ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಫಿಯೆಟ್ ಪುಂಟೊ ಕಾರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಫಿಯೆಟ್ ತನ್ನ ಹೊಸ ಪುಂಟೊ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹಿಂದೆ ಪೊಂಟೊ ಎಂಬ ಜನಪ್ರಿಯ ಕಾರು ಮಾರಾಟದಲ್ಲಿತ್ತು. ಇದೀಗ ಫಿಯೆಟ್ ಕಂಪನಿಯು ಅದೇ ಹೆಸರಿನಲ್ಲಿ ಹೊಚ್ಚಹೊಸ ಕಾರನ್ನು ಬಿಡುಗಡೆಗೊಳಿಸುವುದಾಗಿ ಹೇಳಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಫಿಯೆಟ್ ಪುಂಟೊ ಕಾರು

ಫಿಯೆಟ್ ಕಂಪನಿಯು 2023ರಲ್ಲಿ ಹೊಚ್ಚಹೊಸ ಬಿ-ಸೆಗ್ಮೆಂಟ್ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ, ಈ ಮಾದರಿಯು ಪುಂಟೊ ಉತ್ತರಾಧಿಕಾರಿಯಾಗಲಿದೆ, ಮತ್ತು ಇದನ್ನು ಹೆಚ್ಚಾಗಿ ಫಿಯೆಟ್ ಪುಂಟೊ ಎಂದು ಕರೆಯಲಾಗುತ್ತದೆ. ಈ ನ್ಯೂ ಜನರೇಷನ್ ಫಿಯೆಟ್ ಪುಂಟೊ ಕಾಮನ್ ಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಪ್ರಸ್ತುತ ಪಿಯುಗಿಯೊ 208 ಮತ್ತು 2008, ಒಪೆಲ್ ಕೊರ್ಸಾ, ಸಿಟ್ರೊಯೆನ್ ಸಿ4 ಮತ್ತು ಡಿಎಸ್ 3 ಕ್ರಾಸ್‌ಬ್ಯಾಕ್‌ಗೆ ಆಧಾರವಾಗಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಫಿಯೆಟ್ ಪುಂಟೊ ಕಾರು

ಭಾರತ ಮತ್ತು ಬ್ರೆಜಿಲ್‌ಗಾಗಿ ಮುಂಬರುವ ಸಿಟ್ರನ್ ಸಿ3 ಕಾಂಪ್ಯಾಕ್ಟ್ ಎಸ್‍ಯುವಿ ಕೂಡ ಇದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ 2022 ರಲ್ಲಿ ಸಿಟ್ರನ್ ಕಾಮನ್ ಡ್ಯುಲರ್ ಪ್ಲಾಟ್‌ಫಾರ್ಮ್‌ನ ನವೀಕರಿಸಿದ ಆವೃತ್ತಿಯನ್ನು ಸಹ ಪರಿಚಯಿಸಲಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಫಿಯೆಟ್ ಪುಂಟೊ ಕಾರು

ಭವಿಷ್ಯದ ಮಾದರಿಗಳನ್ನು ಅಭಿವೃದ್ಧಿಪಡಿಸಲು ನವೀಕರಿಸಿದ ಪ್ಲಾಟ್‌ಫಾರ್ಮ್ ಅನ್ನು ಬಳಸಲಾಗುತ್ತದೆ. ಹೊಸ ನ್ಯೂ ಜನರೇಷನ್ ಫಿಯೆಟ್ ಪುಂಟೊವನ್ನು ಮೈಲ್ಡ್ -ಹೈಬ್ರಿಡ್ ಅಥವಾ ಪೂರ್ಣ-ಹೈಬ್ರಿಡ್ ಐಸಿಇ ಚಾಲಿತ ಮಾದರಿಯಂತೆ 2023 ರಲ್ಲಿ ಬಿಡುಗಡೆ ಮಾಡಲಾಗುವುದು.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಫಿಯೆಟ್ ಪುಂಟೊ ಕಾರು

ಸೂಪರ್‌ಮಿನಿಯ ಎಲೆಕ್ಟ್ರಿಕ್ ಮಾದರಿಯು 2024 ರಲ್ಲಿ ಬರಲಿದೆ. ಹೊಸ ಮಾದರಿಯು ಮೊದಲು ಯುರೋಪ್‌ನಲ್ಲಿ ಮಾರಾಟಕ್ಕೆ ಬರಲಿದೆ, ಅಲ್ಲಿ ಅದು ಬ್ರಾಂಡ್‌ನ ಅತ್ಯಂತ ಯಶಸ್ವಿ ಕಾರುಗಳಾದ ಫಿಯೆಟ್ 500 ಮತ್ತು ಪಾಂಡಾ ಮಾದರಿಗಳನ್ನು ಸೇರಿಕೊಳ್ಳಲಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಫಿಯೆಟ್ ಪುಂಟೊ ಕಾರು

ಹಿಂದಿನ ಜನರೇಷನ್ ಪುಂಟೊವನ್ನು 2018 ರಲ್ಲಿ ನಿಲ್ಲಿಸಲಾಯಿತು.ಮೊದಲ ತಲೆಮಾರಿನ ಫಿಯೆಟ್ ಪುಂಟೊವನ್ನು 1993 ರಲ್ಲಿ ಯುನೋ ಉತ್ತರಾಧಿಕಾರಿಯನ್ನಾಗಿ ಬಿಡುಗಡೆ ಮಾಡಲಾಯಿತು. ಇದನ್ನು ಎರಡು ಡೋರ್, ಮೂರು ಡೋರ್ ಮತ್ತು ಐದು ಡೋರ್ ಬಾಡಿಸ್ಟೈಲ್‌ಗಳಲ್ಲಿ ಪರಿಚಯಿಸಲಾಯಿತು.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಫಿಯೆಟ್ ಪುಂಟೊ ಕಾರು

