Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಜಾಗತಿಕ ಡಿಜಿಟಲ್ ಹಬ್ ತೆರೆಯಲು ಮುಂದಾದ ಫಿಯೆಟ್
ಫಿಯೆಟ್ ಕ್ರಿಸ್ಲರ್ ಆಟೋಮೊಬೈಲ್ಸ್ (ಎಫ್‌ಸಿಎ) ಇಂಡಿಯಾ ಕಂಪನಿಯು ಹೈದರಾಬಾದ್‌ನಲ್ಲಿ ಜಾಗತಿಕ ಡಿಜಿಟಲ್ ಘಟಕವನ್ನು ಸ್ಥಾಪಿಸುವುದಾಗಿ ತಿಳಿಸಿದೆ. ಈ ಡಿಜಿಟಲ್ ಘಟಕವನ್ನು ನಿರ್ಮಿಸಲು ಕಂಪನಿಯು ಸುಮಾರು 150 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ.

ಕಂಪನಿಯು ಈ ಹಣವನ್ನು ಉದಯೋನ್ಮುಖ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ತನ್ನ ಎಲ್ಲಾ ಕಾರ್ಯಾಚರಣೆಗಳನ್ನು ಡಿಜಿಟಲೀಕರಣಗೊಳಿಸಲು ಸಹ ಬಳಸಲಿದೆ. ಈ ಡಿಜಿಟಲ್ ಹಬ್'ಗೆ ಐಸಿಟಿ ಇಂಡಿಯಾ ಎಂದು ಹೆಸರಿಡಲಾಗಿದೆ.

ಈ ಡಿಜಿಟಲ್ ಹಬ್ ಉತ್ತರ ಅಮೆರಿಕಾ ಹಾಗೂ ಇಎಂಇಎ ಪ್ರದೇಶದ ಹೊರಗಿರುವ ಕಂಪನಿಯ ಅತಿದೊಡ್ಡ ಕೇಂದ್ರವಾಗಲಿದೆ. ಈ ಡಿಜಿಟಲ್ ಹಬ್‌ನ ಉದ್ದೇಶವು 2021ರ ಅಂತ್ಯದ ವೇಳೆಗೆ 1,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಕೇಂದ್ರವು ವೆಹಿಕಲ್ ಪ್ರೋಗ್ರಾಂ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಡೇಟಾ ಆಕ್ಸಲರೇಷನ್, ಕ್ಲೌಡ್ ಟೆಕ್ನಾಲಜಿಯಂತಹ ತಂತ್ರಜ್ಞಾನ-ಸಂಬಂಧಿತ ಕ್ಷೇತ್ರಗಳ ಕಾರ್ಯತಂತ್ರದ ಸಾಮರ್ಥ್ಯವನ್ನು ನಿರ್ಮಿಸುವತ್ತ ಗಮನಹರಿಸಲಿದೆ.

ಈ ಮೂಲಕ ಎಫ್‌ಸಿಎ ಕಂಪನಿಯು ಭಾರತದಲ್ಲಿ ತನ್ನ ಹಿಡಿತವನ್ನು ಹೆಚ್ಚಿಸಿಕೊಳ್ಳಲಿದೆ. ಎಫ್‌ಸಿಎ ಗ್ರೂಪ್ ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಅಲ್ಲಿ 3,000ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಂಪನಿಯ ಎಂಜಿನಿಯರಿಂಗ್ ಹಾಗೂ ಉತ್ಪನ್ನ ಅಭಿವೃದ್ಧಿ ಕಾರ್ಯಾಚರಣೆಗಳು ಪುಣೆ ಹಾಗೂ ಚೆನ್ನೈನಲ್ಲಿವೆ. ಮಿಡ್-ಸೈಜ್ ಜೀಪ್ ಕಂಪಾಸ್ ಎಸ್‌ಯುವಿಯನ್ನು ಎಫ್‌ಸಿಎಯ ರಂಜಂಗಾಂವ್ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತದೆ.

ಈ ಘಟಕವು ಕಂಪನಿಯ ಏಕೈಕ ಉತ್ಪಾದನಾ ಘಟಕವಾಗಿದೆ. ಈ ಎಸ್‌ಯುವಿಯನ್ನು 13 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಂಪನಿಯ ಹೊಸ ಡಿಜಿಟಲ್ ಹಬ್ ಬಗ್ಗೆ ಮಾತನಾಡಿದ ಎಫ್‌ಸಿಎ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪಾರ್ತ್ ದತ್ತಾ, ಎಫ್‌ಸಿಎ ಐಸಿಟಿ ಇಂಡಿಯಾ ನಮ್ಮ ತಂತ್ರಜ್ಞಾನದ ಬೆನ್ನೆಲುಬಾಗಿರಲಿದೆ. ಇದು ಭವಿಷ್ಯದ ಚಲನಶೀಲತೆಗಾಗಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ ಎಂದು ಹೇಳಿದರು.

ಇದು ಗ್ರಾಹಕರ ಬಗ್ಗೆ ಗಮನ ಹರಿಸುವ ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುತ್ತದೆ ಎಂದು ಅವರು ಹೇಳಿದರು. ಎಫ್‌ಸಿಎ ಐಸಿಟಿ ಇಂಡಿಯಾ ನಿರ್ದೇಶಕರು ಹಾಗೂ ಮುಖ್ಯಸ್ಥರು ಆದ ಕರೀಮ್ ಲಾಲಾನಿ ಮಾತನಾಡಿ, ನಾವು ಹೆಚ್ಚಿನ ಸಂಖ್ಯೆಯ ಜನರನ್ನು ನೇಮಕ ಮಾಡಿಕೊಳ್ಳುತ್ತೇವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನಮ್ಮ ಎಂಜಿನಿಯರ್‌ಗಳು ಹಾಗೂ ವಿಜ್ಞಾನಿಗಳು ನಮ್ಮ ಗ್ರಾಹಕರಿಗಾಗಿ ಅಭಿವೃದ್ಧಿಪಡಿಸುವ ಹೊಸ ತಂತ್ರಜ್ಞಾನಗಳನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. ಅನೇಕ ಕ್ಷೇತ್ರಗಳಲ್ಲಿ ಜಾಗತಿಕ ಡಿಜಿಟಲ್ ಹಬ್ ಮೂಲಕ ಹೊಸತನವನ್ನು ಹೆಚ್ಚಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ಮಧ್ಯಮ ಗಾತ್ರದ ಎಸ್‌ಯುವಿಯಾದ ಜೀಪ್ ಕಂಪಾಸ್‌ನ ಫೇಸ್‌ಲಿಫ್ಟ್ ಮಾದರಿಯನ್ನು ಕಳೆದ ತಿಂಗಳು ಚೀನಾದಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು. ಶೀಘ್ರದಲ್ಲೇ ಈ ಎಸ್‌ಯುವಿಯು ಭಾರತದಲ್ಲಿ ಬಿಡುಗಡೆಯಾಗಲಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮೂಲಗಳ ಪ್ರಕಾರ, ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಮುಂದಿನ ವರ್ಷ ಯುರೋಪ್ ಹಾಗೂ ಏಷ್ಯಾದಲ್ಲಿ ಬಿಡುಗಡೆಗೊಳಿಸಲಾಗುವುದು. ಸದ್ಯಕ್ಕೆ ಕಂಪನಿಯು ಭಾರತದಲ್ಲಿ ಫೇಸ್‌ಲಿಫ್ಟ್ ಮಾದರಿಗಳ ರೋಡ್ ಟೆಸ್ಟ್ ನಡೆಸುತ್ತಿದೆ.