ಎಂಜಿ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಎಂಜಿ ಮೋಟಾರ್ಸ್ ಸಂಸ್ಥೆಯು ಇದೇ ತಿಂಗಳ ಕೊನೆಯಲ್ಲಿ ತನ್ನ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸುವುದಕ್ಕೂ ಮುನ್ನ ಬೆಲೆ ಸೇರಿದಂತೆ ಬಣ್ಣಗಳ ಮಾಹಿತಿಯು ಸೋರಿಕೆಯಾಗಿದೆ.

ಎಂಜಿ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರ ಗ್ರಾಹಕರ ಕೈ ಸೇರಲಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಹಲವಾರು ವಿಶೇಷತೆಗಳೊಂದಿಗೆ ಅಭಿವೃದ್ದಿ ಹೊಂದಿದ್ದು, ಆಕರ್ಷಕ ಬೆಲೆಯಲ್ಲಿ ಉತ್ತಮ ಮೈಲೇಜ್, ವಿಶ್ವದರ್ಜೆಯ ಫೀಚರ್ಸ್‌ಗಳು, ಬ್ಯಾಟರಿ ಮೇಲೆ ಗರಿಷ್ಠ ಮಟ್ಟದ ವಾರಂಟಿ, ಸುಲಭವಾಗಿ ಲಭ್ಯವಾಗುವ ಗ್ರಾಹಕರ ಸೇವೆಗಳು ಹೊಸ ಕಾರು ಖರೀದಿಯ ಮೌಲ್ಯವನ್ನು ಹೆಚ್ಚಿಸಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಂಜಿ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಮಾರುಕಟ್ಟೆಯಲ್ಲಿ ಏಕೈಕ ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಕಾರು ಮಾದರಿಯಾದ ಹ್ಯುಂಡೈ ಕೊನಾ ಜೆಡ್ಎಸ್ ಇವಿ ಕಾರು ಭರ್ಜರಿ ಪೈಪೋಟಿ ನೀಡಲಿದ್ದು, ಗ್ರಾಹಕರ ಬೇಡಿಕೆಯೆಂತೆ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಎಂಜಿ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಮಾಹಿತಿಗಳ ಪ್ರಕಾರ, ಎಕ್ಸ್‌ಕ್ಲೂಸಿವ್ ವೆರಿಯೆಂಟ್ ಬೆಲೆಯು ಆನ್ ರೋಡ್ ಪ್ರಕಾರ ರೂ. 24 ಲಕ್ಷ ಬೆಲೆ ಹೊಂದಿದ್ದರೆ, ಎಕ್ಸೈಟ್ ವೆರಿಯೆಂಟ್ ಬೆಲೆಯು ರೂ.25 ಲಕ್ಷ ಎಂದು ನಮೂದಿಸಲಾಗಿದೆ. ಜೊತೆಗೆ ಎಕ್ಸ್‌ಕ್ಲೂಸಿವ್ ವೆರಿಯೆಂಟ್‌ನಲ್ಲಿ 3 ಬಣ್ಣಗಳ ಆಯ್ಕೆಯಿದ್ದಲ್ಲಿ, ಎಕ್ಸೈಟ್ ವೆರಿಯೆಂಟ್‌ನಲ್ಲಿ ಎರಡು ಬಣ್ಣಗಳ ಆಯ್ಕೆ ನೀಡಲಾಗಿದೆ.

ಎಂಜಿ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಬ್ಯಾಟರಿ ಸಾಮರ್ಥ್ಯ

ಎಂಜಿ ಮೋಟಾರ್ ಸಂಸ್ಥೆಯು ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎರಡು ವೆರಿಯೆಂಟ್‌ಗಳಲ್ಲೂ 44.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ. ಈ ಮೂಲಕ ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಎಂಜಿ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ ಐಷಾರಾಮಿ ಕಾರು ಮಾದರಿಯಲ್ಲಿ ಹಲವಾರು ಗುಣಮಟ್ಟದ ಫೀಚರ್ಸ್‌ಗಳಲ್ಲಿದ್ದು, ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಮಾದರಿಗಳಲ್ಲಿ ತುಸು ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳಿವೆ.

ಎಂಜಿ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಸಾಮಾನ್ಯ ಕಾರು ಚಾಲನೆಗಾಗಿ ಎಕ್ಸ್‌ಕ್ಲೂಸಿವ್ ಮತ್ತು ಐಷಾರಾಮಿ ಸೌಲಭ್ಯಗಳನ್ನು ಬಯಸುವ ಗ್ರಾಹಕರಿಗೆ ಎಕ್ಸೈಟ್ ಮಾದರಿ ಖರೀದಿಗೆ ಉತ್ತಮವಾಗಿದ್ದು, ಎರಡು ವೆರಿಯೆಂಟ್‌ಗಳಲ್ಲೂ ಬಹುತೇಕ ತಾಂತ್ರಿಕ ಅಂಶಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಎಂಜಿ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಎಕ್ಸ್‌ಕ್ಲೂಸಿವ್ ವೆರಿಯೆಂಟ್‌ನಲ್ಲಿರುವ ಪ್ರಮುಖ ತಾಂತ್ರಿಕ ಅಂಶಗಳು

