ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಇವಿ ಕಾರು ಉತ್ಪಾದನೆಗೆ ಮುಂದಾದ ಫಿಯೆಟ್

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ವಿವಿಧ ರಾಷ್ಟ್ರಗಳು 2030ರಿಂದಲೇ ಸಂಪೂರ್ಣವಾಗಿ ಇಂಧನ ಚಾಲಿತ ವಾಹನಗಳ ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ.

ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಇವಿ ಕಾರು ಉತ್ಪಾದನೆಗೆ ಮುಂದಾದ ಫಿಯೆಟ್

ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಯುರೋಪ್ ಒಕ್ಕೂಟದಲ್ಲಿನ ಪ್ರಮುಖ ರಾಷ್ಟ್ರಗಳ ನಿರ್ಣಯದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟವದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.

ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಇವಿ ಕಾರು ಉತ್ಪಾದನೆಗೆ ಮುಂದಾದ ಫಿಯೆಟ್

2020ರಲ್ಲೇ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಬರೋಬ್ಬರಿ 5 ಲಕ್ಷಕ್ಕೂ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ಡೀಸೆಲ್ ಕಾರುಗಳ ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿದೆ.

ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಇವಿ ಕಾರು ಉತ್ಪಾದನೆಗೆ ಮುಂದಾದ ಫಿಯೆಟ್

ಡೀಸೆಲ್ ಕಾರುಗಳ ಬಳಕೆಗೆ ಹಲವಾರು ನಿರ್ಬಂಧಗಳನ್ನು ವಿಧಿಸುತ್ತಿರುವ ಯುರೋಪ್ ಒಕ್ಕೂಟವು ಎಲೆಕ್ಟ್ಕಿಕ್ ವಾಹನಗಳ ಮಾರಾಟ ಮತ್ತು ಬಳಕೆಗೆ ಸಾಕಷ್ಟು ವಿನಾಯ್ತಿಗಳನ್ನು ನೀಡುತ್ತಿರುವುದೇ ಇವಿ ವಾಹನಗಳ ಬಳಕೆ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ.

ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಇವಿ ಕಾರು ಉತ್ಪಾದನೆಗೆ ಮುಂದಾದ ಫಿಯೆಟ್

ಮುಂಬರುವ ದಿನಗಳಲ್ಲಿ ಡೀಸೆಲ್ ಜೊತೆಗೆ ಪೆಟ್ರೋಲ್ ವಾಹನಗಳ ಬಳಕೆಗೂ ಹಂತ-ಹಂತವಾಗಿ ನಿರ್ಬಂಧ ವಿಧಿಸುವತ್ತ ಹಲವಾರು ಹೊಸ ನೀತಿಗಳನ್ನು ಜಾರಿಗೆ ತರಲಾಗುತ್ತಿದ್ದು, ಗ್ರೇಟ್ ಬ್ರಿಟನ್, ಐರ್ಲೆಂಡ್‌, ಜರ್ಮನ್ ಸೇರಿದಂತೆ ಪ್ರಮುಖ ರಾಷ್ಟ್ರಗಳು 2030ರ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವ ನಿರ್ಣಯ ಪ್ರಕಟಿಸಿವೆ.

ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಇವಿ ಕಾರು ಉತ್ಪಾದನೆಗೆ ಮುಂದಾದ ಫಿಯೆಟ್

ಇದರ ಪರಿಣಾಮ ಫಿಯೆಟ್ ಸೇರಿದಂತೆ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಸಹ ಕಾರು ಉತ್ಪದನಾ ಯೋಜನೆಯಲ್ಲಿ ಈಗಿನಿಂದಲೇ ಬದಲಾವಣೆ ಪರಿಚಯಿಸಲು ನಿರ್ಧರಿಸಿದ್ದು, ಮುಂದಿನ 10 ವರ್ಷಗಳಲ್ಲಿ ಹಂತ-ಹಂತವಾಗಿ ಡಿಸೇಲ್ ಮತ್ತು ಪೆಟ್ರೋಲ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಸಂಪೂರ್ಣವಾಗಿ ಇವಿ ವಾಹನದತ್ತ ಗಮನಹರಿಸುತ್ತಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಇವಿ ಕಾರು ಉತ್ಪಾದನೆಗೆ ಮುಂದಾದ ಫಿಯೆಟ್

