ಅನ್‌ಲಾಕ್ 1.0: ಕಾರ್ಯಾಚರಣೆ ಪುನರಾರಂಭಿಸಿದ ಆರ್‌ಟಿಒ ಕಚೇರಿಗಳು

ದೇಶಾದ್ಯಂತ ಲಾಕ್‌ಡೌನ್ ಜಾರಿಗೆ ಬಂದ ನಂತರ ಎಲ್ಲಾ ಆರ್‌ಟಿಒಗಳನ್ನು ಮುಚ್ಚಲಾಗಿತ್ತು. ಈಗ ಅನ್‌ಲಾಕ್ ಅವಧಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳನ್ನು ಹಂತ ಹಂತವಾಗಿ ತೆರೆಯಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಆರ್‌ಟಿಒ ಕಚೇರಿಗಳನ್ನು ತೆರೆಯಲು ಆದೇಶ ಹೊರಡಿಸಲಾಗಿದ್ದು, ಜೂನ್ 16ರಿಂದ 50 ಆರ್‌ಟಿಒ ಕಚೇರಿಗಳನ್ನು ತೆರೆಯಲಾಗಿದೆ.

ಅನ್‌ಲಾಕ್ 1.0: ಕಾರ್ಯಾಚರಣೆ ಪುನರಾರಂಭಿಸಿದ ಆರ್‌ಟಿಒ ಕಚೇರಿಗಳು

ಆರ್‌ಟಿಒಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ವಾಹನಗಳ ರಿಜಿಸ್ಟ್ರೇಷನ್‌ಗಳನ್ನು ಸಹ ಆರಂಭಿಸಲಾಗಿದೆ. ಈ ಎಲ್ಲಾ ಕಚೇರಿಗಳಲ್ಲಿ ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸ ನಿಯಮಗಳ ಪ್ರಕಾರ, ಆರ್‌ಟಿಒಗೆ ಬರುವವರು ಆರ್‌ಟಿಒ ವೆಬ್‌ಸೈಟ್‌ ಮೂಲಕ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕಾಗುತ್ತದೆ. ಒಂದು ದಿನಕ್ಕೆ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಸೀಮಿತ ಸಂಖ್ಯೆಯ ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಲಿದ್ದಾರೆ.

ಅನ್‌ಲಾಕ್ 1.0: ಕಾರ್ಯಾಚರಣೆ ಪುನರಾರಂಭಿಸಿದ ಆರ್‌ಟಿಒ ಕಚೇರಿಗಳು

ಇದರಿಂದಾಗಿ ಬಹುತೇಕ ಎಲ್ಲಾ ಕಾರ್ಯವನ್ನು ಒಬ್ಬರೇ ಸಿಬ್ಬಂದಿ ನಿರ್ವಹಿಸಬೇಕಾಗಿದೆ. ಲರ್ನರ್ ಲೈಸೆನ್ಸ್ ಪಡೆಯಲು ಬರುವವರು 6 ಅಡಿಗಳಷ್ಟು ದೂರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಕಂಪ್ಯೂಟರ್ ಹಾಗೂ ಕೀಬೋರ್ಡ್‌ಗಳನ್ನು ಪ್ರತಿ ಬಳಕೆಯ ನಂತರವೂ ಸ್ವಚ್ವಗೊಳಿಸಲಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಅನ್‌ಲಾಕ್ 1.0: ಕಾರ್ಯಾಚರಣೆ ಪುನರಾರಂಭಿಸಿದ ಆರ್‌ಟಿಒ ಕಚೇರಿಗಳು

ಪ್ರತಿಯೊಬ್ಬ ವ್ಯಕ್ತಿಯು ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕಚೇರಿಗಳಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಆರ್‌ಟಿಒ ಆವರಣದೊಳಗೆ ವಾಹನಗಳನ್ನು ತರಲು ಮೊದಲು ವಾಹನಗಳನ್ನು ಸ್ವಚ್ವಗೊಳಿಸಬೇಕು.

ಅನ್‌ಲಾಕ್ 1.0: ಕಾರ್ಯಾಚರಣೆ ಪುನರಾರಂಭಿಸಿದ ಆರ್‌ಟಿಒ ಕಚೇರಿಗಳು

ಲಾಕ್‌ಡೌನ್‌ ಜಾರಿಗೊಳಿಸುವ ಮುನ್ನ ಲರ್ನರ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಫಿಟ್‌ನೆಸ್ ಟೆಸ್ಟ್‌ಗೆ ಬರುವ ಹಳೆಯ ವಾಹನಗಳನ್ನು ಮೊದಲು ಸ್ವಚ್ವಗೊಳಿಸಿ, ನಂತರ ಅವುಗಳನ್ನು ಪರೀಕ್ಷಿಸಲಾಗುವುದು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಅನ್‌ಲಾಕ್ 1.0: ಕಾರ್ಯಾಚರಣೆ ಪುನರಾರಂಭಿಸಿದ ಆರ್‌ಟಿಒ ಕಚೇರಿಗಳು

ಇದರ ಜೊತೆಗೆ ಮುಂಬೈನ ಲೋಕಲ್ ಟ್ರೇನ್ ಸೇವೆಗಳನ್ನು ಪುನರಾರಂಭಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಈ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು ಎರಡು ತಿಂಗಳ ನಂತರ ಸೇವೆಯನ್ನು ಪುನರಾರಂಭಿಸಲಾಗಿದೆ.

ಅನ್‌ಲಾಕ್ 1.0: ಕಾರ್ಯಾಚರಣೆ ಪುನರಾರಂಭಿಸಿದ ಆರ್‌ಟಿಒ ಕಚೇರಿಗಳು

ಈ ಸ್ಥಳೀಯ ರೈಲು ಸೇವೆಯನ್ನು ಅಗತ್ಯ ಉದ್ಯೋಗಿಗಳಿಗೆ ಮಾತ್ರ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ಸ್ಥಳೀಯ ರೈಲು ಸೇವೆಯನ್ನು ಪುನರಾರಂಭಿಸುವ ಬಗ್ಗೆ ಬಿಎಂಸಿ ಮಾಹಿತಿ ನೀಡಿತ್ತು. ಕೆಲವು ಆಯ್ದ ಪ್ರದೇಶಗಳಲ್ಲಿ ಈ ಸೇವೆಯನ್ನು ಪುನರಾರಂಭಿಸಲಾಗಿದೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Most Read Articles

Kannada
English summary
Regional Transport Offices in Maharashtra resume operations. Read in Kannada.
Story first published: Friday, June 19, 2020, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X