*17 ಇಂಚಿನ ಅಲಾಯ್ ವೀಲ್ಹ್‌ಗಳು *ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್ಎಸ್ *ಹೊಂದಾಣಿಕೆ ಮಾಡಿಕೊಳ್ಳಬಹುದಾದ ಎಲೆಕ್ಟ್ರಿಕ್ ಅಡ್ಜೆಸ್ಟೆಬಲ್ ಒಆರ್‌ವಿಎಂಎಸ್ *ಲೆದರ್ ವ್ಯಾರ್ಪ್ಡ್ ಸ್ಟಿರಿಂಗ್ ವೀಲ್ಹ್ *ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ *ಅನ್‌ಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ *3.5 ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ *60:40 ಅನುಪಾತದ ಸ್ಪೀಟ್ ರಿಯರ್ ಸೀಟ್ *6 ಏರ್‌ಬ್ಯಾಗ್‌ಗಳು *ಎಬಿಎಸ್ ಜೊತೆ ಇಬಿಡಿ *ಹಿಲ್ ಸ್ಟಾರ್ಟ್ ಅಸಿಸ್ಟ್ *ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ *ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ * ISOFIX ಚೈಲ್ಡ್ ಸೀಟ್ ಮೌಂಟ್

ಎಂಜಿ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಎಕ್ಸೈಟ್ ವೆರಿಯೆಂಟ್‌ನಲ್ಲಿರುವ ಪ್ರಮುಖ ತಾಂತ್ರಿಕ ಅಂಶಗಳು

ಹೈ ಎಂಡ್ ಆವೃತ್ತಿಯಾಗಿರುವ ಆವೃತ್ತಿಯಾಗಿರುವ ಎಕ್ಸೈಟ್ ವೆರಿಯೆಂಟ್‌‌ನಲ್ಲಿ ಕೆಲವು ಸುಧಾರಿತ ತಾಂತ್ರಿಕ ಅಂಶಗಳನ್ನು ನೀಡಲಾಗಿದ್ದು, ಎಕ್ಸ್‌ಕ್ಲೂಸಿವ್ ವೆರಿಯೆಂಟ್‌ನಲ್ಲಿ ನೀಡಲಾಗಿರುವ ಫೀಚರ್ಸ್ ಜೊತೆಗೆ ಹೆಚ್ಚುವರಿಯಾಗಿ 8.0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಪನೊರಮಿಕ್ ಸನ್‌ರೂಫ್, 6-ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಐ-ಸ್ಮಾರ್ಟ್ 2.0 ಕನೆಟೆಡ್ ಟೆಕ್ನಾಲಜಿ, ಹಿಟೆಡ್ ಒಆರ್‌ವಿಎಂಎಸ್, ಏರ್‌ ಫ್ಲೂರಿಫ್ಲೈರ್ ಜೊತೆ ಪಿಎಂ 2.5 ಫಿಲ್ಟರ್ ಸೌಲಭ್ಯಗಳನ್ನು ಹೊಂದಿದೆ.

ಎಂಜಿ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಈ ಮೂಲಕ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ವಿಶೇಷ ಎನ್ನಿಸಲಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು ಎಸ್‌ಯುವಿ ಪ್ರಿಯರ ಆಕರ್ಷಣೆ ಕಾರಣವಾಗಿದ್ದು, ಎಕ್ಸ್‌ಕ್ಲೂಸಿವ್ ವೆರಿಯೆಂಟ್ ಸಾಮಾನ್ಯ ಬೆಲೆ ಹೊಂದಲಿದ್ದರೆ ಎಕ್ಸೈಟ್ ವೆರಿಯೆಂಟ್ ತುಸು ದುಬಾರಿ ಎನ್ನಿಸಲಿದೆ.

ಎಂಜಿ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಆಯ್ದ ನಗರಗಳಲ್ಲಿ ಮಾತ್ರ ಖರೀದಿಗೆ ಲಭ್ಯ

ಹೌದು, ಎಂಜಿ ಸಂಸ್ಥೆಯು ಮೊದಲ ಹಂತವಾಗಿ ದೆಹಲಿ, ಬೆಂಗಳೂರು, ಮುಂಬೈ, ಹೈದ್ರಾಬಾದ್ ಮತ್ತು ಪುಣೆಯಲ್ಲಿ ಮಾತ್ರವೇ ಹೊಸ ಕಾರನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ದೇಶಾದ್ಯಂತ ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಖರೀದಿಗೆ ಲಭ್ಯವಿರಲಿದೆ.

ಎಂಜಿ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಬುಕ್ಕಿಂಗ್ ಆರಂಭ

ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಖರೀದಿಗೆ ಈಗಾಗಲೇ ಎಂಜಿ ಮೋಟಾರ್ ಸಂಸ್ಥೆಯು ಬುಕ್ಕಿಂಗ್ ಕೂಡಾ ಆರಂಭಿಸಿದ್ದು, ಆಸಕ್ತ ಗ್ರಾಹಕರು ಆಯ್ದ ಡೀಲರ್ಸ್‌ಗಳಲ್ಲಿ ರೂ.50 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾಡಬಹುದಾಗಿದೆ.

Most Read Articles

Kannada
English summary
MG ZS EV Price Leaked. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X