ಲಾಕ್‌ಡೌನ್ ಸಂಕಷ್ಟ- ಲೀಸ್ ಕಾರುಗಳಿಗೆ ಹೆಚ್ಚಿದ ಬೇಡಿಕೆ...!

ವೈರಸ್ ತಡೆಗಾಗಿ ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ಭಾರತೀಯ ಆಟೋ ಉದ್ಯಮವು ಸಹ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಆಟೋ ಕ್ಷೇತ್ರಕ್ಕೆ ವಿನಾಯ್ತಿ ನೀಡಲಾಗಿದೆಯಾದರೂ ಆರ್ಥಿಕ ಮುಗ್ಗಟ್ಟು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಹೊಸ ಸುರಕ್ಷಾ ಮಾರ್ಗಸೂಚಿತಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿವೆ.

ಲಾಕ್‌ಡೌನ್ ಸಂಕಷ್ಟ- ಲೀಸ್ ಕಾರುಗಳಿಗೆ ಹೆಚ್ಚಿದ ಬೇಡಿಕೆ...!

ಜೊತೆಗೆ ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಮಾರಾಟ ಮಳಿಗೆಗಳು ಪುನಾರಂಭಗೊಂಡ ನಂತರ ವಾಹನ ಖರೀದಿ ಬದಲು ಬುಕ್ಕಿಂಗ್ ಹಣ ವಾಪಸ್ ನೀಡುವಂತೆ ಬೇಡಿಕೆಯಿಡುತ್ತಿದ್ದಾರೆ.

ಸದ್ಯಕ್ಕೆ ವಾಹನ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದು, ಲಾಕ್‌ಡೌನ್ ನಂತರ ವಾಹನ ಮಾರಾಟ ಯೋಜನೆಯಲ್ಲಿದ್ದ ಆಟೋ ಕಂಪನಿಗಳಿಗೆ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುವ ಮೂಲಕ ಮತ್ತೊಂದು ಶಾಕ್ ನೀಡಿದ್ದಾರೆ.

ಲಾಕ್‌ಡೌನ್ ಸಂಕಷ್ಟ- ಲೀಸ್ ಕಾರುಗಳಿಗೆ ಹೆಚ್ಚಿದ ಬೇಡಿಕೆ...!

ಲಾಕ್‌ಡೌನ್‌ಗೂ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಇದೀಗ ಬುಕ್ಕಿಂಗ್ ಹಣ ವಾಪಸ್‌ ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಇದು ಆಟೋ ಕಂಪನಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಲಾಕ್‌ಡೌನ್ ಸಂಕಷ್ಟ- ಲೀಸ್ ಕಾರುಗಳಿಗೆ ಹೆಚ್ಚಿದ ಬೇಡಿಕೆ...!

ಹೀಗಾಗಿ ಕರೋನಾ ವೈರಸ್ ಅಬ್ಬರ ತಗ್ಗುವ ತನಕ ವಾಹನ ಖರೀದಿ ಯೋಜನೆಯನ್ನು ಮುಂದೂಡುವುದೇ ಉತ್ತಮ ಎನ್ನುವ ಯೋಜನೆಯಲ್ಲಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದಾರೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಲಾಕ್‌ಡೌನ್ ಸಂಕಷ್ಟ- ಲೀಸ್ ಕಾರುಗಳಿಗೆ ಹೆಚ್ಚಿದ ಬೇಡಿಕೆ...!

ಇನ್ನು ಕೆಲವು ಗ್ರಾಹಕರು ಹೊಸ ವಾಹನಗಳ ಖರೀದಿಯ ಬದಲಾಗಿ ಲೀಸ್‌ಗೆ ಪಡೆದುಕೊಳ್ಳಲು ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವ ಮಹೀಂದ್ರಾ ಕಂಪನಿಯು ಲೀಸ್ ಕಾರುಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ.

ಲಾಕ್‌ಡೌನ್ ಸಂಕಷ್ಟ- ಲೀಸ್ ಕಾರುಗಳಿಗೆ ಹೆಚ್ಚಿದ ಬೇಡಿಕೆ...!

ಪ್ರತಿಯೊಬ್ಬರಿಗೂ ಸ್ವಂತಕ್ಕೆ ಸಣ್ಣದಾದ್ರು ಒಂದು ಕಾರನ್ನು ಹೊಂದಿರಲೇಬೇಕೇಂಬ ಆಸೆ ಇದ್ದೆ ಇರುತ್ತೆ. ಆದ್ರೆ ಹಣಕಾಸಿನ ವಿಚಾರಕ್ಕೆ ಬಂದಾಗ ಅದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಮಹೀಂದ್ರಾ ಕಂಪನಿಯು ಹೊಸ ಪರಿಕಲ್ಪನೆಯೊಂದಿಗೆ ನಿರ್ದಿಷ್ಟ ದರಗಳಲ್ಲಿ ನಿಮಗೆ ಇಷ್ಟದ ಕಾರುಗಳನ್ನು ತಿಂಗಳು, ವರ್ಷದ ಆಧಾರದ ಮೇಲೆ ಲೀಸ್‌‌‌ಗೆ ನೀಡಲಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಲಾಕ್‌ಡೌನ್ ಸಂಕಷ್ಟ- ಲೀಸ್ ಕಾರುಗಳಿಗೆ ಹೆಚ್ಚಿದ ಬೇಡಿಕೆ...!

