಎಫೆಕ್ಟ್: ಭಾರೀ ಪ್ರಮಾಣದ ನಷ್ಟ ಅನುಭವಿಸಲಿದೆ ವಿಮಾನಯಾನ ಉದ್ಯಮ

ಇದರ ಜೊತೆಗೆ ಎನ್‌ಹೆಚ್‌ಎಐ 6,000 ಕಿ.ಮೀ ರಸ್ತೆಗಳನ್ನು ನಿರ್ಮಿಸುವ ಮೂಲಕ 2025ರ ಹಣಕಾಸು ವರ್ಷದ ವೇಳೆಗೆ ರೂ.80,000-85,000 ಕೋಟಿ ಸಂಗ್ರಹಿಸಲು ಯೋಜಿಸಿದೆ.

Most Read Articles

Kannada
English summary
Aviation industry will suffer loss of 25000 crore due to coronavirus pandemic. Read in Kannada.
Story first published: Saturday, May 9, 2020, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X