ವೈರಸ್ ಭೀತಿ ಹೆಚ್ಚಳ: ಆನ್‌ಲೈನ್ ವಾಹನ ಮಾರಾಟಕ್ಕೆ ಚಾಲನೆ ನೀಡಿದ ಪಿಯಾಜಿಯೊ

ವಿಶ್ವಾದ್ಯಂತ ಕರೋನಾ ವೈರಸ್ ಅಟ್ಟಹಾಸವು ದಿನದಿಂದ ಹೆಚ್ಚಾಗುತ್ತಲೇ ಇದ್ದು, ಭಾರತದಲ್ಲೂ ಕೂಡಾ ಈಗಾಗಲೇ ಸಾವಿರಾರು ಜನ ವೈರಸ್ ದಾಳಿಗೆ ಬಲಿಯಾಗಿದ್ದಾರೆ. ಇದರಿಂದ ವಾಣಿಜ್ಯ ವ್ಯಾಪಾರವು ಇದೀಗ ಹೊಸ ಸವಾಲಾಗಿ ಪರಿಣಮಿಸಿದ್ದು, ಆನ್‌ಲೈನ್ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ವೈರಸ್ ಭೀತಿ ಹೆಚ್ಚಳ: ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಪಿಯಾಜಿಯೊ

ಪ್ರಯಾಣಿಕರ ವಾಹನಗಳು ಮತ್ತು ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಪಿಯಾಜಿಯೊ ಕೂಡಾ ಇದೀಗ ವಾಹನ ಮಾರಾಟಕ್ಕಾಗಿ ಪ್ರತ್ಯೇಕ ಆನ್‌‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ಗ್ರಾಹಕರು ಕೂಡಾ ಸುರಕ್ಷತೆಯ ದೃಷ್ಠಿಯಿಂದ ಆನ್‌ಲೈನ್ ವಹಿವಾಟಿನತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಆನ್‌ಲೈನ್ ವಹಿವಾಟು ಸದ್ಯದ ಪರಿಸ್ಥಿತಿಯಲ್ಲಿ ಅತ್ಯುತ್ತಮ ಆಯ್ಕೆಯಾಗಿದ್ದು, ಸೋಂಕು ಹರಡುವಿಕೆಯನ್ನು ತಪ್ಪಿಸುವುದರ ಜೊತೆಗೆ ಸುರಕ್ಷಿತ ವಾಣಿಜ್ಯ ವ್ಯಾಪಾರಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ.

ವೈರಸ್ ಭೀತಿ ಹೆಚ್ಚಳ: ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಪಿಯಾಜಿಯೊ

ಆಸಕ್ತ ಗ್ರಾಹಕರೊಂದಿಗೆ ಪತ್ರ ವ್ಯವಹಾರಗಳನ್ನು ಆನ್‌ಲೈನ್ ಮೂಲಕವೇ ಬಗೆಹರಿಸಲಿದ್ದು, ತದನಂತರ ಅಂತಿಮ ಪತ್ರ ವ್ಯವಹಾರ ಮುಗಿದ ಬಳಿಕ ಗ್ರಾಹಕರ ಮನೆ ಬಾಗಿಲಿಗೆ ಹೊಸ ವಾಹನಗಳನ್ನು ತಲುಪಿಸಲಾಗುತ್ತದೆ.

ವೈರಸ್ ಭೀತಿ ಹೆಚ್ಚಳ: ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಪಿಯಾಜಿಯೊ

ಜೊತೆಗೆ ಹಣಕಾಸು ಸಹಾಯ ಸೇರಿದಂತೆ ಪ್ರಮುಖ ವ್ಯವಹಾರಗಳನ್ನು ಅತಿ ಸುಲಭವಾಗಿ ನಿರ್ವಹಿಸಲು ನೆರವಾಗುವಂತೆ ಹೊಸ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಅಭಿವೃದ್ದಿಗೊಳಿಸಲಾಗಿದ್ದು, ವಾಹನ ಖರೀದಿ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭವಾಗಿಸಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ವೈರಸ್ ಭೀತಿ ಹೆಚ್ಚಳ: ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಪಿಯಾಜಿಯೊ

ಇನ್ನು ಕರೋನಾ ಸಂಕಷ್ಟದಲ್ಲಿ ಸಿಲುಕಿರುವ ಆಟೋ ಚಾಲಕರ ನೆರವಿಗೆ ಬಂದಿರುವ ಪಿಯಾಜಿಯೊ ಕಂಪನಿಯು ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿನ ಸಾವಿರಾರು ಆಟೋ ಚಾಲಕರ ಸಂಕಷ್ಟಕ್ಕೆ ಸ್ಪಂದಿಸಿದೆ.

ವೈರಸ್ ಭೀತಿ ಹೆಚ್ಚಳ: ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಪಿಯಾಜಿಯೊ

ಇದುವರೆಗೆ ಸುಮಾರು 11 ಸಾವಿರ ಅಗತ್ಯ ಆಹಾರ ಸಾಮಾಗ್ರಿಗಳನ್ನು ಹೊಂದಿರುವ ಕಿಟ್ ವಿತರಣೆ ಮಾಡಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಬಾರಾಮತಿಯಲ್ಲಿರುವ ತನ್ನ ಆಟೋ ರಿಕ್ಷಾ ಉತ್ಪಾದನಾ ಘಟಕದ ಬಳಿ ಬರೋಬ್ಬರಿ 1 ಸಾವಿರ ಕೂಲಿ ಕಾರ್ಮಿಕರಿಗಾಗಿ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಿ ಕೊಟ್ಟಿತ್ತು.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ವೈರಸ್ ಭೀತಿ ಹೆಚ್ಚಳ: ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಪಿಯಾಜಿಯೊ

ಪಿಯಾಜಿಯೊ ಕಂಪನಿಯು ಪುಣೆ ಬಳಿಯಿರುವ ಬಾರಾಮತಿಯಲ್ಲಿ ಆಟೋ ರಿಕ್ಷಾ ಉತ್ಪಾದನಾ ಘಟಕವನ್ನು ಹೊಂದಿದ್ದು, ಬಡವರಿಗೆ ಆಹಾರ ಪೊಟ್ಟಣಗಳ ಜೊತೆಗೆ ಪುಣೆಯಲ್ಲಿ ಕರೋನಾ ವೈರಸ್ ತಗುಲಿದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವ ಸರ್ಕಾರಿ ಆಸ್ಪತ್ರೆಯೊಂದನ್ನು ಉನ್ನತೀಕರಿಸಲು ಸಹ ಹಣಕಾಸಿನ ಸಹಕಾರ ನೀಡಿದೆ.

Most Read Articles

Kannada
English summary
Piaggio Launches Online Sales Platform:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X