ಲೀಸ್ ಸಂದರ್ಭದಲ್ಲಿ ಕಾರಿನ ವಿಮೆ, ನಿರ್ವಹಣಾ ವೆಚ್ಚ, ರಸ್ತೆ ತೆರಿಗೆ, ಅಪಘಾತ ನಿರ್ವಹಣೆ ಸೇರಿದಂತೆ ಆನ್ ರೋಡ್ ಅಸಿಸ್ಟೆನ್ಸ್ ಸೌಲಭ್ಯ ಸಿಗಲಿದ್ದು, ದೇಶದ ಯಾವುದೇ ಮೂಲೆಯಲ್ಲಿದ್ದರು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೆರವು ಸಿಗುತ್ತದೆ.

ಲಾಕ್‌ಡೌನ್ ಸಂಕಷ್ಟ- ಲೀಸ್ ಕಾರುಗಳಿಗೆ ಹೆಚ್ಚಿದ ಬೇಡಿಕೆ...!

ಮಾಹಿತಿಗಳ ಪ್ರಕಾರ, ಮಹೀಂದ್ರಾ ಕಂಪನಿಯು ಲೀಸ್ ಕಾರುಗಳಿಗೆ ಆರಂಭಿಕವಾಗಿ ಪ್ರತಿ ತಿಂಗಳಿಗೆ ರೂ.19,720, ಎಕ್ಸ್‌ಯುವಿ300 ಮಾದರಿಗೆ ರೂ.25,000 ಮತ್ತು ಎಕ್ಸ್‌ಯುವಿ500 ಮಾದರಿಗೆ ರೂ. 33,000 ಮಾಸಿಕ ಚಂದಾದಾರಿಕೆ ನಿಗದಿಪಡಿಸುವ ಸಾಧ್ಯತೆಗಳಿದ್ದು, ಯಾವುದೇ ಮುಂಗಡ ಹಣಪಾವತಿಸುವ ತೊಂದರೆಗಳಿಲ್ಲ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಲಾಕ್‌ಡೌನ್ ಸಂಕಷ್ಟ- ಲೀಸ್ ಕಾರುಗಳಿಗೆ ಹೆಚ್ಚಿದ ಬೇಡಿಕೆ...!

ಹೀಗಿರುವಾಗ ಸ್ವಂತಕ್ಕೆ ಕಾರು ಖರೀದಿ ಮಾಡಿ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುವುದಕ್ಕಿಂತ ನಿಮಗೆ ಇಷ್ಟವಾದ ಕಾರನ್ನು ಇಂತಿಷ್ಟ ತಿಂಗಳಿಗೆ ಅಂತಾ ಲೀಸ್‌ಗೆ ಪಡೆದು ಬೇಡವೆಂದಾಗ ವಾಪಸ್ ನೀಡಲು ಇದು ಸಹಕಾರಿಯಾಗಿದೆ.

ಲಾಕ್‌ಡೌನ್ ಸಂಕಷ್ಟ- ಲೀಸ್ ಕಾರುಗಳಿಗೆ ಹೆಚ್ಚಿದ ಬೇಡಿಕೆ...!

ಜೊತೆಗೆ ಸ್ವಂತಕ್ಕೆ ಕಾರನ್ನು ಖರೀದಿ ಮಾಡಿದಾಗ ಪದೇ ಪದೇ ಕಾರು ಬದಲಿ ಮಾಡುವುದು ಅಷ್ಟು ಸುಲಭವಲ್ಲ. ಯಾಕೆಂದ್ರೆ ಪ್ರತಿ ಬಾರಿಯೂ ಕಾರು ಬದಲಿಸಲು ಹೋದಾಗಲೂ ನೀವು ಈ ಹಿಂದೆ ಖರೀದಿ ಮಾಡಿದ ಕಾರಿನ ಬೆಲೆ ಕಳೆದುಕೊಂಡು ನಷ್ಟದಲ್ಲಿ ಸುಳಿಯಲ್ಲಿ ಸಿಲುಕುವಿರಿ.]

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಲಾಕ್‌ಡೌನ್ ಸಂಕಷ್ಟ- ಲೀಸ್ ಕಾರುಗಳಿಗೆ ಹೆಚ್ಚಿದ ಬೇಡಿಕೆ...!

ಹೀಗಾಗಿ ಲೀಸ್‌ ಆಧಾರದ ಮೇಲೆ ಕಾರು ಮಾಲೀಕತ್ವವನ್ನು ಹೊಂದುವುದು ಒಂದು ಉತ್ತಮ ಮಾರ್ಗ ಎನ್ನಬಹುದಾಗಿದ್ದು, ಮಾರುಕಟ್ಟೆಯಲ್ಲಿ ಬರುವ ಹೊಸ ಬ್ರಾಂಡ್ ಕಾರುಗಳನ್ನು ಆಗಾಗ ಬದಲಿಸಲು ಇಲ್ಲಿ ಅವಕಾಶವಿರುತ್ತದೆ.

ಲಾಕ್‌ಡೌನ್ ಸಂಕಷ್ಟ- ಲೀಸ್ ಕಾರುಗಳಿಗೆ ಹೆಚ್ಚಿದ ಬೇಡಿಕೆ...!

ಇದರಿಂದ ವಿದೇಶಿಗಳಲ್ಲಿ ಇದೀಗ ಲೀಸ್ ಮೇಲೆ ಕಾರು ಮಾಲೀಕ್ವ ಹೊಂದುವುದು ಸಾಮಾನ್ಯವಾಗಿದ್ದು, ಹೊಸ ಕಾರುಗಳ ಮಾರಾಟಕ್ಕಿಂತ ಲೀಸ್ ಆಧಾರ ಮೇಲೆ ಕಾರನ್ನು ಒದಗಿಸುವುದೇ ಒಂದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ.

Most Read Articles

Kannada
English summary
Mahindra Sees Rise In Demand For Leasing Cars Post Lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X