ಚಂದನ್ ಶೆಟ್ಟಿ - ನಿವೇದಿತಾ ಗಿಫ್ಟ್ ಪಡೆದ ಜಾಗ್ವಾರ್ ಕಾರಿನ ವಿಶೇಷತೆಗಳೇನು ಗೊತ್ತಾ?

ನೂತನ ವಧು-ವರರಾದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ಗೊಂಬೆ ನಿವೇದಿತಾ ಗೌಡ ಅವರಿಗೆ ದುಬಾರಿ ಮತ್ತು ಐಷಾರಾಮಿ ಹೊಸ ಜಾಗ್ಬಾರ್ ಎಕ್ಸ್‌ಇ ಕಾರನ್ನು ಗಿಫ್ಟ್ ನೀಡಲಾಗಿದೆ. ವಿವಾಹ ಕಾರ್ಯಕ್ರಮದಲ್ಲಿ ಕ್ಯೂಟ್ ಜೋಡಿಯ ಮಧ್ಯೆ ಈ ಐಷಾರಾಮಿ ಕಾರು ಎಲ್ಲರ ಗಮನಸೆಳೆಯತು.

ಚಂದನ್ ಶೆಟ್ಟಿ - ನಿವೇದಿತಾ ಗಿಫ್ಟ್ ಪಡೆದ ಜಾಗ್ವಾರ್ ಕಾರಿನ ವಿಶೇಷತೆಗಳೇನು ಗೊತ್ತಾ?

ಚಂದನ್ ಶೆಟ್ಟಿ ಹಾಗೂ ಬೇಬಿ ಡಾಲ್ ಎಂದೇ ಖ್ಯಾತಿ ಪಡೆದಿದ್ದ ಬಿಗ್‌ಬಾಸ್ ಜೋಡಿಯ ಮದುವೆಯು ಮೈಸೂರಿನ ಹಿನಕಲ್‍ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ನಡೆದಿದೆ. ನಿನ್ನೆ ಬೆಳಗ್ಗೆ 8.15ರಿಂದ 9 ಗಂಟೆಯ ಧಾರಾ ಮುಹೂರ್ತದಲ್ಲಿ, ಮೀನ ಲಗ್ನದಲ್ಲಿ ನಿವೇದಿತಾರನ್ನು ಚಂದನ್ ಶೆಟ್ಟಿ ವರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿವೇದಿತಾ ಪೋಷಕರಾದ ಹೇಮ ಮತ್ತು ರಮೇಶ್, ಚಂದನ್‍ಶೆಟ್ಟಿ ಪೋಷಕರಾದ ಪ್ರೇಮಲತಾ ಹಾಗೂ ಪರಮೇಶ್, ಆಪ್ತರು, ಸ್ನೇಹಿತರು, ಹಿತೈಷಿಗಳು ಭಾಗವಹಿಸಿದ್ದರು.

ಚಂದನ್ ಶೆಟ್ಟಿ - ನಿವೇದಿತಾ ಗಿಫ್ಟ್ ಪಡೆದ ಜಾಗ್ವಾರ್ ಕಾರಿನ ವಿಶೇಷತೆಗಳೇನು ಗೊತ್ತಾ?

ಈ ನೂತನ ದಂಪತಿಗಳ ಪೋಷಕರು ಸರ್ಪ್ರೈಸ್ ಆಗಿ ದುಬಾರಿ ಜಾಗ್ವಾರ್ ಜಾಗ್ಬಾರ್ ಎಕ್ಸ್‌ಇ ಕಾರನ್ನು ಗಿಫ್ಟ್ ನೀಡಿದ್ದಾರೆ. ಈ ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಿಫ್ಟ್ ನೀಡಿದ ಜಾಗ್ಬಾರ್ ಎಕ್ಸ್‌ಇ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ.