ಎರಡನೇ ತಲೆಮಾರಿನ ಮಾದರಿಯನ್ನು 1999 ರಲ್ಲಿ ಪರಿಚಯಿಸಲಾಯಿತು, ಮತ್ತು ಇದನ್ನು 3-ಡೋರ್ ಸ್ಪೋರ್ಟಿಂಗ್ ಮತ್ತು ಪರ್ಫಾಮೆನ್ಸ್ ಮಾದರಿಯಲ್ಲಿ ಪರಿಚಯಿಸಲಾಗಿತ್ತು. 005 ರಲ್ಲಿ ಮೂರನೇ ಪೀಳಿಗೆಯನ್ನು ಪರಿಚಯಿಸಲಾಯಿತು, ಇದನ್ನು ಗ್ರಾಂಡೆ ಪುಂಟೊ ಎಂದು ಕರೆಯಲಾಯಿತು. ವಾಹನವನ್ನು 2009 ರಲ್ಲಿ ಪುಂಟೊ ಇವೋ ಮತ್ತು 2012 ರಲ್ಲಿ ಪುಂಟೊ ಎಂದು ಮರುಹೆಸರಿಸಲಾಯಿತು.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಫಿಯೆಟ್ ಪುಂಟೊ ಕಾರು

ಹೊಸ ಪುಂಟೊವನ್ನು ಬ್ರೆಜಿಲ್ ಅಥವಾ ಭಾರತದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಫಿಯೆಟ್ ಬ್ರೆಜಿಲ್‌ನಲ್ಲಿ ಆರ್ಗೋ ಹ್ಯಾಚ್‌ಬ್ಯಾಕ್ ಅನ್ನು ಮಾರಾಟ ಮಾಡುತ್ತಿರುವಾಗ, ಎಫ್‌ಸಿಎ ಭಾರತೀಯ ಮಾರುಕಟ್ಟೆಯಿಂದ ಫಿಯೆಟ್ ಬ್ರಾಂಡ್ ಅನ್ನು ನಿಲ್ಲಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವನ್ನು ಹೆಚ್ಚಿಸಲು ಕಂಪನಿಯು ಜೀಪ್ ಬ್ರ್ಯಾಂಡ್ ಸರಣಿಯಲ್ಲಿರುವ ಮಾದರಿಗಳನ್ನು ಪರಿಚಯಿಸುತ್ತಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಫಿಯೆಟ್ ಪುಂಟೊ ಕಾರು

ಇನ್ನು ಫಿಯೆಟ್ ಹೊಸ ಪಲ್ಸ್ ಕಾಂಪ್ಯಾಕ್ಟ್-ಎಸ್‌ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಈ ವರ್ಷದ ಆರಂಭದಲ್ಲಿ ಅನಾವರಣಗೊಳಿಸಿತು. ಫಿಯಟ್ ಕಂಪನಿಯು ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಂಟಿರಿಯರ್ ಚಿತ್ರಗಳನ್ನು ಇತ್ತೀಚೆಗೆ ಬಹಿರಂಗಪಡಿಸಿದರು.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಫಿಯೆಟ್ ಪುಂಟೊ ಕಾರು

ಈ ಹೊಸ ಫಿಯಟ್ ಪಲ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯು ಕ್ಲೀನ್ ಮತ್ತು ಕನಿಷ್ಠ ಕ್ಯಾಬಿನ್ ಲೇಔಟ್ ಅನ್ನು ಹೊಂದಿದ್ದು, ಹಲವು ವೈಶಿಷ್ಟ್ಯಗಳು ಮತ್ತು ಸಲಕರಣೆಗಳನ್ನು ಹೊಂದಿದೆ. ಕಾಂಪ್ಯಾಕ್ಟ್ ಎಸ್‌ಯುವಿಯ ಕ್ಯಾಬಿನ್ 7.0 ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 10.1 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಫಿಯೆಟ್ ಪುಂಟೊ ಕಾರು

ಈ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಆಪಲ್ ಕಾರ್ ಪ್ಲೇ ಮತು ಆಡ್ಯಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ಅನ್ನು ಹೊಂದಿದೆ.ಇನ್ನು ಸ್ಟೀಯರಿಂಗ್ ವೀಲ್‌ನಲ್ಲಿ ಸ್ಪೋರ್ಟ್' ಬಟನ್, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಇನ್ನು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ, ಫಿಯೆಟ್ ಪಲ್ಸ್ ಅನ್ನು ಎಫ್‌ಸಿಎಯ ಹೊಸ ಎಂಎಲ್‌ಎ ಪ್ಲಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿ ಪಡಿಸಲಾಗಿದೆ. ಇನ್ನು ಫಿಯೆಟ್ ಕಂಪನಿಯು ಶೀಘ್ರದಲ್ಲೇ ಹೊಸ ಪುಂಟೊ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಬಹುದು.

Most Read Articles

Kannada
Read more on ಫಿಯೆಟ್ fiat
English summary
Fiat considering to bringing back punto nameplate new gen model details
Story first published: Friday, August 6, 2021, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X