ಯುರೋಪ್ ಮತ್ತು ಅಮೆರಿಕದಲ್ಲಿ ಈ ಹಿಂದೆ ಜೀಪ್ ಮಾತೃಸಂಸ್ಥೆಯಾದ ಕ್ರಿಸ್ಲರ್ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಫಿಯೆಟ್ ಕಂಪನಿಯು ಸದ್ಯ ಹೊಚ್ಚ ಹೊಸ ಕಾರು ಉತ್ಪಾದನಾ ಕಂಪನಿಯಾದ ಸ್ಟೆಲ್ಯಾಂಡಿಸ್ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಹೊಸ ಯೋಜನೆಗೆ ಅನುಗುಣವಾಗಿ ಇವಿ ವಾಹನ ಉತ್ಪಾದನೆಗೆ ಸಿದ್ದವಾಗುತ್ತಿದೆ.

ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಇವಿ ಕಾರು ಉತ್ಪಾದನೆಗೆ ಮುಂದಾದ ಫಿಯೆಟ್

ಯುರೋಪಿನ್ ಕಾರು ಉತ್ಪಾದನಾ ಕಂಪನಿಯಾದ ಪಿಎಸ್ಎ ಮತ್ತು ಅಮೆರಿಕದ ಕ್ರಿಸ್ಲರ್ ಕಂಪನಿಗಳು ಒಂದಾಗಿ ಹುಟ್ಟುಹಾಕಿರುವ ಸ್ಟೆಲ್ಯಾಂಡಿಸ್ ಕಂಪನಿಯು ಇದೀಗ ಹೊಸ ಬ್ರಾಂಡ್ ಆಗಿ ಹೊರಹೊಮ್ಮಿದ್ದು, ಹೊಸ ಕಂಪನಿಯ ಅಧೀನದಲ್ಲಿ ಫಿಯೆಟ್ ಕೂಡಾ ಜಂಟಿ ಕಾರ್ಯಾಚರಣೆ ಮುಂದುವರಿಸಿದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಇವಿ ಕಾರು ಉತ್ಪಾದನೆಗೆ ಮುಂದಾದ ಫಿಯೆಟ್

ಸ್ಟೆಲ್ಯಾಂಡಿಸ್ ಅಧೀನದಲ್ಲಿ ಪಿಎಸ್ಎ ಗ್ರೂಪ್ ಮತ್ತು ಕ್ರಿಸ್ಲರ್ ಕಾರ್ಯನಿರ್ವಹಣೆ ಮಾಡಿದ್ದಲ್ಲಿ ಪಿಎಸ್ಎ ಗ್ರೂಪ್ ಅಧೀನದಲ್ಲಿ ಸಿಟ್ರನ್, ಫ್ಯೂಜೊ ಮತ್ತು ಕ್ರಿಸ್ಲರ್ ಅಧೀನದಲ್ಲಿ ಜೀಪ್, ಡಾಡ್ಜ್, ರಾಮ್, ಮೊಪೆರ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಮುಖ ಕಾರ್ ಬ್ರಾಂಡ್‌ಗಳನ್ನು ಒಳಗೊಂಡಿರುವ ಫಿಯೆಟ್ ಕಂಪನಿಯು ಸಹಭಾಗಿತ್ವ ಯೋಜನೆ ಅಡಿ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿಪಡಿಸುತ್ತಿದೆ.

Most Read Articles

Kannada
Read more on ಫಿಯೆಟ್ fiat
English summary
Fiat To Become Complete Electric By 2030. Read in Kannada.
Story first published: Tuesday, June 8, 2021, 21:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X