ಚಂದನ್ ಶೆಟ್ಟಿ - ನಿವೇದಿತಾ ಗಿಫ್ಟ್ ಪಡೆದ ಜಾಗ್ವಾರ್ ಕಾರಿನ ವಿಶೇಷತೆಗಳೇನು ಗೊತ್ತಾ?

ಹೊಸ ಜಾಗ್ಬಾರ್ ಎಕ್ಸ್‌ಇ ಕಾರಿನ ಮುಂಭಾಗದಲ್ಲಿ ನವೀಕರಿಸಿದ ಗ್ರಿಲ್ ಮತ್ತು ಹೊಸ ಹೆಡ್‍‍ಲ್ಯಾಂಪ್ ಅನ್ನು ಹೊಂದಿದೆ. ಸಿಲ್ಕ್ ಹೆಡ್‍‍ಲ್ಯಾಂಪ್ 12 ಎಂಎಂ ಸ್ಲಿಮ್ಮರ್ ಆಗಿದ್ದು, ಜೆ-ಬ್ಲೇಡ್ ಎಲ್‍ಇಡಿ ಡೇಟೈಮ್ ರನ್ನಿಂಗ್ ಲೈ‍ಟ್‍ಗಳನ್ನು ಸಹ ಒಳಗೊಂಡಿದೆ.

ಚಂದನ್ ಶೆಟ್ಟಿ - ನಿವೇದಿತಾ ಗಿಫ್ಟ್ ಪಡೆದ ಜಾಗ್ವಾರ್ ಕಾರಿನ ವಿಶೇಷತೆಗಳೇನು ಗೊತ್ತಾ?

ವಾಹನದ ಬಂಪರ್‍‍ನಲ್ಲಿದೊಡ್ಡ ಏರ್‍‍ಡ್ಯಾಮ್‍‍ಗಳನ್ನು ಅಳವಡಿಸಲಾಗಿದೆ. ಎಕ್ಸ್‌ಇ ಕಾರಿನಲ್ಲಿ ಆರ್-ಡೈನಾಮಿಕ್ ರೂಪಾಂತರವು ಬ್ಲ್ಯಾಕ್ ಏರ್‍ ಡ್ಯಾಮ್‍, ಬಂಪರ್‍ ಮತ್ತು ಅಂಡರ್‍‍ಬಾಡಿ ಡಿಫ್ಯೂಸರ್ ಅನ್ನು ಹೊಂದಿದೆ.

ಚಂದನ್ ಶೆಟ್ಟಿ - ನಿವೇದಿತಾ ಗಿಫ್ಟ್ ಪಡೆದ ಜಾಗ್ವಾರ್ ಕಾರಿನ ವಿಶೇಷತೆಗಳೇನು ಗೊತ್ತಾ?

ಈ ಕಾರು ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಟೇಲ್‍ಲೈಟ್‍ಗಳನ್ನು ಅಳವಡಿಸಲಾಗಿದೆ. ಹೊಸ ಜಾಗ್ವರ್ ಎಕ್ಸ್‌ಇ ಇಂಟಿರಿಯರ್‍‍ನಲ್ಲಿ ಸೆಂಟರ್ ಕನ್ಸೋಲ್‍ನಲ್ಲಿ ಡ್ಯುಯಲ್ ಟಚ್‍‍ಸ್ಕ್ರೀನ್‍‍ಗಳನ್ನು ಹೊಂದಿದೆ.

ಚಂದನ್ ಶೆಟ್ಟಿ - ನಿವೇದಿತಾ ಗಿಫ್ಟ್ ಪಡೆದ ಜಾಗ್ವಾರ್ ಕಾರಿನ ವಿಶೇಷತೆಗಳೇನು ಗೊತ್ತಾ?

ಜಾಗ್ವಾರ್‍‍ನ ಟಚ್ ಪ್ರೊ ಡ್ಯುವೋ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಕ್ಯಾಬಿ‍‍ನ್‍ಗೆ ಅವಂತ್ ಗಾರ್ಡೆ ಟಚ್ ನೀಡಲಾಗಿದೆ. 10.2 ಇಂಚಿನ ಟಾಪ್ ಡಿಸ್‍‍ಪ್ಲೇ ಹಲವಾರು ಸಂಪರ್ಕ ಆಯ್ಕೆಗಳನ್ನು ಮತ್ತು ನ್ಯಾವಿಗೇಷನ್ ಅನ್ನು ಹೊಂದಿದೆ.

ಚಂದನ್ ಶೆಟ್ಟಿ - ನಿವೇದಿತಾ ಗಿಫ್ಟ್ ಪಡೆದ ಜಾಗ್ವಾರ್ ಕಾರಿನ ವಿಶೇಷತೆಗಳೇನು ಗೊತ್ತಾ?

ಇದರೊಂದಿಗೆ ಸ್ಕ್ರೀನ್ ಮೇಲೆ ಪುಲ್-ಪುಶ್ ನಾಬ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಕ್ಯಾಬಿನ್ ಎಫ್-ಟೈಪ್ ಮತ್ತು ಇ-ಪೇಸ್ ಮಾದರಿಗಳಲ್ಲಿ ಕಂಡುಬರುವ ಪಿಸ್ತೂಲ್ ಗ್ರಿಪ್ ಗೇರ್ ಸೆಲೆಕ್ಟರ್ ಅನ್ನು ಹೊಂದಿದೆ.

ಚಂದನ್ ಶೆಟ್ಟಿ - ನಿವೇದಿತಾ ಗಿಫ್ಟ್ ಪಡೆದ ಜಾಗ್ವಾರ್ ಕಾರಿನ ವಿಶೇಷತೆಗಳೇನು ಗೊತ್ತಾ?

ಹಿಡನ್-ಅನ್‍‍ಟಿಲ್-ಲಿಟ್‍ ಬಟನ್ಸ್ ಜೊತೆಯಲ್ಲಿ ಮಲ್ಟಿ ಫಂಕ್ಷನಲ್ ಸ್ಟೀಯರಿಂಗ್ ಅನ್ನು ಹೊಂದಿದೆ. 2020ರ ಹೊಸ ಜಾಗ್ವಾರ್ ಎಕ್ಸ್‌ಇ ಕಾರಿನಲ್ಲಿ 2.0 ಲೀಟರಿನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ. ಡೀಸೆಲ್ ಎಂಜಿನ್ 247 ಬಿ‍ಹೆಚ್‍‍ಪಿ ಪವರ್ ಉತ್ಪಾದಿಸಿದರೆ, ಪೆಟ್ರೋಲ್ ಎಂಜಿನ್ 296 ಬಿ‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ‍ನ್‍‍ಗಳೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಚಂದನ್ ಶೆಟ್ಟಿ - ನಿವೇದಿತಾ ಗಿಫ್ಟ್ ಪಡೆದ ಜಾಗ್ವಾರ್ ಕಾರಿನ ವಿಶೇಷತೆಗಳೇನು ಗೊತ್ತಾ?

ಭಾರತದ ಎಕ್ಸ್ ಶೋರೂಂ ಪ್ರಕಾರ ಪ್ರಸ್ತುತ ಜಾಗ್ವಾರ್ ಎಕ್ಸ್‌ಇ ಮಾದರಿಗಳ ಬೆಲೆಯು ರೂ.40.6 ಲಕ್ಷದಿಂದ ರೂ.47 ಲಕ್ಷಗಳಾಗಿದೆ. ಹೊಸ ಜಾಗ್ವಾರ್ ಎಕ್ಸ್‌ಇ ಫೇಸ್‍‍ಲಿಫ್ಟ್ ಮಾದರಿಗೆ ರೂ.46 ಲಕ್ಷದಿಂದ ರೂ.55 ಲಕ್ಷಗಳವರಿಗೆ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

Most Read Articles

Kannada
English summary
chandan shetty gets jaguar xe as a surprise gift for marriage. Read in Kannada
Story first published: Thursday, February 27, 2020, 11:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X